ಚಾಟಿ
ಚಾಟಿಯು ಸಾಂಪ್ರದಾಯಿಕವಾಗಿ ಪ್ರಾಣಿಗಳು ಅಥವಾ ಜನರಿಗೆ ಹೊಡೆಯಲು, ನೋವು ಅಡಿಯಾಳುತನ ಅಥವಾ ನೋವಿನ ಭಯದ ಮೂಲಕ ಪ್ರಾಣಿಗಳು ಅಥವಾ ಇತರ ಜನರ ಮೇಲೆ ನಿಯಂತ್ರಣ ಬಳಸಲು ಅಥವಾ ದಾರಿ ತೋರಿಸಲು ನೆರವಾಗಲು ವಿನ್ಯಾಸಗೊಳಿಸಲಾದ ಒಂದು ಸಲಕರಣೆ. ಆದರೆ ಕೆಲವು ಚಟುವಟಿಕೆಗಳಲ್ಲಿ ನೋವಿನ ಬಳಕೆಯಿಲ್ಲದೆಯೇ ಚಾಟಿಗಳನ್ನು ಬಳಸಬಹುದು, ಉದಾಹರಣೆಗೆ ಕುದುರೆ ಸವಾರಿಯಲ್ಲಿ ಹೆಚ್ಚುವರಿ ಒತ್ತಡ ಸಹಾಯಕ ಅಥವಾ ದೃಷ್ಟಿಗೋಚರ ದಿಕ್ಕು ಸೂಚನೆ. ಸಾಮಾನ್ಯವಾಗಿ ಚಾಟಿಗಳು ಎರಡು ಪ್ರಕಾರದ್ದಾಗಿರುತ್ತವೆ, ನೇರ ಸಂಪರ್ಕಕ್ಕಾಗಿ ವಿನ್ಯಾಸಗೊಳಿಸಲಾದ ಗಟ್ಟಿಯಾದ ಕೋಲು, ಅಥವಾ ಪರಿಣಾಮಕಾರಿಯಾಗಲು ವಿಶೇಷೀಕೃತ ತೊನೆತದ ಅಗತ್ಯವಿರುವ ಮೆತುವಾದ ಚಾಟಿ, ಆದರೆ ಇದು ಹೆಚ್ಚು ಉದ್ದನೆಯ ವ್ಯಾಪ್ತಿ ಮತ್ತು ಹೆಚ್ಚಿನ ಬಲವನ್ನು ಹೊಂದಿರುತ್ತದೆ, ಆದರೆ ಕಡಿಮೆ ನಿಖರತೆಯನ್ನು ಹೊಂದಿರಬಹುದು. ಒಂದು ದೃಢವಾದ ಕೋಲು (ಹಿಡಿ) ಮತ್ತು ಮೆತುವಾದ ಹಗ್ಗವನ್ನು (ಬಾರು ಅಥವಾ ಪಟ್ಟಿ) ಸಂಯೋಜಿಸುವ ಚಾಟಿಗಳು ಕೂಡ ಇವೆ, ಉದಾಹರಣೆಗೆ ಬೇಟೆ ಚಾಟಿಗಳು.
ಬಹುಪಾಲು ಚಾಟಿಗಳು ಪ್ರಾಣಿಗಳ ಮೇಲೆ ಬಳಕೆಗೆ ವಿನ್ಯಾಸಗೊಳಿಸಲಾಗಿರುತ್ತದೆ, ಆದರೆ ಕೆಲವು ಚಾಟಿಗಳನ್ನು ನಿರ್ದಿಷ್ಟವಾಗಿ ಹೊಡೆತಕ್ಕಾಗಿ (ಮಾನವ ಗುರಿಗಳ ಮೇಲೆ ದೈಹಿಕ ಶಿಕ್ಷೆ ಅಥವಾ ಚಿತ್ರಹಿಂಸೆ ನೀಡುವ ಸಾಧನವಾಗಿ) ಅಭಿವೃದ್ಧಿಪಡಿಸಲಾಯಿತು. ಕೆಲವು ಧಾರ್ಮಿಕ ಆಚರಣೆಗಳು ಮತ್ತು ಬಿಡಿಎಸ್ಎಮ್ ಚಟುವಟಿಕೆಗಳು ಚಾಟಿಗಳ ಸ್ವ ಬಳಕೆ ಅಥವಾ ಸಮ್ಮತಿಯಿರುವ ಸಂಗಾತಿಗಳ ನಡುವೆ ಚಾಟಿಗಳ ಬಳಕೆಯನ್ನು ಒಳಗೊಳ್ಳುತ್ತವೆ. ಪ್ರಾಣಿಗಳ ಮೇಲೆ ದುರ್ಬಳಕೆಯನ್ನು ಪ್ರಾಣಿ ಕ್ರೌರ್ಯವೆಂದು ಪರಿಗಣಿಸಬಹುದು, ಮತ್ತು ಮಾನವರ ಮೇಲೆ ದುರ್ಬಳಕೆಯನ್ನು ದಾಳಿಯಾಗಿ ಕಾಣಬಹುದು.
ಆಧುನಿಕ ಕಾಲದಲ್ಲಿ, ನೋವು ಪ್ರಚೋದನೆಯನ್ನು ಸ್ವಲ್ಪ ಪ್ರಾಣಿ ತರಬೇತಿಯಲ್ಲಿ ಇಂದಿಗೂ ಬಳಸಲಾಗುತ್ತದೆ, ಮತ್ತು ಬಹುತೇಕ ಕುದುರೆ ಸವಾರಿ ಶಾಖೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಇದನ್ನು ಅನುಮತಿಸಲಾಗುತ್ತದೆ. ಇವುಗಳಲ್ಲಿ ಕೆಲವು ಚಾಟಿಯನ್ನು ಕೊಂಡೊಯ್ಯುವುದನ್ನು ಕಡ್ಡಾಯಮಾಡುತ್ತವೆ. ಸರಿಯಾಗಿ ಅನ್ವಯಿಸಲಾದಾಗ ಸವಾರಿ ಸಹಾಯಕಗಳಿಗೆ ನೆರವು ನೀಡಲು ಚಾಟಿಯು ಅತ್ಯಗತ್ಯ ಸಲಕರಣೆಯಾಗಬಹುದು, ವಿಶೇಷವಾಗಿ ಆರಂಭಿಕ ಆದೇಶಗಳನ್ನು ನಿರ್ಲಕ್ಷಿಸಿದಾಗ. ಆದರೆ, ಅನೇಕ ಸ್ಪರ್ಧಾ ನಿರ್ವಾಹಕ ಮಂಡಲಿಗಳು ಚಾಟಿಗಳ ಬಳಕೆಯನ್ನು ಸೀಮಿತಗೊಳಿಸುತ್ತವೆ, ಮತ್ತು ಚಾಟಿಯ ಅತಿ ಬಳಕೆಗೆ ಅನರ್ಹಗೊಳಿಸುವಿಕೆ ಮತ್ತು ದಂಡಗಳು ಸೇರಿದಂತೆ ಕಠೋರ ಜುಲ್ಮಾನೆಗಳು ಚಾಲ್ತಿಯಲ್ಲಿರಬಹುದು.[೧] ಕೆಲವು ಕಾನೂನುವ್ಯಾಪ್ತಿಗಳಲ್ಲಿ ಚಾಟಿಗಳ ಅತಿ ಬಳಕೆ ಅಥವಾ ತಪ್ಪು ಬಳಕೆಯನ್ನು ಪ್ರಾಣಿ ಕ್ರೌರ್ಯವೆಂದು ಪರಿಗಣಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ "Final decision of the FEI tribunal" (PDF). Fédération Équestre Internationale. 2010-07-09. Archived from the original (PDF) on 2012-08-01. Retrieved 2018-11-25.