ವಿಷಯಕ್ಕೆ ಹೋಗು

ಬಡಿಗಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಡಿಗಲ್ಲು

ಬಡಿಗಲ್ಲು ಗಟ್ಟಿಯಾದ ಮೇಲ್ಮೈಯನ್ನು ಹೊಂದಿರುವ ಒಂದು ತುಂಡು. ಇದರ ಮೇಲೆ ಮತ್ತೊಂದು ವಸ್ತುವನ್ನು ಬಡಿಯಲಾಗುತ್ತದೆ. ಈ ತುಂಡು ಎಷ್ಟು ಕಾರ್ಯಸಾಧ್ಯವೋ ಅಷ್ಟು ದೊಡ್ಡದಾಗಿರುತ್ತದೆ, ಏಕೆಂದರೆ ಬಡಿಗಲ್ಲಿನ ಜಡತ್ವ ಹೆಚ್ಚಿದ್ದಷ್ಟು, ಅದು ಹೆಚ್ಚು ಪರಿಣಾಮಕಾರಿಯಾಗಿ ಹೊಡೆಯುವ ಉಪಕರಣದ ಶಕ್ತಿಯು ಕೆಲಸದ ತುಂಡಿಗೆ ವರ್ಗಾವಣೆಯಾಗಲು ಕಾರಣವಾಗುತ್ತದೆ. ಉತ್ತಮ ಗುಣಮಟ್ಟದ ಬಡಿಗಲ್ಲಿನ ಮೇಲೆ ಲೋಹಕಾರನ ಸುತ್ತಿಗೆಯು ಬಹುತೇಕ ಅವನು ಕೆಳಮುಖದ ಹೊಡೆತದಲ್ಲಿ ಹಾಕುವ ಶಕ್ತಿಯಷ್ಟೇ ಶಕ್ತಿಯಿಂದ ಪುಟಿದೇಳಬೇಕು, ಮತ್ತು ಇದರಿಂದ ಅಂತಿಮವಾಗಿ ಲೋಹಕಾರನ ಕೆಲಸ ಸುಲಭವಾಗುತ್ತದೆ ಮತ್ತು ದೈಹಿಕವಾಗಿ ಕಡಿಮೆ ಶ್ರಮದಾಯಕವಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಬಡಿಗಲ್ಲನ್ನು ಫ಼ೋರ್ಜಿಂಗ್ ಉಪಕರಣವಾಗಿ ಬಳಸಲಾಗುತ್ತದೆ. ಆಧುನಿಕ ಬೆಸುಗೆ ತಂತ್ರಜ್ಞಾನ ಬರುವುದಕ್ಕೆ ಮೊದಲು, ಬಡಿಗಲ್ಲು ಲೋಹ ಕೆಲಸಗಾರರ ಪ್ರಾಥಮಿಕ ಸಾಧನವಾಗಿತ್ತು.[]

ಆಧುನಿಕ ಬಡಿಗಲ್ಲುಗಳಲ್ಲಿ ಬಹುಪಾಲು ತಾಪಸಂಸ್ಕರಿಸಲಾದ ಎರಕಹೊಯ್ದ ಅಥವಾ ಫ಼ೋರ್ಜ್ ಮಾಡಿದ ಉಕ್ಕಿನಿಂದ (ಎರಡನೆಯದು ಹೆಚ್ಚು ಬಲಿಷ್ಠ) ತಯಾರಿಸಲಾಗುತ್ತದೆ. ಅಗ್ಗದ ಬಡಿಗಲ್ಲುಗಳು ಎರಕಹೊಯ್ದ ಕಬ್ಬಿಣ ಮತ್ತು ಕಡಿಮೆ ಗುಣಮಟ್ಟದ ಉಕ್ಕಿನಿಂದ ಮಾಡಲ್ಪಟ್ಟಿವೆ, ಆದರೆ ಇವು ಆಕಾರಗೆಡುತ್ತವೆ ಮತ್ತು ಹೊಡೆದಾಗ ಹಿನ್ನೆಗೆಯದಿರುವುದರಿಂದ ಗಂಭೀರ ಬಳಕೆಗೆ ಸೂಕ್ತವಾಗಿಲ್ಲವೆಂದು ಪರಿಗಣಿಸಲ್ಪಡುತ್ತವೆ.

ಬಡಿಗಲ್ಲುಗಳು ಬಹಳ ಪ್ರಾಚೀನ ಉಪಕರಣಗಳಾಗಿರುವುದರಿಂದ ಮತ್ತು ಒಂದು ಕಾಲದಲ್ಲಿ ಅತ್ಯಂತ ಸಾಮಾನ್ಯವಾಗಿದ್ದರಿಂದ, ಅವು ಪ್ರಯೋಜನವಾದಿ ವಸ್ತುಗಳಾಗಿ ಅವುಗಳ ಬಳಕೆಯನ್ನು ಮೀರಿ ಸಾಂಕೇತಿಕ ಅರ್ಥವನ್ನು ಪಡೆದಿವೆ. ಲೂನಿ ಟೂನ್ಸ್‌ನ ಸಂಚಿಕೆಗಳು, ಒಂದು ಹೆವಿ ಮೆಟಲ್ ಬ್ಯಾಂಡ್‍ನ ಹೆಸರು, ಮತ್ತು ಕುಶಲಕರ್ಮಿ ಕಮ್ಮಾರರು ಮತ್ತು ಆಭರಣಕಾರರು ಮತ್ತು ಲೋಹಕಾರರಿಂದ ಬಳಕೆಯನ್ನು ಒಳಗೊಂಡಂತೆ, ಜನಪ್ರಿಯ ಸಂಸ್ಕೃತಿಯಲ್ಲಿ ಕೂಡ ತಮ್ಮ ದಾರಿಯನ್ನು ಕಂಡುಕೊಂಡಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Hahn, Robert. Archaeology and the Origins of Philosophy. Publisher: State University of New York Press 2010. ISBN 978-1438431659