ವಿಷಯಕ್ಕೆ ಹೋಗು

ಸಿ. ಎನ್. ಟವರ್, ಟೊರಾಂಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ರೋಜರ್ ಸೆಂಟರ್ ಸ್ಟೇಡಿಯಮ್ ಒಳಗಿನಿಂದ ಸಿ.ಎನ್.ಟವರ್ ಕಾಣಿಸುವ ರೀತಿ'

ಸಿ.ಎನ್.ಟವರ್, ಆಧುನಿಕ ವಿಶ್ವದ ಸೋಜಿಗಗಳಲ್ಲೊಂದು' ಎಂದು ವರ್ಣಿಸಲ್ಪಟ್ಟಿರುವ ಈ ಅದ್ಭುತ ಗಗನಚುಂಬೀ ಗೋಪುರ, ವಿಶ್ವದ ಅತಿ ಎತ್ತರದ ಕಟ್ಟಡ ಕೆನಡಾರಾಜ್ಯದ ಟೊರಾಂಟೋ ನಗರದಲ್ಲಿದೆ. ಟೊರಾಂಟೋ ನಗರದ ನಾಗರೀಕರಿಗೆ ದಿನರಾತ್ರಿ ಈ ಗೋಪುರದ ಬಗ್ಗೆ ಕಾಳಜಿಯಿದೆ. ೧,೧೩೬ ಅಡಿ ಎತ್ತರ ಸಾಗಿ ಅಲ್ಲಿನ ರೆಸ್ಟಾರೆಂಟ್ ನಲ್ಲಿ ಪೇಯಗಳನ್ನೂ, ತಿಂಡಿ-ತಿನಸುಗಳನ್ನೂ ಮೆಲ್ಲುವುದು ಹದಿಹರೆಯದ ಯುವ ಜನರಿಂದ ಹಿಡಿದು ಎಲ್ಲಾ ವಯೋಮಿತಿಯ ಜನರಿಗೂ ಬಲು ಮುದ ಕೊಡುವ ಸಂಗತಿ. []

ಸಿ.ಎನ್ ಟವರ್ ನಿರ್ಮಾಣ ಕಾರ್ಯ

[ಬದಲಾಯಿಸಿ]

'ಸಿ.ಎನ್.ಟವರ್' ನಿರ್ಮಾಣ ಕಾರ್ಯ, ೧೯೭೩ ರ ಫೆಬ್ರವರಿ, ೬ ರಂದು ಆರಂಭವಾಯಿತು. ಟವರ್ ನ ಅಡಿಪಾಯವನ್ನು ಹಾಕುವುದಕ್ಕೆ ಬಹಳ ಕೆಳಮಟ್ಟದವರೆಗೆ ಅಗಿಯಲಾಯಿತು. ತಳಪಾಯದ ಕೆಲಸ ಮುಗಿಯುವ ಹೊತ್ತಿಗೆ ೫೬,೦೦೦ ಟನ್, (೬೧,೭೨೯ ಶಾರ್ಟ್ ಟನ್ಸ್; ೫೫,೧೧೬ ಲಾಂಗ್ ಟನ್ಸ್)ಭೂಮಿ ಮತ್ತು ಮಣ್ಣನ್ನು ಹೊರತೆಗೆಯಲಾಯಿತು. ೧೫ ಮೀಟರ್, (೪೯.೨ ಅಡಿ)ಮಧ್ಯದಲ್ಲಿ ಮತ್ತು ಪಾಯದಲ್ಲಿ ೭,೦೦೦ ಕ್ಯು.ಮೀ. (೯,೧೫೬ ಕ್ಯೂಬಿಕ್ ಅಡಿ) ಕಾಂಕ್ರೀಟ್ ೪೫೦ ಟನ್ (೪೯೬ ಶಾರ್ಟ್ ಟನ್ಸ್; ೪೪೩ ಲಾಂಗ್ ಟನ್ಸ್) 'ರೆಬರ್' (short for reinforcing bar) ಮತ್ತು ೩೬ ಟನ್ (೪೦ ಶಾರ್ಟ್ ಟನ್ಸ್; ೩೫ ಉದ್ದ ಟನ್ಸ್) 'ಸ್ಟೀಲ್ ಕೇಬಲ್' ಕಟ್ಟಲಾಯಿತು. ೬.೭ ಮೀ. ದಪ್ಪ, (೨೨.೦ ಅಡಿ). ಈಭಾಗವನ್ನು ಶೀಘ್ರವಾಗಿ ೪ ತಿಂಗಳಿನಲ್ಲಿ ಕಟ್ಟಿ ಮುಗಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. "'ಸಿ.ಎನ್.ಟವರ್, ಟೊರಾಂಟೊ ನಗರ'". Archived from the original on 2014-03-25. Retrieved 2014-06-22.