ವಿಷಯಕ್ಕೆ ಹೋಗು

ಕ್ಷೀರಪಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಷೀರಪಥ
(ESO-VLT-Laser-phot-33a-07 rsz) ಆಕಾಶಗಂಗೆ: ವೀಕ್ಷಣಾಲಯದಿಂದ ಕ್ಷೀರಪಥದ ಗ್ಯಾಲಕ್ಸಿಯ ಕೇಂದ್ರದ ವೀಕ್ಷಣೆ-ಪಟ್ಟಿ ಬಾಹುಗಳ ಸುರುಳಿಯಾಕಾರದ ಬ್ರಹ್ಮಾಂಡ
  • ವ್ಯಾಸ = 100-120 ಖ.ಮಾ. (31-37 ಕೆಪಿಸಿ)
  • ವ್ಯಾಸವಿರವ ಸಾಧ್ಯತೆ= 150,000-180,000 ಜ್ಯೋತಿರ್ವರ್ಷಗಳು
  • ದಪ್ಪ =1 ಖ.ಮಾ. (0.3 ಕೆಪಿಸಿ).
  • ನಕ್ಷತ್ರಗಳ ಸಂಖ್ಯೆ= 400 ಶತಕೋಟಿ (4×1011 ±2×1011)
  • ಅತೀ ಪ್ರಾಚೀನ ತಾರೆ =13.6 Gyr/ಜ್ಯೊತಿರ್ವರ್ಷ
  • ದ್ರವ್ಯರಾಶಿ = 1.0–1.5×1012 M☉
  • ಗ್ಯಾಲಕ್ಸಿ ಕೇಂದ್ರಕ್ಕೆ ಸೂರ್ಯನ ದೂರ= 27.2 ± 1.1 ಖ.ಮಾ (8.34 ± 0.34 ಕೆಪಿಸಿ)..
  • ಸೂರ್ಯನ ಗ್ಯಾಲಕ್ಸಿಯ ಪರಿಭ್ರಮಣ ಕಾಲ= 240 ದಶಲ..ವ (ಋಣಾತ್ಮಕ ಆವರ್ತನ)
  • ಸುರುಳಿಯಾಕಾರದಲ್ಲಿ ಪರಿಭ್ರಮಣ ಕಾಲವು =50 ದಶಲ.ವ.
  • ಪಟ್ಟಿ ಮಾದರಿ ಪರಿಭ್ರಮಣ ಕಾಲ =15-18 ದಶಲ.ವ.
.

ಕ್ಷೀರಪಥ (ಅಥವಾ ಆಕಾಶಗಂಗೆ) - ಇದು ಸ್ಥಳೀಯ ಸಮೂಹದಲ್ಲಿರುವ ಸುರುಳಿಯಾಕಾರದ ಒಂದು ಬ್ರಹ್ಮಾಂಡ (ತಾರಾಗಣ). ವಿಶ್ವದಲ್ಲಿರುವ ಕೋಟ್ಯಾಂತರ ಬ್ರಹ್ಮಾಂಡ (ತಾರಾಗಣ)ಗಳಲ್ಲಿ ಕ್ಷೀರಪಥವು ಒಂದು ಈ ಬ್ರಹ್ಮಾಂಡ ವಿಶೇಷ ಪ್ರಾಮುಖ್ಯತೆಯಿದೆ: ಕಾರಣ ಈ ಕ್ಷೀರಪಥವು ನಮ್ಮ ಸೌರಮಂಡಲವನ್ನು ಹೊಂದಿದೆ. ಈ ಕ್ಷೀರಪಥವು (ಮಿಲ್ಕೀ ವೇ) ನಮ್ಮ ಬ್ರಹ್ಮಾಂಡ. ಎಂದರೆ ನಾವು ನಮ್ಮ ಸೂರ್ಯಮಂಡಲ ಇರುವ ಬ್ರಹ್ಮಾಂಡ - ಗ್ಯಲಾಕ್ಷಿ- ಇದರ ಹೆಸರು ಆಕಾಶಗಂಗೆ - ಕ್ಷೀರಪಥ.

ಆಕಾಶಗಂಗೆ ಎಂಬ ಬ್ರಹ್ಮಾಂಡ

[ಬದಲಾಯಿಸಿ]
  • ಕ್ಷೀರಪಥವು ನಮ್ಮ ಸೌರವ್ಯೂಹವನ್ನು ಒಳಗೊಂಡಿರುವ ಒಂದು ಬ್ರಹ್ಮಾಂಡ ಅಥವಾ ನೀಹಾರಿಕೆ (ಗ್ಯಾಲಕ್ಸಿ). 'ಮಿಲ್ಕೀ ವೇ' ಪದ ಲ್ಯಾಟಿನ್'ನ 'ವಿಯಾ ಲಾಕ್ಟಿಯಾ' ಎಂದರೆ “ಹಾಲಿನ ವೃತ್ತ” (ಪದದ ಅನುವಾದ) ಎಂದಾಗುತ್ತದೆ. ಇದರ ಹೆಸರು ಕ್ಷೀರ/ಹಾಲು ಎಂಬ ಪದ ("ಮಿಲ್ಕಿ") ಆಕಾಶದಲ್ಲಿ ಅದರ ಗೋಚರತೆಯನ್ನು ನೋಡಿ, ಮಂದವಾಗಿ ಪ್ರಜ್ವಲಿಸುವ ಅದರ ಪಟ್ಟಿಯನ್ನು ಅನುಸರಿಸಿ ಕ್ಷೀರಪಥ ಅಥವಾ ಹಾಲು-ದಾರಿ/ಹಾಲಿನ ದಾರಿ, ಎಂಬ ಹೆಸರು ಬಂದಿದೆ.
  • ಭಾರತದಲ್ಲಿ ಅದನ್ನು “ಆಕಾಶಗಂಗೆ” ಎಂದು ಕರೆಯುವರು. ಆಕಾಶದಿಂದ ಭೂಮಿಗೆ ಇಳಿಯುತ್ತಿರುವ ಗಂಗಾನದಿ /ಗಂಗಾಮಾತೆ ಎಂದು ಪ್ರಾಚೀನರು ಭಾವಿಸಿದ್ದರು. ಪೌರಾಣಿಕ ಕಥೆಯಲ್ಲಿ ಗಂಗೆಯು ವಿಷ್ಣುಸ್ವರೂಪ ತ್ರಿವಿಕ್ರಮನ ಪಾದದಲ್ಲಿ ಹುಟ್ಟಿ ಸ್ವರ್ಗದಲ್ಲಿ ಹರಿಯುವಳು. ನಂತರ ಬ್ರಹ್ಮನ ಕಲಶಸೇರಿ, ಕೈಲಾಸ ವಾಸಿಯಾದ ಶಿವನ ಜಟೆಯಲ್ಲಿದ್ದು, ನಂತರ ಭಗೀರಥನ ಪ್ರಯತ್ನದಿಂದ ಭೂಮಿಗೆ ಹರಿಯುವಳು. ಹಾಗಾಗಿ ಭಾರತದ ಪ್ರಾಚೀನರು ಈ ನಕ್ಷತ್ರಲೋಕದ ಬೆಳಕಿನ ಪಟ್ಟಿಯನ್ನು ಆಕಾಶಗಂಗೆ ಎಂದು ಕರೆದರು.[]
  • ಭೂಮಿಯಿಂದ, ಕ್ಷೀರಪಥವು ಒಂದು ಬಾಗಿದ ಪಟ್ಟಿಯಂತೆ ಕಾಣುವುದು. ಏಕೆಂದರೆ ಅದು ತಟ್ಟೆಯ ಆಕಾರದಲ್ಲಿದ್ದು ನಾವು ಅದನ್ನು ಅದರೊಳಗಿಂದಲೇ ಒಂದು ಬದಿಯಿಂದ ನೋಡುತ್ತೇವೆ. ಗೆಲಿಲಿಯೊ ಗೆಲಿಲಿ ಮೊದಲು 1610 ರಲ್ಲಿ ತನ್ನ ದೂರದರ್ಶಕದ ಮೂಲಕ ನೋಡಿ, ಇವು ಪ್ರತ್ಯೇಕ ನಕ್ಷತ್ರಗಳ ಬೆಳಕಿನ ಪಟ್ಟಿ ಎಂದು ಹೇಳಿದನು. 1920 ರವರೆಗೆ ಖಗೋಳಶಾಸ್ತ್ರಜ್ಞರು ಕ್ಷೀರಪಥವು ವಿಶ್ವದ ಎಲ್ಲಾ ನಕ್ಷತ್ರಗಳನ್ನು ಒಳಗೊಂಡಿದೆ ಎಂದು ಭಾವಿಸಿದ್ದರು. 1920 ರಲ್ಲಿ ಖಗೋಳಶಾಸ್ತ್ರಜ್ಞ ಹ್ಯಾರ್ಲೊ ಶೇಪ್ಲಿ ಮತ್ತು ಹೆಬರ್ ಕುರ್ಟಿಸ್ ನಡುವಿನ ದೊಡ್ಡ ಮಟ್ಟದ ಚರ್ಚೆಯ ನಂತರ, ಎಡ್ವಿನ್ ಹಬಲ್‍ನು ಕ್ಷೀರಪಥ ಅನೇಕ ಬ್ರಹ್ಮಾಂಡಗಳಲ್ಲಿ ಕೇವಲ ಒಂದು ಎಂದು ತೋರಿಸಿದನು. ಅತ್ಯಂತ ಬ್ರಹ್ಮಾಂಡದಲ್ಲಿ ಸುಮಾರು 200 ಶತಕೋಟಿ ಸಂಖ್ಯೆಯ ಬ್ರಹ್ಮಾಂಡಗಳಿವೆಯೆಂದು ಸಾದಿಸಿದನು.
  • ಸೌರವ್ಯೂಹವು ಓರಿಯನ್'ನೀಹಾರಕದ ತೋಳಿನಲ್ಲಿ (ಆರ್ಮ್), ನಮ್ಮ ಬ್ರಹ್ಮಾಂಡವಾದ ಕ್ಷೀರಪಥ ಅಥವಾ ಆಕಾಶಗಂಗೆಯ ಕೇಂದ್ರದಿಂದ 26,000 (30000 ಎಂದೂ ಹೇಳುವರು) ಜ್ಯೋತಿರ್ವರ್ಷಗಳ ದೂರದಲ್ಲಿದೆ. (8.0-8.6 ಕೆಪಿಸಿ ಪಾರ್ಸೆಕ್ಸ್) ದೂರದಲ್ಲಿರುವನು. ಅವನು ಓರಿಯನ್ ನೀಹಾರಿಕೆಯ ತೋಳಿನ ಒಳಬದಿಯಲ್ಲಿದ್ದಾನೆ. ಆಕಾಶಗಂಗೆಯು ನಮಗೆ ವೃತ್ತರೂಪವಾಗಿ ತೋರುವುದರಿಂದ ಸೌರಮಂಡಲವು ಅದರಲ್ಲಿ ಕೇಂದ್ರದ ಸಮೀಪವೇ ಇರಬೇಕೆಂದು ನಿರ್ಧರಿಸಿದ್ದಾರೆ.ಇದ್ದಲಿ ಆಕಾರದ ಆಕಾಶಗಂಗೆಯು ಕೇಂದ್ರತಲದಿಂದ 100 ಜ್ಯೋತಿವರ್ಷಗಳಷ್ಟು೧ ಎತ್ತರದಲ್ಲಿದೆ ಎಂದು ಊಹಿಸಿದ್ದಾರೆ.
  • ಕ್ಷೀರಪಥದಲ್ಲಿ ಸುಮಾರು 200 ರಿಂದ 400 ಶತಕೋಟಿ ನಡುವೆ ನಕ್ಷತ್ರಗಳು ಇವೆ; ಮತ್ತು ಅದು ಕನಿಷ್ಠ 100 ಶತಕೋಟಿ (ಬಿಲಿಯನ್) ಗ್ರಹಗಳನ್ನು ಹೊಂದಿದೆ. ನಿಖರತೆಯು ವಿಶೇಷವಾಗಿ ದೂರದಲ್ಲಿರುವ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳನ್ನು ಅವಲಂಬಿಸಿದೆ.

[](ಸೂರ್ಯನ ಸ್ಥಾನ:[೬]]]

PIA19341-MilkyWayGalaxy-SpiralArmsData-WISE-20150603-ಆಕಾಶಗಂಗೆ ಬ್ರಹ್ಮಾಂಡದ ಬಾಹುಗಳ ವಿವರ

ಆಕಾಶಗಂಗೆಯಲ್ಲಿ ಸೌರಮಂಡಲದ ಜನನ

[ಬದಲಾಯಿಸಿ]
Catseyeandmore -ನಾಲ್ಕು ವಿವಿಧ ಗ್ರಹ ಜ್ಯೋತಿರ್ಮೇಘ
  • ಸೌರವ್ಯೂಹವು, ಆಕಾಶಗಂಗೆಯ ಒಂದು ಪ್ರದೇಶದ ದೊಡ್ಡ ಆಣ್ವಿಕ ಮೋಡದ (molecular cloud) ಗುರುತ್ವ ಕುಸಿತದಿಂದ 4,568 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು. ಈ ಆರಂಭಿಕ ಮೋಡ ಅನೇಕ ಜ್ಯೋತಿರ್ವರ್ಷಗಳ ವಿಸ್ತಾರವಿದ್ದು ಬಹುಶಃ ಹಲವಾರು ನಕ್ಷತ್ರಗಳಿಗೆ ಜನ್ಮನೀಡಿತು. ಆಣ್ವಿಕ ಮೋಡಗಳು ವಿಶಿಷ್ಟವಾಗಿರುವಂತೆ, ಈ ಒಂದು ಮೋಡ ಅಲ್ಪ ಹೀಲಿಯಂ, ಬಹಳಷ್ಟು ಜಲಜನಕವನ್ನು ಮತ್ತು ನಕ್ಷತ್ರಗಳ ಹಿಂದಿನ ಪೀಳಿಗೆಗೆ ಕೂಡಿಕೊಂಡ ಭಾರವಾದ ಮೂಲವಸ್ತುಗಳನ್ನು ಒಳಗೊಂಡಿತ್ತು, ಸಣ್ಣ ಪ್ರಮಾಣದ, ಪೂರ್ವ ಸೌರ ಜ್ಯೋತಿರ್ಮೇಘ (pre-solar nebula) ಎಂದು ಹೆಸರುಳ್ಳ ಇದು ಸೌರವ್ಯೂಹ ಆಯಿತು. ಹೀಗೆ ಪತನಗೊಂಡ, ಕೋನೀಯ ಆವೇಗದ ಸಂರಕ್ಷಣೆಯ ಕಾರಣ ಅದು ವೇಗವಾಗಿ ತಿರುಗಲು ಆರಂಭಿಸುತ್ತದೆ. ಹೆಚ್ಚಿನ ದ್ರವ್ಯರಾಶಿಯು ಸಂಗ್ರಹವಾದ ಮಧ್ಯಭಾಗವು ಸುತ್ತಲಿನ ಚಪ್ಪಟೆಯಾಕಾರದ ಡಿಸ್ಕಿಗಿಂತ ಹೆಚ್ಚೆಚ್ಚು ಬಿಸಿಯಾಯಿತು. ಸಂಕುಚಿಸುತ್ತಿರುವ ಜ್ಯೋತಿರ್ಮೇಘ (ನೆಬ್ಯೂಲ) ವೇಗವಾಗಿ ತಿರುಗಲು, ಸಂಕೋಚನ ಕ್ರಿಯೆಗೆ ಒಳಗಾದ ಅದು ಸುಮಾರು 200 ಖ.ಮಾ.(1.5 ಲಕ್ಷ ಕಿ.ಮೀ.) ವ್ಯಾಸದ ಒಂದು ಭ್ರೂಣ-ಗ್ರಹ ತಟ್ಟೆ(ಪ್ರೊಟೊಪ್ಲಾನಟರಿ ಡಿಸ್ಕ್) ಆಯಿತು. ಕೇಂದ್ರದಲ್ಲಿ ದಟ್ಟವಾದ ಬಿಸಿ ಭ್ರೂಣ-ತಾರೆ (ಪ್ರೋಟೊಸ್ಟಾರ್) ರೂಪುಗೊಂಡಿತು. ಈ ದ್ರವ್ಯ ರಾಶಿಯಳ್ಳ ಅಗಾಧ ವಿಶಾಲ ತಟ್ಟೆಯಿಂದ (ಡಿಸ್ಕ್ನಿಂದ) ವೃದ್ಧಿಗೊಂಡು ಗ್ರಹಗಳು ರೂಪುಗೊಳ್ಳುತ್ತವೆ, ಇದರಲ್ಲಿ ಧೂಳು ಮತ್ತು ಅನಿಲಗಳು ಗುರುತ್ವಾಕರ್ಷಣದಿಂದ ಮತ್ತೂ ದೊಡ್ಡ ಕಾಯಗಳನ್ನು ನಿರ್ಮಿಸುವ ಸಲುವಾಗಿ ಒಟ್ಟುಗೂಡಿಸಲು ಪರಸ್ಪರ ಆಕರ್ಷಿಸಿತು. ಭ್ರೂಣ-ಗ್ರಹಗಳು (ಪ್ರೋಟೋಪ್ಲ್ಯಾನೆಟ್) ಆರಂಭಿಕ ಸೌರವ್ಯೂಹದಲ್ಲಿ ನೂರಾರು ಅಸ್ತಿತ್ವದಲ್ಲಿದ್ದವು ಎಂದು ಊಹಿಸಬಹುದು, ಆದರೆ ಅವೆಲ್ಲವೂ, ಗ್ರಹಗಳು, ಕುಬ್ಜ ಗ್ರಹಗಳು, ಮತ್ತು ಉಳಿದ ಸಣ್ಣ ಕಾಯಗಳನ್ನು ಬಿಟ್ಟು ವಿಲೀನಗೊಂಡಿತು ಅಥವಾ ನಾಶವಾದವು.

ಆರಂಭಿಕ ಸೌರವ್ಯೂಹದಲ್ಲಿ

[ಬದಲಾಯಿಸಿ]
  • ಅವುಗಳು (ಬಿಸಿ ಭ್ರೂಣ-ತಾರೆ) ಹೆಚ್ಚಿನ ಕುದಿಯುವ ಬಿಂದುಗಳಿದ್ದುದರಿಂದ , ಕೇವಲ ಲೋಹಗಳು ಮತ್ತು ಸಿಲಿಕೇಟ್’ಗಳು ಸೂರ್ಯನ ಹತ್ತಿರ ಬೆಚ್ಚಗಿನ ಒಳ ಸೌರವ್ಯೂಹದಲ್ಲಿ ಘನ ರೂಪದಲ್ಲಿ ಕಂಡುಬರುತ್ತವೆ, ಮತ್ತು ಅಂತಿಮವಾಗಿ ಬುಧ, ಶುಕ್ರ, ಭೂಮಿ ಮತ್ತು ಮಂಗಳ ಕಲ್ಲಿನ ನೈಸರ್ಗಿಕ ಗ್ರಹಗಳನ್ನು ರೂಪಿಸಿದೆ. ಏಕೆಂದರೆ ಲೋಹದ ಅಂಶಗಳನ್ನು ಕೇವಲ ಸೌರ ಜ್ಯೋತಿರ್ಮೇಘವು ಸ್ವಲ್ಪವೇ ಭಾಗ ಒಳಗೊಂಡಿತ್ತು, ಘನರೂಪಿ ಗ್ರಹಗಳು ದೊಡ್ಡ ಗಾತ್ರದಲ್ಲಿ ಬೆಳೆಯಲು ಸಾಧ್ಯವಾಗಿಲ್ಲ. ಹಿಮ ರೇಖೆಗಿಂತ ಮೀರಿ ರೂಪುಗೊಂಡ ದೈತ್ಯ ಗ್ರಹಗಳು (ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್), ಮತ್ತಷ್ಟುದೂರ ಸರಿದವು. ಮಂಗಳ ಮತ್ತು ಗುರುಗ್ರಹಗಳ ಕಕ್ಷೆಯ ನಡುವಿನ ಬಿಂದುವು ಹಿಮದ ಸಂಯುಕ್ತಗಳು ಘನವಸ್ತುವಾಗಿ ಉಳಿಯಲು ಸಾಕಷ್ಟು ತಂಪಾದ ಸ್ಥಿತಿ ಇದೆ. ಈ ಗ್ರಹಗಳ ರೂಪುಗೊಂಡ ಮಂಜಿನ ಪ್ರಮಾಣ ಒಳಭಾಗದಲ್ಲಿರುವ ಗಟ್ಟಿಗ್ರಹಗಳಲ್ಲಿದ್ದ ಲೋಹಗಳು ಮತ್ತು ಸಿಲಿಕೇಟ್’ಗಳ ಪ್ರಮಾಣಕ್ಕಿಂತ ಬಹಳ ಹೆಚ್ಚಿಗೆ ಇತ್ತು. ಜಲಜನಕ ಮತ್ತು ಹೀಲಿಯಂ ಹಗುರವಾದ ಮತ್ತು ವಿಪುಲ ಅಂಶಗಳ ದೊಡ್ಡ ವಾಯುಮಂಡಲವನ್ನು ಹಿಡಿಯಲು ಬೃಹತ್ತಾಗಿ ಬೆಳೆಯಿತು. ಗ್ರಹಗಳು ಪಡೆಯದೆ ಉಳಿದ ಅವಶೇಷಗಳು ಕ್ಷುದ್ರಗ್ರಹ ಪಟ್ಟಿ ಕೈಪರ್ ಪಟ್ಟಿ, ಇಂತಹ ಮತ್ತು ಊರ್ಟ್'ಮೋಡ ಪ್ರದೇಶಗಳಲ್ಲಿ ಸಂಗ್ರಹಗೊಂಡವು.(‘ನೈಸ್’ರವರ ಮಾದರಿಯಲ್ಲಿ ಈ ಪ್ರದೇಶಗಳ ಸೃಷ್ಟಿ ಮತ್ತು ಹೊರ ಗ್ರಹಗಳು ವಿವಿಧ ಸ್ಥಾನಗಳಲ್ಲಿ ಹೇಗೆ ರೂಪುಗೊಂಡವು ಮತ್ತು ವಿವಿಧ ಗುರುತ್ವದವು ಪರಸ್ಪರ ವರ್ತಿಸಿದವು, ಈ ಮೂಲಕ ಅವುಗಳು ಪ್ರಸಕ್ತ ಕಕ್ಷೆಗಳಲ್ಲಿ ವಲಸೆಬರಲು ಸಾಧ್ಯವಾಯಿತು ಎಂಬ ವಿವರಣೆ ಇದೆ.)

ಸೂರ್ಯನ ಜನನ

[ಬದಲಾಯಿಸಿ]
ಕ್ಷೀರಪಥದಲ್ಲಿ ಸೌರವ್ಯೂಹ ಉಪಸ್ಥಿತವಿರುವ ಜಾಗ; ಹಳದಿ ಬಣ್ಣದ ವೃತ್ತ ಸೂರ್ಯನ (ಸೌರವ್ಯೂಹದ) ಪ್ರದಕ್ಷಿಣ-ಕಕ್ಷೆ
  • ಹೀಗೆ ಘನೀಕರಿಸಿದ 50 ದಶಲಕ್ಷ ವರ್ಷಗಳ ಒಳಗೆ, ಜಲಜನಕದ ಸಾಂದ್ರತೆಯು ಭ್ರೂಣ ಸೂರ್ಯನ (ಪ್ರೋಟೊಸ್ಟಾರ್) ಮಧ್ಯಭಾಗದಲ್ಲಿ ವೇಗೋತ್ಕರ್ಷದ ಸಮ್ಮಿಳನ ಆರಂಭಿಸಲು ಸಾಕಷ್ಟು ಒತ್ತಡ ಹೆಚ್ಚಿಸಿಕೊಂಡಿತು. ತಾಪಮಾನ, ಪ್ರತಿಕ್ರಿಯಾತ್ಮಕ ದರ, ಒತ್ತಡ, ಇವು ಸಾಂದ್ರತೆಯ ವೇಗಕ್ಕೆ ಸರಿಹೊಂದಿತು ಇದರಿಂದ ದ್ರವಸ್ಥಿತಿ ಸಮತೋಲನ ಸಾಧಿಸುವ ತನಕ ಹೆಚ್ಚಾಗುತ್ತದೆ. ಉಷ್ಣ ಒತ್ತಡ ಗುರುತ್ವಾಕರ್ಷಣೆಗೆ ಸರಿಗಟ್ಟಿತು. ಈ ಹಂತದಲ್ಲಿ, ಸೂರ್ಯನು ಮುಖ್ಯ ಅನುಕ್ರಮ ತಾರೆಯಾದನು. ಮುಖ್ಯ ಅನುಕ್ರಮ ಹಂತ, ಆದಿಯಿಂದ ಹಿಡಿದು, ಕೊನೆಯ ಹಂತದವರೆಗೆ ಸೂರ್ಯನಿಗೆ 10 ಶತಕೋಟಿ ವರ್ಷಗಳ ಸಮಯ ಹಿಡಿದಿದೆ. ಮತ್ತೆ ಇದಕ್ಕೆ ಹೋಲಿಸಿದರೆ ಪೂರ್ವದ ಇತರ ಎಲ್ಲಾ ಹಂತಗಳಿಗೆ ಅಳಿದುಳಿದ ಅವನ ಜೀವನ ಸೇರಿ ಸುಮಾರು ಎರಡು ಶತಕೋಟಿ ವರ್ಷಗಳ ಅವಧಿ ಹಿಡಿದಿದೆ. ಸೂರ್ಯನಿಂದ ಹೊರಟ ಸೌರ ಮಾರುತವು ಹೆಲಿಯೋಸ್ಫಿಯರ್’ನ್ನು ಸೃಷ್ಟಿಸಿತು; ಮತ್ತು ಅಳಿದುಳಿದ ಅನಿಲ ಮತ್ತು ಧೂಳನ್ನು ಪ್ರೊಟೊಪ್ಲಾನಟರಿ ಡಿಸ್ಕ್’ನಿಂದ ಅಂತರತಾರಾ ಬಾಹ್ಯಾಕಾಶಕ್ಕೆ ತಳ್ಳುತ್ತದೆ. ಇಲ್ಲಿಗೆ ದೂರ ಗ್ರಹಗಳ ರಚನೆಯ ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಸೂರ್ಯ ಈಗ ಪ್ರಮುಖಾನುಕ್ರಮ ಅನುಕ್ರಮ ಜೀವನದಲ್ಲಿ ವೃದ್ಧಿಸಿ ಪ್ರಕಾಶಮಾನವಾಗುತ್ತದೆ. ಆರಂಭಿಕ ಅದರ ಪ್ರಕಾಶ ಇಂದಿನದರ 70% ಆಗಿತ್ತು.

[] []

ಆಕಾಶಗಂಗೆ ಮತ್ತು ವಿಶ್ವಅಥವಾ ಜಗತ್ತು

[ಬದಲಾಯಿಸಿ]

ನಾವು ಬ್ರಹ್ಮಾಂಡದ ಬಗೆಗೆ ವೈಜ್ಞಾನಿಕವಾಗಿ ತೀಳಿದುಕೊಳ್ಳುವುದಾದರೆ , ಮೊದಲು ವಿಶ್ವ ಅಥವಾ ಈ ಜಗತ್ತು (ಯೂನಿವರ್ಸ್). ಬ್ರಹ್ಮಾಂಡ ಅಥವಾ ನೀಹಾರಕ (=ಗ್ಯಾಲಾಕ್ಸಿ), ನಮ್ಮ ಬ್ರಹ್ಮಾಂಡ ಅಥವಾ ಆಕಾಶ ಗಂಗೆ (ಮಿಲ್ಕೀ ವೇ) ಇವುಗಳ ವೈಜ್ಞಾನಿಕ ವ್ಯಾಖ್ಯೆ ಅಗತ್ಯ. ಬ್ರಹ್ಮಾಂಡವನ್ನು ವಿಶ್ವ ಅಥವಾ ಜಗತ್ತು ಎಂದು ತಪ್ಪು ತಿಳಿಯುವ ಸಾಧ್ಯತೆ ಇದೆ. ನಾವು ಹಾಲಿ ಇರುವ ಈ ಬ್ರಹ್ಮಾಂಡವು ವಿಶಾಲ ವಿಶ್ವದಲ್ಲಿ ಇರುವ ಅನೇಕ ಕೋಟಿ ಬ್ರಹ್ಮಾಂಡಗಳಲ್ಲಿ ಒಂದು. ವಿಶ್ವವೆಂದರೆ ಹಾಗೆ ಲಕ್ಷ-ಕೋಟಿ ಬ್ರಹ್ಮಾಂಡಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡ ಊಹಿಸಲೂ ಅಗದಷ್ಟು ದೊಡ್ಡ ಜಗತ್ತು. ರಾತ್ರಿ ಆಕಾಶ ಶುಭ್ರ ವಾಗಿದ್ದಾಗ ಮೇಲಕ್ಕೆ ನೋಡಿದರೆ ಒಂದು ತಿಳಿ ಬಿಳಿಯ ಮೋಡದ ಸೆಲೆ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಿದಂತೆ ಕಾಣುವುದು. ಅದು ವಾಸ್ತವವಾಗಿ ಮೋಡವಲ್ಲ ಅದೇ ನಮ್ಮ ಆಕಾಶ ಗಂಗೆಯೆಂಬ ಬ್ರಹ್ಮಾಂಡದ (ಗ್ಯಾಲಾಕ್ಷಿ) ಪಾರ್ಶ್ವ ನೋಟ. ನಾವು ಅದರೊಳಗೇ ಒಂದು ಬದಿಯಲ್ಲಿದ್ದು ಅದನ್ನೂ ಮತ್ತು ವಿಶ್ವದಲ್ಲಿ ತುಂಬಿರುವ ಅನೇಕ ಬ್ರಹ್ಮಾಂಡಗಳನ್ನೂ ನೋಡುತ್ತಿದ್ದೇವೆ. ದೂರದಲ್ಲಿರುವ ಬ್ರಹ್ಮಾಂಡಗಳು ನಮಗೆ ಬರಿಕಣ್ಣಿಗೆ ತಾರೆಗಳಂತೆ ಕಾಣುವುವು.

fish-eye-mosaic shot at Paranal Observatory,Chile). ಪ್ರಕಾಶಮಾನ ಕಾಯ ಗುರುಗ್ರಹ, ಧನುರಾಶಿಯಲ್ಲಿದೆ.(ಆಕಾಶಗಂಗೆಯ) ಬ್ರಹ್ಮಾಂಡದ ಉತ್ತರ ಕೆಳಗಿನ ಕಡೆ ಇದೆ.

ಆಕಾಶಗಂಗೆಯ ಮೇಲುನೋಟ

[ಬದಲಾಯಿಸಿ]
ಧನುರಾಶಿಯ ದಿಕ್ಕಿನಲ್ಲಿ ಕಾಣುವ, ಆಕಾಶಗಂಗೆಯ ಒಂದು ನೋಟ. ಈ ಬ್ರಹ್ಮಾಂಡದ ಕೇಂದ್ರವೂ ಕಾಣುವುದು. ಶುಭ್ರ ಆಕಾಶವಿದ್ದಾಗ ನೆವೇಡಾದ ಬ್ಲ್ಯಕ್' ರಾಕ್'ಮರುಭೂಮಿಯಿಂದ ತೆಗೆದುದು ಬಲಭಾಗದಲ್ಲಿ ಕಾಣುವ ಕಾಂತಿಯುತ ವಸ್ತು 'ಗುರು ಗ್ರಹ'
  • "ಕ್ಷೀರಪಥ" ಆಕಾಶದಲ್ಲಿ ವ್ಯಾಪಕ ಕಮಾನುವಿನಂತೆ ಬಿಳಿ ಬೆಳಕಿನ ಒಂದು ಮಸುಕಾದ ಅಗಲ ಪಟ್ಟಿಯಂತೆ 30 ಡಿಗ್ರಿ ಯಷ್ಟು ಅಗಲ ಕಾಣುವುದು. ಇಡೀ ಆಕಾಶದಲ್ಲಿ ನಮ್ಮ ಬರಿ ಕಣ್ಣಿಗೆ ಕಾಣುವ ಎಲ್ಲಾ ನಕ್ಷತ್ರಗಳು ಕ್ಷೀರಪಥದ ಭಾಗವಾಗಿದ್ದರೂ ಸಹ, ಈ ಅಗಲ ಪಟ್ಟಿಯಲ್ಲಿ ಬಗೆಹರಿಸಲಾಗದ ನಕ್ಷತ್ರ ಸಂಚಯವಿದೆ. ಇದರಿಂದ ಗ್ಯಾಲಕ್ಸಿಯ ಸಮತಲದ ದಿಕ್ಕಿನಲ್ಲಿ ಮತ್ತು ಇತರ ವಸ್ತುಗಳಿಂದ, (ಕೃಷ್ಣ ಪ್ರದೇಶಗಳಿಂದ) ಬೆಳಕಿನ ಪ್ರಭೆ ಹುಟ್ಟುತ್ತದೆ. ಕ್ಷೀರಪಥದ ಒಳಗಿನ ಗ್ರೇಟ್ ರಿಫ್ಟ್ ಮತ್ತು ಕೋಲ್’ಸ್ಯಾಕ್’(ಕಪ್ಪುಪರದೆ) ಪಟ್ಟಿಯು ದೂರದ ನಕ್ಷತ್ರಗಳ ಬೆಳಕನ್ನು ಅಂತರತಾರಾ ಧೂಳು ತಡೆಹಿಡಿಯುತ್ತದೆ. ಆ ಪ್ರದೇಶಗಳು ಕ್ಷೀರಪಥ ಅಡ್ಡವಿರುವುದರಿಂದ ಅಸ್ಪಷ್ಟವಾಗಿದೆ. ಅದನ್ನು ಆಕಾಶದ ಪ್ರದೇಶದಲ್ಲಿ ‘ತಡೆಗಟ್ಟಿದ’(Zone of Avoidance) ವಲಯ ಕರೆಯಲಾಗುತ್ತದೆ.
  • ಕ್ಷೀರಪಥ ಕಡಿಮೆ ಪ್ರಮಾಣದ ಮೇಲ್ಮೈ ಹೊಳಪು ಹೊಂದಿದೆ. ಅದರ ಗೋಚರತೆ ಬಹಳವಾಗಿ ಚಂದ್ರನ ಬೆಳಕಿನ ಪ್ರಭಾವದಿಂದ ಅಥವಾ ಮಾಲಿನ್ಯದಿಂದ ಕಡಿಮೆಯಾಗಿರಬಹುದು. ಆಕಾಶದಲ್ಲಿ ಕ್ಷೀರಪಥವನ್ನು ಕಾಣಲು ಪ್ರತಿ ಚದರ ಆರ್ಕ್’ಸೆಕೆಂಡಿಗೆ 20.2 ಪ್ರಮಾಣದ ಕತ್ತಲೆ ಅಗತ್ಯವಿದೆ. ಯಾವಾಗ ಸೀಮಿತಗೊಳಿಸುವ ಪ್ರಮಾಣದ ಸುಮಾರು +5,1 ಅಥವಾ +6,1 ಪ್ರಮಾಣದ ಕತ್ತಲೆಯಲ್ಲಿ ವಿವರವಾಗಿ ಇದು ಗೋಚರಿಸಲಿದೆ. ಈ ಕ್ಷೀರಪಥ ವನ್ನು ಯಾವುದೇ ಉಜ್ಜ್ವಲವಾದ ಬೆಳಕನ್ನು ಹೊಂದಿದ ನಗರ ಅಥವಾ ಉಪನಗರದ ಸ್ಥಳದಿಂದ ನೋಡಲು ಕಷ್ಟ ಆದರೆ ಚಂದ್ರನು ಕ್ಷಿತಿಜದ ಕೆಳಗಿದ್ದಾಗ ಗ್ರಾಮೀಣ ಪ್ರದೇಶದಲ್ಲಿ ನೋಡಿದಾಗ ಎದ್ದು ಕಾಣುತ್ತದೆ.
  • ಭೂಮಿಯಿಂದ ನೋಡಿದಲ್ಲಿ, ಕ್ಷೀರಪಥದ ಗ್ಯಾಲಕ್ಸಿಯ ವಲಯದಲ್ಲಿ 30 ನಕ್ಷತ್ರಪುಂಜಗಳು ಒಳಗೊಂಡಿರುವ (ಗೋಚರವಾಗುವಷ್ಟು) ವಿಸ್ತೀರ್ಣವನ್ನು ಆಕಾಶದಲ್ಲಿ ಆಕ್ರಮಿಸಿದೆ. ಕ್ಷೀರಪಥದ ಕೇಂದ್ರ ಧನು ರಾಶಿ (ಸ್ಯಾಗಿಟ್ಯಾರಿಯಸ್) ನಕ್ಷತ್ರಪುಂಜದ ಸಮೂಹದ ದಿಕ್ಕಿನಲ್ಲಿ ಇದೆ. ಕ್ಷೀರಪಥದ ಮಸುಕಾದ ಪಟ್ಟಿ ಇಲ್ಲಿ ಪ್ರಕಾಶಮಾನವಾಗಿ ಕಾಣುವುದು. ಧನು ರಾಶಿ ಬಳಿ ಬೆಳಕಿನ ಗ್ಯಾಲಕ್ಸಿಯು ಕೇಂದ್ರವನ್ನು ಬಳಸಿ ಔರಿಗಾ ನಕ್ಷತ್ರ ಪುಂಜದ ಹತ್ತಿರ ಕಾಣಿಸಿಕೊಳ್ಳುತ್ತದೆ. ಆ ಕ್ಷೀರಪಥದ ಪಟ್ಟಿ, ನಂತರ ಮುಂದುವರಿದು ಸ್ಥೂಲವಾಗಿ ಸಮಾನ ಅರ್ಧಗೋಳಗಳಾಗಿ ಪುನಹ ಧನು ರಾಶಿಯಲ್ಲಿ ಕಾಣಿಸಿಕೊಳ್ಳುತ್ತದೆ. ಕ್ಷೀರಪಥದ ಪಟ್ಟಿ ರಾತ್ರಿಯ ಆಕಾಶವನ್ನು ಸ್ಥೂಲವಾಗಿ ಎರಡು ಸಮಾನ ಅರ್ಧಗೋಳಗಳಾಗಿ ವಿಭಜಿಸುತ್ತದೆ. .
  • ಗ್ಯಾಲಕ್ಸಿಯ ಸಮತಳವು ಕ್ರಾಂತಿವೃತ್ತದ, ಭೂಮಿಯ ಕಕ್ಷೆಯ ಸಮತಳಕ್ಕೆ 60 ಡಿಗ್ರಿ ಓರೆಯಲ್ಲಿದೆ. ಬಾಹ್ಯಾಕಾಶದ ಸಮಭಾಜಕ ವೃತ್ತ ಸಂಬಂಧಿತವಾದ, ಇದು ಉತ್ತರದ ದೂರದ ಕಸಿಯೋಪಿಯಾ ನಕ್ಷತ್ರಪುಂಜದವರೆಗೆ ಮುಂದುವರೆಯುತ್ತದೆ, ಮತ್ತು ದೂರದ ದಕ್ಷಿಣದ ನಕ್ಷತ್ರಪುಂಜ ಕ್ರಕ್ಸ್' ದವರೆಗೆ ಹಾದುಹೋಗುತ್ತದೆ. ಇದು ಭೂಮಿಯ ವಿಷುವದ್ರೇಖೆಗೆ ಮತ್ತು ಕ್ರಾಂತಿವೃತ್ತದ ರೇಖೆಗೆ ಓರೆಯಾಗಿರುವುದನ್ನು ತೋರಿಸುತ್ತದೆ. ಉತ್ತರ ಗ್ಯಾಲಕ್ಸಿಯು 12h 49m (situated at right ascension 12h 49m), ಬಲಕ್ಕೆ ಓರೆಯಾಗಿ ಸ್ಥಾಪಿತವಾಗಿದೆ. ಗ್ಯಾಲಕ್ಸಿಯ ಉತ್ತರ ಧ್ರುವ ಬೇರೆನಿಸೆಸ್ β ಕಾಮೆ ಬೆರೇನಿಸಿಸೆಸ್ ಬಳಿ, ಬಲಕ್ಕೆ + 27.4 ಓರೆಯಾಗಿದೆ. ಮತ್ತು ಗ್ಯಾಲಕ್ಸಿಯ ದಕ್ಷಿಣ ಧ್ರುವದ ಹತ್ತಿರ ಸ್ಕಲ್ಪ್ ಟೋರಿಸ್ ಇದೆ. ಈ ಹೆಚ್ಚಿನ ವ್ಯತ್ಯಾಸದ, ಕಾರಣ ರಾತ್ರಿ ವರ್ಷದ ಕೆಲವು ಕಾಲ, ಕ್ಷೀರಪಥದ ಪಟ್ಟಿ ಕೆಳಬಾಗದಲ್ಲಿ ಅಥವಾ ಆಕಾಶದಲ್ಲಿ ಹೆಚ್ಚು ಎತ್ತರದಲ್ಲಿ ಕಾಣಬಹುದು. ಭೂಮಿಯ ಸುಮಾರು 65 ಡಿಗ್ರಿ ಮೇಲ್ಮೈ ಉತ್ತರದಲ್ಲಿ ಅಥವಾ 65 ಡಿಗ್ರಿ ದಕ್ಷಿಣದಲ್ಲಿ ನೋಡುವ ವೀಕ್ಷಕರಿಗೆ, ಕ್ಷೀರಪಥ ದಿನಕ್ಕೆ ಎರಡು ಬಾರಿ ತಲೆಯಮೇಲೆ ನೇರವಾಗಿ ಹಾದು ಹೋಗುವುದು.[]

[]

ಗಾತ್ರ ಮತ್ತು ದ್ರವ್ಯರಾಶಿ

[ಬದಲಾಯಿಸಿ]
ಸೂಚನೆ : M☉ = ಸೂರ್ಯನ ತೂಕ ಅಥವಾ ದ್ರವ್ಯರಾಶಿ {=M☉ = (1.98855±0.00025)×1030 ಕೆ.ಜಿ};ಮುಂದೆ ಬರುವ ಬ್ರಹ್ಮಾಂಡದ ತೂಕವನ್ನೆಲ್ಲಾ ಸೂರ್ಯನ ತೂಕದಲ್ಲಿ ಹೇಳಿದೆ.ಸೂರ್ಯನ 10ರಷ್ಟು ತೂಕ ಹೇಳಲು:10 M☉-ಎಂದರೆ M=ಮಾಸ್=ದ್ರವ್ಯರಾಶಿ; ☉=ಇದು ಸೂರ್ಯನ ಖಗೋಲ ಚಿನ್ಹೆ/ಗುರುತು. 4.5×10ಘಾತ+10 = 4.5ನ್ನು 10ಸೊನ್ನೆಗಳಿರುವ ಅಂಕೆಯಿಂದ ಗುಣಿಸಬೇಕು.ಸೂರ್ಯನ ತೂಕ ಭೂಮಿಗೆ ಹೋಲಿಸಿದರೆ ಸುಮಾರು:ಸೂರ್ಯ=(M⊕)ಭೂಮಿಯ 3,32,946 ರಷ್ಟು.
ದೂರವನ್ನು ಹೇಳಲು ಜ್ಯೋತಿರ್ವರ್ಷಲೆಕ್ಕದಲ್ಲಿ ಹೇಳಿದೆ. ಜ್ಯೋತಿರ್ವರ್ಷ-ನೋಡಿ.
  • ಸೂರ್ಯನ ಆವಾಸವಾಗಿರುವ, ಪಟ್ಟಿ ಬಾಹುಗಳುಳ್ಳ ಈ ಕ್ಷೀರಪಥವು ಅಥವಾ ಆಕಾಶಗಂಗೆ ಅಂದಾಜು 100,000-120,000 ಜ್ಯೋತಿರ್ವರ್ಷಗಳ ವ್ಯಾಸವನ್ನು ಹೊಂದಿರಬಹುದೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ 150,000-180,000 ಜ್ಯೋತಿರ್ವರ್ಷಗಳ ವ್ಯಾಸವಿರವ ಸಾಧ್ಯತೆಯೂ ಇದೆ. ಇದ್ದಲಿಯಾಕಾರದ ಇದರ ದಪ್ಪವು ಕೇಂದ್ರದಲ್ಲಿ ಸುಮಾರು10,000 ಜ್ಯೋತಿರ್ವರ್ಷವು. ಕ್ಷೀರಪಥ ಅಥವಾ ಆಕಾಶಗಂಗೆ ಒಂದು ಸುರುಳಿಯಾಕಾರದ ಗ್ಯಾಲಕ್ಸಿ. ಕ್ಷೀರಪಥವು 100-400 ಶತಕೋಟಿ ನಕ್ಷತ್ರಗಳನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ.
  • ತಾರೆಗಳು ಸೂರ್ಯನೂ ಸೇರಿ ಮತ್ತು ಅನಿಲಗಳು ಸುಮಾರು ಪ್ರತಿ ಸೆಕೆಂಡಿಗೆ 220 (240೧) ಕಿಲೋಮೀಟರ್ ವೇಗದಲ್ಲಿ ಗ್ಯಾಲಕ್ಸಿಯ ಕೇಂದ್ರವನ್ನು (ಸೂರ್ಯನ ಕಕ್ಷೆಯ ಲೆಖ್ಖದಲ್ಲಿ) ಪರಿಭ್ರಮಣ ಮಾಡುತ್ತವೆ. ಹೀಗೆ ಸೂರ್ಯನು ಒಂದು ಸುತ್ತು ಪರಿಭ್ರಮಣ ಮಾಡುವ ಕಾಲ 24 (25೧)ಕೋಟಿ (240 ಮಿಲಿಯನ್) ವರ್ಷಗಳು. ಒಟ್ಟಾರೆಯಾಗಿ ಕ್ಷೀರಪಥದ ಬಹಿರ್ಗೆಲ್ಯಾಕ್ಸೀಯ ಚೌಕಟ್ಟುಗಳು ತಾರೆಗಳು, ಕಾಯಗಳು, ಅನಿಲಮೋಡಗಳು ಸಂಬಂಧಿಸಿದಂತೆ ಸೆಕೆಂಡಿಗೆ ಸುಮಾರು 600 ಕಿ.ಮೀ ವೇಗದಲ್ಲಿ ಈ ಕ್ಷೀರಪಥ ಕೇಂದ್ರಕ್ಕೆ ಪರಿಭ್ರಮಣದಲ್ಲಿ ಚಲಿಸುತ್ತಿವೆ.
  • ಜೊತೆಯ ಸ್ಥಳೀಯ ಗುಂಪುಗಳಲ್ಲಿ ಕ್ಷೀರಪಥವು ವ್ಯಾಸದಲ್ಲಿ ಎರಡನೇ ಅತಿದೊಡ್ಡ ಬ್ರಹ್ಮಾಂಡ. ಇದರ ತಾರೆಗಳ ತಾಟು (ಡಿಸ್ಕ್) ಸುಮಾರು 100,000 ಜ್ಯೋತಿರ್ವರ್ಷ (30 ಕೆಪಿಸಿ) ಮತ್ತು ದಪ್ಪ ಸರಾಸರಿ 1,000 ಜ್ಯೋತಿರ್ವರ್ಷ (0.3 ಕೆಪಿಸಿ) ವಿಶಾಲತೆಯುಳ್ಳದ್ದು. ಉಂಗುರದ ತರಹದ ತಾರಾ-ತಂತು ಕ್ಷೀರಪಥದ ಅಂಚಿನಲ್ಲಿ ಸುತ್ತಲೂ ಹೊದಿಕೆಯಂತೆ ಆವರಿಸಿಕೊಂಡಿದೆ ಅಥವಾ ಸುತ್ತಿಕೊಂಡಿದೆ. ಅದು ವಾಸ್ತವವಾಗಿ ಕ್ಷೀರಪಥಕ್ಕೆ (ಗ್ಯಾಲಕ್ಸಿಗೆ) ಸೇರಿದ ತಾರೆಗಳೇ ಇರಬಹುದು. ಹಾಗಿದ್ದಲ್ಲಿ, ಅದರ ವ್ಯಾಸ 150,000-180,000 ಜ್ಯೋತಿರ್ವರ್ಷಗಳಾಗುವುದು.
  • ಕ್ಷೀರಪಥದ ದ್ರವ್ಯರಾಶಿಯ ಅಂದಾಜುಗಳು ವಿಧಾನ ಮತ್ತು ಬಳಸಲ್ಪಟ್ಟ ಮಾಹಿತಿಗಳನ್ನು ಅವಲಂಬಿಸಿ, ಬದಲಾಗುತ್ತವೆ. ಕ್ಷೀರಪಥದ ಒಟ್ಟು ದ್ರವ್ಯರಾಶಿ, ಅಂದಾಜು, 5.8×1011 ಸೌರಗಳಾಗುತ್ತದೆ(M☉). ಅದು ಆಂಡ್ರೊಮಿಡಾ ನಕ್ಷತ್ರಪುಂಜಕ್ಕಿಂತ ಸ್ವಲ್ಪ ಕಡಿಮೆ. ಏಕೆಂದರೆ ಬಹಳ ದೀರ್ಘ ಅಡಿಪಾಯದ ತಲರೇಖೆಯನ್ನು ಬಳಸಿಕೊಂಡ ಅಳತೆಗಳು 2009 ರಲ್ಲಿ ಕ್ಷೀರಪಥದ ಹೊರ ತುದಿಯಲ್ಲಿ ನಕ್ಷತ್ರಗಳ ವೇಗವರ್ಧನೆ 254 ಕಿ.ಮೀ /ಸೆ, ಕಂಡುಬಂದಿದೆ. ಕಕ್ಷಕ ವೇಗವು ಕಕ್ಷೀಯ ತ್ರಿಜ್ಯದ ಒಳಗಿನ ಒಟ್ಟು ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ. ಇದರಿಂದ, ಈ ಕ್ಷೀರಪಥವು, ಸರಿಸುಮಾರು 160,000 ಜ್ಯೋತಿರ್ವರ್ಷದ ವ್ಯಾಸ (49 ಕೆಪಿಸಿ) ಹೊಂದಿರುವುದನ್ನು ಸೂಚಿಸುತ್ತದೆ. ಇದು ಅಂದಾಜಿಗಿಂತ ಹೆಚ್ಚು, ಆಂಡ್ರೊಮಿಡಾದ ಒಟ್ಟು ದ್ರವ್ಯರಾಶಿಯ 7×1011 M☉, 160,000 ly (49 kpc) ಕೇಂದ್ರಕ್ಕೆ ಸಮಾನವಾಗಿರುವ ಸಾಧ್ಯತೆ ಇದೆ. 2010 ರಲ್ಲಿ, ಪ್ರಭಾವಲಯದ ನಕ್ಷತ್ರಗಳ ರೇಡಿಯಲ್ ವೇಗದ ಮಾಪನದಂತೆ 80 ಕಿಲೊಪಾರ್ಸೆಕ್ಸ್’ ಅಂದರೆ 7×1011 M☉. ಆಗುವುದು. 2014 ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಇಡೀ ಕ್ಷೀರಪಥದ ಒಟ್ಟು ದ್ರವ್ಯರಾಶಿ 8.5×1011 M☉,(ಮಾಸ್☉ಸೂರ್ಯ), ಎಂದು ಅಂದಾಜಿಸಲಾಗಿದೆ. ಅದು ಆಂದ್ರೊಮಿಡಾ (ದೇವಯಾನಿ/ದ್ರೌಪದೀ) ಬ್ರಹ್ಮಾಂಡದ ಅರ್ಧದಷ್ಟು ದ್ರವ್ಯರಾಶಿಯನ್ನು ಹೊಂದಿದೆ.
  • ಕ್ಷೀರಪಥದ ಬಹುತೇಕ ದ್ರವ್ಯರಾಶಿಯು (ಡಾರ್ಕ್ ಮ್ಯಾಟರ್), ಕೃಷ್ಣದ್ರವ್ಯವೆಂಬ ಅಪರಿಚಿತವಾದ ಮತ್ತು ಅದೃಶ್ಯ ರೂಪದಲ್ಲಿರುವ, ಅದು ಇತರ ಪದಾರ್ಥಗಳೊಂದಿಗೆ ಗುರುತ್ವಾಕರ್ಷಣ ಪರಸ್ಪರ ಕಲನಕ್ರಿಯೆಯಲ್ಲಿರುವುದು ಕಂಡುಬರುತ್ತದೆ. ಒಂದು ಕೃಷ್ಣದ್ರವ್ಯದ ಕುಳಿಯು ಬ್ರಹ್ಮಾಂಡದ (ಗ್ಯಾಲಕ್ಸಿ) ಕೇಂದ್ರದಿಂದ ನೂರು ಕಿಲೊಪಾರ್ಸೆಕ್ಸ್’ಗೂ ಮೀರಿದ ದೂರದವರೆಗೂ ತುಲನಾತ್ಮಕವಾಗಿ ಸಮಾನವಾಗಿ ಹರಡಿರುವುದು. ಕ್ಷೀರಪಥದ ವೈಜ್ಞಾನಿಕ ಮಾದರಿಗಳ ಪ್ರಕಾರ ಅದರ ಒಟ್ಟು ಸಾಮೂಹಿಕ 1–1.5×1012 M☉. ಎಂದು. ಇತ್ತೀಚಿನ ಅಧ್ಯಯನಗಳು ದ್ರವ್ಯರಾಶಿಯು 4.5×1012 M☉ ಅಷ್ಟು ದೊಡ್ಡದಾಗಿರುವುದೆಂದು ಹೇಳುತ್ತದೆ, ಮತ್ತು ಸಣ್ಣ ಪ್ರಮಾಣದ್ದು ಒಟ್ಟು 0.8×1012M☉ ಇರುವುದಾಗಿ ಸೂಚಿಸುತ್ತದೆ.
ESO -ಇಡೀ ದಕ್ಷಿಣ ಮತ್ತು ಉತ್ತರ ಖಗೋಳ ಒಳಗೊಂಡ ಈ ಭವ್ಯವಾದ 360 ಡಿಗ್ರಿ ವಿಹಂಗಮ ಚಿತ್ರ, ನಮ್ಮ ಪುಟ್ಟ ನೀಲಿ ಗ್ರಹವನ್ನು(ಭೂಮಿ) ಸುತ್ತುವರಿದಿರುವ ಕಾಸ್ಮಿಕ್'ಖಭೌತ ದೃಶ್ಯವನ್ನು ತೋರಿಸುತ್ತದೆ. ಈ ವೈಭವದ ತಾರಾಮಂಡಲ(starscape) ಅತ್ಯಂತ ಉನ್ನತ ದರ್ಜೆಯ ಮೂರು ಚಿತ್ರಗಳಲ್ಲಿ ಮೊದಲ ಬೃಹತ್'ಬ್ರಹ್ಮಾಂಡ ವಿಸ್ತರಣೆ(GigaGalaxy zoom) ಯೋಜನೆಯಲ್ಲಿ ಒಳಗೊಂಡಿತ್ತು.

ತಾತ್ಪರ್ಯ

[ಬದಲಾಯಿಸಿ]
  • ಕ್ಷೀರಪಥದ ಎಲ್ಲಾ ನಕ್ಷತ್ರಗಳ ಒಟ್ಟು ದ್ರವ್ಯರಾಶಿಯು 4.6×1010 M☉ ಮತ್ತು 6.43×1010M☉ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ನಕ್ಷತ್ರಗಳ ಜೊತೆಗೆ, ಅಂತರತಾರಾ ಅನಿಲ ಸಹ ಇದೆ, 90% ಜಲಜನಕ ಮತ್ತು 10% ದ್ರವ್ಯರಾಶಿಯ ಹೀಲಿಯಂ,ಇದೆ. ಇದರಲ್ಲಿ ಎರಡು ಭಾಗದಷ್ಟು ಹೈಡ್ರೋಜನ್ ಪರಮಾಣು ರೂಪದಲ್ಲಿ ಮತ್ತು ಆಣ್ವಿಕ ಜಲಜನಕ ರೂಪದಲ್ಲಿ ಉಳಿದ ಮೂರನೇ ಒಂದು ಭಾಗ ಇರುವುದು ಕಂಡುಬರುವುದು. ಈ ಅನಿಲ ಒಟ್ಟು 10% ಮತ್ತು 15% ನಡುವೆ ಸಮಾನವಾಗಿರುತ್ತದೆ. ಗ್ಯಾಲಕ್ಸಿಯ ನಕ್ಷತ್ರಗಳ ಒಟ್ಟು ದ್ರವ್ಯರಾಶಿಯು, ಅಂತರತಾ ಧೂಳು, ಅನಿಲದ ಒಟ್ಟು ದ್ರವ್ಯರಾಶಿಯ 1%ನಷ್ಟು ಹೆಚ್ಚುವರಿ ಇರುವುದು.[][]

[][೧೦]

ಕ್ಷೀರಪಥದ ಆಕರಗಳು

[ಬದಲಾಯಿಸಿ]
  • ಕ್ಷೀರಪಥದಲ್ಲಿ ಸುಮಾರು 200 ರಿಂದ 400 ಶತಕೋಟಿ ನಡುವೆ ನಕ್ಷತ್ರಗಳು ಇವೆ; ಮತ್ತು ಅದು ಕನಿಷ್ಠ 100 ಶತಕೋಟಿ (ಬಿಲಿಯನ್) ಗ್ರಹಗಳು ಹೊಂದಿದೆ. ನಿಖರತೆಯು ವಿಶೇಷವಾಗಿ ದೂರದಲ್ಲಿರುವ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳನ್ನು ಅವಲಂಬಿಸಿದೆ. ಕಾರಣ ಅವುಗಳ ಪತ್ತೆ ಕಷ್ಟ.ಏಕೆಂದರೆ ಅವು ಸೂರ್ಯನಿಂದ ತುಲನಾತ್ಮಕವಾಗಿ 300 ಜೈತಿರ್ವರ್ಷಕ್ಕೂ(90 ಪಿಸಿ), ಹೆಚ್ಚು ದೂರದವು. ನೆರೆಯ ಆಂಡ್ರೊಮಿಡಾದ ಗ್ಯಾಲಕ್ಸಿ ಅಂದಾಜು ಒಂದು ಟ್ರಿಲಿಯನ್ (1012) ನಕ್ಷತ್ರಗಳನ್ನು ಒಳಗೊಂಡಿದೆ. ನಕ್ಷತ್ರಗಳ ನಡುವೆ ಜಾಗವನ್ನು ತುಂಬುವುದು ‘’ಅಂತರತಾರಾ ಮಾಧ್ಯಮ’’. ಎಂಬ ಅನಿಲ ಮತ್ತು ಧೂಳು. ತಟ್ಟೆಯಲ್ಲಿ ಅಡಗಿದೆ. ಈ ತಟ್ಟೆಯು (ಬ್ರಹ್ಮಾಂಡದ ತಟ್ಟೆ-ಡಿಸ್ಕ್) ನಕ್ಷತ್ರಗಳಿಗೆ ತುಲನಾತ್ಮಕವಾಗಿ ಕನಿಷ್ಠ ದೂರದ ತ್ರಿಜ್ಯಹೊಂದಿದೆ. ಅನಿಲ ಪದರದ ದಪ್ಪ, ತಂಪು ಅನಿಲದ ವಿಷಯದಲ್ಲಿ ನೂರಾರು ಬೆಳಕಿನ ವರ್ಷಗಳಾದರೆ, ಬೆಚ್ಚಗಿನ ಅನಿಲದ್ದು ಸಾವಿರಾರು ಬೆಳಕಿನ ವರ್ಷಗಳಷ್ಟು.
  • ಕ್ಷೀರಪಥದ ನಕ್ಷತ್ರಗಳ ತಟ್ಟೆಯ (ಡಿಸ್ಕ್) ಅಂಚು ಯಾವುದೇ ನಿರ್ದಿಷ್ಟ ಮೊನಚು ತುದಿ ಹೊಂದಿಲ್ಲ. ಅಲ್ಲಿ ವಿರಳವಾಗಿ ನಕ್ಷತ್ರಗಳು ಇವೆ. ಬದಲಿಗೆ ಕ್ಷೀರಪಥದ ಕೇಂದ್ರದಿಂದ, ನಕ್ಷತ್ರಗಳ ಸಾಂದ್ರತೆಯು ಕ್ರಮೇಣ ಕಡಿಮೆಯಾಗುತ್ತದೆ. ಕೇಂದ್ರದಿಂದ ಸುಮಾರು 40,000 ಬೆಳಕಿನ ವರ್ಷಗಳಷ್ಟು (13 ಕೆಪಿಸಿ) ತ್ರಿಜ್ಯದ ನಂತರ ನಕ್ಷತ್ರಗಳ ಸಂಖ್ಯೆ ಕಡಿಮೆಯಾಗುತ್ತದೆ. ಕಾರಣ ತಿಳಿದುಬಂದಿಲ್ಲ. ಗ್ಯಾಲಕ್ಸಿಯ ತಟ್ಟೆಯ(ಡಿಸ್ಕ್) ಸುತ್ತಮುತ್ತಲಿನ ಗೊಂಚಲಿನ ವೃತ್ತಾಕಾರದ-ಗ್ಯಾಲಕ್ಸಿಯ ನಕ್ಷತ್ರಗಳ ಕುಳಿ ಬಾಹ್ಯದ ವರೆಗೂ ವಿಸ್ತರಿಸುತ್ತದೆ. ಆದರೆ ಅದು ಎರಡು ನೀಹಾರಕಗಳ(ಗ್ಯಾಲಕ್ಸಿಯ-ಬ್ರಹ್ಮಾಂಡಗಳ) ಉಪಗ್ರಹಗಳ ಕಕ್ಷೆಗೆ ಸೀಮಿತವಾಗಿದೆ. ದೊಡ್ಡ ಮತ್ತು ಸಣ್ಣ ಆಂತರ ತಾರಾಮೇಘಗಳ ಹತ್ತಿರದ ಅಂತರ (ಮೆಗೆಲ್ಯಾನಿಕ್ ಕ್ಲೌಡ್ಸ್) ಬ್ರಹ್ಮಾಂಡದ (ಗ್ಯಾಲಕ್ಸಿ) ಕೇಂದ್ರದಿಂದ 180,000. ಬೆಳಕಿನ ವರ್ಷಗಳಷ್ಟು (55 ಕೆಪಿಸಿ). ಕ್ಷೀರಪಥದ ಸಮಗ್ರ ದೃಶ್ಯ-ಪ್ರಮಾಣ ಸುಮಾರು -20,9 ರಷ್ಟು ದೃಶ್ಯ-ಪ್ರಮಾಣಎಂದು ಅಂದಾಜಿಸಲಾಗಿದೆ.[೧೧]
  • ಜನವರಿ 2013, ಕೆಪ್ಲರ್ ಬಾಹ್ಯಾಕಾಶ ವೀಕ್ಷಣಾಲಯ ಹೊಂದಿರುವ ಐದು ಗ್ರಹದ ಸ್ಟಾರ್ ಕೆಪ್ಲರ್ -32 ವ್ಯವಸ್ಥೆಯ ಅಧ್ಯಯನದ ಪ್ರಕಾರ ಕ್ಷೀರಪಥವು, 100-400 ಶತಕೋಟಿ ಗ್ರಹಗಳನ್ನು ಹೊಂದಿದೆ. ಪರಿಣಾಮವಾಗಿ ಪ್ರತಿ ನಕ್ಷತ್ರ ಕನಿಷ್ಠ ಒಂದು ಗ್ರಹವನ್ನು ಹೊಂದಿದೆ. ನವೆಂಬರ್ 4, 2013,ರಲ್ಲಿ ಖಗೋಳಶಾಸ್ತ್ರಜ್ಞರು, ಕ್ಷೀರಪಥ ಒಳಗೆ ಸೂರ್ಯನ ತರಹದ ನಕ್ಷತ್ರಗಳನ್ನು ಮತ್ತು ಕೆಂಪು ಕುಬ್ಜಗಳನ್ನು ವಾಸಯೋಗ್ಯ ವಲಯಗಳಲ್ಲಿ, ಹಲವಾರು ಭೂಮಿ ಗಾತ್ರದ 40 ಶತಕೋಟಿ ಗ್ರಹಗಳು ಸುತ್ತುತ್ತವೆ ಎಂಬುದನ್ನು, ಕೆಪ್ಲರ್ ಬಾಹ್ಯಾಕಾಶ ಮಿಷನ್ ಮಾಹಿತಿ ಆಧಾರದಿಂದ ವರದಿಮಾಡಿದ್ದಾರೆ. ವಿಜ್ಞಾನಿಗಳ ಪ್ರಕಾರ, ಹತ್ತಿರದ ಇಂತಹ ಭೂಮಿಯ ಗಾತ್ರದ ಗ್ರಹಗಳು 12 ಜ್ಯೋತಿರ್ವರ್ಷಗಳ ದೂರದಲ್ಲಿ ಇರಬಹುದು. ಅವು ಅನಿಲ ದೈತ್ಯಕ್ಕಿಂತ ಹಲವಾರು ಪಟ್ಟು ಹೆಚ್ಚು ಇರಬಹುದು. ಜೊತೆಗೆ ಸೌರವ್ಯೂಹದ ಆಚೆಗೆ ಧೂಮಕೇತುಗಳು ಸಹ ಇರಬಹುದು, ಕ್ಷೀರಪಥದಲ್ಲಿ ಸಹ ಇವು ಸಾಮಾನ್ಯವಾಗಿರಬಹುದು. ಎಂದು ಭಾವಿಸಿದ್ದಾರೆ.[೧೨]
ಕ್ಷೀರಪಥದ ಸುರುಳಿಯಾಕಾರದ ವಿನ್ಯಾಸ- ಕಲಾವಿದನ ಕಲ್ಪನೆ; ಎರಡು ಪ್ರಮುಖ ನಾಕ್ಷತ್ರಿಕ ಬಾಹುಗಳು ಮತ್ತು ಕೇಂದ್ರದಲ್ಲಿ ದಂಡ-ಪಟ್ಟಿ(updated - annotated)
  • ಕ್ಷೀರಪಥವು ಪಟ್ಟಿ (ಸಲಾಕಿ-ದಂಡ)ಆಕಾರದ ಕೇಂದ್ರವನ್ನು ಹೊಂದಿದೆ. ಅದು ಕೇಂದ್ರದ ಮುದ್ರಿಕೆಯು, ಸುತ್ತಲೂ ಅನಿಲ, ಧೂಳು ಮತ್ತು ನಕ್ಷತ್ರಗಳನ್ನು ಒಳಗೊಂಡಿದೆ. ಅನಿಲ, ಧೂಳು ಮತ್ತು ನಕ್ಷತ್ರಗಳ ಸುರುಳಿ ತೋಳಿನ ರಚನೆಗಳು ಲಾಗರಿದಮ್’ ನಿಯಮದಮತೆ ಆಯೋಜಿಸಲಾಗಿದೆ. ಕ್ಷೀರಪಥದ ಒಳಗೆ ದ್ರವ್ಯರಾಶಿಯ ವಿತರಣೆಯು ತುಲನಾತ್ಮಕವಾಗಿ ಸಡಿಲವಾಗಿ ಸುತ್ತಿಕೊಂಡ ತೋಳುಗಳು, ಪಟ್ಟಿಕೇಂದ್ರದ ಸುರಳಿಯ ಗೆಲಕ್ಸಿಗಳನ್ನು ವಿವರಿಸುವ (ಎಸ್.ಬಿಸಿ) ಹಬಲ್’ಬ್ರಹ್ಮಾಂಡದ ವರ್ಗೀಕರಣ ಕ್ರಮವನ್ನು ಹೋಲುತ್ತದೆ. ಅದು ಕೇವಲ ಸುರಳಿ ಬ್ರಹ್ಮಾಂಡವಲ್ಲ. 1990 ರಲ್ಲಿ ಖಗೋಳಶಾಸ್ತ್ರಜ್ಞರು ಮೊದಲು ಸಾಮಾನ್ಯ ಸುರುಳಿಯಾಕಾರದ ಬದಲಿಗೆ ಪಟ್ಟಿಕೇಂದ್ರದ ಸುರಳಿಯ ಕ್ಷೀರಪಥದ ಗ್ಯಾಲಕ್ಸಿ ಎಂದು ಶಂಕಿಸಿದ್ದರು. 2005ರಲ್ಲಿ ಅವರ ಅನುಮಾನ ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕದ ಮೂಲಕ ಗಮನಿಸಿದ ನಂತರ ದೃಢೀಕರಿಸಲ್ಪಟ್ಟಿತು. ಹಿಂದೆ ಅಂದುಕೊಂಡದಕ್ಕಿಂತ ಕ್ಷೀರಪಥದ ಕೇಂದ್ರ-ಪಟ್ಟಿಯು ದೊಡ್ಡದು ಎಂದು ತೋರಿಸಿದರು.

ಕ್ಷೀರಪಥದ ಕೇಂದ್ರ

[ಬದಲಾಯಿಸಿ]
  • ಮುಖ್ಯ ಲೇಖನ: ಗ್ಯಾಲಕ್ಸಿಯ ಸೆಂಟರ್
  • ಸೂರ್ಯನು ಕ್ಷೀರಪಥದ ಕೆಂದ್ರದಿಂದ 26,000-28,000 [[ಜ್ಯೋತಿರ್ವರ್ಷಗಳ (8.0-8.6 ಕೆಪಿಸಿ) ದೂರದಲ್ಲಿದ್ದಾನೆ. ಈ ದೂರ ಮೌಲ್ಯವನ್ನು ಜ್ಯಾಮಿತೀಯ ಆಧಾರಿತ ವಿಧಾನಗಳನ್ನು ಬಳಸಿಕೊಂಡು ಅಥವಾ ಅಂದಾಜು ವ್ಯಾಪ್ತಿಯಲ್ಲಿ ವಿವಿಧ ಮೌಲ್ಯಗಳು ನೀಡುವ, ವಿವಿಧ ತಂತ್ರಗಳನ್ನು, ಪ್ರಮಾಣಿತ ಮಾರ್ಗದರ್ಶಿ ಸೂತ್ರಗಳ ಸೇವೆ ಆಯ್ದಕೊಂಡು, ಖಗೋಳೀಯ ವಸ್ತುಗಳನ್ನು (ದೂರವನ್ನು) ಅಳೆಯುವ ಸಾಧನಗಳ ಮೂಲಕ ಅಂದಾಜಿಸಲಾಗಿದೆ. ಒಳ ಭಾಗದಲ್ಲಿ ಕೆಲವು ಕೆಪಿಸಿ (ಸುಮಾರು 10,000 ಜ್ಯೋತಿರ್ವರ್ಷಗಳ ತ್ರಿಜ್ಯ)ಗಳ ವರೆಗೆ ‘ಉಬ್ಬು’ ಎಂಬ ಪ್ರದೇಶ ಸ್ಥೂಲವಾಗಿ ಗೋಳಾಕಾರದಲ್ಲಿರುವಷ್ಟು ಆಕಾರದಲ್ಲಿ ಇದ್ದು, ಅಲ್ಲಿ ಹೆಚ್ಚಾಗಿ ಹಳೆಯ ನಕ್ಷತ್ರಗಳ ದಟ್ಟ ಸಾಂದ್ರತೆ ಇದೆ. ಇದು ಕ್ಷೀರಪಥಗಳು ವಿಲೀನವಾಗುವಾಗ ಅವುಗಳ ನಡುವೆ ಘರ್ಷಣೆಯ ಕಾರಣ ರೂಪುಗೊಂಡ ಒಂದು “ಉಬ್ಬು’(ಗುಬುಟ). ಆಗ ಕ್ಷೀರಪಥಗಳ ಕೇಂದ್ರದಲ್ಲಿ ಪಟ್ಟಿ ರೂಪುಗೊಂಳ್ಲುತ್ತದೆ; ಮತ್ತು ಅದರ ಪ್ರಚ್ಛನ್ನ -ಪಟ್ಟಿಯಿಂದ ಈ ಉಬ್ಬು ರೂಪುಗೊಂಞಳ್ಳುತ್ತದೆ.
ಗ್ಯಾಲಕ್ಸಿಯ ಕೇಂದ್ರದಲ್ಲಿ ಬೃಹತ್ ಕಪ್ಪು ಕುಳಿ: ಕಲಾವಿದ ಅನಿಸಿಕೆ.
  • ಕ್ಷೀರಪಥದ ಕೇಂದ್ರದ (ಸ್ಯಾಗಿಟ್ಯಾರಿಯಸ್ ಎ ಸ್ಟಾರ್) ನಿಂದ ‘ರೇಡಿಯೋ ಸ್ಯಾಗಿಟ್ಯಾರಿಯಸ್ (ಎ)’ ಎಂಬ ತೀವ್ರ ರೇಡಿಯೋ ಮೂಲ(ಕಿರಣ) ಗುರುತಿಸಲ್ಪಟ್ಟಿದೆ. ಕೇಂದ್ರದ ಸುತ್ತಲಿನ ವಸ್ತುಗಳ ಚಲನೆಯು ಸ್ಯಾಗಿಟ್ಯಾರಿಯಸ್ (ಎ’(ಬ್ರಹ್ಮಾಂಡ ಕೇಂದ್ರದಲ್ಲಿ) ಭಾರಿ, ಸಾಂದ್ರೀಕೃತ ವಸ್ತುಗಳ ಆಶ್ರಯ ಎಂದು ಸೂಚಿಸುತ್ತದೆ. ದ್ರವ್ಯರಾಶಿಯ ಈ ಕೇಂದ್ರೀಕರಣವು ಅಲ್ಲಿ ಅತಿಶಕ್ತಿಶಾಲಿ ಬೃಹತ್ ಕಪ್ಪು ಕುಳಿ ಇರುವುದನ್ನು ಸುಚಿಸುತ್ತದೆ. ಅಲ್ಲಿಯ ಅಂದಾಜು (ಎಸ್'ಎಮಬಿಎಚ್) 4.1-4.5 ಸೂರ್ಯನ ಒಟ್ಟು ದ್ರವ್ಯರಾಶಿಯ (ಸೌರ ತೂಕದ) ದಶಲಕ್ಷ ದಷ್ಟು ಇರಬಹುದು. ಎಸ್'ಎಮ್'ಬಿಎಚ್ ಸಂಚಯ ದರ ಒಂದು ಸಕ್ರಿಯ ಕ್ಷೀರಪಥದ ನ್ಯೂಕ್ಲಿಯಸ್’ನಲ್ಲಿ ಇರುವುದು ಸಾಮಾನ್ಯ. ಅದು ಸುಮಾರು 1×10−5 M☉y−1 ಎಂದು ಅಂದಾಜಿಸಲಾಗಿದೆ. ಅವಲೋಕನಗಳು ಸಾಮಾನ್ಯ ಗ್ಯಾಲಕ್ಸಿಗಳ ಮಧ್ಯದಲ್ಲಿ ಎಸ್’ಎಮ್’ಬಿಎಚ್ ಇದೆ ಎಂದು ಸೂಚಿಸುತ್ತದೆ.[೧೩][೧೪][೧೫][೧೬]

ಪ್ರಭಾವಲಯ

[ಬದಲಾಯಿಸಿ]
  • ಕ್ಷೀರಪಥದ ತಟ್ಟೆ (ಡಿಸ್ಕ್) ಹಳೆಯ ನಕ್ಷತ್ರಗಳಿಂದ ಮತ್ತು ತಾರಾ-ಗುಚ್ಛಗಳಿಂದ ಸುತ್ತುವರಿದ ಗೋಳಾಕಾರದ ಪ್ರಭಾವಲಯವನ್ನು ಹೊಂದಿದೆ. ಅದರ 90% ಭಾಗ ಕ್ಷೀರಪಥದ ಕೇಂದ್ರದಿಂದ 100,000 ಜ್ಯೋತಿರ್ವರ್ಷಗಳ (30 ಕೆಪಿಸಿ) ಒಳಗೆ ಇದೆ. ಆದಾಗ್ಯೂ, ಕೆಲವು ವೃತ್ತಾಕಾರದ ತಾರಾಪುಂಜಗಳು ಕ್ಷೀರಪಥದ ಕೇಂದ್ರದಿಂದ ಹೆಚ್ಚು ದೂರದಲ್ಲಿ ಅಂದರೆ 200,000 ಜ್ಯೋತಿರ್ವರ್ಷಗಳ ದೂರದಲ್ಲಿರುವುದೂ ಕಂಡುಬಂದಿವೆ, ಅವು ಉದಾಹರಣೆಗೆ ಪಾಲ್ 4 ಮತ್ತು ಎ.ಎಮ್.1 ಎಂಬ ಗುಚ್ಚಗಳು. ಕ್ಷೀರಪಥದ ಸಮೂಹಗಳ ಸುಮಾರು 40% ತಾರಾಪುಂಜಗಳು ಕ್ಷೀರಪಥವು ತಿರುಗುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಅರ್ಥ,ವಕ್ರಗತಿಯ ಕಕ್ಷೆಗಳನ್ನು ಹೊಂದಿವೆ. ನಕ್ಷತ್ರದ ಸುತ್ತ ಕಕ್ಷೆಯಲ್ಲಿ ಗ್ರಹ ಸುತ್ತುವ ಕ್ರಮಕ್ಕೆ ವ್ಯತಿರಿಕ್ತವಾಗಿ ನಕ್ಷತ್ರಪುಂಜಗಳು ವೃತ್ತಾಕಾರದ ಅಥವಾ ಅಂಡಾಕಾರದ, ಬ್ರಹ್ಮಾಂಡಕ್ಕೆ ಅಪಸವ್ಯ (ವಕ್ರಗತಿ) ಕಕ್ಷೆಗಳನ್ನು ಹೊಂದಿರಲೂಬಹುದು.[೧೭]
  • ಉತ್ತರ ಆಕಾಶದಲ್ಲಿ ವಿವರಣೆಗೆ ಸಿಲುಕದ ಒಂದು ದೊಡ್ಡ ನಕ್ಷತ್ರಗಳ ಚದುರಿದ ಸಮೂಹ, ಕ್ಷೀರಪಥದ ಸುರುಳಿಯ ಭುಜದ ಸಮತಲದ ಲಂಬರೇಕೆಯ ಹತ್ತಿರ ಕಂಡುಬಂದಿದೆ. ಇದಕ್ಕೆ ಪ್ರಸ್ತಾವಿತ ವ್ಯಾಖ್ಯಾನವು: 'ಒಂದು ಕುಬ್ಜ ನೀಹಾರಕ (ಚಿಕ್ಕ ಬ್ರಹ್ಮಾಂಡ) ಕ್ಷೀರಪಥದಲ್ಲಿ ವಿಲೀನಹೊಂದುತ್ತಿರುವ ಸಾಧ್ಯತೆ', ಎಂದು ತೀರ್ಮಾನಿಸಲಾಗಿದೆ. ಈ ನಕ್ಷತ್ರಪುಂಜಕ್ಕೆ ತಾತ್ಕಾಲಿಕವಾಗಿ ‘ಕನ್ಯಾರಾಶಿಯ ನಾಕ್ಷತ್ರಿಕ ಸ್ಟ್ರೀಮ್’, ಎಂದು ಹೆಸರಿಡಲಾಗಿದೆ, ಮತ್ತು ಅದು ಕನ್ಯಾರಾಶಿ ದಿಕ್ಕಿನಲ್ಲಿ 30,000 ಜ್ಯೋತಿರ್ವರ್ಷಗಳ (9 ಕೆಪಿಸಿ) ದೂರದಲ್ಲಿ ಕಂಡುಬಂದಿದೆ.[೧೮]

ಅನಿಲರೂಪದ ಪ್ರಭಾವಲಯ

[ಬದಲಾಯಿಸಿ]
  • ನಾಕ್ಷತ್ರಿಕ ಪ್ರಭಾವಲಯದ ಜೊತೆಗೆ ಬಿಸಿ ಅನಿಲದ ಒಂದು ದೊಡ್ಡ ಪ್ರಮಾಣದ ಅನಿಲ ಪ್ರಭಾವಲಯದ ಇರುವಿಕೆಯನ್ನು 'ಚಂದ್ರ ಎಕ್ಸ್ ರೆ ವೀಕ್ಷಣಾಲಯ (ಅಬ್ಸರ್ವೇಟರಿ)', 'ಎಕ್ಸ್’ಎಮ್’ಎಮ್(ಘಿಒಒ)-ನ್ಯೂಟನ್ ಮತ್ತು ಸುಜುಕಿ' ಸಾಕ್ಷ್ಯಾಧಾರ ಒದಗಿಸಿದೆ. ಈ ಪ್ರಭಾವಲಯ ಮತ್ತಷ್ಟು ಹೆಚ್ಚು ದೊಡ್ಡ ಮತ್ತು ಸಣ್ಣ ಮೆಗೆಲ್ಯಾನಿಕ್ (ಚಲಿಸುವ ಅಂತರ್’ಮೇಘ) ಮೋಡಗಳಿಗೆ ನಿಕಟವಾಗಿ ನೂರಾರು ಸಾವಿರ ಬೆಳಕಿನ ವರ್ಷಗಳ ದೂರಕ್ಕೆ ವಿಸ್ತರಿಸುತ್ತದೆ. ಈ ಬಿಸಿ ಅನಿಲರೂಪದ ಪ್ರಭಾವಲಯ ಕ್ಷೀರಪಥದ ಒಟ್ಟು ತೂಕಕ್ಕೆ ಸುಮಾರು ಸಮನಾಗಿರುತ್ತದೆ. ಈ ಪ್ರಭಾವಲಯ ಅನಿಲದ ಉಷ್ಣಾಂಶ 1 ದಶಲಕ್ಷ ಹಾಗು 2.5 ದಶಲಕ್ಷ ಕೆಲ್ವಿನ್ ಇದೆ.
  • ದೂರದ ಬ್ರಹ್ಮಾಂಡಗಳ ಅವಲೋಕನಗಳು ಇವು ಕೆಲವೇ ಶತಕೋಟಿ ವರ್ಷದವಳಾಗಿದ್ದಾಗ ವಿಶ್ವದ ಆರನೇ ಒಂದು ಭಾಗ ಸಾಮಾನ್ಯ ವಸ್ತುವಾದ ಕೃಷ್ಣದ್ರವ್ಯ (ಬ್ಯಾರಿಯೊನಿಕ್ ಮ್ಯಾಟರ್) ಇತ್ತು ಎಂದು ಸೂಚಿಸುತ್ತದೆ. ಆದರೆ ಕ್ಷೀರಪಥದಂತಹ ಹತ್ತಿರದ ಗೆಲಕ್ಸಿಗಳ ವೀಕ್ಷಿಣೆ ಆಧರಿಸಿ ಆ ಸಾಮಾನ್ಯ ವಸ್ತು ಈಗಿನ ವಿಶ್ವದಲ್ಲಿ ಸುಮಾರು ಅರ್ಧದಷ್ಟು ಮಾತ್ರಾ ಇರುವುದಾಗಿ ಪರಿಗಣಿಸಲ್ಪಟ್ಟಿದೆ. ಒಂದು ವೇಳೆ ಪ್ರಭಾವಲಯದ ದ್ರವ್ಯರಾಶಿ ಕ್ಷೀರಪಥದ ಒಟ್ಟು ದ್ರವ್ಯರಾಶಿಗೆ ಹೋಲಿಸಲು ಸಾದ್ಯವಾದರೆ, ಕ್ಷೀರಪಥದ ಕಾಣೆಯದ (ಇನ್ನು ಲೆಕ್ಕಕ್ಕೆ ಸಿಗದ) ಸಾಮನ್ಯ ವಸ್ತುಗಳ ಲೆಕ್ಕಕೆ ಸಾಕ್ಷಿಯಾಗಬಹುದು(?).[೧೯]

ಸೂರ್ಯನ ಸ್ಥಾನ

[ಬದಲಾಯಿಸಿ]
Galactic longitude
  • ಕ್ಷೀರಪಥದ ಗಾತ್ರ: ಸೂರ್ಯನ ಆವಾಸವಾಗಿರುವ, ಪಟ್ಟಿ ಬಾಹುಗಳುಳ್ಳ ಕ್ಷೀರಪಥವು ಅಂದಾಜು 100,000-120,000 ಜ್ಯೋತಿರ್ವರ್ಷಗಳ ವ್ಯಾಸವನ್ನು ಹೊಂದಿರಬಹುದೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ 150,000-180,000 ಜ್ಯೋತಿರ್ವರ್ಷಗಳ ವ್ಯಾಸವಿರವ ಸಾಧ್ಯತೆಯೂ ಇದೆ. ಇಡ್ಡಲಿಯಾಕಾರದ ಇದರ ದಪ್ಪವು ಕೇಂದ್ರದಲ್ಲಿ ಸುಮಾರು10,000೧ ಜ್ಯೊತಿರ್ವಷವು. ಕ್ಷೀರಪಥ ಅಥವಾ ಆಕಾಶಗಂಗೆ ಸುರುಳಿಯಾಕಾರದ ಗ್ಯಾಲಕ್ಸಿ ಆಗಿದೆ. ಕ್ಷೀರಪಥವು 100-400 ಶತಕೋಟಿ ನಕ್ಷತ್ರಗಳನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ.
  • ವಾಸಯೋಗ್ಯ ವಲಯ: ಸೌರವ್ಯೂಹವು ಓರಿಯನ್'ನೀಹಾರಕದ ತೋಳಿನಲ್ಲಿ (ಆರ್ಮ್),ನಮ್ಮ ಬ್ರಹ್ಮಾಂಡವಾದ ಕ್ಷೀರಪಥ ಅಥವಾ ಆಕಾಶಗಂಗೆಯ ಕೇಂದ್ರದಿಂದ 26,000 (30000 ಎಂದೂ ಹೇಳುವರು) ಜ್ಯೋತಿರ್ವರ್ಷಗಳ ದೂರದಲ್ಲಿದೆ. (8.0-8.6 ಕೆಪಿಸಿ ಪಾರ್ಸೆಕ್ಸ್) ದೂರದಲ್ಲಿರುವನು. ಅವನು ಓರಿಯನ್ ನೀಹಾರಿಕೆಯ ತೋಳಿನ ಒಳಬದಿಯಲ್ಲಿದ್ದಾನೆ. ಆಕಾಶಗಂಗೆಯುನಮಗೆ ವೃತ್ತರೂಪವಾಗಿ ತೋರುವುದರಿಂದ ಸೌರಮಂಡಲವು ಅದರಲ್ಲಿ ಕೇಂದ್ರದ ಸಮೀಪವೇ ಇರಬೇಕೆಂದು ನಿರ್ಧರಿಸಿದ್ದಾರೆ.ಇಡ್ಡಲಿ ಆಕಾರದ ಆಕಾಶಗಂಗೆಯ ಕೇಂದ್ರತಲದಿಂದ 100 ಜ್ಯೋತಿವರ್ಷಗಳಷ್ಟು ಎತ್ತರದಲ್ಲಿದೆ ಎಂದು ಊಹಿಸಿದ್ದಾರೆ. ಆದ್ದರಿಂದ ಸೂರ್ಯನು, ಮತ್ತು ಸೌರವ್ಯೂಹ ಕ್ಷೀರಪಥದ (ಗ್ಯಾಲಕ್ಸಿಯ) ವಾಸಯೋಗ್ಯ ವಲಯದಲ್ಲಿ ಇದೆ.

ಸೌರವ್ಯೂಹದ ಪರಿಭ್ರಮಣ

[ಬದಲಾಯಿಸಿ]
  • ತಾರೆಗಳು ಸೂರ್ಯನೂ ಸೇರಿ ಮತ್ತು ಅನಿಲಗಳು ಸುಮಾರು ಪ್ರತಿ ಸೆಕೆಂಡಿಗೆ 220 (240) ಕಿಲೋಮೀಟರ್ ವೇಗದಲ್ಲಿ ನಮ್ಮ ಬ್ರಹ್ಮಾಂಡವಾದ ಕ್ಷೀರಪಥ/ಆಕಾಶಗಂಗೆಯ ಕೇಂದ್ರವನ್ನು ಸೂರ್ಯನ ಕಕ್ಷೆಯ ಲೆಖ್ಖದಲ್ಲಿ -ಸೌರವ್ಯೂಹ ಚಲಿಸುತ್ತಿರುವ ದಾರಿ) ಪರಿಭ್ರಮಣ ಮಾಡುತ್ತವೆ. ಹೀಗೆ ಸೂರ್ಯನು ಒಂದು ಸುತ್ತು ಪರಿಭ್ರಮಣ ಮಾಡುವ ಕಾಲ 24 ಕೋಟಿ (240-25೧ ಮಿಲಿಯನ್) ವರ್ಷಗಳು. ಒಟ್ಟಾರೆಯಾಗಿ ಕ್ಷೀರಪಥದ ಬಹಿರ್ಗೆಲ್ಯಾಕ್ಸೀಯ ಚೌಕಟ್ಟುಗಳು ತಾರೆಗಳು, ಕಾಯಗಳು, ಅನಿಲಮೋಡಗಳು ಸಂಬಂಧಿಸಿದಂತೆ ಸೆಕೆಂಡಿಗೆ ಸುಮಾರು 600 ಕಿ.ಮೀ ವೇಗದಲ್ಲಿ ಈ ಕ್ಷೀರಪಥದ ಕೆಂದ್ರವನ್ನು ಪರಿಭ್ರಮಣಮಾಡುತ್ತಿವೆ.
  • ಕ್ಷೀರಪಥದ (ಗ್ಯಾಲಕ್ಟಿಕ್ ವರ್ಷ- ಅದರ ಕೇಂದ್ರವನ್ನು ಸುತ್ತಿಬರುವುದು) ಒಂದು ಪರಿಭ್ರಮಣವನ್ನು ಮುಗಿಸಲು ಸೌರವ್ಯೂಹವು 240 ದಶಲಕ್ಷ (24 ಕೋಟಿ) ವರ್ಷಗಳನ್ನು ತೆಗೆದುಕೊಳ್ಳುತ್ತದ., ಆದ್ದರಿಂದ ಸೂರ್ಯನ ಜೀವಿತಾವಧಿಯಲ್ಲಿ 18-20 ಕಕ್ಷೆಪರಿಭ್ರಮಣಗಳನ್ನು ಪೂರ್ಣಗೊಳಿಸಿದೆ ಎಂದು ಭಾವಿಸಲಾಗಿದೆ. ಭೂಮಿಯಲ್ಲಿ ಮಾನವರ ಉದಯವಾದ ಮೇಲೆ ಕ್ಷೀರಪಥದಲ್ಲಿ ಒಂದು ಕ್ರಾಂತಿಯ 1/1250 ಭಾಗದಷ್ಟು ಸೌರವ್ಯೂಹದ ಚಲನೆ ಆಗಿದೆ. ಕ್ಷೀರಪಥದ ಕೇಂದ್ರದ ಸುತ್ತುಬರಲು ಸೌರವ್ಯೂಹದ ಕಕ್ಷಾ ವೇಗ ಸುಮಾರು 220 ಕಿ.ಮೀ. /ಸೆ.ಗೆ ಅಥವಾ ಬೆಳಕಿನ ವೇಗದ 0,073% ಆಗಿದೆ. ಸೂರ್ಯ/ಸೌರವ್ಯೂಹ ಹೆಲಿಯೋಸ್ಫಿಯರ್ನಲ್ಲಿ 84,000 ಕಿಮೀ / ಗಂ (52,000 ಮೈ/ಗಂ.) ಚಲಿಸುತ್ತದೆ. ಈ ವೇಗದಲ್ಲಿ, ಇದು 1 ಖ.ಮಾ. (ಖಗೋಳ ವಿಜ್ಞಾನದ ಘಟಕ) ಪ್ರಯಾಣಕ್ಕೆ/ 1 ಜ್ಯೋತಿರ್ವರ್ಷ, (ಅಥವಾ 8 ದಿನಗಳ ಬೆಳಕಿನ ದೂರ ಪ್ರಯಾಣ) ಕ್ರಮಿಸಲು ಸೌರವ್ಯೂಹಕ್ಕೆ ಸುಮಾರು 1,400 ವರ್ಷಗಳ ತೆಗೆದುಕೊಳ್ಳುತ್ತದೆ. ಸೌರವ್ಯೂಹ ರಾಶಿಚಕ್ರದ ಸಮೂಹವ ಸ್ಕಾರ್ಪಿಯಸ್’ ದಿಕ್ಕಿನಲ್ಲಿ ಮುಂದುವರೆಯುತ್ತಿದೆ.[೨೦]

ಸೌರವ್ಯೂಹದ ಸಮೀಪದ ನೀಹಾರಕ ಮತ್ತು ತಾರೆಗಳು:

[ಬದಲಾಯಿಸಿ]
5 ಸ್ಥಳೀಯ ನೀಹಾರಿಕೆಗಳ ಗುಂಪು;ಕೆಂಪು ಅಕ್ಷರದಲ್ಲಿರುವುದು ಕ್ಷೀರಪಥ- ಅದರ ಬಲಭಾಗದಲ್ಲಿ ಸ್ವಲ್ಪ ಕೆಳಗೆ-ಬಿಳಿ ಪ್ರಕಾಶದ್ದು ಆಂಡ್ರೊಮಿಡಾ ನೀಹಾರಕವಿದೆ (ಎಲೈಟ್)ಇನ್ನೂ ದೊಡ್ಡ ಚಿತ್ರಕ್ಕೆ ೨/೩ ಬಾರಿ ಚಿತ್ರದ ಮೇಲೆ ಕ್ಲಿಕ್ ಮಾಡಿ (ELitU)
  • ಸೂರ್ಯನಿಂದ ಹತ್ತು ಜ್ಯೋತಿರ್ವರ್ಷಗಳ ದೂರದ ಒಳಗೆ ಕೆಲವು ನಕ್ಷತ್ರಗಳಿವೆ. ಹತ್ತಿರದ ತ್ರಿವಳಿ ತಾರಾ ವ್ಯವಸ್ಥೆ ಆಲ್ಫಾಸೆಂಟುರಿ, ಸುಮಾರು 4.4 ಜ್ಯೋತಿರ್ವರ್ಷಗಳ ದೂರದಲ್ಲಿದೆ. ಆಲ್ಫಾ ಸೆಂಟುರಿ ಎ, ಹಾಗು ಬಿ, ಸೂರ್ಯನ ತರಹದ ನಕ್ಷತ್ರಗಳು. ಅವು ನಿಕಟ ಜೋಡಿಯಾಗಿವೆ. ಸಣ್ಣ ಕೆಂಪು ಕುಬ್ಜ, ಪ್ರಾಕ್ಸಿಮ ಸೆಂಟುರಿ 0.2 ಜ್ಯೋತಿರ್ವರ್ಷಗಳ ದೂರದಲ್ಲಿ ಈ ಜೋಡಿಯನ್ನು ಪರಿಭ್ರಮಿಸುತ್ತದೆ. ಸೂರ್ಯನಿಗೆ ನಂತರದ ಹತ್ತಿರದ ನಕ್ಷತ್ರಗಳು 'ಕೆಂಪು ಕುಬ್ಜ ಬರ್ನಾರ್ಡ್ ಸ್ಟಾರ್' (5.9 ಜ್ಯೋ.ವ.ದಲ್ಲಿ), ಇವುಗಳು ವುಲ್ಫ್ 359 (7.8 ಜ್ಯೋ.ವ.ದಲ್ಲಿ), ಮತ್ತು ಲಾಲಂಡೆ 21185.( 8.3 ಜ್ಯೋ.ವ.ದಲ್ಲಿ). ಸೌರವ್ಯೂಹದ ಸಮೀಪವಿರುವ ಒಂಟಿಯಾಗಿರವ ಸೂರ್ಯನ ತರಹದ ನಕ್ಷತ್ರ 11.9 ಜ್ಯೋತಿರ್ವರ್ಷಗಳ 'ಟಾವ್ ಸೇಟಿ'(Tau Ceti) . ಇದು ಸೂರ್ಯನ ದ್ರವ್ಯರಾಶಿಯ ಸುಮಾರು 80%; ಆದರೆ ಅದರ ಪ್ರಭೆ ಕೇವಲ 60% ಇದೆ. ಸೂರ್ಯನ ದೊಡ್ಡ ಹತ್ತಿರದ ನಕ್ಷತ್ರ ಸಿರಿಯಸ್ ಸುಮಾರು 8.6 ಜ್ಯೋತಿರ್ವರ್ಷಗಳ ದೂರದಲ್ಲಿದೆ. ಸುಮಾರು ಸೂರ್ಯನ ಎರಡು ಪಟ್ಟು ದ್ರವ್ಯರಾಶಿ ಹೊಂದಿದೆ. ಅದು ಮುಖ್ಯ 'ಅನುಕ್ರಮ ತಾರೆ' ಮತ್ತು ಅದನ್ನು ಒಂದು ಬಿಳಿ ಕುಬ್ಜ ಸಿರಿಯಸ್ ಬಿ ಸುತ್ತುತ್ತಿದೆ.
  • ಸೂರ್ಯನಿಗೆ ಸಮೀಪವರ್ತಿಯಾದ ಮುಕ್ತ ತೇಲುವ ಗ್ರಹ-ದ್ರವ್ಯರಾಶಿಯು 'ವಾಐಸ್, 0855-0714'. ಅದು 10 ಗುರುಗ್ರಹದ ತೂಕಕ್ಕೆ ಸ್ವಲ್ಪ ಕಡಿಮೆ ಇದೆ. ಅದು ಸರಿಸುಮಾರಾಗಿ 7 ಜ್ಯೋತಿರ್ವರ್ಷಗಳ ದೂರದಲ್ಲಿದೆ. ಸೌರವ್ಯೂಹದ ಗ್ರಹಗಳ ಕಕ್ಷೆಗಳು ಸುಮಾರು ವೃತ್ತಾಕಾರದಲ್ಲಿವೆ. ಇತರ ತಾರಾ ವ್ಯವಸ್ಥೆಗಳಿಗೆ ಹೋಲಿಸಿದರೆ, ಅಲ್ಪ ಕಕ್ಷೀಯ ವಿಲಕ್ಷಣತೆಯನ್ನು ಹೊಂದಿದೆ.[೨೧]

ಈ ಬ್ರಹ್ಮಾಂಡದ ಉದಯ (ಮತ್ತು ಅಂತ್ಯ)

[ಬದಲಾಯಿಸಿ]
  • ಕ್ಷೀರಪಥದ ರಚನೆಯು ಮಹಾಸ್ಫೋಟದ ನಂತರ ವಿಶ್ವದಲ್ಲಿ ಸಾಮೂಹಿತ ಹರಡುವಿಕೆಗಾಗಿ ಒಂದು ಅಥವಾ ಹಲವಾರು ದ್ರವ್ಯರಾಶಿಯಲ್ಲಿನ ಅಧಿಕಸಾಂದ್ರತೆಯ (ಸ್ವಲ್ಪ-ಅಧಿಕ) ಪರಿಣಾಮವಾಗಿ ಆರಂಭವಾಯಿತು. ಈ ಅಧಿಕಸಾಂದ್ರತೆಯು ವೃತ್ತಾಕಾರದ ತಾರಾ ಪುಂಜಗಳಲ್ಲಿ ಉಳಿದಿರುವ ಕೆಲವು ಅತಿ ಹಳೆಯ ನಕ್ಷತ್ರಗಳು ಈ ಕ್ಷೀರಪಥ ರಚನೆಗೊಳ್ಳಲು ಮೂಲ ಕಾರಣ. ಈ ನಕ್ಷತ್ರಗಳು ಮತ್ತು ತಾರಾಸಮೂಹಗಳು ಈಗಿರುವ ಕ್ಷೀರಪಥದ ನಾಕ್ಷತ್ರಿಕ ಪ್ರಭಾವಲಯದಲ್ಲಿ ಉಳಿದುಕೊಂಡಿವೆ. ಮೊದಲ ನಕ್ಷತ್ರಗಳ ಜನ್ಮ ವಾದ ಕೆಲವು ಶತಕೋಟಿ ವರ್ಷಗಳಲ್ಲಿ,ಇದು ತುಲನಾತ್ಮಕವಾಗಿ ಸಾಕಷ್ಟು ದೊಡ್ಡದಾಗಿದ್ದು ವೇಗವಾಗಿ ಪರಿಭ್ರಮಿಸುವಷ್ಟು ಕ್ಷೀರಪಥವು ದ್ರವ್ಯರಾಶಿಯನ್ನು ಹೊಂದಿತ್ತು. ಕೋನೀಯ ಆವೇಗದ ಕಾರಣ ಈ ಸ್ಥೂಲ ಗೋಳಾಕಾರದಲ್ಲಿರುವುದು ಒಂದು ತಟ್ಟೆಯ ಆಕಾರಕ್ಕೆ ಕುಸಿಯಲು ಮತ್ತು ಅನಿಲ ಅಂತರತಾರಾ ಮಾಧ್ಯಮದ(ಅನಿಲ ಮೇಘ) ಉತ್ಪತ್ತಿಗೂ ಕಾರಣವಾಯಿತು. ಆದ್ದರಿಂದ, ನಕ್ಷತ್ರಗಳ ನಂತರದ ತಲೆಮಾರುಗಳ ಜನನದ ತಾರೆಗಳು ಈ ಸುರುಳಿ ಮುದ್ರಿಕೆಯಾಗಿ ರಚನೆಯಾದವು. ಸೂರ್ಯನೂ ಸೇರಿದಂತೆ ಅತ್ಯಂತ ಕಿರಿಯ ನಕ್ಷತ್ರಗಳು, ಈ ಆಕಾಶಗಂಗೆಯೆಂಬ ಬ್ರಹ್ಮಾಂಡದ ತಾಟನಲ್ಲಿ ಸೇರಿಕೊಂಡಿವೆ.

[೨೨]

  • ಎರಡು ಚಿಕ್ಕ ನೀಹಾರಕಗಳು ಮತ್ತು ಕುಬ್ಜ ನೀಹಾರಕಗಳು ಸ್ಥಳೀಯ ಗುಂಪಿನ ಕಕ್ಷೆಯಲ್ಲಿ ಕ್ಷೀರಪಥವನ್ನು ಪ್ರದಕ್ಷಿಣೆ ಮಾಡುತ್ತಿವೆ. ಇದರಲ್ಲಿ ದೊಡ್ಡದು 14,000 ಜ್ಯೋತಿರ್ವರ್ಷಗಳ ವ್ಯಾಸದ ದೊಡ್ಡ ಮೆಗೆಲ್ಯಾನಿಕ್ ಮೋಡವು. ಕ್ಷೀರಪಥವನ್ನು ಸುತ್ತುವ ಕುಬ್ಜ ನೀಹಾರಕಗಳಲ್ಲಿ ಕೆಲವು ಕ್ಯಾನಿಸ್ ಮೇಜರ್ ಡ್ವಾರ್ಫ್ (ಸಮೀಪವಿರುವ), ಸ್ಯಾಗಿಟ್ಯಾರಿಯಸ್ ಡ್ವಾರ್ಫ್ ಅಂಡಾಕಾರದ ನೀಹಾರಕ, ಚಿಕ್ಕ ಕರಡಿ ಡ್ವಾರ್ಫ್, ಶಿಲ್ಪಿ ಡ್ವಾರ್ಫ್, ಸೆಕ್ಸ್ಟನ್ಸ್ ಡ್ವಾರ್ಫ್, ಫೋರ್ನಾಕ್ಸ್’ ಡ್ವಾರ್ಫ್, ಮತ್ತು ಲಿಯೋ (1) ಡ್ವಾರ್ಫ್. ಕ್ಷೀರಪಥದ ಚಿಕ್ಕ ಕುಬ್ಜ ನೀಹಾರಕಗಳು ವ್ಯಾಸದಲ್ಲಿ 500 ಜ್ಯೋತಿರ್ವರ್ಷಗಳಷ್ಟು ಇವೆ. ಈ ಭರವಸೆ ಡ್ವಾರ್ಫ್, ಡ್ರ್ಯಾಕೋ ಡ್ವಾರ್ಫ್, ಮತ್ತು ಲಿಯೋ 2 ಡ್ವಾರ್ಫ್ ಸೇರಿವೆ. ಇನ್ನೂ ಸಕ್ರಿಯವಾಗಿರುವ ಕ್ಷೀರಪಥಕ್ಕೆ ಬದ್ಧವಾದ ಕಂಡುಹಿಡಿಯದ ಕುಬ್ಜ ನೀಹಾರಕಗಳು ಇರಬಹುದು.
  • ಈಗಿನ ಮಾಪನಗಳು ಆಂಡ್ರೊಮಿಡಾ ನಕ್ಷತ್ರಪುಂಜವು ಸೆಕೆಂಡಿಗೆ 100 ರಿಂದ 140 ಕಿಲೋಮೀಟರ್’ವೇಗದಲ್ಲಿ ನಮಗೆ ಸಮೀಪಿಸುತ್ತಿದೆ ಎಂದು ಸೂಚಿಸುತ್ತದೆ. ಇನ್ನು 3/ 4 ಶತಕೋಟಿ ವರ್ಷಗಳಲ್ಲಿ, ಆಂಡ್ರೊಮಿಡಾ-ಕ್ಷೀರಪಥಗಳ ಘರ್ಷಣೆ ಆಗಬಹುದು. ಡಿಕ್ಕಿಯಾದ ವೇಳೆ ಪ್ರತ್ಯೇಕ ನಕ್ಷತ್ರಗಳ ಪರಸ್ಪರ ಡಿಕ್ಕಿಯ ಅವಕಾಶ ಅತ್ಯಂತ ಕಡಿಮೆ, ಬದಲಿಗೆ ಎರಡು ನಕ್ಷತ್ರಪುಂಜಗಳು ಒಂದೇ ಅಂಡಾಕಾರದ ನೀಹಾರಕ ಅಥವಾ ಪ್ರಾಯಶಃ ಒಂದು ದೊಡ್ಡ ತಟ್ಟೆಯಾಕಅರದ ನೀಹಾರಕ(ಬ್ರಹ್ಮಾಂಡ) ಆಗಬಹುದು. ವಿಲೀನಗೊಳ್ಳಲು ಒಂದು ಶತಕೋಟಿ ವರ್ಷಗಳ ಅವಧಿ ಹಿಡಿಯಬಹುದು.

[೨೩] [೨೪] [೨೫]

ಕಾಲಾನುಕ್ರಮಣಿಕೆ

[ಬದಲಾಯಿಸಿ]
ಪ್ರಾಕೃತಿಕ ಕಾಲಾನುಕ್ರಮ ಪಟ್ಟಿ
ಶತಕೋಟಿವರ್ಷ - : ಹಿಂದೆ) ಸ್ಥಿತಿ ವಿಶ್ವದಲ್ಲಿ ಬೆಳವಣಿಗೆ ವಿವರ
0 ಜೀವನ ಜಮೀನು ಜೀವನ ಪ್ರಾಚೀನ ಮಾನವರು+
(-)1 ಜೀವನ ಸಂಕೀರ್ಣ ಜೀವನ ಲೈಂಗಿಕ ಸಂತಾನೋತ್ಪತ್ತಿ
(-)2 ಜೀವನ ಆರಂಬಿಕಭೂಮಿ ಜೀವನ
(-)3 ಜೀವನ ದ್ಯುತಿಸಂಶ್ಲೇಷಣೆ ಆಮ್ಲಜನಕ
(-)4 ಜೀವನ ನೀರು ಆದಿ ಜೀವನ
(-)5 ಆದಿಯುಗ ಸೌರ ಮಂಡಲ ಆದಿ ಭೂಮಿಯ(-4.54)
(-)6 ಆದಿಯುಗ ಕಾಸ್ಮಿಕ್ ವೇಗ ಆಲ್ಫಾ ಸೆಂಟುರಿ ರೂಪಗಳು
(-)7 ಆದಿಯುಗ ಉತ್ತರ ಸ್ಟಾರ್ ರೂಪಗಳು
(-)8 ಆದಿಯುಗ
(-)9 ಆದಿಯುಗ ಕ್ಷೀರ ಪಥ ನಕ್ಷತ್ರ ಪುಂಜ
(-)10 ಆದಿಯುಗ ಆಂಡ್ರೊಮಿಡಾ ನಕ್ಷತ್ರಪುಂಜಗಳು
(-)11 ಆದಿಯುಗ ಕಾಸ್ಮಿಕ್ ವಿಸ್ತರಣೆ ಕ್ವೇಸಾರ್‍ಭ್ರೂಣತಾರೆ
(-)12 ಆದಿಯುಗ ಆದಿ ಬ್ರಹ್ಮಾಂಡ
(-)13 ಆದಿಯುಗ ಆದಿಮ ಬೆಳಕು
. . ಆದಿಮೂಲ ಗುರುತ್ವ
ಮಹಾಸ್ಪೋಟ 1379.9 ± 0.021> <ಕೋಟಿ ವರ್ಷ ಆದಿ ವಿಶ್ವ
ಆಕ್ಸಿಸ್ ಪ್ರಮಾಣ: ಶತಕೋಟಿ ವರ್ಷಗಳು.

ಕ್ಷೀರಪಥ ಮತ್ತು ಇತರ ಬ್ರಹ್ಮಾಂಡಗಳ ಚಲನೆ

[ಬದಲಾಯಿಸಿ]
  • ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತದಲ್ಲಿ ಕ್ಷೀರಪಥದ ಜೊತೆ ಹೋಲಿಸಲು ಆಕಾಶವಲಯದಲ್ಲಿ ಉಲ್ಲೇಖಮಾಡಬಹುದಾದ ಯಾವುದೇ "ಮೆಚ್ಚಿನ" ಜಡತ್ವದ ನಿಯಮ ಇಲ್ಲವೆಂದು ಹೇಳುತ್ತದೆ. ಆದರೂ, ಕ್ಷೀರಪಥವು ವಿಶ್ವವಿಜ್ಞಾನದ ಚೌಕಟ್ಟುಗಳಲ್ಲಿನ ಉಲ್ಲೇಖಕ್ಕೆ ಸಂಬಂಧಿಸಿದಂತೆ ವೇಗ (ವೇಗೋತ್ಕರ್ಷ) ಹೊಂದಿದೆ.
  • ಉಲ್ಲೇಖ ಮಾಡಬಹುದಾದ ಒಂದು ನಿಯಮ ‘ಹಬಲ್ ಹರಿವು’(Hubble flow), ಕಾರಣ ಆಕಾಶವಲಯ/ಅಂತರ (ಸ್ಪೇಸ್) ವಿಸ್ತರಣೆಯಾಗುತ್ತಿದ್ದು ಬ್ರಹ್ಮಾಂಡ/ನೀಹಾರಕ ಸಮೂಹಗಳು ಸ್ಪಷ್ಟ ಚಲನೆ ಹೊಂದಿವೆ. ಪ್ರತ್ಯೇಕ ಬ್ರಹ್ಮಾಂಡ/ನೀಹಾರಕಗಳು ಕ್ಷೀರಪಥ ಸೇರಿದಂತೆ ಸರಾಸರಿ ಹರಿವು ಸಂಬಂಧಿತವಾದ ವಿಶಿಷ್ಟ ವೇಗೋತ್ಕರ್ಷವನ್ನು ವನ್ನುಹೊಂದಿವೆ. ನಕ್ಷತ್ರಗಳು ಬ್ರಹ್ಮಾಂಡಗಳು ಪರಸ್ಪರ ದೂರಸರಿಯುತ್ತಿರುವುದು ಕಂಡುಬಂದಿದೆ (ಹಬಲ್-ನಿಯಮ)
  • ಮತ್ತೊಂದು ಚೌಕಟ್ಟಿನಲ್ಲಿ ಕಾಸ್ಮಿಕ್ ಮೈಕ್ರೊವೇವ್ ಹಿನ್ನಲೆಯಿಂದ (ಸಿಬಿಎಮ್)ಆಧಾರ ಒದಗಿಸುತ್ತದೆ. ಕ್ಷೀರಪಥವು 552 ±6 ಕಿ.ಮೀ./ಸೆಕೆಂಡಿಗೆ ವೇಗದಲ್ಲಿ ಚಲಿಸುತ್ತಿದೆ. ಫೋಟಾನ್ಗಳಿಗೆ ಸಂಬಂಧಿಸಿದಂತೆ 10.5 ಬಲ-ಮೇಲ್ಮುಖವಾಗಿ -24 ಡಿ.ವಿಷುವದಂಶ ಕಡೆಗೆ ಓರೆಯಾಗಿ , (ಎ2000ಯುಗ, ಹೈಡ್ರಾ ಕೇಂದ್ರದ ಬಳಿಗೆ) ಚಲಿಸುತ್ತಿದೆ. ಈ ಚಲನೆಯನ್ನು ಕಾಸ್ಮಿಕ್ ಬ್ಯಾಗ್ರೌಂಡ್'’ ಎಕ್ಸ್ಪ್ಲೋರರ್ ‘(ಮತ್ತು ವಿಲ್ಕಿನ್ಸನ್ ಮೈಕ್ರೊವೇವ್ ಅನಿಸೊಟ್ರೊಪಿ ಪ್ರೋಬ್’ ಇಂತಹ ಉಪಗ್ರಹಗಳಿಂದ ( ಸಿಎಮ್’ಬಿಗೆ- ಒಂದು ದ್ವಿಧ್ರುವಿ ಕೊಡುಗೆಯಾಗಿ), ಗಮನಿಸಲಾಗಿದೆ. (ಅದರಲ್ಲಿನ ಫೋಟಾನ್ಗಳು ಸಮತೋಲನ ಚೌಕಟ್ಟಿನ ಚಲನೆಯ ದಿಕ್ಕಿನಲ್ಲಿ ನೀಲಿ ವರ್ಗಆಂಕ ಪಡೆಯುತ್ತದೆ ಮತ್ತು ವಿರುದ್ಧ ದಿಕ್ಕಿನಲ್ಲಿ ಅತಿಗೆಂಪು ಬಣ್ಣ ಪಡೆಯುತ್ತದೆ.?) [೨೬]
  • ಖಗೋಳಶಾಸ್ತ್ರಜ್ಞರು, ಕ್ಷೀರಪಥವು ಸ್ಥಳೀಯ ಸಮೂಹ ಚಲಿಸುವ ಚೌಕಟ್ಟಿನಲ್ಲಿ ಅದಕ್ಕೆ ಸಂಬಂಧಿಸಿದಂತೆ ಸೆಕೆಂಡಿಗೆ ಸುಮಾರು 630 ಕಿ.ಮೀ.ವೇಗದಲ್ಲಿ ಚಲಿಸುತ್ತಿದೆ ಎಂದು ನಂಬುತ್ತಾರೆ. ಎಂದರೆ ಗಂಟೆಗೆ 2268000 ಕಿಮೀ.!! ಇದು ವಿಶ್ವ ಕೇಂದ್ರವನ್ನು ಪ್ರದಕ್ಷಿನೆ ಮಾಡುವ ವೇಗ. ಈ ವೇಗವನ್ನು ವಿಜ್ಞಾನಿಗಳೂ ಶಂಕಿಸುತ್ತಾರೆ. ಈ ಕ್ಷೀರಪಥವು, ಸಾಮಾನ್ಯ ದಿಕ್ಕಿನಲ್ಲಿ ಚಲಿಸುವ ಗ್ರೇಟ್’ಅಟ್ರಾಕ್ಟರ್’ ಮತ್ತು ಇತರ ಗೆಲಾಕ್ಸಿಗಳ ಸಮೂಹದ ಮತ್ತು ಶೇಪ್ಲಿ ಸೂಪೆರ ಕ್ಲಸ್ಟರ್ ಸೇರಿದಂತೆ ಅವುಗಳ ಹಿಂದೆ ಓಡುತ್ತಿದೆ.
  • ಕ್ಷೀರಪಥ ಮತ್ತು ಆಂಡ್ರೋಮಿಡಾ ಅವುಗಳ ಗುರುತ್ವಬಲದ ಸೆಳೆತಕ್ಕೆ ಒಳಗಾಗಿರುವ ಗೆಲಾಕ್ಸಿಗಳ ಸಮೂಹವನ್ನು ಸ್ಥಳೀಯ ಗುಂಪು ಎಂದು ಕರೆಯುವರು. ಇವು, ಕನ್ಯಾರಾಶಿಯ ಆಕಾಶಕಾಯಗಳ ಗಂಪಿನ ಬಳಿ ಕೇಂದ್ರಿತವಾಗಿವೆ. ಗುರುತ್ವಬಲದ ಸೆಳೆತಕ್ಕೆ ಒಳಗಾಗಿದ್ದರೂ ಈ ಗುಂಪು ಹಬಲ್ ಹರಿವಿನ ಭಾಗವಾಗಿ ಸೆಕೆಂಡಿಗೆ 967 ಕಿ.ಮೀ.(ಗಂ.ಗೆ 34,81,200 ಕಿ.ಮೀ.ಅಥವಾ 21,75,750 ಮೈಲಿ)ವೇಗದಲ್ಲಿ ಪರಸ್ಪರ ದೂರ ಹೋಗುತ್ತಿವೆ, ಈ ವೇಗವು ಅವು 16.8 (ಪಿಸಿ) ಮಿಲಿಯನ್ ಪಾರ್ಸೆಕ್ಸ್ ನಷ್ಟು ಪರಸ್ಪರ ದೂರ ಇವೆ ಎಂದು ನಿರೀಕ್ಷಿಸಲಾಗಿದ್ದೂ ಈ ವೇಗ ನಿರೀಕ್ಷೆಗಿಂತ ಕಡಿಮೆ ಇದೆ. ಇದಕ್ಕೆ ಕಾರಣ ಸ್ಥಳೀಯ ಗುಂಪು ಮತ್ತು ಕನ್ಯಾರಾಶಿ ಕ್ಲಸ್ಟರ್ ನಡುವೆ ಇರುವ ಗುರುತ್ವಾಕರ್ಷಣೆಯಾಗಿದೆ.[೨೭]
  • ವಿವರವಾದ ಲೇಖನ/ಮುಖ್ಯ ಲೇಖನ :ದೇವಯಾನಿ ನಕ್ಷತ್ರಪುಂಜ ?
  • ನಮಗೆ ಹತ್ತಿರದ ಆಂಡ್ರೊಮಿಡಾ ಗ್ಯಾಲಾಕ್ಸಿ ಅಥವಾ ದೇವಯಾನಿ ನಕ್ಷತ್ರಪುಂಜವೆಂಬ ಬ್ರಹ್ಮಾಂಡ ಅಥವಾ ನೀಹಾರಕ (ಖಗೋಲಶಾಸ್ತ್ರ ಪ್ರವೇಶಿಕೆ ಬರೆದ ಆರ್.ಎಲ್.ನರಸಿಂಹಯ್ಯನವರು ಅದಕ್ಕೆ ದ್ರೌಪದೀ ನೀಹಾರಕವೆಂದು ಹೆಸರಿಟ್ಟಿದ್ದಾರೆ.). ಇದು ನಮ್ಮಿಂದ 7,50,000(2,50,000?ವಿಕಿಯಲ್ಲಿ) ಜ್ಯೋತಿರ್ವರ್ಷ ದೂರದಲ್ಲಿರಬೇಕೆಂದು ಊಹಿಸಿದ್ದಾರೆ1.
  • ಆಂಡ್ರೊಮಿಡಾ(ಗ್ರೀಕ್ ಪುರಾಣ) ಇಥಿಯೋಪಿಯನ್ ರಾಜಕುಮಾರಿ ಮತ್ತು ಕಾಸಿಯೋಪಿಯಾ (Cassiopeia) ಮಗಳು; ಅವಳನ್ನು ಒಂದು ಬಂಡೆಗೆ ಕಟ್ಟಿದ್ದರು. ಪೋಸಿಡಾನ್ನ ಕಳಿಸಿದ್ದ ಒಂದು ಸಮುದ್ರ ದೈತ್ಯಕ್ಕೆ ಅವಳನ್ನು ಬಲಿಕೊಡಲು ನಿಶ್ಚಯಿಸಿದ್ದರು. ಆದರೆ ಅವಳನ್ನು ಪರ್ಸೀಯಸ್ ರಕ್ಷಿಸಿದ; ನಂತರ ಅವಳು ಅವನ ಪತ್ನಿಯಾದಳು. ಈ ನೀಹಾರಿಕೆಗೆ ಅವಳ ಹೆಸರು.[೨೮]
ಆಕಾಶಗಂಗೆಯ ಪಕ್ಕದಲ್ಲಿರುವ ಮತ್ತು ಅದರ ಕಡೆಗೆ ನುಗ್ಗುತ್ತಿರುವ ಆಂಡ್ರೊಮಿಡಾ ಗೆಲಾಕ್ಸಿಯ/ಬ್ರಹ್ಮಾಂಡದ ಚಿತ್ರ; ಅತಿಗೆಂಪಿನಲ್ಲಿ ಸ್ಪಿಟ್ಜರ್ ತೆಗೆದ, 24 ಮೈಕ್ರೋ (ಕ್ರೆಡಿಟ್:. ಎನ್ಎಎಸ್ಎ / ಜೆಪಿಎಲ್-ಕ್ಯಾಲ್ಟೆಕ್ನಿಂದ / ಕೆ ಗಾರ್ಡನ್, ಅರಿಜೋನಾ ವಿಶ್ವವಿದ್ಯಾಲಯ)

ನೀಹಾರಕಗಳ ವೇಗ

[ಬದಲಾಯಿಸಿ]
  • ನಮ್ಮ ಸಮೀಪದಲ್ಲಿರುವ ಹತ್ತಿಪ್ಪತ್ತು ಜ್ಯೋತಿರ್ವರ್ಷಗಳ ದೂರದಲ್ಲಿರುವ ನೀಹಾರಕಗಳನ್ನು ಬಿಟ್ಟು ಉಳಿದ ನೀಹಾರಕಗಳು ದೂರಸರಿಯುತ್ತಿರುವಂತೆ ಕಾಣುತ್ತವೆ. ಬಹಳ ದೂರದ ನೀಹಾರಕಗಳ ನಕ್ಷತ್ರಗಳನ್ನು ಅದರ ವರ್ಣಪಟಲದಿಂದ ನಕ್ಷತ್ರ ವ್ಯೂಹವೆಂದು ಗುರುತಿಸಬಹುದು. ವರ್ಣರೇಖೆಗಳ ಸ್ಥಾನ ಪಲ್ಲಟದಿಂದ ನೀಹಾರಕಗಳ ದೃಷ್ಟಿ-ಪಥವೇಗಗಳನ್ನು ಗುಣಿಸಬಹುದು. ಇದರಿಂದ ನೀಹಾರಕದ ದೂರವು ಎಷ್ಟು ಕೋಟಿ ವರ್ಷಗಳೋ, ಸೆಕೆಂಡ್’ಒಂದಕ್ಕೆ ಅಷ್ಟೇ ಸಾವಿರ (1070ಮೈಲಿ) ಮೈಲಿಗಳ ವೇಗ; ಆ ವೇಗದಿಂದ ಅದು ನಮಗೆ ವಿಮುಖವಾಗಿ ಓಡುತ್ತಿರುವುದು. ಇದು 100ಅಂಗುಲದ ದೂರದರ್ಶೀನಿಯಿಂದ ನೋಡಿದಾಗ ನಿರ್ಧರವಾಗಿತ್ತು. ಪಾಲೋಮೋರ್ ಶೀಖರದ 200 ಅಂಗುಲ ವ್ಯಾಸದ ದೂರದರ್ಶಿನಿಯನ್ನು ಉಪಯೋಗಿಸಿ ಹ್ಯಮಾಸನು 36 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ನೀಹಾರಕವೊಂದು ಸೆಕೆಂಡೊಂದಕ್ಕೆ 38000 ಮೈಲಿಗಳ ವೇಗದಲ್ಲಿ ಒಡಿಹೋಗುತ್ತಿದೆಯೆಂದು ನಿರ್ಣಯಿಸಿದ್ದಾನೆ. ಇದು ದಿಗ್ಭ್ರಾಂತಿಗೊಳಿಸುವ ಪ್ರಚಂಡ ವೇಗ. ವಿಜ್ಷಾನಿಗಳು ಇದರ ಬಗೆಗೆ ಶಂಕಿಸಿದ್ದಾರೆ. ಐನ್'ಸ್ಟೈನ್ ಮೊದಲಾದ ವಿಜ್ಞಾನಿಗಳು ವಿಶ್ವವು ಹಿಗ್ಗುತ್ತಾ ಇದೆ, ಅದರಿಂದ ನೀಹಾರಕಗಳು ವಿಮುಖ ಚಲನೆಯಲ್ಲಿರುವಂತೆ ಕಾಣುವುದು,ಎಂದಿದ್ದಾರೆ.1

ಪ್ರಖರ ಬೆಳಕಿನ ಅವಳಿ ನಕ್ಷತ್ರ ಪತ್ತೆ

[ಬದಲಾಯಿಸಿ]

ನಮ್ಮ ಆಕಾಶ ಗಂಗೆಗೆ (ಮಿಲ್ಕಿ ವೇ) ಸಮೀಪದ ನಕ್ಷತ್ರ ಪುಂಜದಲ್ಲಿರುವ ಗ್ಯಾಮಾ ಕಿರಣಗಳನ್ನು ಸೂಸುವ, ಅತ್ಯಂತ ಪ್ರಕಾಶಮಾನವಾದ ಅವಳಿ ನಕ್ಷತ್ರ ಮಂಡಲವನ್ನು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ. ಇದಕ್ಕೆ ‘ಎಲ್‌ಎಂಸಿ ಪಿ3’ ಎಂದು ಹೆಸರಿಡಲಾಗಿದೆ.[೨೯]

ಮಬ್ಬು ಉಪ ತಾರಾಪುಂಜ ಪತ್ತೆ

[ಬದಲಾಯಿಸಿ]
  • 25 Nov, 2016
  • ಟೋಕಿಯೊ: ನಮ್ಮ ತಾರಾಪುಂಜ (ಗೆಲಾಕ್ಸಿ) ಆಕಾಶ ಗಂಗೆಯ ಪ್ರಭಾವಲಯದಲ್ಲಿರುವ ಮಬ್ಬಾದ ಉಪ ಗೆಲಾಕ್ಸಿಯೊಂದನ್ನು (ಸ್ಯಾಟಲೈಟ್‌ ಗೆಲಾಕ್ಸಿ) ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆಕಾಶ ಗಂಗೆಯಲ್ಲಿ ಇದುವರೆಗೆ ಪತ್ತೆಯಾಗಿರುವ ಉಪ ಗೆಲಾಕ್ಸಿಗಳಲ್ಲೇ ಇದು ಅತ್ಯಂತ ಮಬ್ಬಾದ (ಟತ್ಯಂತ ಕಡಿಮೆ ಬೆಳಕಿನ) ಕುಬ್ಜ ಗೆಲಾಕ್ಸಿ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ವರ್ಗೊ ತಾರಾ ಸಮೂಹವಿರುವ ದಿಕ್ಕಿನಲ್ಲೇ ಈ ಉಪ ಗೆಲಾಕ್ಸಿ ಪತ್ತೆಯಾಗಿದೆ. ಇದಕ್ಕೆ ‘ವರ್ಗೊ–1’ ಎಂದು ಹೆಸರಿಡಲಾಗಿದೆ. ಜಪಾನಿನ ಟೊಹೊಕು ವಿಶ್ವವಿದ್ಯಾಲಯದ ಅಧ್ಯಯನಕಾರರು ಈ ಉಪ ಗೆಲಾಕ್ಸಿಯನ್ನು ಪತ್ತೆ ಮಾಡಿದ್ದಾರೆ. ಆಕಾಶ ಗಂಗೆಯ ಪ್ರಭಾವಲಯದಲ್ಲಿ ಇನ್ನೂ ಪತ್ತೆಯಾಗದ ಹಲವು ಕುಬ್ಜ ಉಪ ತಾರಾಪುಂಜಗಳು ಇರಬಹುದು ಎಂದು ಅವರು ಶಂಕಿಸಿದ್ದಾರೆ.
  • ಹಿಂದೆ ಇಂತಹ ನಕ್ಷತ್ರ ಪುಂಜಗಳನ್ನು ಹುಡುಕುವಾಗ 2.5 ಮೀಟರ್‌ಗಳಿಂದ ನಾಲ್ಕು ಮೀಟರ್‌ಗಳವರೆಗೆ ವ್ಯಾಸ ಹೊಂದಿರುವ ದೂರದರ್ಶಕಗಳನ್ನು ಬಳಸಲಾಗುತ್ತಿತ್ತು. ಹಾಗಾಗಿ ಸೂರ್ಯನಿಗೆ ಸಮೀಪದಲ್ಲಿದ್ದ ಮತ್ತು ಬೆಳಕಿನ ತೀವ್ರತೆ ಹೆಚ್ಚಿದ್ದ ಉಪ ಗೆಲಾಕ್ಸಿಗಳು ಮಾತ್ರ ಪತ್ತೆಯಾಗುತ್ತಿದ್ದವು. ಆದರೆ, ಜಪಾನಿನ ವಿಜ್ಞಾನಿಗಳು 8.2 ಮೀಟರ್‌ ವ್ಯಾಸ ಹೊಂದಿರುವ ಸುಬರು ದೂರದರ್ಶಕದ ಹೈಪರ್‌ ಸುಪ್ರೈ ಕ್ಯಾಮ್‌ (ಎಚ್‌ಎಸ್‌ಸಿ) ಬಳಸಿದ್ದರಿಂದ ಆಗಸದಲ್ಲಿ ಹೆಚ್ಚು ವಿಸ್ತಾರವಾದ ವ್ಯಾಪ್ತಿಯಲ್ಲಿ ಕುಬ್ಜ ಗೆಲಾಕ್ಸಿಗಳನ್ನು ಹುಡುಕಲು ಸಾಧ್ಯವಾಗಿದೆ.
  • ವರ್ಗೊ–1: ಪತ್ತೆಯಾದ ಉಪ ಗೆಲಾಕ್ಸಿ ಹೆಸರು
  • 2.8 ಲಕ್ಷ ಜ್ಯೋತಿರ್ವರ್ಷ: ಉಪ ಗೆಲಾಕ್ಸಿಯು ಸೂರ್ಯನಿಂದ ಇರುವ ದೂರ
  • ಸೇಗ್‌–1’: ಇದುವರೆಗೆ ಕಂಡು ಬಂದಿದ್ದ ಅತಿ ಮಬ್ಬಾದ ಕುಬ್ಜ ಉಪ ಗೆಲಾಕ್ಸಿ
  • ಜಪಾನಿನ ಟೊಹೊಕು ವಿ.ವಿಯ ಡೈಸುಕೆ ಹೊಮ್ಮ ಎಂಬ ಪದವಿ ವಿದ್ಯಾರ್ಥಿ ಮಸಾಶಿ ಚಿಬಾ ಮಾರ್ಗದರ್ಶನದಲ್ಲಿ ‘ವರ್ಗೊ–1’ ಪತ್ತೆ ಮಾಡಿದ್ದಾರೆ.

ಉಪಯೋಗ:

[ಬದಲಾಯಿಸಿ]
  • ಈ ಸಂಶೋಧನೆಯು ತಾರಾಪುಂಜಗಳ ಸೃಷ್ಟಿ ಮತ್ತು ಅವುಗಳ ಉಗಮಕ್ಕೆ ಕಪ್ಪು ದ್ರವ್ಯಗಳು (ಡಾರ್ಕ್‌ ಮ್ಯಾಟರ್‌) ಹೇಗೆ ನೆರವಾಗುತ್ತವೆ ಎಂಬುದರ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಲಿವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

50ಕ್ಕೂ ಹೆಚ್ಚು ಗೆಲಾಕ್ಸಿಗಳು:

[ಬದಲಾಯಿಸಿ]
  • ಪ್ರಸ್ತುತ, ಆಕಾಶ ಗಂಗೆಯ ವ್ಯಾಪ್ತಿಯಲ್ಲಿ 50 ಉಪ ಗೆಲಾಕ್ಸಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 40 ಗೆಲಾಕ್ಸಿ ಮಬ್ಬಾಗಿವೆ ಮತ್ತು ಚದುರಿಕೊಂಡಿವೆ. ಇವುಗಳೆಲ್ಲ ‘ಕುಬ್ಜ ಅಂಡಗೋಳ (ಪೂರ್ಣವಾಗಿ ಗೋಳಾಕಾರದಲ್ಲಿ ಇಲ್ಲದಿರುವ ಸ್ಥಿತಿ) ಗೆಲಾಕ್ಸಿ’ಗಳಾಗಿವೆ.

ಉಪ ಗೆಲಾಕ್ಸಿ:

[ಬದಲಾಯಿಸಿ]
  • ಇವು ಕೂಡ ತಾರಾಪುಂಜಗಳೇ. ಆದರೆ, ತಮಗಿಂತ ದೊಡ್ಡ ತಾರಾಪುಂಜಗಳ ಸುತ್ತ ಸುತ್ತುತ್ತವೆ. ಈ ಸುತ್ತುವಿಕೆಗೆ ದೊಡ್ಡ ತಾರಾಪುಂಜಗಳ ಗುರುತ್ವಾಕರ್ಷಣೆ ಶಕ್ತಿ ಕಾರಣ.

[೩೦]

ತಾರಾ ಪುಂಜಗಳ ಸಮೂಹ; ಸಾವಿರ ಕೋಟಿ ಬೆಳಕಿನ ವರ್ಷ ದೂರದಲ್ಲಿರುವ ತಾರಾ ಪುಂಜ; Galaxy cluster IDCS J1426 is located 10 billion light-years from Earth and weighs almost 500 trillion suns
  • ಇಸ್ರೋದ ಬಾಹ್ಯಾಕಾಶ ಪರಿವೀಕ್ಷಣಾ ಉಪಗ್ರಹ "ಆ್ಯಸ್ಟ್ರೋಸ್ಯಾಟ್‌' ಭೂಮಿಯಿಂದ 80 ಕೋಟಿ ಜ್ಯೋತಿ ರ್ವರ್ಷಗಳಷ್ಟು ದೂರವಿರುವ ವಿಶೇಷವಾದ ಕ್ಷೀರಪಥಗಳ ಅಥವಾ ತಾರಾ ಪುಂಜಗಳ ಸಮೂಹ (ಗ್ಯಾಲಕ್ಸಿ ಕ್ಲಸ್ಟರ್‌)ದ ಚಿತ್ರವನ್ನು ೨೦೧೮ರಲ್ಲಿ ಸೆರೆಹಿಡಿದಿದೆ. ಅದು ನಮ್ಮ ಗ್ಯಾಲಕ್ಷಿ ಅಥವಾ ಕ್ಷೀರಪಥಕ್ಕಿಂತ ನೂರು ಪಟ್ಟು ದೊಡ್ಡದು ಎಂದು ಹೇಳಲಾಗಿದೆ.[೩೧][೩೨]

ಅದ್ಭುತ ಸೃಷ್ಟಿ

[ಬದಲಾಯಿಸಿ]
ಅಸದ್ವಾ ಇದಮಗ್ರ ಆಸೀತ್ |
ತತೋ ವೈ ಸದಜಾಯತ ||
ತಮಾತ್ಮಾನಂ ಸ್ವಂ ಕುರುತ |
ತಸ್ಮಾತ್ತಸ್ಸುಕೃತಮುಚ್ಯತ ಇತಿ ||
ತೈತ್ತರೀಯೋಪನಿಷತ್'ನ ಒಂದು ಪದ್ಯ

ಭಾವಾರ್ಥ

ಮೊದಲು ಇದು ಅಸತ್ತೇ (ಅವ್ಯಕ್ತ) ಆಗಿತ್ತು. ಅದರಿಂದಲೇ ಸತ್ (ವ್ಯಕ್ತವು) ಹುಟ್ಟಿತು. ಅದು ತನ್ನನ್ನು ತಾನೇ ಮಾಡಿಕೊಂಡಿತು. ಆದ್ದರಿಂದ ಇದು ಚೆನ್ನಾಗಿ ಮಾಡಿದ್ದು ಎನಿಸಿದೆ.

  • 1.ಜಗತ್ತುಗಳ ಹುಟ್ಟು ಸಾವು; ಲೇಖಕ ಆರ್.ಎಲ್.ನರಸಿಂಹಯ್ಯ ಕಾವ್ಯಾಲಯ ಮೈಸೂರು.(೧೯೫೨):ಖಭೌತ ವಿಜ್ಞಾನ ಪ್ರವೇಶಿಕೆ, ಆರ್.ಎಲ್. ನರಸಿಂಹಯ್ಯ ಭೌತ ವಿಜ್ಞಾನ ಶಾಲೆ,ಸೆಂಟ್ರಲ್' ಕಾಲೇಜು ಬೆಂಗಳೂರು.ಪುಟ.೧೫೮.(ಖಭೌತ ವಿಜ್ಞಾನದ ಇಂಗ್ಲಿಷ್' ಪದಗಳಿಗೆ ಕನ್ನಡ ಪರ್ಯಾಯ ಪದಕ್ಕೆ ಈ ಗ್ರಂಥವನ್ನು ಅನುಸರಿಸಿದೆ).

ಉಲ್ಲೇಖಗಳು

[ಬದಲಾಯಿಸಿ]
  1. ಪುರಾಣ-ಭಾರತಕೋಶ-ಪು೧೬೮
  2. http://www.space.com/29270-milky-way-size-larger-than-thought.html
  3. Boss, A. P.; Durisen, R. H. (2005). "Chondrule-forming Shock Fronts in the Solar Nebula: A Possible Unified Scenario for Planet and Chondrite Formation; https://arxiv.org/abs/astro-ph/0501592
  4. "Sun: Facts & Figures". NASA. Archived from the original on 2 January 2008. Retrieved 14 May 2009.
  5. Crumey, Andrew (2014). "Human contrast threshold and astronomical visibility". Monthly Notices of the Royal Astronomical Society 442: 2600–2619.
  6. Galaxies and how to observe them. Astronomers' observing guides. Springe [೧]
  7. McMillan, P. J. (July 2011).
  8. "Mass models of the Milky Way". Monthly Notices of the Royal Astronomical Society 414 (3): 2446–2457.http://adsabs.harvard.edu/abs/2011MNRAS.414.2446M
  9. NASA-Smithsonian Education Forum on the Structure and Evolution of the Universe, at the Harvard Smithsonian Center for Astrophysics. Retrieved March 13, 2013."How Big is Our Universe: How far is it across the Milky Way?[೨]
  10. Kafle, Prajwal Raj; et al. (October 2014). "On the Shoulders of Giants: Properties of the Stellar Halo and the Milky Way Mass Distribution". The Astrophysical Journal 794 (1): 17. arXiv:1408.1787. Bibcode:2014ApJ...794...59K. doi:10.1088/0004-637X/794/1/59
  11. Villard, Ray (January 11, 2012). "The Milky Way Contains at Least 100 Billion Planets According to Survey". HubbleSite.org. Archived from the original on July 23, 2014 [೩]
  12. (January 11, 2012). "One or more bound planets per Milky Way star from microlensing observations"[೪] Archived 2016-05-10 ವೇಬ್ಯಾಕ್ ಮೆಷಿನ್ ನಲ್ಲಿ.[೫]
  13. Gillessen, S.; et al. (2009). "Monitoring stellar orbits around the massive black hole in the Galactic Center"."Stellar populations in the Galactic bulge.
  14. Modelling the Galactic bulge with TRILEGAL". Astronomy and Astrophysics
  15. http://adsabs.harvard.edu/abs/2010AcA....60...55M
  16. https://books.google.co.in/books?id=r_l5AK9DdXsC&lpg=PA34&redir_esc=y
  17. "Effects of Tidal Shocks on the Evolution of Globular Clusters". The Astrophysical Journal 522
  18. https://ned.ipac.caltech.edu/level5/Sept02/Keel/Keel7.html
  19. "ಆರ್ಕೈವ್ ನಕಲು". Archived from the original on 2021-08-09. Retrieved 2021-07-21.
  20. Garlick, Mark Antony (2002). The Story of the Solar System. Cambridge University. p. 46. I
  21. Overholt, A. C.; Melott, A. L.; Pohl, M. (2009). "Testing the link between terrestrial climate change and galactic spiral arm transit". The Astrophysical Journal 705 (2): L101–L103. arXiv:0906.2777.
  22. del Peloso, E. F. (2005). "The age of the Galactic thin disk from Th/Eu nucleocosmochronology. III. Extended sample". Astronomy and Astrophysics 440 (3)
  23. "The Milky Way, an Exceptionally Quiet Galaxy: Implications for the Formation of Spiral Galaxies". The Astrophysical Journal 662 (1): 322–334.
  24. Sergey E. Koposov, Vasily Belokurov, Gabriel Torrealba, N. Wyn Evans (10 March 2015). "Beasts of the Southern Wild. Discovery of a large number of Ultra Faint satellites in the vicinity of the Magellanic Clouds". The Astrophysical Journal 805: 130
  25. Astrophysicist maps out our own galaxy's end
  26. Kogut, A.; et al. (1993). "Dipole anisotropy in the COBE differential microwave radiometers first-year sky maps".
  27. "On the origin of the Local Group's peculiar velocity". The Astrophysical Journal 645 (2):
  28. WordWeb
  29. "ಪ್ರಖರ ಬೆಳಕಿನ ಅವಳಿ ನಕ್ಷತ್ರ ಪತ್ತೆ". Archived from the original on 2016-10-01. Retrieved 2016-10-01.
  30. "ಮಬ್ಬು ಉಪ ತಾರಾಪುಂಜ ಪತ್ತೆ;25 Nov, 2016". Archived from the original on 2016-11-29. Retrieved 2016-12-02.
  31. ಆ್ಯಸ್ಟ್ರೋಸ್ಯಾಟ್‌ ಕಣ್ಣಲ್ಲಿ ಸೆರೆಯಾದ ತಾರಾಪುಂಜಗಳ ಸಮೂಹ
  32. ["Galaxy cluster IDCS J1426". Retrieved 11 January 2016.]


"https://kn.wikipedia.org/w/index.php?title=ಕ್ಷೀರಪಥ&oldid=1202372" ಇಂದ ಪಡೆಯಲ್ಪಟ್ಟಿದೆ