ಹೊನಗೊನ್ನೆ ಸೊಪ್ಪು
ಗೋಚರ
ಹೊನಗೊನ್ನೆ | |
---|---|
Conservation status | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | |
ಪ್ರಜಾತಿ: | A. sessilis
|
Binomial name | |
Alternanthera sessilis | |
Synonyms | |
|
ಹೊನಗೊನ್ನೆ ಸೊಪ್ಪು ಒಂದು ಔಷಧೀಯ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಆಲ್ಟರ್ ನ್ಯಾಂಥೀರ ಸೆಸ್ಸಿಲಿಸ್. ಇದು ಅಮರಾಂಥೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.
ಇತರ ಭಾಷೆಯಲ್ಲಿನ ಹೆಸರುಗಳು
[ಬದಲಾಯಿಸಿ]- ಕನ್ನಡ-ಹೊನಗೊನ್ನೆ, ಹೊನಗೊನ,
- ಸಂಸ್ಕೃತ-ಮತ್ಸ್ಯಾಕ್ಷಿ.
- ಹಿಂದಿ-ಮಕ್ಸೀ, ಮಛೇಛೀ;
- ತೆಲುಗು-ಪೂನ್ನಗಂಟಾಕು, ಪೂನ್ನಗಂಟಕುರ
ಸಸ್ಯ ವಿವರಣೆ
[ಬದಲಾಯಿಸಿ]ಈ ಗಿಡವು ರಾಜ್ಯದ ಉಷ್ಣಪ್ರದೆಶಗಳಲ್ಲಿನ ಒದ್ದೆಭೂಮಿಯಲ್ಲಿ, ಗದ್ದೆ ಬಯಲಿನಲ್ಲಿ ಮತ್ತು ಕೆರೆಯಂಗಳದಲ್ಲಿ ಹುಲುಸಾಗಿ ಬೆಳೆಯುತ್ತದೆ. ಇದನ್ನು ಸೊಪ್ಪು ತರಕಾರಿಯಂತೆ ಕೆಲವು ಕಡೆ ಬಳಸುತ್ತಾರೆ. ಗಿಡವು ಕವಲೊಡೇದು ನೆಲದ ಮೇಲೆ ಹರಡಿ ಬೆಳಯುತ್ತದೆ. ನೆಲಕ್ಕೆ ತಾಗುವ ಗೆಣ್ಣೀನಲ್ಲಿ ಬೇರುಗಳು ಮೊಳೆತು ಕಾಂಡವನ್ನು ನೆಲಕ್ಕೆ ಭದ್ರಪಡಿಸುತ್ತದೆ. ಕಾಂಡದ ಮೇಲೆ ರಸಭರಿತವಾದ, ನೀಳಾವಾದ, ಸರಳವಾದ ಮತ್ತು ಹೊಳಪಾದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತದೆ. ಎಲೆಯ ಕಂಕುಳಲ್ಲಿ ಅಣ್ಣೇಸೊಪ್ಪಿನ ಹೂಗೊಂಚಲಿನಂತಿರುತ್ತದೆ.
ಉಪಯೋಗಗಳು
[ಬದಲಾಯಿಸಿ]- ಹೊನಗೊನ್ನೆ ಬೇರನ್ನು ೨ ತೊಲದಷ್ಟು ತೆಗೆದುಕೊಂಡು ೧/೪ ಸೇರು ಆಡಿನ ಹಾಲಿನಲ್ಲಿ ಅರೆದು ಸೋಸಿ ದಿವಸಕ್ಕೂಮ್ಮೆ ಕುಡಿಸುವುದರಿಂದ ಮೂತ್ರವಿಸರ್ಜನೆ ಸಲೀಸಾಗುವುದು[೧].
- ಹೊನಗೊನ್ನೆ ಸೊಪ್ಪಿನ ಪಲ್ಯ ಮಾಡಿ ತಿನ್ನುವುದರಿಂದ, ಜ್ವರ ಬಿಟ್ಟ ನಂತರ ರುಚಿಕೆಟ್ಟ ಬಾಯಿಗೆ ರುಚಿಯುಂಟು ಮಾಡುತ್ತದೆ. ೮ ದಿನ ಬಿಡದೆ ತಿಂದರೆ ಒಳ್ಳೆಯದು.
- ಹೊನಗೊನ್ನೆ ಸೊಪ್ಪಿನ ರಸ ೨ ತೊಲ, ಮೂಲಂಗಿ ಸೊಪ್ಪಿನ ರಸ ೨ ತೊಲ ಮಿಶ್ರ ಮಾಡಿ ಸ್ವಲ್ಪ ಸೈಂಧಲವಣ ಸೇರಿಸಿ ಕುಡಿಯುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.
- ಹೊನಗೊನ್ನೆ ಸೊಪ್ಪಿನ ರಸದಲ್ಲಿ ಉತ್ತರಾಣಿ ಬೇರನ್ನು ತೇಯ್ದು ಕಣ್ಣುಗಳಿಗೆ ಹಚ್ಚುವುದರಿಂದ ಕಣ್ಣಿನ ಪೊರೆ ನಿವಾರಣೆಯಾಗುತ್ತದೆ.
- ಹೊನಗೊನ್ನೆ ಗಿಡದ ಎಲೆ ೨ ಹಿಡಿಯಷ್ಟು ತೆಗೆದುಕೊಂಡು ಅದಕ್ಕೆ ಅವರೆಕಾಳು ಗಾತ್ರದ ಆರತಿಕರ್ಪೂರ ಸೇರಿಸಿ ನಯವಾಗಿ ಅರೆದು ಮುಲಾಮಿನಂತೆ ಮಾಡಿಕೊಂಡು ಎಲ್ಲಾ ಬಗೆಯ ಗಾಯಗಳಿಗೆ ಲೇಪನವಾಗಿ ಬಳಸಬಹುದು.
- ಹೊನಗೊನ್ನೆ ಬೇರಿನ ರಸ ೧ ತೊಲದಷ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಲ್ಲ ತುಪ್ಪ ಸೇರಿಸಿ, ಸ್ತೀಯರು ಕುಡಿಯುವುದರಿಂದ ರಕ್ತಪ್ರದರ ಗುಣವಾಗುತ್ತದೆ. ಇದನ್ನು ದಿವಸಕ್ಕೊಮ್ಮೆಯಂತೆ ೩ ದಿವಸ ಕುಡಿಯಬೇಕು.
- ಹೊನಗೊನ್ನೆ ಬೇರನ್ನು ಆಡಿನ ಹಾಲಿನಲ್ಲಿ ಅರೆದು ಕುಡಿಯುವುದರಿಂದ ಬಹುಮೂತ್ರ ರೋಗ ವಾಸಿಯಾಗುತ್ತದೆ. ಮಕ್ಕಳಲ್ಲಿ ಕಾಣಿಸುವ ಉರಿಮೂತ್ರಕ್ಕೂ ಇದು ಒಳ್ಳೆಯ ಮದ್ದು.
- ಹೊನಗೂನ್ನೆ ಸೊಪ್ಪಿನ ಸಾರು ಅಥವಾ ಪಲ್ಯ ಮಾಡಿ ಸೇವಿಸುವುದರಿಂದ ಕಣ್ಣುಗಳ ವ್ಯಾಧಿಗಳು ಬರುವುದಿಲ್ಲ.
- ಹೊನಗೊನ್ನೆ ಗಿಡವನ್ನು ಬೇರು ಸಹಿತ ಕಿತ್ತು ೧ ಸೇರಿನಷ್ಟು ರಸಮಾಡಿಕೂಂಡು ಅದಕ್ಕೆ ೧ ಪಾವು ಎಳ್ಳೆಣ್ಣೆ ಹಾಕಿ ಕಾಯಿಸಿ ರಸವೆಲ್ಲ ಇಂಗಿದ ಮೇಲೆ ಇಳಿಸಿಕೂಂಡು ಎಣ್ಣೆಯನ್ನು ಶೋಧಿಸಿ ಇಟ್ಟುಕೂಳ್ಳಬೇಕು. ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಮೆದುಳು ಮತ್ತು ಕಣ್ಣುಗಳ ಉಷ್ಣತೆಯು ಕಡಿಮೆಯಾಗಿ ಬಲ ಮತ್ತು ತೇಜಸ್ಸು ಹೆಚ್ಚಾಗುತ್ತದೆ. ಈ ಎಣ್ಣೆಯನ್ನು ಬೆಂದ ಗಾಯಗಳ ಮೇಲೆ ಕೂಡ ಉಪಯೋಗಿಸಬಹುದು.
- ಹೊನಗೂನ್ನೆ ಸೊಪ್ಪಿನ ರಸವನ್ನು ಒಂದು ಹೆಂಚಿಗೆ ಹಲವು ಸಲ ಸವರಿ ಒಣಗಿಸಿಟ್ಟುಕೊಳ್ಳುವುದು. ಅದರ ಮೇಲೆ ಹಸುವಿನ ತುಪ್ಪ ಹಾಕಿ ಉರಿಸಿದ ದೀಪದಿಂದ ಬರುವ ಕಾಡಿಗೆಯನ್ನು ರಸ ಲೇಪಿಸಿ ಆಗಲೇ ಒಣಗಿಸಿಟ್ಟುಕೂಂಡಿದ್ದ ಹೆಂಚಿನ ಮೇಲೆ ಶೇಖರಿಸಿಕೂಂಡು ಆ ಕಾಡಿಗೆಯನ್ನು ಹಸುವಿನ ತುಪ್ಪದಲ್ಲಿಯೇ ಕಲಸಿ, ಕಾಡಿಗೆಯಾಗಿ ಉಪಯೋಗಿಸುವುದರಿಂದ ಕಣ್ಣುಗಳು ಆರೋಗ್ಯಪೂರ್ಣವಾಗಿರುತ್ತವೆ.
ಉಲ್ಲೇಖಗಳು
[ಬದಲಾಯಿಸಿ]