ಸಾರಾಂಶ
ಗೋಚರ
ಸಾರಾಂಶ (ತಾತ್ಪರ್ಯ) ಎಂದರೆ ಒಂದು ಸಂಶೋಧನಾ ಲೇಖನ, ಮಹಾಪ್ರಬಂಧ, ವಿಮರ್ಶೆ, ಸಮ್ಮೇಳನದ ವಿದ್ವತ್ಪ್ರಬಂಧದ ಸಂಕ್ಷಿಪ್ತ ಗೋಷ್ವಾರೆ ಅಥವಾ ಒಂದು ನಿರ್ದಿಷ್ಟ ವಿಷಯದ ಯಾವುದೇ ಆಳವಾದ ವಿಶ್ಲೇಷಣೆ. ಓದುಗರು ವಿದ್ವತ್ಪ್ರಬಂಧದ ಉದ್ದೇಶವನ್ನು ಶೀಘ್ರವಾಗಿ ಖಚಿತಪಡಿಸಿಕೊಳ್ಳಲು ನೆರವಾಗಲು ಇದನ್ನು ಹಲವುವೇಳೆ ಬಳಸಲಾಗುತ್ತದೆ.[೧] ಇದನ್ನು ಬಳಸಿದಾಗ, ಸಾರಾಂಶವು ಯಾವಾಗಲೂ ಹಸ್ತಪ್ರತಿ ಅಥವಾ ಬೆರಳಚ್ಚಿಸಿದ ಬರಹದ ಆರಂಭದಲ್ಲಿ ಕಾಣಿಸಿಕೊಳ್ಳುತ್ತದೆ, ಮತ್ತು ಯಾವುದೇ ನಿರ್ದಿಷ್ಟ ಶೈಕ್ಷಣಿಕ ವಿದ್ವತ್ಪ್ರಬಂಧ ಅಥವಾ ಪೇಟೆಂಟ್ ಅರ್ಜಿಗೆ ಪ್ರವೇಶ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ವಿವಿಧ ಶೈಕ್ಷಣಿಕ ಕ್ಷೇತ್ರಗಳಿಗೆ ಸಾರಾಂಶ ಮತ್ತು ಅನುಕ್ರಮಣಿಕೆ ಸೇವೆಗಳು ಆ ನಿರ್ದಿಷ್ಟ ವಿಷಯಕ್ಕೆ ಸಾಹಿತ್ಯದ ಪ್ರಧಾನಭಾಗವನ್ನು ಸಂಕಲಿಸುವ ಗುರಿಹೊಂದಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ Gary Blake and Robert W. Bly, The Elements of Technical Writing, pg. 117. New York: Macmillan Publishers, 1993. ISBN 0020130856