ಅಥೀನ
ಗೋಚರ
ಅಥೀನ ಸುಮಾರು 2,300 ವರ್ಷಗಳ ಹಿಂದೆ ಗ್ರೀಸಿನ ದೊರೆ ಪೆರಿಕ್ಲೀಸನ ಕಾಲದಲ್ಲಿ ಗ್ರೀಕರು ಕಟ್ಟಿದ ಪಾರ್ಥೆನಾನ್ ಎಂಬ ಸುಂದರ ಅಮೃತಶಿಲೆಯ ಮಂದಿರದೊಳಗಿದ್ದ ಸ್ತ್ರೀ ದೇವತಾಮೂರ್ತಿ. ಒಲಿಂಪಸ್ಸಿನ ಅನುಗ್ರಹ ತೋರುವ ಈ ದೇವತೆ ವಿವೇಕದ, ಶಾಂತಿ-ಸಮಾಧಾನಗಳ ದ್ಯೋತಕಿ. ಕಲಾಪೋಷಕಿ. ಬಿರುಗಾಳಿ ಮುಂತಾದವುಗಳ ಮೇಲೆ ಆಧಿಪತ್ಯ ನಡೆಸುವವಳು. ಅಥೆನ್ಸಿನ ಪೋಷಕಿಯಾಗಿರುವ ಈ ಕನ್ನಿಕಾದೇವತೆ ಜ್ಯೂಸನ ಹಣೆಯಿಂದ ಜನಿಸಿದವಳು. ಸಾಮಾನ್ಯವಾಗಿ ಈಕೆಯ ತಲೆಯ ಮೇಲೆ ಒಂದು ಶಿರಸ್ತ್ರಾಣವಿದ್ದು ಮೆಡೂಸನ್ ತಲೆಯಿರುವ ಒಂದು ಗುರಾಣಿಯನ್ನು ಹಿಡಿದಿರುತ್ತಾಳೆ. ಈ ದೇವತೆಗೆ ಸಂಬಂಧಿಸಿದಂತೆ ಪ್ಯಾನೆಥೀನಿಯ ಎಂಬ ಹಬ್ಬವೂ ಜರುಗುತ್ತದೆ. ರೋಮನ್ನರ ಪ್ರಜ್ಞಾದೇವತೆ ಮಿನರ್ವಳ ಜೊತೆ ಈಕೆಯನ್ನೂ ಪೂಜಿಸುತ್ತಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Athena.
- Theoi.com Cult of Athena —Extracts of classical texts
- Roy George, "Athena: The sculptures of the goddess" —A repertory of Greek and Roman types
- Temples of Athena
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: