ಐಸ್ಯಾಕ್
ಗೋಚರ
Isaac | |
---|---|
יִצְחָק | |
ಸಂಗಾತಿ | Rebecca (also spelled Rebekah) |
ಮಕ್ಕಳು | |
ಪೋಷಕರು | |
ಕುಟುಂಬ |
|
ಐಸ್ಯಾಕ್: ಪ್ರ.ಶ.ಪು. 1500. ಏಬ್ರಹಾಂ ಪ್ರವಾದಿಯ ಎರಡನೆಯ ಮಗ. ತಂದೆಯ ಅನಂತರ ಹೀಬ್ರೂ ಜನತೆಗೆ ಪ್ರವಾದಿ ನಾಯಕನಾದವ. ತಂದೆ ಏಬ್ರಹಾಂಗೆ ನೂರು ವರ್ಷ ತಾಯಿ ಸಾರಾಗೆ ತೊಂಬತ್ತು ವರ್ಷ ವಯಸ್ಸಾದಾಗ ಈತ ಜನಿಸಿದ. ಇಸ್ಲಾಮಿ ಭಾಷೆಯಲ್ಲಿ ಇಸ್ಹಾಕ್ ಎಂದು ಈತನ ಹೆಸರು. ಈ ಹೆಸರಿಗೆ ನಗು ಎಂದರ್ಥ. ಅಂಥ ವೃದ್ಧಾಪ್ಯದಲ್ಲಿ ತಮಗೆ ಮಕ್ಕಳಾಗುತ್ತದೆಂಬ ವಾರ್ತೆ ಬಂದಾಗ ತಂದೆ - ತಾಯಿಗಳು ದೊಡ್ಡದಾಗಿ ನಕ್ಕರೆಂದೂ ಹುಟ್ಟಿದ ಮಗುವಿಗೆ ನಗು ಎಂದೇ ಹೆಸರಿಟ್ಟರೆಂದೂ ಕಥೆ[೧][೨]. ದೇವರು ಏಬ್ರಹಾಂನ ಸತ್ವ್ತಪರೀಕ್ಷೆ ಮಾಡಲು ಚಿಕ್ಕಮಗುವನ್ನೇ ಬಲಿಯಾಗಿ ಕೇಳಿದನೆಂದೂ ಅದಕ್ಕೆ ಸಿದ್ಧನಾದಾಗ ತಾನೇ ಅದನ್ನು ಕನಿಕರದಿಂದ ತಪ್ಪಿಸಿದನೆಂದೂ ಹಳೆಯ ಒಡಂಬಡಿಕೆಯಲ್ಲಿ ಹೇಳಲಾಗಿದೆ. ಹಾರನ್ ಪ್ರದೇಶದ ರೆಬೆಕ್ ಎಂಬುವಳನ್ನು ಐಸ್ಯಾóಕ್ ಮದುವೆಯಾದ. ಅವನಿಗೆ ಇಬ್ಬರು ಮಕ್ಕಳಾದರು. ಎರಡನೆಯವನಾದ ಯಾಕೂಬನು (ಜೇಕಬ್) ಯೆಹೂದಿ ಮನೆತನದ ಮೂಲಪುರುಷನಾದ. ಮೋಸಸ್ (ಮೂಸಾ), ಸಾಲೊಮನ್ (ಸುಲೇಮಾನ್), ಡೇವಿಡ್ (ದಾವೂದ್) ಇವರೆಲ್ಲ ಈ ವಂಶದವರೇ.
ಉಲ್ಲೇಖಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: