ವಿಷಯಕ್ಕೆ ಹೋಗು

ಗದ್ದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗದ್ದ ಅಥವಾ ಚಿಬುಕ ಪ್ರದೇಶವು ಕೆಳತುಟಿಯ ಕೆಳಗಿನ ಮುಖದ ಪ್ರದೇಶ ಮತ್ತು ಕೆಳದವಡೆಯ ಚಾಚುಭಾಗವನ್ನು ಒಳಗೊಳ್ಳುತ್ತದೆ.[] ಇದು ಕೆಳದವಡೆಯ ಕೆಳಗಿನ ಮುಂಭಾಗದಿಂದ ರೂಪಗೊಂಡಿರುತ್ತದೆ.

ವಿಕಸನ

[ಬದಲಾಯಿಸಿ]

ಆಧುನಿಕ ಮಾನವರ ಬುರುಡೆ ಮತ್ತು ನಿಯಾಂಡರ್ಥಾಲ್ ಯುಗದ ಮಾನವರ ಬುರುಡೆಯ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿದೆ ಏಕೆಂದರೆ ಆಧುನಿಕ ಮಾನವನು ಗದ್ದದ ಮೇಲೆ ಒಂದು ಬಿಂದುವನ್ನು ಹೊಂದಿದ್ದರೆ ನಿಯಾಂಡರ್ಥಾಲ್ ಯುಗದ ಮಾನವನು ಹೊಂದಿಲ್ಲ. ಈ ರೂಪಾಂತರಕ್ಕೆ ಕಾರಣಗಳು ಈಗಲೂ ಅಸ್ಪಷ್ಟವಾಗಿದೆ, ಆದರೆ ವಿದ್ವಾಂಸರಲ್ಲಿ ಚರ್ಚೆಗೆ ಒಳಪಡುವ ಕೆಲವು ವಿವರಣೆಗಳಿವೆ.

ಮಾನವರಲ್ಲಿ ಕಂಡುಬರುವ ಗದ್ದದ ವಿಕಸನವನ್ನು ವಿವರಿಸುವ ಅತ್ಯಂತ ಜನಪ್ರಿಯ ಸಿದ್ಧಾಂತಗಳಲ್ಲಿ ಒಂದು ಏನೆಂದರೆ ಇದು ಕೆಲವು ಯಾಂತ್ರಿಕ ಒತ್ತಡಗಳ ವಿರುದ್ಧ ದವಡೆಗೆ ಆಧಾರವಾಗುವಲ್ಲಿ ನೆರವಾಗುತ್ತದೆ ಎಂದು. ಗದ್ದದ ವಿಕಸನವು ಮಾನವರ ಮಾತು ನಾಲಿಗೆಯ ಸ್ನಾಯುಗಳ ಕೆಲವು ಚಲನೆಗಳಿಂದ ದವಡೆಯ ಮೇಲೆ ಒತ್ತಡವನ್ನು ಸೃಷ್ಟಿಸುವ ಅದ್ವಿತೀಯ ರೂಪಕ್ಕೆ ಪ್ರತಿಕ್ರಿಯೆಯಾಗಿ ಉಂಟಾಯಿತು ಎಂದು ಒಟ್ಯಾಗೊ ವಿಶ್ವವಿದ್ಯಾಲಯದ ಒಬ್ಬ ಡಾಕ್ಟರೇಟ್ ವಿದ್ಯಾರ್ಥಿಯು ಒಂದು ಪ್ರಬಂಧ ಪ್ರಕಟಿಸಿದನು.

ಉಲ್ಲೇಖಗಳು

[ಬದಲಾಯಿಸಿ]
  1. O'Loughlin, Michael McKinley, Valerie Dean (2006). Human anatomy. Boston: McGraw-Hill Higher Education. pp. 400–01. ISBN 0-07-249585-5.{{cite book}}: CS1 maint: multiple names: authors list (link)


"https://kn.wikipedia.org/w/index.php?title=ಗದ್ದ&oldid=1250332" ಇಂದ ಪಡೆಯಲ್ಪಟ್ಟಿದೆ