ವಿಷಯಕ್ಕೆ ಹೋಗು

ಭುಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವ ಭುಜವು ಮೂರು ಮೂಳೆಗಳಿಂದ ರೂಪಗೊಂಡಿದೆ: ಕೊರಳೆಲುಬು, ಸ್ಕ್ಯಾಪ್ಯುಲಾ, ಮತ್ತು ಹ್ಯೂಮರಸ್ ಜೊತೆಗೆ ಸಂಬಂಧಿತ ಸ್ನಾಯುಗಳು, ಅಸ್ಥಿರಜ್ಜುಗಳು ಮತ್ತು ಸ್ನಾಯುರಜ್ಜುಗಳು ಕೂಡ ಇವೆ. ಭುಜದ ಮೂಳೆಗಳ ನಡುವಿನ ಜೋಡಣೆಗಳು ಭುಜದ ಕೀಲುಗಳನ್ನು ರಚಿಸುತ್ತವೆ. ಭುಜದ ಕೀಲು ಭುಜದ ಪ್ರಮುಖ ಕೀಲಾಗಿದೆ, ಆದರೆ ಹೆಚ್ಚು ಸ್ಥೂಲವಾಗಿ ಅಕ್ರೊಮೀಯೊಕ್ಲವಿಕ್ಯೂಲಾರ್ ಕೀಲನ್ನು ಒಳಗೊಳ್ಳಬಹುದು. ಮಾನವ ಅಂಗರಚನಾಶಾಸ್ತ್ರದಲ್ಲಿ, ಭುಜದ ಕೀಲು ಹ್ಯೂಮರಸ್ ಸ್ಕ್ಯಾಪ್ಯುಲಾಗೆ ಜೋಡಣೆಯಾಗುವ ಶರೀರದ ಭಾಗವನ್ನು ಒಳಗೊಳ್ಳುತ್ತದೆ, ಅಂದರೆ ಗ್ಲೆನಾಯಿಡ್ ಕುಹರದಲ್ಲಿ ಕುಳಿತುಕೊಳ್ಳುವ ಮೇಲ್ಭಾಗ.[] ಭುಜವು ಕೀಲಿನ ಪ್ರದೇಶದಲ್ಲಿರುವ ರಚನೆಗಳ ಗುಂಪು.

ಭುಜದ ಕೀಲು ತೋಳಿಗೆ ವೃತ್ತಾಕಾರ ಶೈಲಿಯಲ್ಲಿ ತಿರುಗಲು ಅಥವಾ ಶರೀರದಿಂದ ಹೊರ ಮತ್ತು ಮೇಲೆ ಚಾಚಲು ಆಸ್ಪದನೀಡುವ ಒಂದು ಚೆಂಡುಕುಳಿ ಕೀಲು. ಕೀಲು ಕೋಶವು ಗ್ಲೆನೊಹ್ಯೂಮರಲ್ ಕೀಲನ್ನು ಸುತ್ತುವರಿಯುವ ಮತ್ತು ಸ್ಕ್ಯಾಪ್ಯುಲಾ, ಹ್ಯೂಮರಸ್, ಮತ್ತು ಬೈಸೆಪ್ಸ್‌ನ ಅಗ್ರಭಾಗಕ್ಕೆ ಜೋಡಣೆಯಾಗುವ ಒಂದು ಮೃದು ಅಂಗಾಂಶ ಹೊದಿಕೆ. ಆವರ್ತಕ ಪಟ್ಟಿಯು ಭುಜದ ಕೀಲನ್ನು ಸುತ್ತುವರಿದ ನಾಲ್ಕು ಸ್ನಾಯುಗಳ ಒಂದು ಗುಂಪು ಮತ್ತು ಇದು ಭುಜದ ಸ್ಥಿರತೆಗೆ ನೆರವಾಗುತ್ತದೆ. ಈ ಪಟ್ಟಿಯು ಗ್ಲೆನೊಹ್ಯೂಮರಲ್ ಕೋಶಕ್ಕೆ ಅಂಟಿಕೊಳ್ಳುತ್ತದೆ ಮತ್ತು ಹ್ಯೂಮರಲ್ ಹೆಡ್‍ಗೆ ಜೋಡಣೆಯಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "shoulder". The Free Dictionary.
"https://kn.wikipedia.org/w/index.php?title=ಭುಜ&oldid=740272" ಇಂದ ಪಡೆಯಲ್ಪಟ್ಟಿದೆ