ವಿಷಯಕ್ಕೆ ಹೋಗು

ಸಿಫಿಲಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಫಿಲಿಸ್ ಒಂದು ಲೈಂಗಿಕವಾಗಿ ಹರಡುವ ಸೋಂಕು.ಟ್ರೆಪೋನೆಮ ಪಾಲಿಡೆಮ್ ಎಂಬ ಬ್ಯಾಕ್ಟೀರಿಯಂ, ಸಿಫಿಲಿಸ್ ಸೋಂಕನ್ನು ಉಂಟುಮಾಡುತ್ತದೆ. ರೋಗದ ಲಕ್ಷಣಗಳು ಅದರ ಹಂತದ ಮೇಲೆ ಅವಲಂಭಿಸಿರುತ್ತದೆ(ಪ್ರಾಥಮಿಕ,ಮಾಧ್ಯಮಿಕ,ಲೇಟೆಂಟ್,ತೃತೀಯ). ಪ್ರಾಥಮಿಕ ಹಂತದಲ್ಲಿ ಮೇಹವ್ರಣ (ಸ್ಥಿರವಾದ,ನೋವುರಹಿತ,ನವೆ ಇಲ್ಲದ ಮತ್ತು ಚರ್ಮದ ಹುಣ್ಣು)ಒದಗಿಸುತ್ತದೆ.ಮಾಧ್ಯಮಿಕ ಸಿಫಿಲಿಸ್‌ನಲ್ಲಿ ಅಡಿಭಾಗದಲ್ಲಿ ಮತ್ತು ಅಂಗೈಯಲ್ಲಿ ತುರಿಕೆಯುಂಟಾಗುತ್ತದೆ.ಕೆಲವೊಮ್ಮೆ ಜನನದ್ವಾರದಲ್ಲಿ ಮತ್ತು ಬಾಯಿ ಭಾಗದಲ್ಲಿ ಹುಣ್ಣು ಉಂಟಾಗುತ್ತದೆ.ವರ್ಷಾನುಗಟ್ಟಳೆ ದೇಹದಲ್ಲಿ ಉಳಿಯುವ ಸಿಫಿಲಿಸ್‌ನ ಲೇಟೆಂಟ್ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.ತೃತೀಯ ಹಂತದಲ್ಲಿ ಮೃದುವಾದ ಕ್ಯಾನ್ಸರಸ್ ಅಲ್ಲದ ಬೆಳವಣಿಗೆಗಳು,ನರವೈಜ್ಞಾನಿಕ ಮತ್ತು ಹೃದಯಕ್ಕೆ ಸಂಬಂಧಿತ ಲಕ್ಷಣಗಳು ಕಂಡು ಬರುತ್ತವೆ.ಸಿಫಿಲಿಸ್ ರೋಗವನ್ನು "ದ ಗ್ರೇಟ್ ಇಮಿಟೇಟರ್"ಎಂದು ಕರೆಯಲಾಗುತ್ತದೆ.ಏಕೆಂದರೆ ಸದರಿ ರೋಗವು,ವಿವಿಧ ರೋಗಗಳ ಲಕ್ಷಣಗಳನ್ನು ದೇಹದಲ್ಲಿ ಉಂಟುಮಾಡುತ್ತದೆ.ಸಿಫಿಲಿಸ್ ಸಾಮಾನ್ಯವಾಗಿ ಲೈಂಗಿಕ ಚಟುವಟಿಕೆ ಮೂಲಕ ಹರಡುತ್ತದೆ. ತಾಯಿಯಿಂದ ಮಗುವಿಗೆ ಗರ್ಭಧಾರಣೆಯ ಕಾಲದಲ್ಲಿ ಅಥವಾ ಜನ್ಮ ನೀಡುವ ಸಮಯದಲ್ಲಿ ಹರಡಿದಾಗ,ಜನ್ಮಜಾತ ಸಿಫಿಲಿಸ್ ಎಂದು ಕರೆಯಲಾಗುತ್ತದೆ.ಟ್ರೆಪೋನೆಮ ಪಾಲಿಡೆಮ್‌ನ ಉಪವರ್ಗಗಳು ಉಂಟುಮಾಡುವ ಹಲವಾರು ರೋಗಗಳಲ್ಲಿ ಯಾಲ್ಸ್ ,ಪಿಂಟ ಮುತ್ತು ಬಿಜೆಲ್ ಸೇರುತ್ತವೆ. ರಕ್ತ ಪರೀಕ್ಷೆಯ ಮೂಲಕ ರೋಗದ ನಿರ್ಣಯವನ್ನು ಮಾಡಲಾಗುತ್ತದೆ.ಬ್ಯಾಕ್ಟೀರಿಯಾದ ಪತ್ತೆದಾರಿಯನ್ನು ಡಾರ್ಕ್ ಫೀಲ್ಡ್ ಮೈಕ್ರೋಸ್ಕೋಪಿಯ ಮೂಲಕ ಮಾಡಬಹುದು.ಗರ್ಭಿಣಿಯರು ಸದರಿ ರೋಗದ ಪರೀಕ್ಷೆಯನ್ನು ಒಳಗೊಳ್ಳಬೇಕೆಂದು ರೋಗ ನಿಯಂತ್ರಣ ಕೇಂದ್ರ ಶಿಫಾರಸ್ಸು ಮಾಡುತ್ತದೆ.ಸಿಫಿಲಿಸ್ ರೋಗದ ಅಪಾಯವನ್ನು ಲೇಟೆಕ್ಸ್ ಕಾಂಡೊಮ್‌ನ ಬಳಕೆ ಮಾಡುವುದರ ಮೂಲಕ ಮತ್ತು ಅಥವಾ ಲೈಂಗಿಕ ಚಟುವಟಿಕೆಯಿಂದ ದೂರವಿರುವುದರ ಮೂಲಕ ಕಡಿಮೆ ಮಾಡಬಹುದು.ಸದರಿ ರೋಗಕ್ಕೆ ಪ್ರತಿಜೀವಕಗಳ ಬಳಕೆಯಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು.ಅನೇಕ ಸಂದರ್ಭಗಳಲ್ಲಿ ಹೆಚ್ಚಿನ ಆದ್ಯತೆವುಳ್ಳ ಬೆನ್ಸತೈನ್ ಪೆನ್ಸಿಲಿನ್ ಜಿ ಎಂಬ ಪ್ರತಿಜೀವಕವನ್ನು ಸ್ನಾಯುವಿಗೆ ಚುಚ್ಚುಮದ್ದಾಗಿ ನೀಡಲಾಗುತ್ತದೆ. ಪೆನ್ಸಿಲಿನ್ ಗೆ ಅಲರ್ಜಿ ಹೊಂದಿರುವ ಜನರು, ಡಾಕ್ಸಿಸೈಕ್ಲಿನ್ ಅಥವಾ ಟೆಟ್ರಾಸೈಕ್ಲಿನ್ ಅನ್ನು ತೆಗೆದುಕೊಳ್ಳಬಹುದು.ಚಿಕಿತ್ಸೆಯ ಸಮಯದಲ್ಲಿ ಜನರಿಗೆ ಜ್ವರ, ತಲೆನೋವು, ಮತ್ತು ಸ್ನಾಯು ನೋವು ಉಂಟಾಗುತ್ತದೆ.ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ.ಸಿಫಿಲಿಸ್ ಸೋಂಕಿಗೆ ಸಂಬಂಧಿಸಿದಂತೆ ೨೦೧೨ರಲ್ಲಿ ಆರು ದಶಲಕ್ಷ ಹೊಸ ಪ್ರಕರಣಗಳು ವಯಸ್ಕರಲ್ಲಿ ಕಂಡುಬಂದಿತ್ತು.೨೦೧೦ರಲ್ಲಿ ಸಿಫಿಲಿಸ್ ಸೋಂಕಿನಿಂದ ೧೧೩,೦೦೦ ಜನರು ಸಾವನ್ನಪ್ಪಿದರು.೧೯೪೦ರ ದಶಕದಲ್ಲಿ ಪೆನ್ಸಿಲಿನ್ ಲಭ್ಯತೆಯಿಂದ ಸಿಫಿಲಿಸ್ ರೋಗದಿಂದ ಸಾವು ಕಡಿಮೆಯಾಯಿತು.ಆದರೆ ಹಲವಾರು ಕಾರಣಗಳಿಂದ ಸದರಿ ರೋಗ ಹೆಚ್ಚಾಗಲು ಪ್ರಾರಂಭಿಸಿತು.ಅವುಗಳಲ್ಲಿ ಸ್ವಚ್ಛಂದ ಸಂಭೋಗ,ವೇಶ್ಯಾವೃತ್ತಿ,ಕಾಂಡೊಮ್ ನ ಬಳಕೆ ಮಾಡದೆ ಇರುವುದು,ಅಸುರಕ್ಷಿತ ಲೈಂಗಿಕ ಚಟುವಟಿಕೆಗಳು,ಪುರುಷರ ನಡುವಿನ ಲೈಂಗಿಕ ಚಟುವಟಿಕೆಗಳು ಹಲವಾರು ಕಾರಣಗಳಾಗಿವೆ.೨೦೧೫ರಲ್ಲಿ ತಾಯಿಯಿಂದ ಮಗುವಿಗೆ ಉಂಟಾಗುವ ಸಿಫಿಲಿಸ್ ಸೋಂಕಿನ ಹರಡುವಿಕೆಯನ್ನು ತೆಗೆದುಹಾಕುವ ಮೊದಲ ದೇಶವಾಗಿ ಕ್ಯೂಬಾ ಹೆಸರುಮಾಡಿತು.

ರೋಗದ ಲಕ್ಷಣಗಳು

[ಬದಲಾಯಿಸಿ]

ಪ್ರಾಥಮಿಕ ಸಿಫಿಲಿಸ್

[ಬದಲಾಯಿಸಿ]
ಪ್ರಾಥಮಿಕ ಹಂತದಲ್ಲಿ, ಪುರುಷರಲ್ಲಿ ಕಾಣುವ ಒಂದು ಲಕ್ಷಣ

ಪ್ರಾಥಮಿಕ ಸಿಫಿಲಿಸ್ ನೇರ ಲೈಂಗಿಕ ಚಟುವಟಿಕೆಯ ಮೂಲಕ ಸಂಗಾತಿಯ ಸೋಂಕಿತ ಗಾಯಗಳಿಂದ ಹರಡುತ್ತದೆ. ಆರಂಭಿಕ ಮಾನ್ಯತೆಯ ೩ ರಿಂದ ೯೦ ದಿನಗಳೊಳಗೆ ಸಂಪರ್ಕ ಕೇಂದ್ರದಲ್ಲಿ ಮೇಹವ್ರಣ ಎಂಬ ಒಂದು ಚರ್ಮವ್ರಣ ಕಾಣಿಸಿಕೊಳ್ಳುತ್ತದೆ.ದೃಢವಾದ,ನೋವು ರಹಿತ,ನವೆ ಉಂಟುಮಾಡದ ಚರ್ಮದ ಹುಣ್ಣೇ ಮೇಹವ್ರಣ. ಪ್ರಾಥಮಿಕ ಹಂತದಲ್ಲಿ ಉಂಟಾಗುವ ಹುಣ್ಣುಗಳು ಯಾವುದೇ ರೂಪವನ್ನಾದರೂ ತೆಗೆದುಕೊಳ್ಳಬಹುದು.ಶಾಸ್ತ್ರೀಯ ರೂಪದಲ್ಲಿ ಮೇಹವ್ರಣವು ಮ್ಯಾಕ್ಯೂಲ್‌ನಿಂದ ದ ಪ್ಯಾಪ್ಯೂಲ್‌ಗೆ ವಿಕಸನಗೊಂಡು ಕುನೆಗೆ ಅಲ್ಸರ್ ಆಗಿ ರೂಪಗೊಳ್ಳುತ್ತದೆ.ಕೆಲವೊಮ್ಮೆ ಹಲವಾರು ಗಾಯಗಳು ಕಂಡುಬರುತ್ತವೆ.ಗಾಯಗಳು ನೋವಿನಿಂದ ಕೂಡಿದ್ದು ಅಥವ ನೋವು ರಹಿತವಾಗಿರಬಹುದು(೩೦%).ಜನನಾಂಗಗಳನ್ನು ಹೊರತುಪಡಿಸಿ ಇತರೆ ಸ್ಥಳಗಳಲ್ಲಿಯು ಸಹ ಹುಣ್ಣುಗಳು ಉಂಟಾಗಬಹುದು(೨%-೭%).ಪ್ರಾಥಮಿಕ ಸಿಫಿಲಿಸ್‌ನ ಲಕ್ಷಣಗಳು ಮಹಿಳೆಯರಲ್ಲಿ ಸಾಮಾನ್ಯವಾಗಿ ಗರ್ಭಕಂಠದಲ್ಲಿ (೪೪%),ಸಲಿಂಗಕಾಮಿ ಪುರುಷರಲ್ಲಿ ಶಿಶ್ನ ಭಾಗದಲ್ಲಿ(೯೯%)ಕಂಡುಬರುತ್ತದೆ.ಮೇಹವ್ರಣ ಉಂಟಾದ ಸುಮಾರು ೧೦ ದಿನಗಳ ನಂತರ ಸೋಂಕಿನ ಪ್ರದೇಶದಲ್ಲಿ ದುಗ್ಧರಸ ಗ್ರಂಥಿ ಹಿಗ್ಗುವಿಕೆ ಪ್ರಾರಂಭವಾಗುತ್ತದೆ.ಚಿಕಿತ್ಸೆ ಇಲ್ಲದೆ ಮೂರರಿಂದ ಆರು ವಾರಗಳ ತನಕ ಹುಣ್ಣು ದೇಹದಲ್ಲಿದ್ದು ಮುಂದುವರಿಯಬಹುದು.

ಮಾಧ್ಯಮಿಕ ಸಿಫಿಲಿಸ್

[ಬದಲಾಯಿಸಿ]
ಮಾಧ್ಯಮಿಕ ಸಿಫಿಲಿಸ್ ನಲ್ಲಿ ಕಾಣುವ ಒಂದು ಲಕ್ಷಣ

ಪ್ರಾಥಮಿಕ ಸೋಂಕು ಉಂಟಾದ ನಾಲ್ಕರಿಂದ ಹತ್ತು ವಾರಗಳೊಳಗೆ ಮಾಧ್ಯಮಿಕ ಸಿಫಿಲಿಸ್ ಸಂಭವಿಸುತ್ತದೆ.ಮಾಧ್ಯಮಿಕ ಸಿಫಿಲಿಸ್‌ನ ಲಕ್ಷಣಗಳು ಲೋಳೆಯ ಪೊರೆ,ಚರ್ಮ,ದುಗ್ಧರಸ ಗ್ರಂಥಿಗಳಲ್ಲಿ ಆಗುವ ಬದಲಾವಣೆಗಳಲ್ಲಿ ವ್ಯಕ್ತವಾಗುತ್ತದೆ.ಕಾಂಡದ ಭಾಗ,ಕೈಕಾಲುಗಳು,ಹಸ್ತ ಮತ್ತು ಅಡಿಭಾಗದಲ್ಲಿ ಸಮ್ಮಿತೀಯ,ಕೆಂಪು ಗುಲಾಬಿ ಬಣ್ಣದ, ನವೆ ಉಂಟುಮಾಡದ ಗಾಯಗಳು ಕಾಣುತ್ತವೆ.ಈ ಗಾಯಗಳು ದೊಡ್ಡದಾದ ಬಿಳಿಯ, ನರಹುಲಿಯ ಆಕಾರವನ್ನು ಹೊಂದುತ್ತದೆ.ಇದನ್ನು ಕೊಂಡೈಲೋಮ ಲೇಟಮ್ ಎಂದು ಕರೆಯುತ್ತಾರೆ.ಸಾಂಕ್ರಾಮಿಕವಾಗಿರುವ ಈ ಗಾಯಗಳು ಬ್ಯಾಕ್ಟೀರಿಯಾಗಳಿಗೆ ಆಶ್ರಯವನ್ನು ನೀಡುತ್ತವೆ.ಸಿಫಿಲಿಸ್‌ನ ಮಾಧ್ಯಮಿಕ ಹಂತದ ಇತರೆ ಲಕ್ಷಣಗಳು ಜ್ವರ, ಗಂಟಲು ನೋವು, ದೇಹಾಲಸ್ಯ,ತೂಕ ಕಳೆದುಕೊಳ್ಳುವುದು,ಕೂದಲು ಉದುರುವಿಕೆ,ಮತ್ತು ತಲೆನೋವು.ಯಕೃತ್ತಿನ ಉರಿಯೂತ,ಮೂತ್ರಪಿಂಡ ರೋಗ,ಜಂಟಿ ಉರಿಯೂತ,ಆಪ್ಟಿಕ್ ನರಗಳ ಉರಿಯೂತ,ಪೆರಿಯಾಸ್ಟಿಸಿಸ್,ಯುವೆಯ್ಟಿಸ್ ಮತ್ತು ತೆರಪಿನ ಕೆರಟೈಟಿಸ್,ಈ ಹಂತದ ಅಪರೂಪದ ಅಭಿವ್ಯಕ್ತಿಗಳು.ತೀವ್ರತರ ಲಕ್ಷಣಗಳು ಸುಮಾರು ಮೂರರಿಂದ ಆರು ವಾರಗಳೊಳಗೆ ಪರಿಹಾರವಾಗುತ್ತದೆ.ಮಾಧ್ಯಮಿಕ ಸಿಫಿಲಿಸ್ನಿಂದ ಬಳಲುತ್ತಿರುವ ಜನರು(೪೦%-೮೫% ಮಹಿಳೆಯರು,೨೦%-೬೫% ಪುರುಷರು),ತಮಗೆ ಉಂಟಾದ ಮೇಹವ್ರಣದ ವರದಿಯನ್ನು ನೀಡುವುದಿಲ್ಲ.


ಲೇಟೆಂಟ್ ಹಂತ

[ಬದಲಾಯಿಸಿ]

ಸೀರಮ್ ಶಾಸ್ತ್ರೀಯ ಪರೀಕ್ಷೆಗಳ ಪುರಾವೆಗಳಿದ್ದರೂ,ಸಿಫಿಲಿಸ್ನ ಲೇಟೆಂಟ್ ಹಂತದ ಲಕ್ಷಣಗಳು ಕಾಣುವುದಿಲ್ಲ.ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಿಫಿಲಿಸ್ನ ಲೇಟೆಂಟ್ ಹಂತವನ್ನು ಎರಡು ವಿಧವಾಗಿ ವಿಂಗಡಿಸುತ್ತಾರೆ .ಮುಂಚಿತ ಲೇಟೆಂಟ್ ಹಂತ (ಮಾಧ್ಯಮಿಕ ಸಿಫಿಲಿಸ್ ಸೋಂಕು ಹರಡಿ ಒಂದು ವರ್ಷದೊಳಗಿನ ಕಾಲ)ಮತ್ತು ಕೊನೆಯ ಲೇಟೆಂಟ್ ಹಂತ(ಮಾಧ್ಯಮಿಕ ಸಿಫಿಲಿಸ್ ಸೋಂಕು ಹರಡಿ ಒಂದು ವರ್ಷಕ್ಕಿಂತ ಹೆಚ್ಚು ಕಾಲವಾಗಿರುವ ಹಂತ).ಮುಂಚಿತ ಲೇಟೆಂಟ್ ಹಂತದಲ್ಲಿ ರೋಗ ಲಕ್ಷಣಗಳ ಮರುಕಳಿಕೆಯಾಗುತ್ತದೆ.ಕೊನೆಯ ಲೇಟೆಂಟ್ ಹಂತದಲ್ಲಿ ಯಾವುದೇ ರೋಗಲಕ್ಷಣಗಳು ಕಾಣುವುದಿಲ್ಲ ಮತ್ತು ಮುಂಚಿತ ಲೇಟೆಂಟ್ ಹಂತದಷ್ಟು ಸಾಂಕ್ರಾಮಿಕವಲ್ಲ.

ತೃತಿಯ ಸಿಫಿಲಿಸ್

[ಬದಲಾಯಿಸಿ]

ಸೋಂಕು ಹರಡಿ ಸುಮಾರು ಮೂರರಿಂದ ಹದಿನೈದು ವರ್ಷಗಳ ನಂತರ ತೃತೀಯ ಸಿಫಿಲಿಸ್ ಹಂತ ಸಂಭವಿಸುತ್ತದೆ.ತೃತಿಯ ಸಿಫಿಲಿಸ್ ಹಂತವನ್ನು ಮೂರು ವಿಧವಾಗಿ ವಿಂಗಡಿಸಬಹುದು.ಗ್ಯುಮಾಟಸ್ ಸಿಫಿಲಿಸ್,ನ್ಯೂರೋಸಿಫಿಲಿಸ್ ಮತ್ತು ಕಾರ್ಡಿಯೋವಾಸ್ಕುಲಾರ್ ಸಿಫಿಲಿಸ್.ಲೇಟೆಂಟ್ ಹಂತದಿಂದ ಬಳಲುತ್ತಿರುವ ಒಂದರಲ್ಲಿ ಮೂರು ಭಾಗದಷ್ಟು ಜನರು ತೃತೀಯ ಹಂತವನ್ನು ಪ್ರವೇಶಿಸುತ್ತಾರೆ.ತೃತಿಯ ಹಂತವನ್ನು ತಲುಪಿರುವ ಜನರು ಸೋಂಕನ್ನು ಹರಡಲಾರರು.ದೇಹದಲ್ಲಿ ,ಸೋಂಕು ಹರಡಿ ಸುಮಾರು ಒಂದರಿಂದ ನಲವತ್ತಾರು ವರ್ಷಗಳ ನಂತರ ಗ್ಯುಮಾಟಸ್ ಸಿಫಿಲಿಸ್ ಅಥವಾ ಸೌಮ್ಯ(ಬೆನೈನ್) ಸಿಫಿಲಿಸ್ ಸಂಭವಿಸುತ್ತದೆ.ಈ ಹಂತದಲ್ಲಿ ದೀರ್ಘಕಾಲದ ಗ್ಯುಮ್ಮಾಸ್, ದೇಹದ ಮೇಲೆ ತೋರಲು ಪ್ರಾರಂಭಿಸುತ್ತದೆ.ಇದು ಸಾಮಾನ್ಯವಾಗಿ ದೇಹದ ಚರ್ಮ,ಮೂಳೆ ಮತ್ತು ಯಕೃತ್ತಿನ ಭಾಗಕ್ಕೆ ಹಾನಿ ಉಂಟುಮಾಡುತ್ತದೆ.ನ್ಯೂರೋಸಿಫಿಲಿಸ್ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.ಈ ಹಂತದಲ್ಲಿ ರೋಗವು,ಮುಂಚಿತವಾಗಿ ಸಿಫಿಲಿಟಿಕ್ ಮೆನಿಂಜೈಟಿಸ್‌ನ ರೂಪದಲ್ಲಿ ಅಥವಾ ನಿಧಾನವಾಗಿ ಮೆನಿಂಜೋವಾಸ್ಕುಲಾರ್ ಸಿಫಿಲಿಸ್ ರೂಪದಲ್ಲಿ ಸಂಭವಿಸುತ್ತದೆ.ನ್ಯೂರೋಸಿಫಿಲಿಸ್‌ನ ಕೊನೆಯ ಹಂತವು ಸೋಂಕು ಹರಡಿ ೪-೨೫ ವರ್ಷಗಳೊಳಗೆ ಸಂಭವಿಸುತ್ತದೆ.ಕಾರ್ಡಿಯೋವಾಸ್ಕುಲಾರ್ ಸಿಫಿಲಿಸ್,ಸೋಂಕು ಹರಡಿ ಸುಮಾರು ಹತ್ತರಿಂದ ಮೂವತ್ತು ವರ್ಷದೊಳಗೆ ಉಂಟಾಗುತ್ತದೆ.

ಜನ್ಮಜಾತ ಸಿಫಿಲಿಸ್

[ಬದಲಾಯಿಸಿ]

ಗರ್ಭಧಾರಣೆಯ ಸಮಯದಲ್ಲಿ ಅಥವಾ ಜನ್ಮ ನೀಡುವ ಸಮಯದಲ್ಲಿ ಮಗುವಿಗೆ ಸಂಭವಿಸುವ ಸಿಫಿಲಿಸ್ಸನ್ನು ಜನ್ಮಜಾತ ಸಿಫಿಲಿಸ್ ಎಂದು ಕರೆಯಲಾಗುತ್ತದೆ.ಸಿಫಿಲಿಸ್ ಹೊಂದಿರುವ ಎಷ್ಟೋ ಶಿಶುಗಳು ತಮ್ಮ ಜನ್ಮದ ಸಮಯದಲ್ಲಿ ಯಾವುದೇ ಲಕ್ಷಣವನ್ನು ತೋರುವುದಿಲ್ಲ.ಮೊದಲ ಒಂದೆರಡು ವರ್ಷಗಳಲ್ಲಿ ಯಕೃತ್ತು ಮತ್ತು ಗುಲ್ಮದ ಹಿಗ್ಗುವಿಕೆ (೭೦%), ಗುಳ್ಳೆಗಳು (೭0%), ಜ್ವರ (೪0%),ನ್ಯೂರೋಸಿಫಿಲಿಸ್ (೨0%), ಮತ್ತು ಶ್ವಾಸಕೋಶದ ಉರಿಯೂತ ಮುಂತಾದ ಲಕ್ಷಣಗಳು ಕಂಡುಬರುತ್ತದೆ.ಮುಂಚಿತ ಹಂತದಲ್ಲಿ ಚಿಕಿತ್ಸೆ ಮಾಡದಿದ್ದರೆ,ಜನ್ಮಜಾತ ಸಿಫಿಲಿಸ್ನ ಕೊನೆಯ ಹಂತ ಸಂಭವಿಸುತ್ತದೆ.ತಡಿ ಮೂಗು ವಿರೂಪ,ಕತ್ತಿ ಮೊಣಕಾಲ,ಅಥವಾ ಕ್ಲಟ್ಟನ್ ನ ಕೀಲುಗಳು ಇದರ ಲಕ್ಷಣಗಳು.

ಕಾರಣಗಳು

[ಬದಲಾಯಿಸಿ]

ಬ್ಯಾಕ್ಟೀರಿಯಾ ಅಧ್ಯಯನ

[ಬದಲಾಯಿಸಿ]

ಟ್ರೆಪೋನೆಮ ಪಾಲಿಡೆಮ್,ಒಂದು ಸುರುಳಿಯ ಆಕಾರದ, ಹೆಚ್ಚು ಚಲನಶೀಲತೆಯನ್ನು ಹೊಂದಿರುವ ಗ್ರಾಮ್ ನೆಗೆಟಿವ್ ಬ್ಯಾಕ್ಟೀರಿಯಾ.ಟ್ರೆಪೋನೆಮ ಪಾಲಿಡೆಮ್‌ನ ಉಪವರ್ಗಗಳಿಂದ ಉಂಟಾಗುವ ಮೂರು ರೋಗಗಳು:ಯಾಸ್,ಪಿಂಟ,ಮತ್ತು ಬೆಜೆಲ್.ಇವುಗಳು ನರವೈಜ್ಞಾನಿಕ ಕಾಯಿಲೆಯನ್ನು ಉಂಟುಮಾಡುವುದಿಲ್ಲ. ಪಾಲಿಡೆಮ್‌ನ ಉಪವರ್ಗಗಳಿಗೆ ಮಾನವನೇ ಏಕೈಕ ನೈಸರ್ಗಿಕ ಜೀವಸಲೆ.ಇತರೆ ಜೀವಿಯ ದೇಹವನ್ನು ಬಿಟ್ಟು ಒಂದಕ್ಕಿಂತ ಹೆಚ್ಚು ದಿನ ಬದುಕಲು ಇವುಗಳಿಗೆ ಕಷ್ಟಕರವಾಗುತ್ತದೆ. ಏಕೆಂದರೆ ಇದರಲ್ಲಿರುವ ಜೀನೋಮ್,ಅಗತ್ಯ ಪೌಷ್ಟಿಕಾಂಶಗಳ ಚಯಾಪಚಯ ಕ್ರಿಯೆಯ ಮಾರ್ಗವನ್ನು ಎನ್ಕೋಡ್ ಮಾಡಲು ವಿಫಲವಾಗುತ್ತದೆ.

ಪ್ರಸರಣ

[ಬದಲಾಯಿಸಿ]

ಸಿಫಿಲಿಸ್ ಪ್ರಾಥಮಿಕವಾಗಿ ಲೈಂಗಿಕ ಸಂಪರ್ಕದಿಂದ ಅಥವಾ ತಾಯಿಯಿಂದ ತನ್ನ ಭ್ರೂಣಕ್ಕೆ ಗರ್ಭಾವಸ್ಥೆಯಲ್ಲಿ ಹರಡುತ್ತದೆ.ಸ್ಪೈರೋಚಿಟೆ ಎಂಬ ಬ್ಯಾಕ್ಟೀರಿಯಾಗೆ ಮ್ಯೂಕಸ್ ಪೊರೆಗಳ ಮುಖಾಂತರ ಹೋಗುವ ಅಥವಾ ತೂರುವ ಸಾಮರ್ಥ್ಯವಿದೆ.ಆದುದರಿಂದ ಗಾಯದ ಭಾಗಕ್ಕೆ ಮುತ್ತು ನೀಡುವ ಮೂಲಕ ಸಹ ಸಿಫಿಲಿಸ್ ಹರಡುತ್ತದೆ.ಪ್ರಾಥಮಿಕ ಮತ್ತು ಮಾಧ್ಯಮಿಕ ಸಿಫಿಲಿಸ್‌ನಿಂದ ಬಳಲುತ್ತಿರುವ ೩೦%-೬೦%ನಷ್ಟು ಜನರಿಗೆ ಸಿಫಿಲಿಸ್ ರೋಗ ಸಂಭವಿಸುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ದಾಖಲಾಗಿರುವ ೬೦% ರಷ್ಟು ಪ್ರಕರಣಗಳಲ್ಲಿ ಪುರುಷರ ನಡುವಿನ ಲೈಂಗಿಕ ಚಟುವಟಿಕೆಯಿಂದ ಸಿಫಿಲಿಸ್ ರೋಗ ಸಂಭವಿಸುತ್ತದೆ ಎಂದು ತಿಳಿದುಬಂದಿದೆ.ಸಿಫಿಲಿಸ್ ರೋಗವು ರಕ್ತದ ಉತ್ಪನ್ನಗಳಿಂದ ಸಹ ಹರಡುತ್ತದೆ.ಆದರೆ ರಕ್ತ ಪರೀಕ್ಷೆ ನಡೆಯುವುದರಿಂದ ಅಪಾಯ ಕಡಿಮೆಯಾಗಲಿದೆ.ಸೂಜಿಗಳನ್ನು ಹಂಚಿಕೊಳ್ಳುವುದರಿಂದ ಸಂಭವಿಸುವ ಅಪಾಯ ಕಡಿಮೆಯಾಗಿದೆ.

ರೋಗನಿರ್ಣಯ

[ಬದಲಾಯಿಸಿ]

ಸಿಫಿಲಿಸ್ಸನ್ನು ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ನಿವಾರಿಸಲು ಕಷ್ಟಕರವಾಗುತ್ತದೆ.ದೃಢೀಕರಣವನ್ನು ರಕ್ತ ಪರೀಕ್ಷೆಗಳ ಮೂಲಕ ಅಥವಾ ನೇರ ದೃಶ್ಯ ತಪಾಸಣೆಯನ್ನು ಸೂಕ್ಷ್ಮದರ್ಶಕ ಮೂಲಕ ಮಾಡಲಾಗುತ್ತದೆ. ರಕ್ತ ಪರೀಕ್ಷೆಗಳನ್ನು ನಿರ್ವಹಿಸಲು ಸುಲಭವಾಗಿರುವುದಿಂದ ಸಾಮಾನ್ಯವಾಗಿ ಈ ವಿಧಾನವನ್ನು ಬಳಸಲಾಗುತ್ತದೆ.ರೋಗನಿರ್ಣಯ ಪರೀಕ್ಷೆಗಳು ರೋಗದ ಹಂತಗಳ ನಡುವಿನ ವ್ಯತ್ಯಾಸವನ್ನು ನೀಡುವುದಿಲ್ಲ.

ರಕ್ತ ಪರೀಕ್ಷೆಗಳು

[ಬದಲಾಯಿಸಿ]

ರಕ್ತ ಪರೀಕ್ಷೆಗಳನ್ನು ಟ್ರೆಪೊನಮಲ್ ಮತ್ತು ಟ್ರೆಪೊನೆಮಲ್ ಅಲ್ಲದ ಪರೀಕ್ಷೆಗಳಾಗಿ ವಿಂಗಡಿಸಲಾಗಿದೆ. ಟ್ರೆಪೊನೆಮಲ್ ಪರೀಕ್ಷೆಗಳನ್ನು ಆರಂಭದ ಹಂತದಲ್ಲಿ ಮತ್ತು ಗುಹ್ಯ ರೋಗ ಸಂಶೋಧನಾ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಬಳಸುತ್ತಾರೆ.ಕೆಲವೊಮ್ಮೆ ವೈರಲ್ ಸೋಂಕುಗಳ ವಿಷಯದಲ್ಲಿ ಸುಳ್ಳು ಫಲಿತಾಂಶಗಳು ಕಂಡುಬರುತ್ತವೆ.ಲಿಂಫೋಮಾ, ಕ್ಷಯ, ಮಲೇರಿಯಾ ರೋಗಗಳು ಮತ್ತು ಗರ್ಭಧಾರಣೆ ವಿಷಯದ ಪರೀಕ್ಷೆಯಲ್ಲಿ ಸುಳ್ಳು ಧನಾತ್ಮಕಗಳ ಫಲಿತಾಂಶಗಳು ಹೊರಬಂದಿರುವ ಸಂದರ್ಭಗಳಿವೆ.ಟ್ರೆಪೊನೆಮಲ್ ಅಲ್ಲದ ಪರೀಕ್ಷೆಗಳಿಂದ ಸುಳ್ಳು ಧನಾತ್ಮಕಗಳು ತಿಳಿದುಬರುವುದರಿಂದ ಟ್ರೆಪೊನೆಮಲ್ ಪರೀಕ್ಷೆಗಳನ್ನು ಕೈಗೊಳ್ಳಬಾರದು.ಟ್ರೆಪೊನೆಮಲ್‌ನ ಪ್ರತಿಕಾಯ ಪರೀಕ್ಷೆಗಳು ಸಾಮಾನ್ಯವಾಗಿ ಸೋಂಕಿನ ಆರಂಭಿಕ ಹಂತದ ನಂತರ ಎರಡರಿಂದ ಐದು ವಾರಗಳೊಳಗೆ ಧನಾತ್ಮಕ ಎಂದು ತಿಳಿದುಬರುತ್ತದೆ.ಮಿದುಳುಬಳ್ಳಿಯ ದ್ರವದಲ್ಲಿನ ಹೆಚ್ಚು ರಕ್ತ ಕಣ (ಪ್ರಮುಖವಾಗಿ ಲಿಂಫೋಸೈಟ್ಸ್) ಮತ್ತು ಹೆಚ್ಚಿನ ಪ್ರೋಟೀನ್ ಮಟ್ಟವನ್ನು ಕಂಡುಹಿಡಿಯುವ ಮೂಲಕ ನ್ಯೂರೊಸಿಫಿಲಿಸ್ ಅನ್ನು ನಿರ್ಣಯಿಸಲಾಗುತ್ತದೆ.

ನೇರ ಪರೀಕ್ಷೆ

[ಬದಲಾಯಿಸಿ]

ಮೇಹವ್ರಣದಿಂದ ಲಭ್ಯವಾಗಿರುವ ಸೀರಮ್‍ನ ದ್ರವವನ್ನು ಡಾರ್ಕ್ ಗ್ರೌಂಡ್ ಮೈಕ್ರೋಸ್ಕೋಪಿ ಎಂಬ ಪರೀಕ್ಷೆಯ ಮೂಲಕ ರೋಗನಿರ್ಣಯವನ್ನು ತಕ್ಷಣವೇ ಮಾಡಬಹುದು.ಆಸ್ಪತ್ರೆಗಳಲ್ಲಿ ಉಪಕರಣಗಳು ಅಥವಾ ಅನುಭವವಿರುವ ಸಿಬ್ಬಂದಿ ಕೆಲವೊಮ್ಮೆ ಲಭ್ಯವಿರುವುದಿಲ್ಲ.ಈ ಪರೀಕ್ಷೆಯನ್ನು ಸೀರಮ್‍ನ ಮಾದರಿ ದೊರೆತ ಹತ್ತು ನಿಮಿಷದೊಳಗೆ ಮಾಡಬೇಕು.ಈ ಪರೀಕ್ಷೆಯಿಂದ ೮೦%ರಷ್ಟು ಸೂಕ್ಷ್ಮತೆ ದೊರಕುತ್ತದೆ. ಮೇಹವ್ರಣದಿಂದ ತೆಗೆದಿರುವ ಮಾದರಿಯನ್ನು ಬಳಸಿ ಮತ್ತೆರಡು ಪರೀಕ್ಷೆಗಳನ್ನು ನಡೆಸಬಹುದು:ನೇರ ಪ್ರತಿದೀಪಕ ಪ್ರತಿಕಾಯ ಪರೀಕ್ಷೆ ಮತ್ತು ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ.ನೇರ ಪ್ರತಿದೀಪಕ ಪರೀಕ್ಷೆಯಲ್ಲಿ ಫ್ಲೋರೆಸೀನ್‍ನ ಟ್ಯಾಗ್‍ಗಳನ್ನು ಹೊಂದಿರುವ ಪ್ರತಿಕಾಯಗಳು ನಿರ್ದಿಷ್ಟ ಸಿಫಿಲಿಸ್ ಪ್ರೋಟೀನ್‍ಗಳಿಗೆ ಅಂಟಿಕೊಳ್ಳುತ್ತವೆ.ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆಯಲ್ಲಿ ನಿರ್ದಿಷ್ಟ ಸಿಫಿಲಿಸ್ ಜೀನ್ಗಳ ಇರುವಿಕೆಯನ್ನು ಕಂಡುಹಿಡಿಯಲು ಪಾಲಿಮರೇಸ್ ಸರಣಿ ಪ್ರತಿಕ್ರಿಯೆ ತಂತ್ರಗಳನ್ನು ಉಪಯೋಗಿಸಲಾಗುತ್ತದೆ.ಈ ಪರೀಕ್ಷೆಗಳು ಸಮಯ ಸೂಕ್ಷ್ಮವಲ್ಲ,ಏಕೆಂದರೆ ಈ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾದ ಬಳಕೆ ಮಾಡುವುದಿಲ್ಲ.

ತಡೆಗಟ್ಟುವಿಕೆ

[ಬದಲಾಯಿಸಿ]

ಲಸಿಕೆ

[ಬದಲಾಯಿಸಿ]

೨೦೧೦ನೇ ವರೆಗೂ ಸಿಫಿಲಿಸ್ ವಿರುದ್ಧ ಯಾವುದೇ ಪರಿಣಾಮಕಾರಿಯಾದ ಲಸಿಕೆ ಲಭ್ಯವಾಗಿರಲಿಲ್ಲ.ಟ್ರೆಪೋನೆಮಲ್ ಪ್ರೋಟೀನ್ಗಳ ಮೇಲೆ ಆಧಾರಿತವಾದ ಹಲವಾರು ಲಸಿಕೆಗಳು,ಪ್ರತ್ಯೇಕವಾಗಿ ಸಿಫಿಲಿಸ್‌ನಿಂದ ಉಂಟಾಗುವ ಗಾಯಗಳ ಬೆಳವಣಿಗೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

ಸಂಭೋಗ

[ಬದಲಾಯಿಸಿ]

ಸಂಭೋಗದ ಸಮಯದಲ್ಲಿ ಕಾಂಡೊಮ್‌ನ ಬಳಕೆಮಾಡುವುದರಿಂದ ಸಿಫಿಲಿಸ್ ರೋಗ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ,ಆದರೆ ಸಂಪೂರ್ಣವಾಗಿ ಅಪಾಯವನ್ನು ತಪ್ಪಿಸುವಲ್ಲಿ ವಿಫಲವಾಗುತ್ತದೆ. ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರದ ಪ್ರಕಾರ-"ಲೇಟೆಕ್ಸ್ ಕಾಂಡೊಮ್ಗಳ ಬಳಕೆ ಮಾಡುವಲ್ಲಿ ನೆನಪಿರಬೇಕಾದ ವಿಷಯವೇನೆಂದರೆ, ಸೋಂಕಿತ ಪ್ರದೇಶವು ಸಂರಕ್ಷಣೆಯಲ್ಲಿರುವ ರೀತಿಯಲ್ಲಿ ಬಳಕೆ ಮಾಡಿದಾಗ ಮಾತ್ರ ಸಿಫಿಲಿಸ್‌ನ ಅಪಾಯವು ಕಡಿಮೆಯಾಗುತ್ತದೆ. ಕಾಂಡೊಮ್ ನಿಂದ ರಕ್ಷಿಸಲ್ಪಟ್ಟಿರದ ಪ್ರದೇಶದಲ್ಲಿರುವ ಗಾಯಗಳಿಂದ ಸಿಫಿಲಿಸ್ ರೋಗ ಹರಡುತ್ತದೆ.ಸೋಂಕಿತ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕವನ್ನು ಕಡಿಮೆಮಾಡಿದಲ್ಲಿ ಸಿಫಿಲಿಸ್‌ನ ಪ್ರಸರಣವನ್ನು ತಗ್ಗಿಸಬಹುದು."

ಜನ್ಮಜಾತ ರೋಗ

[ಬದಲಾಯಿಸಿ]

ಹೆಣ್ಣಿನ ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಸ್ಕ್ರೀನಿಂಗ್ ಮೂಲಕ ಸೋಂಕಿನ ಇರುವಿಕೆಯನ್ನು ಕಂಡುಹಿಡಿದು ಚಿಕಿತ್ಸೆಯ ಮೂಲಕ ತಡೆಗಟ್ಟಬಹುದು. ಯುನೈಟೆಡ್ ಸ್ಟೇಟ್ಸ್ ಪ್ರಿವೆಂಟೀವ್ ಸರ್ವಿಸಸ್ ಟಾಸ್ಕ್ ಫೋರ್ಸ್ (ಉ ಪಿ ಎಸ್ ಟಿ ಎಫ್)ಎಲ್ಲಾ ಗರ್ಭಿಣಿ ಮಹಿಳೆಯರ ಸಾಮೂಹಿಕ ತಪಾಸಣೆಯನ್ನು ಶಿಫಾರಸು ಮಾಡುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮೂರನೇ ತ್ರೈಮಾಸಿಕದಲ್ಲಿ ಮತ್ತು ತಮ್ಮ ಆಂಟಿನಾಟಲ್ ಭೇಟಿಯ ಸಂದರ್ಭದಲ್ಲಿ ಪರೀಕ್ಷೆ ಮಾಡಬೇಕೆಂದು ಶಿಫಾರಸು ಮಾಡುತ್ತದೆ.ಮಹಿಳೆಯರ ಪರೀಕ್ಷೆಗಳು ಸಕಾರಾತ್ಮಕವಾಗಿದ್ದರೆ,ತಮ್ಮ ಸಹವರ್ತಿಗಳನ್ನು ಪರೀಕ್ಷೆಗೆ ಒಳಪಡಿಸಿ, ಚಿಕಿತ್ಸೆಯನ್ನು ನೀಡಬೇಕು.ಜನ್ಮಜಾತ ಸಿಫಿಲಿಸ್ ಅಭಿವೃದ್ಧಿಶೀಲ ಪ್ರಪಂಚದಲ್ಲಿರುವ ಅನೇಕ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ.ಏಕೆಂದರೆ ಅನೇಕ ಮಹಿಳೆಯರಿಗೆ ಪ್ರಸವಪೂರ್ವ ಆರೈಕೆ ದೊರಕಿರುವುದಿಲ್ಲ.

ಸ್ಕ್ರೀನಿಂಗ್

[ಬದಲಾಯಿಸಿ]

ಪ್ರತ್ಯೇಕವಾಗಿ ಪುರುಷ-ಪುರುಷರ ನಡುವಿನ ಸಂಭೋಗದ ಆಚರಣೆಯಲ್ಲಿ ಭಾಗಿಯಾಗಿರುವ ಜನರನ್ನು ವರ್ಷಕ್ಕೊಮ್ಮೆ ಪರೀಕ್ಷೆ ಮಾಡಬೇಕು.ಸಿಫಿಲಿಸ್ ಕೆನಡಾ, ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಒಂದು ಪ್ರಕಟಣಾರ್ಹ ರೋಗವಾಗಿ ಉಳಿದಿದೆ.ವೈದ್ಯರು ರೋಗಿಗಳ ಬಳಿ ಅವರ ಸಂಗಾತಿಯನ್ನು ಆರೈಕೆಗೆ ಕಳುಹಿಸಲು ಪ್ರೋತ್ಸಾಹಿಸಬಹುದು.

ಉಲ್ಲೇಖ

[ಬದಲಾಯಿಸಿ]

[] [] [] []

  1. http://kn.vikaspedia.in/health/caaccccb7ccdc9fcbfc95ca4cc6/cb2c82c97cbfc95-cb0c97c97cb3cc1/cb8cbfcabcbfcb2cbfcb8ccd
  2. http://arogyavani.blogspot.in/2011/12/blog-post_21.html[ಶಾಶ್ವತವಾಗಿ ಮಡಿದ ಕೊಂಡಿ]
  3. https://en.wikipedia.org/wiki/Syphilis
  4. https://www.cdc.gov/std/syphilis/stdfact-syphilis.htm