ರಜಪೂತ
Rajput | |
---|---|
Classification | Kshatriyas (Warriors) |
Religions | ಹಿಂದೂ ಧರ್ಮ |
Languages | Indo-Aryan languages |
Populated States | The Indian subcontinent, particularily North India |
ಭಾರತ ದೇಶದ ಬಹು ಮುಖ್ಯ ಹಿಂದೂ ಕ್ಷತ್ರಿಯ ರಲ್ಲಿ (ವೀರ ಯೋಧರು)ಸದಸ್ಯರಾಗಿ ಇರುವವರು ರಜಪೂತರು . ಅವರು ಸೈನಿಕರಾಗಿ ತಮ್ಮ ವೃತ್ತಿಯಲ್ಲಿ ಖುಷಿಪಡುತ್ತಾರೆ ; ಅವರಲ್ಲಿ ಹಲವರು ಭಾರತಿಯ ಸೈನ್ಯ ಪಡೆ ಯಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ. ಬ್ರಿಟಿಷ್ ರಾಜ್^^ರ ಆಡಳಿತದಲ್ಲಿ ,ಸರ್ಕಾರವು ಅವರನ್ನು ಒಪ್ಪಿಕೊಂಡು ,ಹೆಚ್ಚು ಹೆಚ್ಚಾಗಿ ಅವರನ್ನು ಸೈನ್ಯದಲ್ಲಿ ಸೇರಿಸಿಕೊಂಡರು. ಇಂದಿನ ದಿನಗಳಲ್ಲಿ ರಾಜಸ್ಥಾನ ಅವರ ಮನೆಯಾಗಿದೆ.ಅಂಕಿ ಸಂಖ್ಯೆಯ ಪ್ರಕಾರ ರಜಪೂತರ ಜನಸಂಖ್ಯೆ ಮತ್ತು ಹಿಂದಿನ ರಜಪೂತರ ರಾಜ್ಯಗಳ ಹಲವು ಭಾಗಗಳು ಈ ಉಪ ಖಂಡದಲ್ಲಿ ಹರಡಿತ್ತು. ಅದರಲ್ಲಿಯೂ ಉತ್ತರ ಭಾರತ ಮತ್ತು ಮಧ್ಯ ಭಾರತಗಳಲ್ಲಿ ಹೆಚ್ಚಾಗಿತ್ತು. 9 ಮತ್ತು 11ನೇ ಶತಮಾನಗಳಲ್ಲಿ ರಜಪೂತರು ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ನಾಲ್ಕು ಅಗ್ನಿವಂಶಿ ಕುಲಗಳು,ಅಂದರೆ ಪ್ರತೀಹಾರರು (ಪರಿಹಾರರು ), ಸೋಲಂಕಿಯರು (ಚಾಲುಕ್ಯರು ), ಪರಮಾರರು (ಪರ್ಮರರು ), ಮತ್ತು ಚೌಹಾನರು (ಚಹಮಾನರು )ಪ್ರವರ್ಧಮಾನಕ್ಕೆ ಮೊದಲು ಬಂದರು. 1947ರ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶದಲ್ಲಿದ್ದ 600ಕ್ಕೂ ಹೆಚ್ಚು ರಾಜಮನೆತನದ ಪ್ರಭುತ್ವದ ಪೈಕಿ 400ಕ್ಕೂ ಹೆಚ್ಚು ರಾಜಮನೆತನದ ಪ್ರಭುತ್ವ ರಜಪೂತರದೇ ಆಗಿತ್ತು. ರಜಪೂತರು ಸ್ವಾತಂತ್ರ್ಯದ ಸಮಯದಲ್ಲಿ 121 ಗೌರವಾನಿವತ ರಾಜ್ಯಗಳ ಪೈಕಿ 81 ರಾಜ್ಯಗಳಲ್ಲಿ ಆಳ್ವಿಕೆ ನಡೆಸಿದರು.
ಇತಿಹಾಸ/ಚರಿತ್ರೆ
[ಬದಲಾಯಿಸಿ]ಪ್ರಾಚೀನ ಇತಿಹಾಸ (6 - 8 ನೇ ಶತಮಾನಗಳು )
[ಬದಲಾಯಿಸಿ]6 ಮತ್ತು 7 ನೇ ಶತಮಾನದಲ್ಲಿ ಸಿಂಧ್^^ಅನ್ನು ಆಳಿದ ರಾಜ್ ಸಾಮ್ರಾಜ್ಯದ ನಂತರ, ಇವರನ್ನು ಮುಹಮ್ಮದ್ ಬಿನ್ ಕ್ವಾಸಿಂನ ಅರಬ್ ಸೈನಿಕರು ಸೋಲಿಸಿದರು. ಇವರನ್ನು ಕೆಲವು ವೇಳೆಗಳಲ್ಲಿ ರಜಪೂತರು ಎಂದು ತಿಳಿಯಲಾಗಿದೆ. ಕೆಲವೊಂದು ಮೂಲಗಳ ಪ್ರಕಾರ ,8ನೇ ಶತಮಾನದಲ್ಲಿ ಸಿಂಧ್ಮೇಲೆ ಆಕ್ರಮಣ ಮಾಡಿದ ಅರಬ್ ದೊರೆ ಬಿನ್ ಕ್ವಾಸಿಂ, ಚಿತ್ತೋರ್ಘರ್ ಅನ್ನು ಸಹ ಆಕ್ರಮಿಸಿ ಬಪ್ಪ ರಾವಲ್^^ನಿಂದ ಸೋಲನ್ನು ಅನುಭವಿಸಿದ. ಇನ್ನು ಕೆಲವು ಆಕ್ರಮಣಗಳು ಮರೋಡಿಂಗ್ "ಯವ್ವನ " ರಿಂದ (ಯಥಾವತ್/ಅಕ್ಷರಶ : "ಅಯೋನಿಯನ್/ಗ್ರೀಕ್ ") ಆದದ್ದು ಸಹ ಈ ಯುಗದಲ್ಲಿ ದಾಖಲಾಗಿದೆ. ಈ ಸಮಯದಲ್ಲಿ , ನಾಮಧೇಯ "ಯವ್ವನ " ಹೆಸರನ್ನು ಯಾವುದೇ ಬುಡಕಟ್ಟು ಜನಾಂಗವನ್ನು ವಿವರಿಸಲು ,ಪಶ್ಚಿಮ ಅಥವಾ ಉತ್ತರ-ಪಶ್ಚಿಮ ದಿಕ್ಕಿನ ಇಂದಿನ ಪಾಕಿಸ್ತಾನ ಪ್ರದೇಶದಲ್ಲಿ ಉದ್ಭವಿಸಿತ್ತು. ಈ ಆಕ್ರಮಣಗಳು ಬಹುಶಃ, ಸತತವಾಗಿ ಆದ ಸಾಮಾನ್ಯ ಆಕ್ರಮಣದಿಂದ ಭಾರತದೊಳಗೆ ನುಸುಳಲು ಯುದ್ಧದೋಪಾದಿಯಲ್ಲಿ,ಆದರೆ ಕಡಿಮೆ ನಾಗರೀಕತೆ ಹೊಂದಿದ ಬುಡಕಟ್ಟು ಉತ್ತರ-ಪಶ್ಚಿಮ ಭಾಗದಿಂದ, ಮತ್ತು ಗ್ರೀಕರ ಅಥವಾ ಇಂಡೋ -ಗ್ರೀಕರ ಸ್ಪಷ್ಟ ಅಧಾರವಾಗಿರಲಿಲ್ಲ. ಕಾಶ್ಮೀರದ ಲಲಿತಾದಿತ್ಯ ಮುಕ್ತಪೀಡನು ಅಂತಹ ಯವ್ವನ ರ ಆಕ್ರಮಣವನ್ನು 8ನೇ ಶತಮಾನದಲ್ಲಿ ಸೋಲಿಸಿದನು. ಮತ್ತು ಪ್ರತಿಹಾರರನ್ನು 9ನೇ ಶತಮಾನದಲ್ಲಿ ಹಿಮ್ಮೆಟ್ಟಿಸಿದನು.
ರಜಪೂತರ ರಾಜ್ಯಭಾರಗಳು/ಸಾಮ್ರಾಜ್ಯ (7 - 11 ನೇ ಶತಮಾನಗಳು )
[ಬದಲಾಯಿಸಿ]ರಜಪೂತರ ಮೊದಲನೆಯ ರಾಜಧಾನಿಯ ವಿಷಯವು 7ನೇ ಶತಮಾನಕ್ಕೆ ಹೋಗುತ್ತದೆ. 9 ರಿಂದ 11ನೇ ಶತಮಾನದ ಕಾಲದಲ್ಲಿ ರಜಪೂತರು ಹೆಚ್ಚು ಪ್ರವರ್ಧಮಾನದಲ್ಲಿದ್ದರು. ನಾಲ್ಕು ಅಗ್ನಿವಂಶಿ ಕುಲಗಳು ಕ್ರಮವಾಗಿ ಪರಿಹಾರರು (ಪ್ರತಿಹಾರರು ), ಸೋಲಂಕಿಯರು ( ಚಾಲುಕ್ಯರು), ಪರಮಾರರು, ಮತ್ತು ಚಹಮಾನರು ಚೌಹಾನರು-ಇವರುಗಳು ಮೊದಲು ಪ್ರವರ್ಧಮಾನಕ್ಕೆ ಬಂದು ಪ್ರಾಂತ್ಯಗಳನ್ನು ರಚಿಸಿಕೊಂಡು ,ರಾಜಧಾನಿಗಳನ್ನು ಸೃಷ್ಟಿಸಿದರು.
ಗಹ್ಲೋಟ್ ಸಾಮ್ರಾಜ್ಯದ ಬಪ್ಪ ರಾವಲ್^^ನು 734 ಸಿಇ ನಲ್ಲಿ ಚಿತ್ತೋರ್^^ನಲ್ಲಿ ತನ್ನ ಆಡಳಿತವನ್ನು ವಿಸ್ತರಿಸಿದನು. ಅಲ್ಲಿಯವರೆವಿಗೂ ಚಿತ್ತೋರ್^^ಅನ್ನು ಮೋರಿ ಕುಲದ ರಜಪೂತರು ಆಳ್ವಿಕೆ ಮಾಡುತ್ತಿದ್ದರು. ಚಿತ್ತೋರ್^^ನ ಕೊನೆಯ ದೊರೆ 'ಮಾನ್ ಮೋರಿ'. ಪ್ರಸಿಧ್ಧ ಅಶೋಕ ಸಾಮ್ರಾಜ್ಯದ ಮೌರ್ಯ ಶಬ್ದದ ಅಪಭ್ರಂಶ ಪದವೇ ಮೋರಿ. ಕಚ್ವಾಹರು ಅಥವಾ ಕಚ್ಚಗುಪ್ತ ಸಾಮ್ರಾಟರು ಮೂಲಭೂತವಾಗಿ ಬಿಹಾರದಿಂದ ಬಂದವರು; ಅವರು ಗ್ವಾಲಿಯರ್ ಮತ್ತು ನರವರ್^^ಅನ್ನು 8ನೇ ಶತಮಾನದಲ್ಲಿ ಕಂಡುಕೊಂಡರು. ಅವರಲ್ಲಿನ ಮುಂಬಾಲಕನಾದ ದುಲಃ ರಾಜ್ ( ರಾಜ ಇಷ ಸಿಂಗ್^^ನ ಮೊಮ್ಮಗ ಮತ್ತು ನರವರ್^^ನ ರಾಜ ಸೋದ್ಹ್ ದೇವ್^^ನ ಮಗ ),ಧುಂಧರ್^^ನಲ್ಲಿ , 11ನೇ ಶತಮಾನದಲ್ಲಿ ಆಳ್ವಿಕೆಯನ್ನು ವಿಸ್ತರಿಸಿದನು. ಪ್ರತಿಹಾರರ ಸಾಮ್ರಾಜ್ಯ ತಮ್ಮ ಆಡಳಿತವನ್ನು ಮಾಳ್ವದಲ್ಲಿ ವಿಸ್ತರಿಸಿ ,ಆಡಳಿತವನ್ನು ನಡೆಸಿ,8 ಮತ್ತು 9 ನೇ ಶತಮಾನದಲ್ಲಿ ಭಿನ್ಮಲ್ ಮತ್ತು ಉಜ್ಜೈನಿ ನಗರಗಳನ್ನು ಆಳಿದರು. ಆ ಕುಲದ ಒಂದು ಶಾಖೆ ಮಾರವಾರ ವಿಭಾಗದ ಮಂದೋರ್ ನಲ್ಲಿ ವಿಸ್ತರಿಸಲ್ಪಟ್ಟು, 6 ಮತ್ತು 7ನೇ ಶತಮಾನದಲ್ಲಿ ಅವರ ಪ್ರಭುತ್ವ ರತ್ಹೊರ್^^ರಿಂದ ಸ್ಥಾನಭ್ರಷ್ಟ ಮಾಡುವತನಕ 14ನೇ ಶತಮಾನದವರೆಗೆ ಮುಂದುವರೆಯಿತು. 816 ಎಡಿ ಸಮಯದಲ್ಲಿ , ಉಜ್ಜೈನಿಯ ಪ್ರತಿಹಾರರು ಕನೌಜ್^^ಅನ್ನು ಈ ನಗರದಿಂದ ಆಕ್ರಮಿಸಿ ಶತಮಾನಗಳ ಕಾಲ,ಅದರಲ್ಲಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಆಳ್ವಿಕೆ ನಡೆಸಿದರು. 10ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಕ್ರಮಣದ ನಂತರ ಇವರ ಪತನ ಆರಂಭವಾಯಿತು. ಚಂದೇಲ ಕುಲವು, 10ನೇ ಶತಮಾನದ ನಂತರ ಬುಂದೇಲ್ ಖಂಡ ವನ್ನು ಆಳ್ವಿಕೆ ಮಾಡಿ ಕಲಿಂಜರ್ ಕೋಟೆಯನ್ನು ಆಕ್ರಮಿಸಿತು; ತದನಂತರದ ದಿನಗಳಲ್ಲಿ ಹೆಸರಾಂತ ಖಜುರಾಹೋ ದೇವಸ್ಥಾನವನ್ನು ಕಟ್ಟಿಸಿದರು. ರಜಪೂತ ಕುಲದ ಸಂಘಟನೆಯು ಅಂತಿಮವಾಗಿ ಈ ಅವಧಿಯಲ್ಲಿ ಶುದ್ಧೀಕರಣವಾಯಿತು. ರಜಪೂತ ಕುಲದಲ್ಲಿ ಅಂತರ್ಜಾತೀ ಮದುವೆಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಸಂಬಂಧಗಳನ್ನು ಬೆಸೆಯಲಾರಂಭಿಸಿತು.ಇದರಿಂದಾಗಿ ವ್ಯಾಪಾರ ಮತ್ತು ಪ್ರೋತ್ಸಾಹಕ ಹಣ ಬೆಳೆಯಲಾರಂಭಿಸಿತು. ಭಾರತೀಯ ಸಮಾಜದಲ್ಲಿ ಈ ಅವಧಿಯಲ್ಲಿ ಅರ್ಥಪೂರ್ಣ ಅಭ್ಯುದಯ ಆಯಿತೆಂದು ಪ್ರಾಚೀನ ವಸ್ತುಸಂಶೋಧನಾ ಶಾಸ್ತ್ರದ ಅಧಾರ ಮತ್ತು ಸಮಕಾಲೀನ ಪುಸ್ತಕಗಳಿಂದ ತಿಳಿದುಬರುತ್ತವೆ. ಈ ಅವಧಿಯಲ್ಲಿನ ಸಾಹಿತ್ಯ ಬೆಳವಣಿಗೆಯು ,ಅಂದರೆ ಸಂಸ್ಕೃತ ಮತ್ತು ಅಪಭ್ರಂಶ ಗಳೆರಡರಲ್ಲೂ ಆಗಿದೆ.ಭಾರತೀಯ ಶಾಸ್ತ್ರೀಯ ಸಾಹಿತ್ಯದ ಗಣನೀಯ ಭಾಗವಾಗಿ ರಚನೆಯಾಗಿದೆ. 11ನೇ ಶತಮಾನದ ಆದಿಯಲ್ಲಿ ಪೋಲ್ಯ್ಮಾಥ್^^ನ ರಾಜ ಭೋಜ,ಮಾಳ್ವದ ಆಡಳಿತಗಾರ 'ಪರಮಾರರ'ಆಡಳಿತವನ್ನು ಕಂಡಿದೆ. ಅವನು ಸಾಹಿತ್ಯ ಮತ್ತು ಕಲೆಯ ಆಶ್ರಯದಾತನಾಗಿದ್ದಷ್ಟೇ ಅಲ್ಲದೆ ,ಅವನೇ ಸ್ವತಹ ಬರಹಗಾರನಾಗಿದ್ದನು. ಅವನ ಸಮರಾಂಗಣ -ಸೂತ್ರಧಾರ ದಲ್ಲಿ ವಾಸ್ತುಶಿಲ್ಪದ ಬಗ್ಗೆ ಮತ್ತು ಅವನ ರಾಜ -ಮಾರ್ತಂಡ ದಲ್ಲಿ ಹೇಳಿರುವ ಯೋಗ–ಸೂತ್ರ ದ ಬಗ್ಗೆ ಹೆಸರುವಾಸಿಯಾದ ವಿವರಣೆ ನೀಡಿದೆ. ಉತ್ತರ ಮತ್ತು ಮಧ್ಯ ಭಾರತದ ಹಲವು ಮುಖ್ಯ ಸ್ಮಾರಕ-ಸ್ಥಂಭಗಳು, ಖಜುರಾಹೋ ನಲ್ಲಿರುವುದೂ ಸೇರಿದಂತೆ,ಎಲ್ಲವೂ ಈ ಅವಧಿಯಲ್ಲೂ ಇದೆ.
ಇಸ್ಲಾಮಿಕ್/ಇಸ್ಲಾಮರ ದಂಡೆಯಾತ್ರೆಗಳು (11 - 12 ನೇ ಶತಮಾನಗಳು )
[ಬದಲಾಯಿಸಿ]ಉತ್ತರ ಭಾರತದ ಫಲಭರಿತ ಸಮತಟ್ಟಾದ ಪ್ರದೇಶವು ಯಾವಾಗಲೂ,ಹಲವು ಆಕ್ರಮಣಕಾರಾರಿಗೆ ನದಿಯೋಪಾದಿಯಲ್ಲಿ ಉತ್ತರ-ಪಶ್ಚಿಮ ಭಾಗದಿಂದ ಬರಲು ಗುರಿಯಾಯಿತು.ಈ ನದಿಯೋಪಾದಿಯ ಕೊನೆಯ ಆಕ್ರಮಣದಿಂದ ಬುಡಕಟ್ಟು ಜನಾಂಗದ ಇಸ್ಲಾಮೀಕರಣಕ್ಕೆ ಕಾರಣವಾಯಿತು. ಭೌಗೋಳಿಕ ಕಾರಣದಿಂದ , ರಜಪೂತರು ಆಳಿದ ರಾಜ್ಯಗಳು ಹೆಚ್ಚು ಆಕ್ರಮಣದಿಂದ ನರಳಬೇಕಾಯಿತು.ಅದರಲ್ಲಿಯೂ ಮೊಂಗೋಳ–ಟರ್ಕಿಕ್–ಆಫ್ಘನ್ ಯುದ್ಧವೀರರು ಸತತವಾಗಿ ಈ ಉಪಖಂಡದ ಮೇಲೆ ಧಾಳಿಯನ್ನು ನಡೆಸಿದರು. ಸ್ಟೇನ್ಲೆ ವೊಲ್ಪೆರ್ತ್ರವರ ಭಾರತದ ಹೊಸ ಇತಿಹಾಸ/ನ್ಯೂ ಹಿಸ್ಟರಿ ಆಫ್ ಇಂಡಿಯಾ ದಲ್ಲಿ ಬರೆಯುತ್ತಾ, " ಹಿಂದೂ ಭಾರತದಲ್ಲಿ ರಜಪೂತರು ಸೇನಾಮುಖಿಯಾಗಿದ್ದು, ಇಸ್ಲಾಮರ ವಧೆಯ ದೃಷ್ಟಿಯಿಂದ."632 ರಲ್ಲಿ ಮುಹಮ್ಮದನ ನಿಧನಾನಂತರದ 15 ವರ್ಷದ ಒಳಗೆ ಕ್ಯಾಲಿಪ್ಹ್ ಉತ್ಹ್ಮನ್ ಸಮುದ್ರದ ಮುಖಾಂತರ ಸೇನೆಯನ್ನು ಕಳುಹಿಸಿ ಬಾಂಬೆ ಸಮುದ್ರ ತೀರದಲ್ಲಿನ ಥಾಣ ಮತ್ತು ಬ್ರೋಚ್^^ಅನ್ನು ಆಕ್ರಮಿಸಿದನು. ಸಿಂಧ್ ಪ್ರದೇಶದಲ್ಲಿ 662 ಮತ್ತು 664 ಸಿಇ ಯಲ್ಲಿ ಇನ್ನೊಂದು ವಿಫಲ ಆಕ್ರಮಣ ನಡೆಸಲ್ಪಟ್ಟಿತು.100 ವರ್ಷದೊಳಗೆ ಮುಹಮ್ಮದನ ಸಾವಿನ ನಂತರ , ಮುಸ್ಲಿಮರ ಸೈನ್ಯ ಏಷಿಯಾದ ಹೆಚ್ಚಿನ ಭಾಗವನ್ನು ಹಿಂದೂ ಕುಶ್^^ವರೆಗೆ ಮೆಟ್ಟಿ ನಿಂತಿತು;ಆದರೂ,ಸಿ . 1000 ಸಿಇವರೆವಿಗೂ ಭಾರತದಲ್ಲಿ ತಮ್ಮ ಹೆಜ್ಜೆಯನ್ನು ಇಡಲು ಸಾಧ್ಯವಾಗಲ್ಲಿಲ್ಲ.11ನೇ ಶತಮಾನದ ಪ್ರಾರಂಭದಲ್ಲಿ , ಘಜ್ನಿ ಮಹಮೂದ್^^ನು ಹಿಂದೂ ಶಾಹಿ ರಾಜಧಾನಿಯನ್ನು ಪಂಜಾಬ್^^ನಲ್ಲಿ ಆಕ್ರಮಿಸಿದನು . ಉತ್ತರ ಭಾರತದ ಮೇಲಿನ ಅವನ ಧಾಳಿಯಿಂದ ಪ್ರತಿಹಾರ ರಾಜ್ಯಭಾರವು/ರಾಜಧಾನಿಯು ದುರ್ಬಲವಾಯಿತು.ಇದರಿಂದಾಗಿ ತೀವ್ರತರ ರೀತಿಯಲ್ಲಿ ರಾಜ್ಯಭಾರವು ಸಣ್ಣದಾಗುತ್ತಾ ಚಂದೇಲರ ಹಿಡಿತದಲ್ಲಿರಬೇಕಾಯಿತು. 1018 ಸಿಇ ಯಲ್ಲಿ , ಮಹ್ಮುದನು ಕನೌಜ್ ನಗರವನ್ನು ಸುಲಿಗೆ ಮಾಡಿದನು. ಪ್ರತಿಹಾರ ರಾಜಧಾನಿಯನ್ನು ಹಿಮ್ಮೆಟ್ಟಿಸಿದನು.ಆದರೆ ತತ್^^ಕ್ಷಣವೇ ಘಜ್ನಿ^^ಗೆ ಹಿಂತಿರುಗಿದನು.ಸಾಮ್ರಾಜ್ಯ ಸ್ಥಾಪನೆಗಿಂತ ಕೊಳ್ಳೆ ಹೊಡೆಯುವುದೇ ಅವನಿಗೆ ಬೇಕಾಗಿತ್ತು. ಆಮೇಲಿನ ಗಲಿಬಿಲಿಯಲ್ಲಿ , ಗಹದ್ವಲ ಸಾಮ್ರಾಜ್ಯವು ಕನೌಜ್^^ನ ಸುತ್ತ-ಮುತ್ತ ಮಾದರಿ ರಾಜ್ಯವನ್ನು ಬೆಳೆಸಿತು,ಮತ್ತು ಸುಮಾರು 100 ವರ್ಷಗಳ ಕಾಲ ಆಳಿದರು. 1194 ಸಿಇ ಯಲ್ಲಿ ಮುಹಮ್ಮದ್ ಘೋರ /0}ನಿಂದ ಸೋಲಿಸಲ್ಪಟ್ಟು ,ನಗರವು ಧಾಳಿಗೆ ಸಿಲುಕಿ ಲೂಟಿಯಾಯಿತು. ಈ ಮಧ್ಯದಲ್ಲಿ ,ಇವತ್ತಿನ ದೆಹಲಿ ಭಾಗದ ಸುತ್ತ-ಮುತ್ತಲಿನ ಪ್ರದೇಶವನ್ನು ತೋಮರ ಮತ್ತು ಚೌಹಾನ್ ಕುಲದವರು ಯಶಸ್ವಿಯಾಗಿ ಆಳ್ವಿಕೆ ನಡೆಸಿದರು. ದೆಹಲಿಯ ರಾಜ ಪೃಥ್ವಿ ರಾಜ್ III ಮುಹಮ್ಮದ್ ಘೋರ ನನ್ನು ಮೊದಲನೇ ತರಾಯಿನ್ ಯುದ್ಧದಲ್ಲಿ (1191 ಸಿಇ )ಸೋಲಿಸಿದನು. ಮುಂದಿನ ವರ್ಷಗಳಲ್ಲಿ ಮುಹಮ್ಮದ್^^ನು ಪೃಥ್ವಿರಾಜ್^^ನನ್ನು ಎರಡನೇ ತರಾಯಿನ್ ಯುದ್ಧದಲ್ಲಿ (1192 ಎಡಿ)ಸೋಲಿಸಿದನು. ಈ ಯುದ್ಧದಲ್ಲಿ ,ಈ ಯುಗದಲ್ಲಿನ ಇತರೆಯಂತೆ ,ಮಿತಿಮೀರಿದ ಅಂತಃ ಕಲಹ,ಜಗಳಗಳು ,ಅಂತರ್ಯುದ್ಧಗಳು ರಜಪೂತರಲ್ಲಿ ಹೆಚ್ಚಾದ ಪ್ರಯುಕ್ತ ಧಾಳಿಕಾರರಿಗೆ ಗೆಲುವಿನ ಸೋಪಾನ ಸುಲಭವಾಯಿತು. 11ನೇ ಶತಮಾನದಲ್ಲಿ ಪರಮಾಲ ಮತ್ತು ಪೃಥ್ವಿರಾಜ್ - III ರ ನಡುವೆ ಉತ್ತರ ಪ್ರದೇಶದ ಒಂದು ಸಣ್ಣ ನಗರ ಮಹೋಬ ದಲ್ಲಿ ನಡೆಯಿತು. ಪರಮಾಲ ಸೈನ್ಯದಲ್ಲಿ ಅಲ್ಹ ಮತ್ತು ಉದಲ್ ಸೇನಾಧಿಪತಿಗಳಾಗಿದ್ದರು. ಧೈರ್ಯದಿಂದ ಹೋರಾಡಿದರೂ ಯುದ್ಧದಲ್ಲಿ ಸೋತರು. ಅಲ್ಹ^^ನ ಉತ್ತರಾಧಿಕಾರಿ ಅಹಿರ್ವರ್ ರಜಪೂತರು.
ಮಧ್ಯಕಾಲೀನ/ಮಧ್ಯ ಯುಗದಲ್ಲಿ ರಜಪೂತರ ರಾಜ್ಯಗಳು (12 - 16 ನೇ ಶತಮಾನಗಳು )
[ಬದಲಾಯಿಸಿ]ದೆಹಲಿಯ ಕೊನೆಯ ರಜಪೂತ ರಾಜ ಪೃಥ್ವಿರಾಜ್ ಚೌಹಾನ್. ಪ್ರುಥ್ವಿರಾಜನ ಮೊಮ್ಮಗ ಗೋವಿಂದ,ಚೌಹಾನರನ್ನು ಮುಂದುವರಿಸಿದ,ನಂತರದ ದಿನಗಳಲ್ಲಿ ಇಂದಿನ ರಾಜಸ್ಥಾನ ದಲ್ಲಿರುವ ರಣತಂಬೋರ್^^ಅನ್ನು ಸಣ್ಣ ರಾಜ್ಯವನ್ನಾಗಿ ಮಾಡಿಕೊಂಡು ಬೆಳೆಸಿದ. ಚೌಹಾನರ ಕುಲದ ಸೊಂಗರ ನು ನಂತರದ ದಿನಗಳಲ್ಲಿ ಜಲೋರ್^^ಅನ್ನು ಆಳ್ವಿಕೆ ಮಾಡಿದ. ಮಧ್ಯದಲ್ಲಿ ಅದೇ ಕುಲಕ್ಕೆ ಸೇರಿದ ಹದ ತಮ್ಮ ಆಡಳಿತವನ್ನು 13ನೇ ಶತಮಾನದ ಮಧ್ಯ ಭಾಗದಲ್ಲಿ ಹಡೋತಿ ಭಾಗವನ್ನು ಆಳಿದರು. 11ನೇ ಶತಮಾನದಲ್ಲಿ ತರಂಗ ರಾಜ್ಯವನ್ನು ರೆವೆರ್^^ನ ಮಹಾರಾಜ ರಣವಘನ್ ಸಿನ್ಹ್ ಆಳ್ವಿಕೆ ನಡೆಸಿದನು. ನಂತರ ತೋಮರಸ್^^ನು ಗ್ವಾಲಿಯರ್^^ಅನ್ನು ಅಭಿವೃದ್ಧಿ ಪಡಿಸಿದನು.ನಂತರದ ಆಡಳಿತಗಾರ ಮಾನ್^^ಸಿಂಗ್^^ನು ಕೋಟೆಯನ್ನು ಕಟ್ಟಿಸಿದ್ದು,ಈಗಲೂ ಇದೆ. 1194 ಸಿಇ ಯಂದು ಕನೌಜ್^^ನ ಗಹದ್ವಲ ರಾಜ್ಯವನ್ನು ಮುಹಮ್ಮದನ ಸೈನ್ಯ ಸೋಲಿಸಿತು. ಗಹದ್ವಲ ಸಾಮ್ರಾಜ್ಯದ ಕೆಲವು ಉಳಿದ ಸದಸ್ಯರು ಪಶ್ಚಿಮದ ಮರಳುಗಾಡಿನಲ್ಲಿ ನಿರಾಶ್ರಿತರಾಗಿ ಉಳಿದು ರಾಥೋರ್ ಕುಲದವರಾದರು.ಮತ್ತು ಮುಂದಿನ ದಿನಗಳಲ್ಲಿ ಮರವಾರರಾಜ್ಯವನ್ನು ರಚಿಸಿದರು. ಕಚ್ವಹ ಕುಲದವರು ಧುನಧರ್ ರಾಜ್ಯವನ್ನು ಆಳಿದ್ದು, (ನಂತರದಲ್ಲಿ ಜೈಪುರ)ಅಂಬೆರ್^^ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.ಈ ಅವಧಿಯಲ್ಲಿ ಕೆಲವೊಂದು ಸ್ಥಳಗಳು ,ತರ್ಕಕ್ಕೆ ಒಳಗಾಗಿ,ರಜಪೂತರು ಅವರ ಕುಲದವರು ಹಿಮಾಲಯಕ್ಕೆ ವಲಸೆ ಹೋದರು. ಈ ವಲಸಿಗರ ಸಂಖ್ಯೆಯಲ್ಲಿ ಕಟೋಚ್ ಕುಲದವರು, ಚಂಬದ ಚೌಹನರು ಮತ್ತು ಉತ್ತರಖಂಡದ ಹಾಗು ನೇಪಾಳದ ಕೆಲವು ಕುಲಸ್ಥರು ಸೇರಿದ್ದಾರೆ.
ಸುಲ್ತಾನರೊಂದಿಗೆ ಘರ್ಷಣೆ
[ಬದಲಾಯಿಸಿ]13ನೇ ಶತಮಾನದ ಆರಂಭದಲ್ಲಿ 'ಮುಹಮ್ಮದ್ ಘೋರ'ನ ಉತ್ತರಾಧಿಕಾರಿಯಾಗಿ ಕುತುಬ್ - ಉದ್ - ದೀನ್ ಐಬಕ್^^ನು ದೆಹಲಿ ಸುಲ್ತಾನರ ಸ್ಥಾಪನೆಗೆ ಕಾರಣನಾದನು. ಸುಲ್ತಾನ 'ಅಲ್ಲ - ಉದ್ - ದೀನ್ - ಖಿಲ್ಜಿ' ಯು ಗುಜರಾತ್ (1297), ಮಾಳ್ವ (1305), ರಣ ತಂಬೋರ್ (1301), ಚಿತ್ತೋರ್ಘರ್ (1303), ಜಲೋರ್, ಮತ್ತು ಭಿನ್ಮಲ್ (1311)^^ಅನ್ನು ಆಕ್ರಮಿಸಿಕೊಂಡನು. ರಜಪೂತರ ಧೀರೋಧಾತ ಹೋರಾಟದ ನಂತರವಷ್ಟೇ ಇವುಗಳ ಆಕ್ರಮಣವಾಯಿತು. ಮೊದಲನೇ ಜೌಹರ್" ಚಿತ್ತೋರ್^^ನ (1303)ಆಕ್ರಮಣದಿಂದಾಗಿ ಘಟಿಸಿತು. ಯುದ್ಧದ ಸಮಯದಲ್ಲಿ ತಮ್ಮ ಮೇಲೆ ಆದ ಆಕ್ರಮಣವನ್ನು ತಪ್ಪಿಸಿಕೊಳ್ಳಲು, ಹೆಂಗಸರು ಸಾಮೂಹಿಕವಾಗಿ (ತಮ್ಮನ್ನು ತಾವು) ಸ್ವಯಂ-ಬೆಂಕಿಗೆ ಬೀಳುವ ಪದ್ಧತಿಯೇ ಜೌಹರ್ ಆಗಿದೆ. ಪ್ರತಿಯಾಗಿ ಗಂಡಸರ ಜನಸಂಖ್ಯೆ ಸಕ ಪದ್ಧತಿ ಅಳವಡಿಸಿಕೊಂಡಿತು: ಅಂದರೆ ಸಾಯುವವರೆಗೂ ಹೋರಾಟದ ವಿಧಾನವನ್ನು ಕಂಡುಕೊಂಡರು. ಚಿತ್ತೋರ್^^ನ ಗುಹಿಲಾಗಳ ಸ್ವಯಂ -ರಕ್ಷಕ ಮಹಾನ್ ಹೋರಾಟ, ರಾಣಿ ಪದ್ಮಿನಿಯ ವೀರಕಥೆ ಮತ್ತು ಜೌಹರ್ ^^ನ ನೆನಪುಗಳು ರಜಪೂತರ ಗುಣಗಳನ್ನು ನೆನಪಿಸುತ್ತವೆ. ಅಲ್ಲ- ಉದ್- ದೀನ್- ಖಿಲ್ಜಿ' ಯು ತಾನು ಆಕ್ರಮಿಸಿಕೊಂಡ ರಾಜ್ಯಗಳಿಗೆ ಆಡಳಿತಗಾರನಾಗಿ ಅವನ ಆಯ್ಕೆಯಾದ ರಜಪೂತ ಸಹದ್ಯೋಗಿ ಮಲ್ಡಿಯೋ ಸೊಂಗರನನ್ನು ಜಲೋರ್^^ನ ಆಡಳಿತಗಾರನನ್ನಾಗಿ ನೇಮಿಸಿದನು. ಮಲ್ಡಿಯೋ ಸೊಂಗರನನ್ನು ಅವನ ಅಳಿಯ ಹಮ್ಮೀರ್ ಬದಲಾಯಿಸಿದ್ದು,ಗುಹಿಲಾ ಕುಲದ ಪ್ರಮುಖನಾಗಿದ್ದು,1326 ಸಿಇ ಯಂದು ಮೇವಾರ್ಸಿ . ರಾಜ್ಯವನ್ನು ಅಭಿವೃದ್ಧಿ ಪಡಿಸಿದನು. ರಣ ಕುಂಭ ತನ್ನ ರಾಜಧಾನಿಯನ್ನು ವಿಸ್ತರಿಸಿದ್ದು,ಅದಕ್ಕಾಗಿ ಮಾಳ್ವ ಮತ್ತು ಗುಜರಾತ್^^ನ ಸುಲ್ತಾನರನ್ನು ಹೊಡೆದೋಡಿಸಿ,ರಜಪೂತರ 'ಮೇವಾರ್'ರಾಜ್ಯವನ್ನು ಖ್ಯಾತಿಗೊಳಿಸಿದನು.
ಮುಘಲರ ಯುಗ (16-18 ನೇ ಶತಮಾನಗಳು )
[ಬದಲಾಯಿಸಿ]1526 ರ ಮೊದಲನೇ ಪಾಣಿಪಟ್ ಕದನದಲ್ಲಿ ಇಬ್ರಾಹಿಂ ಲೋದಿ ಯನ್ನು ಬಾಬರ್ ಸೋಲಿಸಿದ ನಂತರ ದೆಹಲಿಯ ಸುಲ್ತಾನರು ಮರೆಯಾದರು. ಮೇವಾರದ ರಾಜ ರಣ ಸಂಗನು,ಬಾಬರ್^^ನ ವಿರುದ್ಧ ಹಠ ತೊಟ್ಟು ,ಭಾರೀ ಸೈನ್ಯದ ಪಾದಯಾತ್ರೆಯನ್ನು ಮಾಡಿದನು. ರಣ ಸಂಗನು ಸಂಪ್ರದಾಯಬದ್ಧ ಯುದ್ಧ ತಂತ್ರಗಳನ್ನು ಮತ್ತು ಶಸ್ತ್ರಗಳನ್ನು ಉಪಯೋಗಿಸಿದಾಗ,ಬಾಬರನು ಆಧುನಿಕ ತಂತ್ರಜ್ಞಾನ ಮತ್ತು ಶಸ್ತಾಸ್ತ್ರಗಳನ್ನು,ಫಿರಂಗಿಗಳನ್ನು ಉಪಯೋಗಿಸಿದನು.ಉತ್ತರ ಭಾರತದಲ್ಲಿ ಇದು ಮೊದಲನೇ ಮಾದರೀ ಉದಾಹರಣೆಯಾಯಿತು. ಈ ಅಂತರದ ಕಾರಣದಿಂದ,ಸಂಗನು 16 ಮಾರ್ಚ್,1527 ರಂದು ಖನೌ ರಣರಂಗದಲ್ಲಿ ಬಾಬರನಿಂದ ಸೋಲಿಸಲ್ಪಟ್ಟನು. ಆದರೂ,15 ವರ್ಷಗಳ ನಂತರ ಅಕ್ಬರ್^^ನ ಆಡಳಿತ ಅಧಿಕಾರಕ್ಕೆ ಬಂದ ಮೇಲೆ ಮುಘಲರ ಸಾಮ್ರಾಜ್ಯ ಮತ್ತು ರಜಪೂತರ ಸಾಮ್ರಾಜ್ಯ ಒಂದು ನಿರ್ಧಿಷ್ಟ ಆಕಾರವನ್ನು ಪಡೆಯಲು ಆರಂಭಿಸಿತು. ಖನೌ ರಣರಂಗದ ಯುಧ್ಧದ ನಂತರ ರಣಸಂಗನು ನಿಧನನಾದನು. ಇದರಿಂದಾಗಿ ಮೇವಾರ ರಾಜ್ಯವು ವಿಧವೆಯಾದ 'ರಾಣಿ ಕರ್ಮವತಿ'ಯ ಆಡಳಿತಕ್ಕೆ ಒಳಪಟ್ಟಿತು. ಗುಜರಾತಿನ ಆಳ್ವಿಕೆದಾರ ಬಹಾದುರ್ ಶಾಹ್^^ನ ಬೆದರಿಕೆಗೆ ಒಳಗಾಯಿತು. ಒಂದು ರೋಮಾಂಚಕ ಕಥೆಯನ್ವಯ,ಹಲವಾರು ಬಾಯಿಗಳಲ್ಲಿ ಕೇಳಿ ಬಂದಹಾಗೆ, ಕರ್ಮವತಿಯು ಹುಮಾಯುನ್^^ನ ಸಹಾಯವನ್ನು ಕಾಡಿ-ಬೇಡಿ,ತನ್ನ ದಿವಂಗತ ಗಂಡನ ಮಗನ ವೈರಿಯ ಜೊತೆ ಕೈ ಜೋಡಿಸಿದಳು . ಅವನಿಂದ ಸಹಾಯವೂ ಬಂತಾದರೂ,ಅದು ತುಂಬಾ ತಡವಾಗಿತ್ತು ; ಬಹಾದುರ್ ಶಾಹ್ ಚಿತ್ತೋರ್^^ಅನ್ನು ಆಕ್ರಮಿಸಿಕೊಂಡನು. ಈ ಸಂದರ್ಭದಲ್ಲಿ ಮೂರು ಜೌಹರ್^^ಗಳ ಎರಡನೇ ಘಟನೆಯು ಚಿತ್ತೋರ್^^ನಲ್ಲಿ ಆಯಿತು. ಕರ್ಮವತಿಯು ತನ್ನ ಸೈನಿಕರ ಹೆಂಡತಿಯರುಗಳೊಂದಿಗೆ ಸಾಮೂಹಿಕವಾಗಿ ಅಗ್ನಿ ಪ್ರವೇಶ ಮಾಡಿದಳು.ಗಂಡಸರು ಮುಸ್ಲಿಮರ ಹೊಡೆತ ತಪ್ಪಿಸಿಕೊಳ್ಳಲು,ಯುದ್ಧದಲ್ಲಿ ಸಾಯುವವರೆವಿಗೂ ಹೋರಾಡಿ ಮಡಿದರು.
ಮುಘಲ್ –ರಜಪೂತರ ಒಡಂಬಡಿಕೆ/ಒಪ್ಪಂದ/ಹೊಂದಾಣಿಕೆ
[ಬದಲಾಯಿಸಿ]ಬಾಬರ್^^ನ ಮಗ ಹುಮಾಯೂನನು ಆಡಳಿತಗಾರನಾಗಿ ಹೆಚ್ಚಿನ ಅವಧಿಯನ್ನು ದೇಶಭ್ರಷ್ಟನಾಗಿ ಕಳೆಯಬೇಕಾಯಿತು. ಆದರೂ, ಅವನ ಮಗ ಅಕ್ಬರ್, ಪಿತ್ರಾರ್ಜಿತವಾಗಿ ಬಲಗೊಳಿಸಿ ಮತ್ತು ವಿಸ್ತರಿಸಿ ದೆಹಲಿಯ ಸುಲ್ತಾನರಂತೆ ರಾಜ್ಯವನ್ನು ದೊಡ್ಡ ಸಾಮ್ರಾಜ್ಯವಾಗಿ ಬೆಳೆಸಿದನು. ಅವನ ಗೆಲುವಿಗೆ ಕಾರಣವೆಂದರೆ ತನ್ನ ಸಾಮ್ರಾಜ್ಯದಲ್ಲಿನ ಆಡಳಿತ ವಿಭಾಗದಲ್ಲಿ ಸ್ಥಳೀಯ ರಜಪೂತ ಮುಖ್ಯಸ್ಥರನ್ನೂ ಸೇರಿಸಿಕೊಂಡಿದ್ದು. ರಜಪೂತ ಮುಖ್ಯಸ್ಥರು ಸಂಬಂಧವನ್ನು ಮದುವೆಗಳ ಮೂಲಕ ಗಟ್ಟಿಗೊಳಿಸಿದರು, ಹಾಗೆಯೇ ಹಲವು ರಜಪೂತ ಒಳ್ಳೆಯ ಹೆಣ್ಣು ಮಕ್ಕಳು ಮುಘಲರನ್ನು ಮದುವೆಯಾದದ್ದು ಸಹ ಕಾರಣವಾಯಿತು. ಅಕ್ಬರನೊಂದಿಗೆ ಮದುವೆಯ ಸಂಬಂಧವನ್ನು ಮೊದಲ ಬಾರಿಗೆ ಕುದುರಿಸಿದವರು ಕಚ್ವಹಾಸ್;ಅವರು ತಮ್ಮ ಅಧಿಪತ್ಯದಿಂದ ವಾತಾವರಣ ಸೃಷ್ಟಿಸಿದ್ದರಿಂದ, ಪೂರ್ಣ ವ್ಯಾಪ್ತಿಗೆ ಬದಲಾಯಿಸಿದ್ದರಿಂದ,ಹೆಚ್ಚಿನ ಪಾತ್ರ ವಹಿಸಿದ್ದರಿಂದ ರಜಪೂತರ ಸ್ನೇಹ ಸಂಬಂಧಗಳು ಬಹು ಬೇಗ ಭಾರತದ ಉಪಖಂಡದಲ್ಲಿ ಹರಡಿತು. ಹೌದು,ಇಬ್ಬರು ಯಶಸ್ವಿ ಮುಘಲ್ ದೊರೆಗಳಾದ , ಜಹಂಗೀರ್ ಮತ್ತು ಷಃ ಜಹಾನ್, ರಜಪೂತ ತಾಯಂದಿರಿಗೆ ಹುಟ್ಟಿದವರಾಗಿದ್ದರು. ಮುಘಲರ ಸಾಮ್ರಾಜ್ಯದಲ್ಲಿ ರಜಪೂತ ಮುಖ್ಯಸ್ಥರು ಮುಘಲ್ ಅಧಿಕಾರಿಗಳಾಗಿ ಮತ್ತು ಆಡಳಿತಗಾರರಾಗಿ ಸೇವೆ ಸಲ್ಲಿಸಿದ್ದು,ಸರ್ಕಾರದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದರು. ಈ ಅವಧಿಯಲ್ಲಿ ,ರಜಪೂತರ ವೈಭವಶಾಲಿ ಪ್ರಭಾವ ಘನೀಕರಣಗೊಂಡು ;ಪರಿಣಾಮವಾಗಿ ಜಾತಿಯ ವಿಭಾಗಗಳು ಗಡಸಾಗಲಾರಂಭಿಸಿದವು. ರಜಪೂತ ರಾಜ್ಯ ಮತ್ತು ಮುಘಲರ ಸಾಮ್ರಾಜ್ಯದ ಮಧ್ಯ ಶಕ್ತಿಯ ನಡುವೆ ರಾಜಕೀಯ ಸಂಬಂಧಗಳು ಪೂರ್ವಗಾಮಿಯಾಗಿ,ಅದೇ ರೀತಿಯ ಸಂಬಂಧಗಳಿಗೆ ಅವರ ಮತ್ತು ಬ್ರಿಟಿಷರ ನಡುವೆಯೇ ಆಯಿತು.
ಮೇವಾರದ ಮಹಾರಾಣ ಪ್ರತಾಪ್ ಸಿಂಗ್
[ಬದಲಾಯಿಸಿ]ಮುಘಲರ ವಿರುದ್ಧ ಮತ್ತು ಎಲ್ಲಾ ಧಾಳಿಕೋರರ ವಿರುದ್ಧ ಮೇವಾರ ಹೋರಾಡಿದೆ. ಹಳೆಯ ಕಥೆಗಳಾದ ರಾವಲ್ ರತನ್ ಸಿಂಗ್ ಮತ್ತು ರಾಣಿ ಪದ್ಮಿನಿ, ರಣ ಸಂಗ,ರಾಣ ಪ್ರತಾಪನ ಅಜ್ಜ ಬಾಬರನ ವಿರುದ್ಧ ಹೋರಾಡಿದನು. ನಂತರ,ಬಾಬರನ ಮೊಮ್ಮಗ ಅಕ್ಬರನು 1567 ಸಿಇ ಯಲ್ಲಿ ಚಿತ್ತೋರ್^^ಅನ್ನು ಆಕ್ರಮಿಸಿದನು.ಹೋರಾಟದ ನಂತರ, ಮೇವಾರದ ಮುಖ್ಯಸ್ಥ ಚಿತ್ತೋರ್^^ನ ರಾಜ ಅಂತಿಮವಾಗಿ ಅಕ್ಬರನಿಗೆ 1568ರಲ್ಲಿ ತಲೆಬಾಗಿದನು. (ಸೋತನು) ಚಿತ್ತೋರ್^^ನ ಮೂರನೇ (ಮತ್ತು ಕೊನೆ )ಜೌಹರ್ ಈ ಸಂದರ್ಭದಲ್ಲಿ ಪ್ರಕಟವಾಯಿತು. ಕೋಟೆಯ ಅಧಃಪತನ ಸನ್ನಿಹಿತವಾದಾಗ, ಕೋಟೆಯ ಒಳಗಿದ್ದ ಹೆಂಗಸರು ಸಾಮೂಹಿಕವಾಗಿ ಸ್ವಯಂ -ಬೆಂಕಿಗೆ ಆಹುತಿಯಾದರೆ, ಗಂಡಸರು ಕೋಟೆಯಿಂದ ಹೊರಗೆ ಬಂದು ಧಾಳೀಕೋರರಾದ ಮುಸ್ಲಿಮರ ಸೈನ್ಯದ ವಿರುದ್ಧ ಸಾಯುವವರೆವಿಗೂ ಹೋರಾಟ ನಡೆಸಿದರು. ಈ ಘಟನೆಗೆ ಮುಂಚೆ , ಮೇವಾರದ ಆಡಳಿತಗಾರ , ರಾಣ ಉದೈ ಸಿಂಗ್ II, ಹತ್ತಿರದ ಬೆಟ್ಟ ಪ್ರದೇಶಕ್ಕೆ ಹೊರಟು ಹೋಗಿದ್ದನು, ಹಾಗು ಅಲ್ಲಿ ಉದೈಪುರ ಎಂಬ ಹೊಸ ನಗರವನ್ನು ನಿರ್ಮಿಸಿದನು. ಗಡಿ ಪಾರಾಗಿದ್ದ ಸಂದರ್ಭದಲ್ಲಿ ಅವನ ಮಗ ಮೇವಾರದ ರಾಜ ಪ್ರತಾಪ್ ಸಿಂಗನುಸಿಸೋಡಿಯ ಕುಲದ ಮುಖ್ಯಸ್ಥನು ಮುಂದಿನ ದೊರೆಯಾದನು. ಪ್ರತಾಪ್ ಸಿಂಗನ ಅರ್ಹಶಕ್ತಿಯ ನಾಯಕತ್ವದಿಂದ,ಮುಘಲರಿಗೆ ಸಾಕಷ್ಟು ತೊಂದರೆಯನ್ನು ನೀಡಿದ್ದರಿಂದ ಸಂಧಿಯ ಪ್ರಸ್ತಾಪಕ್ಕೆ ಹೊಂದಿಕೆ ಮಾಡುವಂತಾಯಿತು. ಈ ದಿನದ ರಜಪೂತ ವಿಗ್ರಹ ಪ್ರತಾಪ್ ಸಿಂಗ್,ಈ ಸಂಧಿಯ ಸ್ನೇಹ ಪ್ರಸ್ತಾಪದಿಂದ ಅಕ್ಬರನ ಮುಂದೆ ಮತ್ತು ಮುಘಲರ ಶಕ್ತಿಯ ಮುಂದೆ ಮೆರವಣಿಗೆ ಮಾಡಿದನು.ಮುಘಲರ ಶಕ್ತಿಯುತ ಸೈನ್ಯದ ಮುಂದೆ ಜೂನ್ 1576 ರಲ್ಲಿ ಹಳದಿಘತಿ ರಣರಂಗದಲ್ಲಿ ಸೋಲಿಸಲ್ಪಟ್ಟನು. ಅಲ್ಲಿಂದ ತಪ್ಪಿಸಿಕೊಂಡು , ಬೆಟ್ಟಗಳಲ್ಲಿ ಅಡಗಿ ಹಲವು ರೀತಿಯ'ಗೆರಿಲ್ಲಾ'ಮಾದರಿಯ ಹೋರಾಟ ನಡೆಸಿ,ಸಾವಿನ ಸಮಯದಲ್ಲಿ ಅವನು ಮುಘಲರಿಂದ ಬಹಳಷ್ಟು ರಾಜ್ಯಗಳನ್ನು ಪುನರ್ವಶಪಡಿಸಿಕೊಂಡನು. ಆದರೆ ಚಿತ್ತೋರ್ ಮತ್ತು ಮಂಡಲ್ ಘರ್ ಕೋಟೆಗಳನ್ನು ವಶಪಡಿಸಿಕೊಳ್ಳಲಾಗದೆ,1597 ಸಿಇ ಯಲ್ಲಿ ಕಾಲವಶವಾದನು. ಪ್ರತಾಪನ ಸಾವಿನ ನಂತರ ,ಅವನ ಮಗ ರಾಣ ಅಮರ ಸಿಂಗನು 18 ವರ್ಷಗಳ ಕಾಲ ದೀರ್ಘ ಹೋರಾಟ ನಡೆಸಿ ,ಮುಘಲರಿಂದ ಹೆಚ್ಚಿನ ಆಕ್ರಮಣವನ್ನು ಎದುರಿಸಿದನು. ಈ ಅವಧಿಯಲ್ಲಿ ಅವನು 18 ಯುದ್ಧಗಳನ್ನು ನಡೆಸಿದನು. ಅಂತಿಮವಾಗಿ ಮುಘಲರೊಂದಿಗೆ ಶಾಂತಿ ಸಂಧಾನಕ್ಕೆ ಒಳಗಾಗಿ,ಕೆಲವೊಂದು ಷರತ್ತುಗಳನ್ನು ಒಳಗೊಂಡಿದ್ದು,ಆದರೆ ನಿರ್ಧಿಷ್ಟ ವಿನಾಯಿತಿ ಪಡೆದು:ಆದರೆ ಮೇವಾರದ ರಾಣನು ಮುಘಲರ ಅರಮನೆಯನ್ನು ವೈಯಕ್ತಿಕವಾಗಿ ಪ್ರತಿನಿಧಿಸದೆ, ಅರಮನೆಯನ್ನು ಮುಖ್ಯ ರಾಜನು ಭೇಟಿ ಮಾಡಬೇಕೆಂದು ಹಾಗು ರಾಣ ಮತ್ತು ಅವನ ಕುಲದವರು ಮದುವೆಯ ಸಂಬಂಧಗಳೊಡನೆ ಮುಘಲರೊಂದಿಗೆ ಬೆರೆಯುವ ಅಗತ್ಯವಿಲ್ಲದಂತೆ ವಿನಾಯಿತಿಯನ್ನು ಪಡೆದನು. ಈ ಒಪ್ಪಂದಕ್ಕೆ, ರಾಣ ಅಮರ್ ಸಿಂಗ್ ಮತ್ತು ರಾಜ ಖುರ್ರಮ್ ಶಿಹಾಬ್ -ಉದ್ -ದಿನ್ ಮುಹಮ್ಮದ್^^ರು (ನಂತರದ ಷಃಜಹಾನ್)1615 ಸಿಇ ಯಲ್ಲಿ ಗೊಗುಂಡದಲ್ಲಿ ಸಹಿ ಹಾಕಿದರು. ಸಿಂಗನು ಇದರಿಂದಾಗಿ,ಮೊಗಲರ ಸಾಮಂತನಾಗಿ ತನ್ನ ರಾಜ್ಯದ ಮೇಲೆ ಹಿಡಿತವನ್ನು ಸಾಧಿಸಿದನು. ಮೇವಾರದ ಆಡಳಿತಗಾರ ಸಿಸೋಡಿಯನ್ನರು, ರಜಪೂತ ವಂಶದ ಕೊನೆಯವರಾಗಿ ಮುಘಲರೊಂದಿಗೆ ಒಪ್ಪಂದಕ್ಕೆ ಬಂದರು.
ಮರಾಠ ಸಾಮ್ರಾಜ್ಯ
[ಬದಲಾಯಿಸಿ]ಮುಘಲರ ಕೇಂದ್ರಾಡಳಿತ ಸಾಮ್ರಾಜ್ಯ ಪತನದ ಆರಂಭವು, ಔರಂಗ್ಜೇಬ್^^ನ ನಿಧನಾನಂತರ ಆರಂಭವಾಗಿ,}ಛತ್ರಪತಿ ಶಿವಾಜಿಯ ನೇತೃತ್ವದ ಅಡಿಯಲ್ಲಿ ಮರಾಠರುಪ್ರಭಲವಾಗಿ ಬೆಳೆಯಲು ಪ್ರಾರಂಭಿಸಿದರು.(ಶಿವಾಜಿಯ ತಾತ , ಮಲೋಜಿ ಭೋಂಸ್ಲೆ , ಸಿಸೋಡಿಯ ಕುಲದ ರಜಪೂತರು ). ಶಿವಾಜಿಯ ಬೆಳವಣಿಗೆಯಲ್ಲಿ ಒಂದೇ ಒಂದು ದೊಡ್ಡ ಸೋಲು ಎಂದರೆ ಕಚ್ವಹ ಆಡಳಿತಗಾರ, ಮಿರ್ಜಾ ರಾಜ ಜೈ ಸಿಂಗ್ I ಅಂಬೆರ್ ರಾಜ್ಯ. ಔರಂಗ್ಜೇಬ್^^ನಿಂದ ಆದೇಶ ಪಡೆದಿದ್ದು ಆದರೂ, (ಮಿರ್ಜಾ ರಾಜನ ಸೈನ್ಯ ಶಿವಾಜಿಯ ಸೈನ್ಯಕ್ಕಿಂತ ತುಂಬಾ ದೊಡ್ಡದಾಗಿದ್ದು,) ಆಗ್ರಾದಲ್ಲಿದ್ದಾಗ ,ಔರಂಗ್ಜೇಬ್^^ನ ಭೇಟಿ ಮಾಡಲು ಬಂದ ಸಂದರ್ಭದಲ್ಲಿ, ಶಿವಾಜಿಯನ್ನು ದೈಹಿಕವಾಗಿ ಮನೆಯ ಬಂಧನದಲ್ಲಿ ಔರಂಗ್ಜೇಬ್^^ನು ಇಟ್ಟನು. ಮಿರ್ಜಾ ರಾಜ ಜೈ ಸಿಂಗ್ -I ಮತ್ತು ಅವನ ಮಗ ರಾಮ್ ಸಿಂಗ್ - Iರವರ ಸಹಾಯದಿಂದ ಶಿವಾಜಿಯು ತಪ್ಪಿಸಿಕೊಂಡು ಮರಾಠ ಸಾಮ್ರಾಜ್ಯದ ರಚನೆಗೆ ಕಾರಣನಾದನು. 1728ರಲ್ಲಿ ನರ್ಮದ ನದಿಯನ್ನು ದಾಟಿದ ಮೇಲೆ ಪೇಶ್ವೆ ಬಾಜಿರಾವ್ ಮತ್ತು ಅವನ ಉತ್ತರಾಧಿಕಾರಿ ಬಾಲಾಜಿ ಬಾಜಿರಾವ್ ಸೈನ್ಯ ಪಡೆಯ ರವಾನೆಯನ್ನು ಮಾಳ್ವಾಗೆ ಕರೆತಂದುದಲ್ಲದೆ ಹಿಂದುಸ್ತಾನದ ಇತರ ಕಡೆಗೂ ನಡೆಸಿದನು. 1760 ರಲ್ಲಿ ನಿಜಾಮನನ್ನು ಡೆಕ್ಕನ್ ಪ್ರದೇಶದಲ್ಲಿ ಸೋಲಿಸಿ , ಮರಾಠರ ಶಕ್ತಿ ತನ್ನ ಉತ್ತುಂಗವನ್ನು ಏರಿ 250 ಮಿಲಿಯನ್ ಎಕರೆ ಪ್ರದೇಶವನ್ನು (1 ಮಿಲಿಯನ್ ಕಿಮಿ ²)ಅಥವಾ ಭಾರತದ ಉಪ-ಖಂಡದ ಮೂರನೇ ಒಂದು ಭಾಗವನ್ನು ಆಕ್ರಮಿಸಿಕೊಂಡಾಗಿತ್ತು. ಮರಾಠರ ಈ ವಿಸ್ತರಣೆ ಕಾರ್ಯವು ಕೆಲವು ಕಾಲ,ಅಂದರೆ 1761 ಎಡಿ ಯ ಮೂರನೇ ಪಾಣಿಪಟ್ ಕದನದ ಸೋಲಿನ ನಂತರ ತಡೆಯಾಯಿತು.ಭಾರತ ಉಪ-ಖಂಡದ, ಮಾಜಿ ರಜಪೂತ ಸಾಮ್ರಾಜ್ಯದ ಉತ್ತರ ಭಾರತದಲ್ಲಿ ,ರಜಪೂತ ರಾಜ್ಯಗಳ ಈ ಅವಧಿಯಲ್ಲಿ ಸಂಬಂಧಗಳ ಮತ್ತು ಸೈನಿಕರ ಕ್ಷಿಪ್ರ ನಡೆ ಬೇರೆ ಬೇರೆ ಶಕ್ತಿಗಳೊಂದಿಗೆ ಅಧಿಕಾರಕ್ಕಾಗಿ ಹೋರಾಟ ನಡೆದಿದ್ದವು. ಮರಾಠರ ಸತತ ಪ್ರಯತ್ನದಿಂದ ಕಪ್ಪಕಾಣಿಕೆ ಮತ್ತು ವರ್ತನೆಯ ಪ್ರಹಾರದಿಂದ ಹಿಡಿತ ಸಾಧಿಸಲು ಪ್ರಯತ್ನಿಸಿದ್ದರಿಂದ ರಜಪೂತ ರಾಜ್ಯ ಮತ್ತು ಜಟ್ ಜನಾಂಗದವರಿಂದ ಶತ್ರುತ್ವ ಬೆಳೆಸಿಕೊಳ್ಳಬೇಕಾಯಿತು.ಇದರಿಂದಾಗಿ ರಜಪೂತ ರಾಜ್ಯ ಮತ್ತು ಈಸ್ಟ್ ಇಂಡಿಯಾ ಕಂಪನಿ ಯೊಂದಿಗೆ 19ನೇ ಶತಮಾನದ ಆರಂಭದಲ್ಲಿ ಸೈನ್ಯ-ಸೈನ್ಯಗಳ ನಡುವೆ ಸಂಬಂಧಗಳನ್ನೂ ಬೆಳೆಸಲು ಕಾರಣವಾಯಿತು. ಈ ಅವಧಿಯಲ್ಲಿನ ಒಂದು ಹೆಜ್ಜೆ ಗುರುತೆಂದರೆ,ಜಯಪ್ಪ ಸಿಂಧ್ಯ, ಮರಾಠ ಮುಖ್ಯಸ್ಥನನ್ನು,ನಾಗೌರ್ ಬಳಿ ತೆರಿಗೆಯನ್ನು ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಕೊಲೆ ಮಾಡಲಾಯಿತು. ಇನ್ನೊಂದು ಘಟನೆಯಲ್ಲಿ,ಜೈಪುರದ ಆಡಳಿತಗಾರ ಈಶ್ವರಿ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಘಟನೆಗಳಿಂದ ಜೈಪುರದ ಜನತೆ ಹೆಚ್ಚಾಗಿ ಸಿಟ್ಟಿಗೆದ್ದಿತು. 20ನೇ ಜನವರಿ 1751ರಲ್ಲಿ, 4,000 ಮರಾಠ ಸೈನಿಕರು ಜೈಪುರಕ್ಕೆ ಭೇಟಿ ನೀಡಿದ್ದು,ಆ ಸಂದರ್ಭದಲ್ಲಿ ನಗರದ ಎಲ್ಲಾ ಬಾಗಿಲುಗಳನ್ನು ಮುಚ್ಚಲಾಗಿದ್ದು, ರಜಪೂತರ ಸೈನ್ಯದೊಂದಿಗೆ,ನಾಗರೀಕರ ಜನಸಂಖ್ಯೆ, ಮರಾಠರ ಮೇಲೆ ಆಕ್ರಮಿಸಿ ಕೊಂದು ಹಾಕಿತು. ಸುಮಾರು 3,000 ಮರಾಠರು ಇದರಲ್ಲಿ ಹತರಾಗಿ,1,000 ಮರಾಠಿಗರು ಗಾಯಗೊಂಡು ಪಲಾಯನಗೈದರು. ಮೇ 1787ರಲ್ಲಿ, 'ಲಾಲ್ಸೋತ್'ರಣರಂಗದಲ್ಲಿ ಮರಾಠ ಸೈನ್ಯ ಸೋಲನ್ನು ಅನುಭವಿಸಿತು. 20ನೇ ಜೂನ್ 1790 ರಲ್ಲಿ,ಪಟಾನ್ ರಣರಂಗದಲ್ಲಿ ಮರಾಠ ಸೈನ್ಯ ಮತ್ತು ಜೈಪುರದ ರಜಪೂತರು ಹಾಗು ಮುಘಲರ ಜೊತೆ ನಡೆದ ಯುದ್ಧದಲ್ಲಿ,ರಜಪೂತರಿಗೆ ಭಾರೀ ಹೊಡೆತ ಬಿದ್ದಿತು. ಹೊಡೆತದ ಈ ಆಘಾತಕ್ಕೆ ಮರಾಠರು ತೆರಿಗೆಯನ್ನು ವಸೂಲಿ ಮಾಡಿದರು. ಮೇವಾರದ ರಾಣ ಈ ತೆರಿಗೆಯನ್ನು ಕಟ್ಟಲಾಗದೆ,ತನ್ನ ಆಸ್ತಿಯನ್ನು ಸಿಂದ್ಯ ಕುಟುಂಬಕ್ಕೆಅಡವಿಟ್ಟು ಹಣವನ್ನು ಪಡೆಯಬೇಕಾಯಿತು. ಮುಘಲರಿಗೆ ರಜಪೂತರು ನಿಷ್ಠರಾಗಿಯೇ ಇದ್ದರು. ಆದರೆ ಮುಘಲರು,ರಜಪೂತರು ಮತ್ತು ಇತರ ಹಿಂದೂಗಳ ಮೇಲೆ ಇದ್ದ ಮನಸ್ಥಿತಿಯನ್ನು ಬದಲಾಯಿಸಲಾಗಿ, ಮುಖ್ಯವಾಗಿ ಹಿಂದುಗಳಲ್ಲಿ ಕ್ರಾಂತಿಯಾಗಿ ಸಿಖ್ಖರು, ಜಟ್^^ರು, ಮರಾಠರು,ಸತ್ನಾಮಿಗಳು ಮತ್ತು ರಜಪೂತರು ಅವರ ವಿರುದ್ಧ ತಿರುಗಿ ಬಿದ್ದರು. ಈ ಕಾರಣದಿಂದಾಗಿ ಅಂತಿಮವಾಗಿ ಮುಘಲರ ಸಾಮ್ರಾಜ್ಯಕ್ಕೆ ರಿಪೇರಿ ಮಾಡಲಾಗದ ರೀತಿಯಲ್ಲಿ ನಷ್ಟ ಅನುಭವಿಸಿತು. ಅಂತಿಮವಾಗಿ ರಾಜನು ಕೇವಲ ನೆಪಮಾತ್ರದ ಮುಖ್ಯಸ್ಥನಾದನು. ಅವರ ಸಮಯ ಗಂಭೀರ ಮತ್ತು ಅನಿಶ್ಚಿತತೆಯಿಂದ ಕೂಡಿತ್ತು. ಮುಘಲರು ತಮ್ಮ ತಮ್ಮಲ್ಲಿಯೇ ಹೊಡೆದಾಡಿ,ಇದಕ್ಕೆ ರಜಪೂತರೇ ಕಾರಣವೆಂದು,ವಿನಾಕಾರಣ ಇಲ್ಲ-ಸಲ್ಲದ ಗೂಬೆ ಕೂರಿಸಿದರು. ಈ ಒಂದು ಅನಿಶ್ಚಿತತೆ ಮತ್ತು ಸೋಲಿನಿಂದ,ರಜಪೂತರು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ, ಈ ಹಿಂದಿನಂತೆ ಮೊಗಲರ ಆದೇಶವನ್ನು ಪಾಲಿಸುವುದನ್ನು ನಿಲ್ಲಿಸಿದರು. ಅದರಿಂದಾಗಿ ಮೊಗಲರಿಗೆ ಬೆಂಬಲವು ಕೇವಲ ಬಾಯಿಮಾತಾಗಿ,ದೈಹಿಕವಾಗಿ ಮೊಗಲರಿಗೆ ಆಧಾರವಾಗಿ ನಿಲ್ಲುವ ವಿಷಯ ಅವರವರ ಆಸಕ್ತಿ ಮತ್ತು ತಟಸ್ಥ ನೀತಿಯಾಗಿ ಆಯಾ ರಾಜ್ಯಗಳ ನೀತಿಯಾಗಿದ್ದು,ದೆಹಲಿಯ ಸಾಮ್ರಾಟರಿಗೆ ಇದರಿಂದ ದೊಡ್ಡ ತಲೆನೋವಾಗಿ ಶಕ್ತಿಯುತ ಮೊಗಲರ ಸಾಮ್ರಾಜ್ಯ ಮುಳುಗಲಾರಂಭಿಸಿತು. 1757 ರಲ್ಲಿ ಬೆಂಗಾಲದಲ್ಲಿ ಈಗಾಗಲೇ 'ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ'ಉದಯವಾಗಿತ್ತು. ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1857 ರಲ್ಲಿ ಕ್ರಾಂತಿ ನಡೆಯಿತಾದರೂ,ಅದನ್ನು ಹತ್ತಿಕ್ಕಲಾಯಿತು. ಅಂತಿಮವಾಗಿ 18ನೇ ಶತಮಾನದ ಮಧ್ಯದಲ್ಲಿ ಮತ್ತು 19ನೇ ಶತಮಾನದ ಆರಂಭದಲ್ಲಿ ,ಉದ್ದಕ್ಕೂ ಗಲಾಟೆಗಳನ್ನು ಎದುರಿಸುತ್ತಾ, 1ನೇ ಮೇ 1876 ರಲ್ಲಿ ರಾಣಿ ವಿಕ್ಟೋರಿಯಾ, ಭಾರತದ ಸಾಮ್ರಾಜ್ಯ,ಅಧಿಕೃತವಾಗಿ ಮುಘಲರ ಕೊನೆಯ ರಾಜ ಬಹಾದುರ್ ಶಾಹ್ - IIಅನ್ನು ಕಿತ್ತುಹಾಕಿದ್ದು, 1857ರ ಕ್ರಾಂತಿಗೆ ನೆಪವಾಯಿತು.ಇದರಿಂದಾಗಿ ಭಾರತದಲ್ಲಿ ಹೊಸ ಸಾಮ್ರಾಜ್ಯದ ಉದಯವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೂ ಮುಂದುವರೆಯಿತು.
ದಿ ಬ್ರಿಟಿಶ್ ರಾಜ್
[ಬದಲಾಯಿಸಿ]1772ರ ಆರಂಭದಲ್ಲಿ ಮರಾಠರ ಕೂಟ ಬ್ರಿಟಿಶ್ ರಾಜ್ ಜೊತೆಗೆ ತಿಕ್ಕಾಟ ನಡೆಸಲು ಆರಂಭಿಸಿತು. ಮೂರನೇ ಅಂಗ್ಲೋ-ಮರಾಠ ಯುದ್ಧ(1817–1818)ದ ನಂತರ , ರಾಜಪುತಾನ ವಿಭಾಗದ 18 ರಾಜ್ಯಗಳು, ಅದರಲ್ಲಿ 15 ರಜಪೂತ ರಾಜ್ಯಗಳು,ಅನುಕೂಲಕರ ಒಪ್ಪಂದವನ್ನು ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಮಾಡಿಕೊಂಡು ಬ್ರಿಟಿಷ್ ರಾಜರ ಕೈಕೆಳಗೆ ರಾಜ್ಯ ರಾಜರಾದರು . ಬ್ರಿಟಿಷರು ಅಜ್ಮೀರವನ್ನು, ನೇರವಾಗಿ ತಮ್ಮ ಆಡಳಿತಕ್ಕೆ ತೆಗೆದುಕೊಂಡಿದ್ದು, ಅದು ಅಜ್ಮೀರ -ಮೇರವಾರದ ಪ್ರಾಂತ್ಯವಾಗಿ ಬದಲಾಯಿತು. ಕೇಂದ್ರ ಮತ್ತು ಮಧ್ಯ ಭಾರತದ ಹಲವು ರಜಪೂತ ರಾಜ್ಯಗಳು ಇದೇ ರೀತಿಯ ಒಪ್ಪಂದವನ್ನು ಮಾಡಿಕೊಂಡವು. ಹಲವು ರಾಜ್ಯಗಳನ್ನು ಸೆಂಟ್ರಲ್ ಇಂಡಿಯಾ ಏಜೆನ್ಸಿಯ ಕೈಕೆಳಗೆ ಹಾಗು ಇತರ ವಿವಿಧ ರಾಜ್ಯಗಳನ್ನು ಕಥೈ ವಾರ್ ಏಜೆನ್ಸಿಯ ಕೈಕೆಳಗೆ ಇಡಲಾಯಿತು.
ರಜಪೂತರ ಸೈನಿಕರ ಗುಣಗಳನ್ನು ಬ್ರಿಟಿಷ್ ಅಧಿಕಾರಿಗಳು ಮೆಚ್ಚಿ, ಅದು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಜೇಮ್ಸ್ ಟಾಡ್^^ನು ತನ್ನ ಪುಸ್ತಕ ಅನ್ನಲ್ಸ್ ಮತ್ತು ಅಂಟಿಕ್ವಿಟೀಸ್ ಆಫ್ ರಾಜಸ್ಥಾನ್ ನಲ್ಲಿ ಬರೆಯುತ್ತಾ:
“ | What nation on earth could have maintained the semblance of civilization, the spirit or the customs of their forefathers, during so many centuries of overwhelming depression, but one of such singular character as the Rajpoot? ... Rajast'han exhibits the sole example in the history of mankind, of a people withstanding every outrage barbarity could inflict, or human nature sustain, from a foe whose religion commands annihilation; and bent to the earth, yet rising buoyant from the pressure, and making calamity a whetstone to courage .... Not an iota of their religion or customs have they lost ... | ” |
ಮುಂದಿನ ಆಧಾರವಾಗಿ, ಬ್ರಿಟಿಷರ ಆಧಿಪತ್ಯದಲ್ಲಿ ರಜಪೂತ ಸೈನಿಕರ ಪಾತ್ರವನ್ನು ಕುರಿತಂತೆ , ಕ್ಯಾಪ್ಟನ್ ಎ.ಹೆಚ್. ಬಿಗ್ಲೆಯ್ ಹೇಳುತ್ತಾ:
“ | Rajputs have served in our ranks from Plassey to the present day (1899). They have taken part in almost every campaign undertaken by the Indian armies. Under Forde they defeated the French at Condore. Under Monro at Buxar they routed the forces of the Nawab of Oudh. Under Lake they took part in the brilliant series of victories which destroyed the power of the Marathas. | ” |
ಗುರ್ಖ ಯುದ್ಧದಲ್ಲಿ ರಜಪೂತ ಸೈನಿಕರ ಪಾತ್ರವನ್ನು ಕುರಿತಂತೆ ಬಿಂಗ್ಲೆಯ್ ವಿವರಿಸುತ್ತಾ,(1768ರಲ್ಲಿ ನೇಪಾಳವನ್ನು ರಜಪೂತ ಕುಟುಂಬ ಆಕ್ರಮಿಸಿತೇ ಹೊರತು ಬ್ರಿಟಿಷರಲ್ಲ.) ಹಾಗು ಅಂಗ್ಲೋ -ಆಫ್ಘನ್ ಯುದ್ಧದಲ್ಲಿ , ಮತ್ತು ಅಂಗ್ಲೋ -ಸಿಖ್ಖರ ಪಂಜಾಬ್ ಯುದ್ಧದ ಗೆಲುವಿಗೆ ಕಾರಣರಾದವರು ರಜಪೂತ ಸೈನ್ಯದ ವೀರಯೋಧರು. 1882ರಲ್ಲಿ ಈಜಿಫ್ಟಿಯನ್ ವಿರುದ್ಧದ ಹೋರಾಟದಲ್ಲಿಯೂ ರಜಪೂತರ ವೀರ ಹೋರಾಟದ ಪ್ರಸ್ಥಾಪವಿದ್ದು, 1885ರ ಮೂರನೇ ಅಂಗ್ಲೋ -ಬರ್ಮೀಯರ ಯುದ್ಧದಲ್ಲಿಯೂಇವರ ಸಾಹಸದ ಪ್ರತೀಕವೇ ಗೆಲುವಿಗೆ ಕಾರಣ ಎಂದು ತಿಳಿಸಿದ್ದಾನೆ. ಭಾರತದ ಸಮಾಜದಲ್ಲಿ ರಜಪೂತರು ತಮ್ಮ ಮುಖ್ಯ ಪಾತ್ರವನ್ನು ಉಳಿಸಿಕೊಂಡಿದ್ದಾರೆ.ಈ ಅವಧಿಯಲ್ಲಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ವೀರ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ.ಹಾಗು ಇಂದಿಗೂ ಹಾಗೆಯೇ ಮುಂದುವರೆದಿದ್ದಾರೆ. ರಜಪೂತ ಸೈನಿಕರು ಭಾರತ ಮತ್ತು ಪಾಕಿಸ್ತಾನದ ಸೈನ್ಯದಲ್ಲಿ ಅವರು ಅತ್ಯಂತ ಅನಿವಾರ್ಯದ ಭಾಗವಾಗಿ ಉಳಿದುಹೋಗಿದ್ದಾರೆ. ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯಬಂದ ಮೇಲೆ,ರಜಪೂತರು ಭಾರತದ ಚಕ್ರಾಧಿಪತ್ಯಕ್ಕೆ ಮತ್ತು ಪಾಕಿಸ್ತಾನಕ್ಕೂಸಹ ಸಮ್ಮತಿ ನೀಡಿದ್ದಾರೆ.
ಗುರುತು ಮತ್ತು ಮುಖ್ಯ ಕುಲ/ಬಣಗಳು/ಬುಡಕಟ್ಟು
[ಬದಲಾಯಿಸಿ]ಸಂಸ್ಕೃತ ಶಬ್ದ ರಾಜಪುತ್ರ ಎಂಬುದು, ಪ್ರಾಚೀನ ಕಾಲದಲ್ಲಿನ ಗ್ರಂಥಗಳಲ್ಲಿ ಕಂಡು ಬಂದ ಶಬ್ದವಾಗಿದೆ. ವೇದಗಳೂ ಸೇರಿದಂತೆ ರಾಮಾಯಣ, ಮತ್ತು ಮಹಾಭಾರತ ಗ್ರಂಥಗಳೆಲ್ಲದರಲ್ಲೂ ಇದರ ಪ್ರಸ್ತಾಪವಾಗಿದೆ. 4ನೇ ಶತಮಾನದ ಬಿಸಿಇ ಯಲ್ಲಿ ಪ್ರಾಚೀನ ಸಂಸ್ಕೃತ ವ್ಯಾಕರಣ ಶಾಸ್ತ್ರಜ್ಞ ಪಾಣಿನಿಯಿಂದಲೂ ಇದರ ಪ್ರಸ್ಥಾವನೆಯಾಗಿದೆ.ಕ್ಷತ್ರಿಯ ಶಬ್ದವನ್ನು (ಯೋಧರು ) ವೇದ ಜನಾಂಗದ ಸೈನಿಕರು ಮತ್ತು ಆಡಳಿತಗಾರರಲ್ಲಿಯೂ ಬಳಸಲಾಗಿದೆ. ರಾಜನ ಸೈನ್ಯ ಮತ್ತು ಇತರ ಕ್ಷತ್ರಿಯರ ಬಗ್ಗೆ ವ್ಯತ್ಯಾಸವನ್ನು ತಿಳಿಯಲು 'ರಾಜಪುತ್ರ'ಶಬ್ದವನ್ನು ಬಳಸಲಾಗಿದ್ದು, ಸಾಹಿತ್ಯಾತ್ಮಕವಾಗಿ ಶಬ್ದದ ಅರ್ಥ " ರಾಜನ ಮಗ "ಎಂದು. ರಾಜಪುತ್ರ ನಂತರದ ದಿನಗಳಲ್ಲಿ ಚಿಕ್ಕದಾಗಿ 'ರಜಪೂತ' ಆಗಿದ್ದು,ಕ್ರಮೇಣವಾಗಿ ಜಾತಿಯಾಗಿ ಮಾರ್ಪಾಟಾಗಿದೆ.ಮೂರು ಉತ್ತಮ ಕುಲಸ್ಥರಲ್ಲಿ ಈ ರಜಪೂತರು ಒಬ್ಬರಾಗಿದ್ದಾರೆ.ಅವುಗಳೆಂದರೆ ಸೂರ್ಯವಂಶಿ, ಚಂದ್ರವಂಶಿ ಮತ್ತು ಅಗ್ನಿವಂಶಿ.
ಸೂರ್ಯವಂಶಿ ಪೀಳಿಗೆ/ಸಂತತಿ : ಸೂರ್ಯ
[ಬದಲಾಯಿಸಿ]ಸೂರ್ಯವಂಶಿ ಅಂದರೆ ಸೂರ್ಯ ಸಾಮ್ರಾಜ್ಯದ ವಂಶಾವಳಿ, ಸೂರ್ಯನಿಂದ ಆವಿರ್ಭವಿಸಿದವರು ಮತ್ತು ಸೂರ್ಯನ ಆರಾಧಕರು/ಸೂರ್ಯ ದೇವರು. ಕ್ಷತ್ರಿಯರಲ್ಲಿ ಸೂರ್ಯ ವಂಶಸ್ಥರು ಬಹಳ ಹಳೆಯವರು ಈ ಸಾಮ್ರಾಜ್ಯದ ಮೊದಲನೇ ವ್ಯಕ್ತಿಯು ವಿವಸ್ವನ್ ಆಗಿದ್ದು, ಅಂದರೆ 'ಬೆಂಕಿ ಪಕ್ಷಿ' ಎಂಬ ಅರ್ಥವಿದೆ. ಈ ವಂಶದಲ್ಲಿ ಇಕ್ಷ್ವಾಕು ಎಂಬುದು ಮೊದಲನೇ ಮುಖ್ಯ ರಾಜನಾಗಿರುತ್ತಾನೆ. ಈ ವಂಶದಲ್ಲಿನ ಇತರ ಮುಖ್ಯ ರಾಜಾದಿರಾಜರುಗಳೆಂದರೆ ಕಾಕುತ್ಸ ಹರಿಶ್ಚಂದ್ರ, ಸಗರ , ದಿಲೀಪ, ಭಗಿರಥ, ರಘು ದಶರಥ ಮತ್ತು ರಾಮ. ಮಹಾನ್^^ಕವಿ ಕಾಳಿದಾಸನು, ತನ್ನ 'ರಘುವಂಶ' ಮಹಾಕಾವ್ಯದಲ್ಲಿ ರಘುವಿನ ಸಾಮ್ರಾಜ್ಯದ ಬಗ್ಗೆ ಬರೆದಿದ್ದಾನೆ. ರಜಪೂತ ಸೂರ್ಯವಂಶಿ (ರಘುವಂಶಿ ) ಕುಲವು ರಾಮನಿಂದ ಬಂದಿದ್ದು, ರಾಘವ(ರಘುವಂಶಿ)ರು , ಸಿಸೋಡಿಯರು, ರಾಥೋರರು, ಮಿನ್ಹಾಸರು ಮತ್ತು ಕಚ್ವಾಹರು.
ಚಂದ್ರವಂಶಿ ಪೀಳಿಗೆ/ಸಂತತಿ : ಚಂದ್ರ
[ಬದಲಾಯಿಸಿ]ಚಂದ್ರವಂಶಿ ಎಂದರೆ ಚಂದ್ರನ ಸಾಮ್ರಾಜ್ಯ ದ ವಂಶಾವಳಿ,ಚಂದ್ರನಿಂದ ಬಂದವರು,ಚಂದ್ರ ದೇವರು.(ರಾತ್ರಿ ದೇವತೆ) ಈ ಚಂದ್ರ ವಂಶವು ಬಹಳ ಪ್ರಾಚೀನವಾಗಿದೆ. ಆದರೆ ಸೂರ್ಯ ವಂಶಕ್ಕಿಂತ ಹೊಸದಾಗಿದೆ. ಈ ವಂಶದ ಮೊದಲನೇ ರಾಜ 'ಸೋಮ'. ಈ ವಂಶದಲ್ಲಿನ ಪ್ರಮುಖ ರಾಜರೆಂದರೆ ಪುರೂರವ,ನಹುಷ , ಯಯಾತಿ,ದುಷ್ಯಂತ,ಭರತ,ಕುರು,ಶಂತನು ಮತ್ತು ಯುಧಿಷ್ಠಿರ . ಯಯಾತಿಯ ಹಿರಿಯ ಮಗ ಯದು ಮತ್ತು ಯಾದವರುಯದುವಿನಿಂದ ಇಳಿದವರು. ಕೃಷ್ಣನು 'ಯದು' ಕುಲದವನು. ಹಿಂದೂಗಳ ದೇವ ಕೃಷ್ಣನಿಂದ, ಯದುವಂಶಿ ಕುಲ ಬೆಳೆಯಿತು.ಇವರು ಚಂದ್ರವಂಶಿಯ ಪ್ರಮುಖರು. ಪ್ರಾಚೀನ ಗ್ರಂಥ 'ಹರಿವಂಶ'ವು ಈ ಸಾಮ್ರಾಜ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಅಗ್ನಿವಂಶಿ ಪೀಳಿಗೆ/ಸಂತತಿ : ಬೆಂಕಿ
[ಬದಲಾಯಿಸಿ]ಅಗ್ನಿವಂಶಿ ಸಂತತಿಯು ಅಗ್ನಿಯಿಂದ ಬಂದುದಾಗಿದೆ, ಹಾಗು ವೇದಗಳ ದೇವತೆ ಬೆಂಕಿ. ಅಗ್ನಿವಂಶಿ ರಜಪೂತರ ಮೂಲ ಎಲ್ಲಿಂದ ಎಂಬ ಕಥೆ ಬಗ್ಗೆ, ಮುಖ್ಯವಾಗಿ ವ್ಯಾಜ್ಯಗಳಾಗಿದ್ದುದನ್ನು ಕಡೆಗಣಿಸುವಂತದ್ದಲ್ಲ, ಏಕೆಂದರೆ ಅವರು ರಾಜಕೀಯದಲ್ಲಿ ಬಹು ಬೇಗ ಪ್ರವರ್ಧಮಾನಕ್ಕೆ ಬಂದುದು ಕಾರಣವಾಗಿದೆ. ಪುರಾಣಗಳ ಕಥೆಯ ಪ್ರಕಾರ, ಭವಿಷ್ಯ ಪುರಾಣ (ಪ್ರಾಚೀನ ಧಾರ್ಮಿಕ ಗ್ರಂಥ )ದಲ್ಲಿ ಕಂಡು ಬರುವಂತೆ,ಸಾಂಪ್ರದಾಯಿಕ ಕ್ಷತ್ರಿಯರನ್ನು ಈ ಭೂಮಿಯ ಮೇಲೆ, ವಿಷ್ಣುವಿನ ಅವತಾರಿಯಾದ ಪರಶುರಾಮನು ನಾಶಮಾಡಿದನು.ಮಹಾಋಷಿ ವಸಿಷ್ಠ ಒಂದು ಮಹಾ ಯಜ್ಞವನ್ನು(ತ್ಯಾಗದ ಪ್ರತೀಕ) ಅಬು ಬೆಟ್ಟದಲ್ಲಿ ಮಾಡಿದನು, ಸಾಮ್ರಾಟ ಅಶೋಕನು ಮಕ್ಕಳ ಕಾಲದಲ್ಲಿ,( ಸುಮಾರು 232 ಬಿಸಿಇ ಯಲ್ಲಿ ) ನಿಧನನಾದನು. ನಾಲ್ಕು ವೇದ ಗಳ ಮಂತ್ರಗಳ ಪ್ರಭಾವದಿಂದ ನಾಲ್ಕು ಕ್ಷತ್ರಿಯರು ಹುಟ್ಟಿದರು . ಅವರುಗಳು 4 ಅಗ್ನಿವಂಶಿ ಕುಲದ ಸ್ಥಾಪಕರಾಗಿದ್ದಾರೆ :
ಈ ಮೇಲ್ಕಂಡ ನಾಲ್ಕು ಕುಲಗಳೇ ರಜಪೂತ ಕುಲಗಳಾಗಿದ್ದು, ಅಗ್ನಿವಂಶಿಯ ಸಂತತಿ ಎಂದು ಭಾವಿಸಲಾಗಿದೆ.ಕೆಲವು ಪಂಡಿತರು ನಾಗವಂಶಿ ಮತ್ತು ರಿಷಿವಂಶಿ ಯನ್ನು ಸಹ 'ಅಗ್ನಿವಂಶಿ' [ಸೂಕ್ತ ಉಲ್ಲೇಖನ ಬೇಕು] ಎಂದು ತಿಳಿದಿರುತ್ತಾರೆ.
ಬುಡಕಟ್ಟು ಮತ್ತು ಪೀಳಿಗೆಗಳ ಬಗ್ಗೆ ಜಾಗರೂಕತೆ/ಕುಲ ಮತ್ತು ಸಂತತಿಯ ತಿಳುವಳಿಕೆ
[ಬದಲಾಯಿಸಿ]ಮೇಲೆ ತಿಳಿಸಲಾದ ಮೂರು (ವಂಶ )ಗಳನ್ನು, 36 ಮುಖ್ಯ (ಕುಲ )ಗಳಾಗಿ ವಿಭಜಿಸಿ,ಮತ್ತೆ-ಮತ್ತೆ ಅದು ಹಲವಾರು (ಶಾಖೆ )ಗಳಾಗಿ ವಿಭಜಿಸಲ್ಪಟ್ಟು ,ರಜಪೂತರ ವಿವಿಧ ಕುಲಗಳ ರೀತಿಯಾಗಿ ಕವಲೊಡೆದವು. ಈ ಸಂತತಿಯ ಮುಖ್ಯ ತತ್ವ , ಒಂದು/ಒಬ್ಬರ ಸ್ಥಳದ ಪದ್ಧತಿಗೆ ದೃಢವಾಗಿ ಅಂಟಿಕೊಳ್ಳುವುದು ಹಾಗು ರಜಪೂತರ ಕುಲ ಮತ್ತು ಸಂತತಿಯ ಬಗ್ಗೆ ಬಲವಾದ ತಿಳಿವಳಿಕೆಹೊಂದಿರುವುದು ರಜಪೂತ ಗುಣಗಳ ಒಂದು ಅವಿಭಾಜ್ಯ ಅಂಗವಾಗಿದೆ. 1911 ರ ಆವೃತ್ತಿಯ ಬ್ರಿಟನ್ನಿಕಾದ ಎನ್ಸೈಕ್ಲೋಪೀಡಿಯಾ ಹೇಳುವಂತೆ , ಈ ಪದ್ಧತಿ, ಸಾಮಾನ್ಯವಾಗಿ ವಂಶಪಾರಂಪರ್ಯವಾದ ಬಡ ರಜಪೂತ ರೈತನನ್ನೇ , ಅವನ ಕುಲದಲ್ಲಿ ಹುಟ್ಟಿದ ಶಕ್ತಿಶಾಲಿ ಮಾಲೀಕನಂತೆಯೇ ಸರಿಸಮಾನನಾಗಿ ಪರಿಗಣಿಸಲ್ಪಡುತ್ತದೆ, ಮತ್ತು ಉನ್ನತ ಅಧಿಕಾರಿ ಹಾಗು ಅಧಿಕೃತ ವರ್ಗದವರಂತೆಯೂ ಪರಿಗಣಿಸಲಾಗುತ್ತದೆ. ಜಯಸಿಂಹನ ಕುಮಾರಪಾಲ ಚರಿತ ಮತ್ತು ಚಂದ್ಬರ್ದೈನ ಪೃಥ್ವಿರಾಜ್ ರಾಸೋ ಧಾರ್ಮಿಕ ಗೀತೆಗಳಲ್ಲೂ ಸಹ 36 ರಜಪೂತ ಕುಲಗಳು ಇರುವುದೆಂದು ಅಧಿಕೃತವಾಗಿ ಪಟ್ಟಿಮಾಡಲಾಗಿದೆ.
ಜನಸಂಖ್ಯಾಶಾಸ್ತ್ರ/ಅಂಕಿಸಂಖ್ಯೆ
[ಬದಲಾಯಿಸಿ]1931ರ ಜನಗಣತಿ
[ಬದಲಾಯಿಸಿ]1931ರ ಜನಗಣತಿಯ ಪ್ರಕಾರ, ಒಟ್ಟು 10.7 ಮಿಲಿಯನ್ ಜನರು ತಮ್ಮನ್ನು ತಾವೇ ರಜಪೂತರು ಎಂದು ಕರೆದುಕೊಂಡಿದ್ದಾರೆ. ಈ ಜನಸಂಖ್ಯೆಯಲ್ಲಿ , ಸುಮಾರು 8.6 ಮಿಲಿಯನ್ ಜನರು ತಮ್ಮನ್ನು ತಾವು ಹಿಂದೂಗಳೆಂದು, ಸುಮಾರು 2.1 ಮಿಲಿಯನ್ ಜನರು ಮುಸ್ಲಿಂ ರಜಪೂತರೆಂದು ಹಾಗು ಸುಮಾರು 50,000 ಜನರು ಸಿಖ್ ರಜಪೂತರೆಂದು ಕರೆದುಕೊಂಡಿದ್ದಾರೆ.ಸಂಘಟಿತ ಪ್ರಾಂತ್ಯಗಳಲ್ಲಿ (ಅಂದಾಜಿನ ಪ್ರಕಾರ ,ಇಂದಿನ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ )ಅತಿ ಹೆಚ್ಚು ಜನಸಂಖ್ಯೆಯ, ಅಂದರೆ 3,756,936 ರವರೆಗೆ ರಜಪೂತರಿರುವರೆಂದು ವರದಿಯಾಗಿದೆ. ಬಿಹಾರ ಮತ್ತು ಒಡಿಶಾ ಪ್ರಾಂತ್ಯಗಳು (ಅಂದು ಒಂದಾಗಿದ್ದವು) ಇಂದಿನ ದಿನಗಳಲ್ಲಿದ್ದಂತೆ ಬಿಹಾರ , ಒಡಿಶಾ ಮತ್ತು ಝಾರ್ಖಂಡ್ ಗಳಲ್ಲಿನ ರಜಪೂತ ಜನಸಂಖ್ಯೆ 1,412,440 ಆಗಿದೆಯೆಂದು ವರದಿಯಾಗಿದೆ.ರಜಪುತಾನ ಹೆಚ್ಚಿನಂಶ ಇಂದಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಜನಸಾಂದ್ರತೆ ಸಂಖ್ಯೆ 669,516 ಆಗಿದೆಯೆಂದು ವರದಿಯಾಗಿದೆ. ಕೇಂದ್ರೀಯ ಪ್ರಾಂತ್ಯ ಮತ್ತು ಬೇರಾರ್^^ನಲ್ಲಿ ಅವರ ಜನಸಾಂದ್ರತೆಯ ಸಂಖ್ಯೆ 506,087,ಮತ್ತು ರಾಜರುಗಳ ರಾಜ್ಯ ಗ್ವಾಲಿಯರ್^^ನಲ್ಲಿ 393,076, ಸೆಂಟ್ರಲ್ ಇಂಡಿಯಾ ಏಜನ್ಸಿ 388,942, ಬಾಂಬೆ ಪ್ರಾಂತ್ಯದಲ್ಲಿ 352,016, ರಾಜರುಗಳ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 256,020, ಹಾಗು ಪಶ್ಚಿಮ ಭಾರತದ ಏಜನ್ಸಿಗಳಲ್ಲಿ 227,137 ರಷ್ಟು ರಜಪೂತರಿದ್ದಾರೆ. ಅವಿಭಾಜಿತ ಬೆಂಗಾಲದಲ್ಲಿ (ಇಂದಿನ ಬಾಂಗ್ಲಾದೇಶ ಸೇರಿದಂತೆ ) 156,978 ಸಂಖ್ಯೆಯ ರಜಪೂತರಿದ್ದಾರೆಂದು ವರದಿಯಾಗಿದೆ. ರಾಜರ ರಾಜ್ಯವಾದ ಬರೋಡ ಮತ್ತು ಹೈದರಾಬಾದ್^^ನಲ್ಲಿ ಕ್ರಮವಾಗಿ 94,893 ಮತ್ತು 88,434 ಸಂಖ್ಯೆಗಳಷ್ಟು ಜನಸಂಖ್ಯೆಯಿದೆ.
ಸಂಸ್ಕೃತಿ ಮತ್ತು ಧರ್ಮಸಿದ್ಧಾಂತ/ತತ್ವ ಶಾಸ್ತ್ರ
[ಬದಲಾಯಿಸಿ]ರಜಪೂತರನ್ನು ಬ್ರಿಟಿಷರು "ಕ್ಷಾತ್ರ ಜನಾಂಗ"ಎಂದು ಕರೆದಿದ್ದಾರೆ. ಬ್ರಿಟಿಷ್ ಭಾರತದ ಅಧಿಕಾರಿಗಳು, ಈ ಪದವನ್ನು ಸೃಷ್ಟಿಸಿ "ಜನಾಂಗ " (ಪರಂಪರೆಯ ತಂಡ )ಅಂದರೆ ಸಾಮಾನ್ಯವಾಗಿ 'ಯುದ್ಧ ರೀತಿ' ಮತ್ತು ಯುದ್ಧ ರಂಗದಲ್ಲಿ, ಆಕ್ರಮಣಶೀಲ ಮನೋಭಾವ ಪ್ರದರ್ಶಿಸುವ ಹಾಗು ಧೈರ್ಯ,ನಿಷ್ಠೆ,ಆತ್ಮ ಗೌರವ,ದೈಹಿಕ ಶಕ್ತಿ,ಕ್ರಮಬದ್ಧ, ಶಿಸ್ತಿನ,ಶ್ರಮಜೀವಿಯ ಗುಣಗಳನ್ನು ಹೊಂದಿದವನು (ರಜಪೂತರು)ಹೋರಾಟದ ಮನೋಭಾವ,ಸೈನಿಕ ಮನೋಭಾವವನ್ನು ಹೊಂದಿರುತ್ತಾನೆ. ಈ "ಕ್ಷಾತ್ರ ಜನಾಂಗದಿಂದ " ಬಂದವರನ್ನು ಬ್ರಿಟಿಷರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸೈನ್ಯ ಪಡೆಯಲ್ಲಿ[೧] ಸೇವೆಗಾಗಿ ಸೇರಿಸಿಕೊಂಡಿದ್ದರು. ರಜಪೂತರ ಮುಖ್ಯ ತತ್ವ - ಕ್ಷಾತ್ರ ಗುಣದ ಉತ್ಸಾಹ,ಭಯಂಕರ ಪ್ರೌಢಿಮೆ,ಸ್ವತಂತ್ರ ಮನೋಭಾವ ಮತ್ತು ತಮ್ಮ ವಂಶ ಹಾಗು ಸಂಪ್ರದಾಯಗಳ ಬಗ್ಗೆ ಒತ್ತಿ ಹೇಳುವುದು. ರಜಪೂತರ ದೇಶಭಕ್ತಿ ಒಂದು ಕಥಾನಕವೇ ಆಗಿದೆ.ಒಂದು ಆದರ್ಶವಾಗಿ, ಮತಭ್ರಾಂತ ಶಕ್ತಿಯಾಗಿ ಅಗೌರವವನ್ನು ತಂದುಕೊಳ್ಳುವ ಮುಂಚೆಯೇ ,ಅದರ ಬದಲಾಗಿ ಸಾವಿಗೆ ಶರಣಾಗುವುದು ಅಂದರೆ ಹೋರಾಡಿ ಮಡಿಯುವುದು ಎಂದರ್ಥ. ರಜಪೂತ ವೀರರು ತಮ್ಮ ಕೊನೆಯ ಉಸಿರಿರುವತನಕ ಹೋರಾಡುವಲ್ಲಿ ಹೆಸರು ಮಾಡಿದವರು.
ಜುಹರ್/ರ್ಜೌಹರ್ ಮತ್ತು ಸಖ
[ಬದಲಾಯಿಸಿ]ಎಲ್ಲಾ ಸ್ಥಾಪಿತ ದಾಖಲೆಗಳ ಪ್ರಕಾರ ಜುಹರ್ ಮತ್ತು ಸಖ ವನ್ನು ರಜಪೂತರು ತಮ್ಮ ಕೋಟೆಯನ್ನು ಧಾಳಿಕೋರರಿಂದ ಹೊಡೆದೋಡಿಸಲು ಮಾಡಿಕೊಂಡ ಧಾಳಿಗಳು.ಹಲವಾರು ಸಂದರ್ಭಗಳಲ್ಲಿ ,ತಮ್ಮ ಹೋರಾಟದಲ್ಲಿ ಸೋಲು ಎಂದು ಗೊತ್ತಾದ ಕೂಡಲೇ ರಜಪೂತ ಸೈನಿಕರು ಕೋಟೆಯೊಳಗೆ ನಾಯಕತ್ವದ ಅಂತಿಮ ಹೋರಾಟಕ್ಕೆ ಸಿದ್ಧರಾಗಿ, ಹೋರಾಡಿ ಒಂದು ರೀತಿ ಮಾದರಿಯಾಗಿ ಮುಂದಿನ ರಜಪೂತ ಜನಾಂಗದವರಿಗೆ ಪಾಠವಾಗಿ ಮೆರೆದು,ಬಂದಂತಹ ಶತ್ರುಗಳ ಮನಸ್ಸಿನಲ್ಲಿ ಒಂದು ಶೂನ್ಯತೆಯನ್ನು, ಅವರ ಜಯದಲ್ಲಿ ತುಂಬಿ ಬಿಡುತ್ತಿದ್ದರು. ಕೋಟೆಯೊಳಗಿನ ಹೆಣ್ಣು ಮಕ್ಕಳು ಸಾಮೂಹಿಕವಾಗಿ (ಜುಹರ್/ಬೆಂಕಿಗೆ )ಅರ್ಪಿಸಿಕೊಳ್ಳುತ್ತಿದ್ದರು. ತಮ್ಮ ಮದುವೆಯ ದಿರಿಸುಗಳನ್ನು ಧರಿಸಿ,ಕೈಗಳಲ್ಲಿ ತಮ್ಮ ಮಕ್ಕಳನ್ನು ಹಿಡಿದು,ಹೆಂಗಸರು ತಾವಾಗಿಯೇ ಸಾಮೂಹಿಕವಾಗಿ ಅಗ್ನಿಗೆ ಅರ್ಪಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಶತ್ರುಗಳಿಂದಾಗಬಹುದಾದ ನೋವು,ಅವಮಾನ,ಮಾನಹಾನಿಗಳಿಂದ ಮುಕ್ತರಾಗುತ್ತಿದ್ದರು. ಹೆಂಗಸರು ತಮ್ಮ ಬಲಗೈ ಹಸ್ತದ ಗುರುತುಗಳನ್ನು ಒದ್ದೆ ಮಣ್ಣಿನ ಮೇಲೆ ಗುರುತಾಗಿ ಬಿಟ್ಟುಹೋಗುತ್ತಿದ್ದರು. ಇದನ್ನು ಪೂಜಾವಸ್ತುವಾಗಿ ಬಳಸಲಾಗುತ್ತಿತ್ತು. ಈ ಅಗ್ನಿಗಾಹುತಿ ಕಾರ್ಯಕ್ರಮವು ರಾತ್ರಿಯಂದು ವೇದಗಳ ಪಠಣದೊಂದಿಗೆ ನಡೆಯುತ್ತಿತ್ತು. ಮಾರನೇ ದಿನ ಬೆಳಗ್ಗೆ , ಸ್ನಾನವಾದ ನಂತರ ,ಗಂಡಸರು ಕೇಸರಿ ಬಣ್ಣದ ಬಟ್ಟೆಗಳನ್ನು ಉಟ್ಟು,ತಮ್ಮ ಹೆಂಡತಿ ಮತ್ತು ಮಕ್ಕಳ ಅಸ್ಥಿಯನ್ನು(ಸತ್ತ ನಂತರದ ಬೂದಿ)ಹಣೆಗೆ ಇಟ್ಟುಕೊಂಡು ,ಬಾಯಿಯಲ್ಲಿ ತುಳಸಿದಳವನ್ನು ಹಾಕಿಕೊಳ್ಳುತ್ತಿದ್ದರು. ಅನಂತರ ಕೋಟೆಯ ಬಾಗಿಲುಗಳನ್ನು ತೆರೆದು ಗಂಡಸರು ತಮ್ಮ ಅಂತಿಮ ಸಾಹಸಾತ್ಮಕ ಪ್ರಯೋಜನವಿಲ್ಲದ ಯುದ್ಧದಲ್ಲಿ (ಸಕ/ಸಖ ),ಧೀರೋದಾತ್ತವಾಗಿ ರಣರಂಗದಲ್ಲಿ ಕೊನೆಯ ಉಸಿರಿರುವವರೆಗೂ ಹೋರಾಡಿ ಮಡಿಯುತ್ತಿದ್ದರು. ಚಾರಿತ್ರಿಕ ಹಿನ್ನೆಲೆಯ ಚಿತ್ತೋರ್ ಕೋಟೆ , ಮೇವಾರ ರಾಜಧಾನಿಯ ಸಿಸೋಡಿಯ ವಂಶವು , ಇಲ್ಲಿ ಮೂರು ಬಾರಿ, ಈ ರೀತಿಯ ಅತಿ ಪ್ರಸಿದ್ಧ ಜೌಹರ್ ಪದ್ಧತಿಯ ಘಟನೆಗೆ ಇತಿಹಾಸದಲ್ಲಿ ಸಾಕ್ಷಿಯಾಗಿ ನಿಲ್ಲುತ್ತವೆ.
ರಜಪೂತರ ಜೀವನಶೈಲಿ
[ಬದಲಾಯಿಸಿ]ರಜಪೂತರ ಜೀವನ ಶೈಲಿ, ಕ್ಷಾತ್ರ ಸೈನಿಕರ ಉತ್ಸಾಹದ ಬೆಳವಣಿಗೆಗೆ ಹೇಳಿ ಮಾಡಿಸಿದಂತಿತ್ತು. ಟಾಡ್ (1829)ವಿವರಿಸುವಂತೆ, ರಜಪೂತರ ಮತ್ತು ಅವರ ಕತ್ತಿಯ ಸಂಬಂಧವನ್ನು ಪ್ರಸ್ತಾಪಿಸುತ್ತದೆ. ಎರಡು-ತುದಿಗಳನ್ನು ಹೊಂದಿದ ಬಾಕು ಖಂಡ ಜನಪ್ರಿಯ ಶಾಸ್ತ್ರವಾಗಿದ್ದು, ರಜಪೂತರ ಯುಗದ ಮಾತಾಗಿದೆ. ವಿಶೇಷ ಸಂದರ್ಭಗಳಲ್ಲಿ ,ಮುಖ್ಯಸ್ಥರು ತನ್ನ ಸಾಮಂತ ಮುಖ್ಯಸ್ಥರ ಸೆದೆಯನ್ನು ತನ್ನ ಬಾಕುವಿನಿಂದ ಖಂಡ ನಾರಿಯಲ್ ಮೂಲಕ ಸಮಾಪ್ತಿಗೊಳಿಸಿ, ಕತ್ತಿ ಮತ್ತು ತೆಂಗಿನಕಾಯಿಯನ್ನು ವಿತರಿಸುತ್ತಿದ್ದನು. ವಾರ್ಷಿಕ ನವರಾತ್ರಿಯ ಹಬ್ಬದ ಸಂದರ್ಭದಲ್ಲಿ 'ಕರಗ/ಕರ್ಗ ಶಪ್ನ ಹಬ್ಬ' ವನ್ನು ಆಚರಿಸುತ್ತಿದ್ದರು. ಮತ್ತೊಂದು ಸತ್ಯದ ವಿಷಯವೆಂದರೆ , ರಜಪೂತರಿಗೆ ತಮ್ಮ ಕತ್ತಿಯ ಬಗ್ಗೆ ಶ್ರದ್ಧಾಭಕ್ತಿಗಳಿದ್ದು, ಅದನ್ನು ಈ ವಿಶೇಷ ಸಂದರ್ಭಗಳಲ್ಲಿ ಪ್ರದರ್ಶಿಸುತ್ತಿದ್ದರೂ ಕೂಡ. 19ನೇ ಶತಮಾನದ ಕೊನೆಯಲ್ಲಿ,ರಜಪೂತರು ರಾಜಕೀಯದಿಂದ ತಮ್ಮ ಒಂದೇ ಬಳಗದ ಕಾಳಜಿಗೆ ಬದಲಾದರು. (ಕಸ್ತೂರಿ 2002:2). ಹರ್ಲನ್ ಪ್ರಕಾರ (1992:27), ರಾಜಸ್ಥಾನದಲ್ಲಿನ ಹಲವು ರಜಪೂತರು ತಮ್ಮ ಹಿಂದಿನ ಜೀವನದ ಬಗ್ಗೆ ಹೆಚ್ಚು ಆಸಕ್ತರಾಗಿದ್ದು, ಹಳಹಳಿಸಿದ್ದು, ರಜಪೂತರ ಸನ್ಯಾಸ ಕ್ಷಾತ್ರ ತೇಜಸ್ಸಿನ ಬಗ್ಗೆ, ತಮ್ಮ ಕುಲ ಮತ್ತು ಸಂಪ್ರದಾಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಇವುಗಳೆಲ್ಲಾ ರಜಪೂತ ಜನಾಂಗದ ಬೆಲೆಕಟ್ಟಲಾಗದ ಸಮಯವಾಗಿದೆ. ಬ್ರಿಟಾನಿಕ ಎನ್ಚ್ಯಕ್ಲೋಪೀಡಿಯ (1911ರ ಆವೃತ್ತಿ )ದಲ್ಲಿ, ಭಾರತ ಜನಾಂಗದಲ್ಲಿ ,ಆಧುನಿಕ ಸಾಮಾಜಿಕ ಮೌಲ್ಯಗಳ ವಿವರಣೆಗಳನ್ನೊಳಗೊಂಡ ಪಟ್ಟಿ ದಾಖಲಾಗಿರುವುದು ಖಚಿತಪಟ್ಟಿದೆ:
“ | The tradition of common ancestry permits a poor Rajput yeoman to consider himself as well born as any powerful landholder of his clan, and superior to any high official of the professional classes. No race in India can boast of finer feats of arms or brighter deeds of chivalry, and they form one of the main recruiting fields for the Indian army of the day. They consider any occupation other than that of arms or government derogatory to their dignity, and consequently during the long period of peace which has followed the establishment of the British rule in India, they have been content to stay idle at home instead of taking up any of the other professions in which they might have come to the front. | ” |
ಇದನ್ನೂ ನೋಡಿ
[ಬದಲಾಯಿಸಿ]- ರಜಪೂತರ ಪಟ್ಟಿ
- ರಜಪೂತರ ಬುಡಕಟ್ಟು
- ರಜಪೂತರ ಇತಿಹಾಸ
- ರಜಪೂತರ ನ್ಯಾಯಾಲಯಗಳಲ್ಲಿ ಧಾರ್ಮಿಕ ಸ್ವತಂತ್ರ ವಿಚಾರಗಳ ತತ್ವ
- ಮುಸ್ಲಿಂ ರಜಪೂತರು
- ಸಿಖ್ ರಜಪೂತರು
- ರಜಪೂತರು ಮತ್ತು ಜೋರಾಸ್ಟ್ರೀಯನ್ ತತ್ವ
- ರಜಪೂತರು ಮತ್ತು ಬೌದ್ಧ ತತ್ವ
ಟೆಂಪ್ಲೇಟು:Kshatriya Communities
ಟಿಪ್ಪಣಿಗಳು
[ಬದಲಾಯಿಸಿ]- ↑ ಗ್ಲೋಸ್ಸರಿ ಆಫ್ ದಿ ಟ್ರೈಬ್ಸ್ ಅಂಡ್ ಕ್ಯಾಸ್ತ್ಸ್ ಆಫ್ ದಿ ಪಂಜಾಬ್ ಅಂಡ್ ಎನ್ ಡಬ್ಲ್ಯು ಎಫ್ ಪಿ , ಹೆಚ್ . ಎ . ರೋಸ್ .
ಮೂಲಗಳು
[ಬದಲಾಯಿಸಿ]This article includes a list of references, related reading or external links, but its sources remain unclear because it lacks inline citations. (July 2010) |
|
|
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Harlan, Lindsey (1992), Religion and Rajput Women: The Ethic of Protection in Contemporary Narratives., University of California Press, ISBN 0-520-07339-8 [೧].
- ಕಸ್ತೂರಿ , ಮಾಳವಿಕ , ಎಂಬ್ಯಾಟ್ಟಲ್ಡ್ ಐಡೆನ್ಟಿಟೀಸ್ ರಜಪೂತ್ ಲಿನೇಜಸ್ , ಆಕ್ಸ್ಫೋರ್ಡ್ ಯುನಿವರ್ಸಿಟಿ ಪ್ರೆಸ್ (2002) ಐ ಎಸ್ ಬಿ ಎನ್ 0-19-565787-ಎಕ್ಸ್
- ಎಂ ಕೆ ಎ ಸಿದ್ದಿಕ್ಯೂ (ಆವೃತ್ತಿ .), ಮಾರ್ಜಿನಲ್ ಮುಸ್ಲಿಂ ಕಮ್ಯುನಿಟೀಸ್ ಇನ್ ಇಂಡಿಯಾ , ಇನ್ಸ್ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್ , ನ್ಯೂ ಡೆಲ್ಲಿ (2004)
- Tod, James; Crooke, William (Editor) (1994), Annals and Antiquities of Rajasthan (2 vols.)., Trans-Atl, ISBN 81-7069-128-1
{{citation}}
:|given2=
has generic name (help); Unknown parameter|comment=
ignored (help) - ಡಬ್ಲ್ಯು.ಡಬ್ಲ್ಯು. ಹಂಟರ್ , ದಿ ಇಂಡಿಯನ್ ಎಂಪೈರ್ , ಇಟ್ಸ್ ಪೀಪಲ್ , ಹಿಸ್ಟರಿ ಅಂಡ್ ಪ್ರಾಡಕ್ಟ್ಸ್ . ಮೊದಲ ಪ್ರಕಟಣೆ : ಲಂಡನ್,ಟ್ರುಬ್ನರ್ ಅಂಡ್ ಕೊ., ಲುಡ್ಗೆತ್ ಹಿಲ್ , 1886. ಐ ಎಸ್ ಬಿ ಎನ್ 81-206-1581-6. This article incorporates text from a publication now in the public domain: Chisholm, Hugh, ed. (1911). Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help); Missing or empty|title=
(help) - ದಶರಥ ಶರ್ಮ ರ ರಾಜಸ್ಥಾನ್ ಥ್ರೂ ದಿ ಏಜಸ್ ಒಂದು ಸಮಗ್ರ ಹಾಗು ಅಧಿಕೃತ ರಾಜಸ್ಥಾನದ ಇತಿಹಾಸ , ರಾಜಸ್ಥಾನ ಸರ್ಕಾರದ ಆಜ್ಞೆಯ ಮೇರೆಗೆ ತಯಾರಿಸಲ್ಪಟ್ಟಿದೆ. 1966 ರಲ್ಲಿ ರಾಜಸ್ಥಾನ್ ಆರ್ಚಿವ್ಸ್ ^^ರವರಿಂದ ಮೊದಲು ಪ್ರಕಟಣೆಗೊಂಡಿತು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ರಜಪೂತ್ ಯಾಹೂ ಗ್ರೂಪ್ Archived 2012-11-13 ವೇಬ್ಯಾಕ್ ಮೆಷಿನ್ ನಲ್ಲಿ.
- ರಜಪುತ್ಸ್ Archived 2006-02-12 ವೇಬ್ಯಾಕ್ ಮೆಷಿನ್ ನಲ್ಲಿ. ಕೊಲಂಬಿಯಾ ಎನ್ ಸೈಕ್ಲೋಪೀಡಿಯಾ, ಆರನೇ ಆವೃತ್ತಿ ; 2005
- ರಜಪೂತ್ Archived 2007-10-23 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ ಸೈಕ್ಲೊಪೀಡಿಯ ಬ್ರಿಟನ್ನಿಕ; 1911
- ಬ್ರಿಟಿಶ್ ಅಸ್ಸೋಸಿಯೇಶನ್ ಆಫ್ ರಜಪುತ್ಸ್ Archived 2007-10-30 ವೇಬ್ಯಾಕ್ ಮೆಷಿನ್ ನಲ್ಲಿ.
- ರಜಪೂತ್ ಇಂಡಿಯಾ .ಕಾಂ Archived 2011-09-07 ವೇಬ್ಯಾಕ್ ಮೆಷಿನ್ ನಲ್ಲಿ.
- ದ ಮೇವಾರ್ ಎನ್ಸೈಕ್ಲೊಪೀಡಿಯ Archived 2006-02-14 ವೇಬ್ಯಾಕ್ ಮೆಷಿನ್ ನಲ್ಲಿ.
- ಮರ್ವರಿ ಹಾರ್ಸ್
- "ದಿ ಟೈಮ್ಸ್ ಆಫ್ ಇಂಡಿಯಾ " (ನ್ಯೂಸ್ ಪೇಪರ್ ) – ಭಾರತದ 'ರಜಪೂತ್ ದಿಪ್ಲೋಮಸಿ ' ನೇಪಾಳದಲ್ಲಿ
- ಇಂಡಿಯನ್ ಪ್ರಿನ್ಸಲಿ ಸ್ಟೇಟ್ಸ್
- ವಲ್ಲಬ್ಹ್ ಭಾಯಿ ಇಂಟಿಗ್ರೇಟಡ್ ಸ್ಟೇಟ್ಸ್
- Pages using the JsonConfig extension
- Pages using duplicate arguments in template calls
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- Articles with unsourced statements from January 2010
- Articles with invalid date parameter in template
- Articles lacking in-text citations from July 2010
- All articles lacking in-text citations
- CS1 errors: unsupported parameter
- CS1 errors: dates
- CS1 maint: year
- CS1 errors: generic name
- CS1 errors: unrecognized parameter
- CS1 errors: empty unknown parameters
- CS1 errors: missing title
- CS1 errors: invalid parameter value
- Wikipedia articles incorporating a citation from the 1911 Encyclopaedia Britannica with no article parameter
- Wikipedia articles incorporating text from the 1911 Encyclopædia Britannica
- Commons category link from Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತದ ಸಾಮಾಜಿಕ ಗುಂಪುಗಳು
- ರಾಜಸ್ಥಾನದ ಸಾಮಾಜಿಕ ಗುಂಪುಗಳು
- ಹಿಂದೂ ಬುಡಕಟ್ಟಿನ ಆಡಳಿತ
- ಕ್ಷತ್ರಿಯ
- ಇಂಡೋ -ಆರ್ಯನ್ ಜನರು
- ಭಾರತೀಯ ಯೋಧರು
- ಭಾರತದ ಸೈನಿಕ ಇತಿಹಾಸ
- ಭಾರತದ ಅಂಕಿಸಂಖ್ಯಾ/ಜನಸಂಖ್ಯಾ ವಿಜ್ಞಾನದ ಇತಿಹಾಸ
- ರಜಪೂತರು
- ರಜಪೂತರ ಮುಖ್ಯಸ್ಥರು
- ಸಮಾಜ
- ರಾಜಸ್ಥಾನ
- Pages using ISBN magic links