Open Knowledge
Contents

Defining Open in Open Data, Open Content and Open Knowledge

ಮುಕ್ತ ವ್ಯಾಖ್ಯಾನ

ಮುಕ್ತ ವ್ಯಾಖ್ಯಾನ

ಭಾಷಾಂತರ : ೧.೧.

ಪರಿಭಾಷೆ

ಜ್ಞಾನ ಎಂಬ ಪದ ಕೆಳಗಿನವುಗಳ ಸಾರಾಂಶವಾಗಿದೆ: ೧. ಸಂಗೀತ, ಚಲನಚಿತ್ರಗಳು, ಪುಸ್ತಕಗಳು ಹಾಗೂ ಇತ್ಯಾದಿ. ೨. ವೈಜ್ಞಾನಿಕ, ಚಾರಿತ್ರಿಕ, ಭೌಗೋಳಿಕ ಅಥವಾ ಇನ್ನಾವುದೇ  ರೀತಿಯ ಅಂಕಿ -ಸಂಖ್ಯೆ ಮಾಹಿತಿ. ೩. ಸರ್ಕಾರಿ ಮತ್ತು ಇತರೆ ಆಡಳಿತಾತ್ಮಕ ಮಾಹಿತಿ.

‘ತಂತ್ರಾಂಶವು’ software ಹಿಂದಿನ ಕೆಲಸಗಳಿಂದ ಈಗಾಗಲೇ ಸಮರ್ಪಕವಾಗಿ ಸಂಭೋಧಿಸಲ್ಪಟ್ಟಿರುವುದರಿಂದ, ಸ್ಪಷ್ಟ ಪ್ರಾಮುಖ್ಯತೆಯ ಹೊರತಾಗಿಯೂ ಅದನ್ನು ಇಲ್ಲಿ ಕೈಬಿಡಲಾಗಿದೆ.

‘ಕೃತಿ’ work ಪದವನ್ನು ವರ್ಗಾಯಿಸಲ್ಪಡುತ್ತಿರುವ ಯಾವುದೇ ಒಂದು ಅಂಶವನ್ನು ಅಥವಾ ಜ್ಞಾನವನ್ನು ಸೂಚಿಸಲು ಬಳಸಲಾಗುತ್ತದೆ.

‘ಸಂಕಲನವು’ package ಸ್ವತಃ ಒಂದು ಕೃತಿ ಆಗಿದ್ದರೂ ಕೂಡ, ಕೃತಿಗಳ ಸಂಗ್ರಹವನ್ನು ಸೂಚಿಸಲು ಸಹ ಈ ಪದವನ್ನು ಬಳಸಬಹುದು.

‘ಪರವಾನಗಿ’ License ಎಂಬ ಪದ ಕೃತಿಯು ಲಭ್ಯವಾಗುವಂತೆ ಮಾಡಲು ಕಾನೂನು ಪ್ರಕಾರ ಪಡೆದ ಅನುಮತಿಯನ್ನು ಸೂಚಿಸುತ್ತದೆ. ಒಂದು ವೇಳೆ ಯಾವುದೇ ಪರವಾನಗಿಯನ್ನು ಪಡೆಯಲಾಗಿಲ್ಲದಿದ್ದರೆ ಕೃತಿಯ ಲಭ್ಯತೆಯ ಸಮಯದಲ್ಲಿ ಚಾಲ್ತಿಯಿರುವ ಪೂರ್ವನಿಯೋಜಿತ ಕಾನೂನು ನಿಯಮಗಳು ಅನ್ವಯವಾಗುತ್ತವೆ ಎಂದು ಅರ್ಥೈಸಬೇಕು. ಉದಾ: ಹಕ್ಕು ಸ್ವಾಮ್ಯ

ವ್ಯಾಖ್ಯಾನ:

ಯಾವುದೇ ಒಂದು ಕೃತಿಯನ್ನು ‘ಮುಕ್ತ’ open ಎಂದು ಕರೆಯಬೇಕಾದರೆ ಅದರ ಹಂಚಿಕೆ ವಿಧಾನವು  ಕೆಳಗಿನ ನಿಯಮಗಳಿಗೆ ಅನುಸಾರವಾಗಿರಬೇಕು.

೧. ಪ್ರವೇಶ:

ಕೃತಿಯು  ಪೂರ್ಣರೂಪದಲ್ಲಿ ಲಭ್ಯವಿರಬೇಕು ಮತ್ತು ಅದರ ವೆಚ್ಚವು ಸಮಂಜಸ ಪುನರುತ್ಪಾದನೆಯ ವೆಚ್ಚವನ್ನು ಮೀರಬಾರದು. ಅಂದರೆ ಅಂತರ್ಜಾಲದ ಮೂಲಕ ಇಳಿಸಿಕೊಳ್ಳಲು download ಯಾವುದೇ ಶುಲ್ಕ ವಿಧಿಸಬಾರದು ಅಥವಾ ಯಾವುದೇ ಶುಲ್ಕವಿಲ್ಲದೆ ಅಂತರ್ಜಾಲದಿಂದ ತೆಗೆದುಕೊಳ್ಳಲು ಮತ್ತು ಮಾರ್ಪಾಡು ಮಾಡಲು ಅನುಕೂಲವಾಗಿರಬೇಕು.

ವಕ್ಕಣೆ: ಇದನ್ನು ಸಂಕ್ಷಿಪ್ತವಾಗಿ ‘ಸಾಮಾಜಿಕ ಮುಕ್ತತೆ’ ಎನ್ನಬಹುದು. ನೀವು ಕೇವಲ ಕೃತಿಯನ್ನು ವೀಕ್ಷಣೆ ಮಾಡುವ ಅವಕಾಶವಲ್ಲದೆ ಅದನ್ನು  ಹೊಂದುವ ಅವಕಾಶವನ್ನು ಪಡೆಯುವಿರಿ. ಒಟ್ಟಿನಲ್ಲಿ ಈ ವಿಧಾನವು ಒಂದು ಬಾರಿಗೆ ಮಾಹಿತಿ ಸಂಗ್ರಹದ data base ಕೆಲವೇ ಅಂಶಗಳಿಗೆ ಮಿತಪ್ರವೇಶ  ಕಲ್ಪಿಸುವ ಪರೋಕ್ಷ ವಿಧಾನಗಳನ್ನು ತಡೆಯುತ್ತದೆ.

###೨. ಪುನರ್ವಿತರಣೆ: ಯಾವುದೇ ವ್ಯಕ್ತಿಯು ತನ್ನ ಸ್ವಂತ ಕೃತಿ ಅಥವಾ ವಿವಿಧ ಮೂಲಗಳಿಂದ ಆಯ್ದ ಸಂಕಲನವನ್ನು ಮಾರಾಟ ಅಥವಾ ವಿತರಣೆ ಮಾಡದಂತೆ ಪರವಾನಗಿಯು  ನಿರ್ಬಂಧ  ವಿಧಿಸಬಾರದು. ಪರವಾನಗಿಯು ಅಂತಹ ಮಾರಾಟ ಅಥವಾ ವಿತರಣೆಯಿಂದ ಯಾವುದೇ ಗೌರವಧನ ಅಥವಾ ಶುಲ್ಕವನ್ನು ಅಪೇಕ್ಷಿಸಬಾರದು.

೩. ಮರುಬಳಕೆ:

ಪರವಾನಗಿಯು  ಮಾರ್ಪಾಡುಗಳಿಗೆ ಮತ್ತು ಮೂಲದಿಂದ ಆಯ್ದ ಕೃತಿಗಳ ನಿರ್ಮಾಣಕ್ಕೆ ಅವಕಾಶ ಕೊಡಬೇಕು  ಮತ್ತು ಅವುಗಳನ್ನು ಮೂಲಕೃತಿಗಳ ನಿಬಂಧನೆಗಳಿಗನುಸಾರ  ವಿತರಿಸಲು ಅವಕಾಶ ಮಾಡಿಕೊಡಬೇಕು.

ವಕ್ಕಣೆ: ಈ ಅಧಿನಿಯಮವು ಮಾರ್ಪಡಿಸಿದ ಕೃತಿಗಳ ಮರುವಿತರಣೆ ಮೂಲಕೃತಿಗಳ ನಿಬಂಧನೆಗಳಿಗನುಸಾರ ಇರಬೇಕೆಂದು ಬಯಸುವ ಹಾನಿಕಾರಕ ಸದೃಶ ಹಂಚಿಕೆ share-alike ಪರವಾನಗಿಗಳನ್ನು ನಿರ್ಬಂಧಿಸುವುದಿಲ್ಲ.

###೪. ತಾಂತ್ರಿಕ ನಿರ್ಬಂಧಗಳು ಇರಬಾರದು: ಮೇಲ್ಕಾಣಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ಯಾವುದೇ ತಾಂತ್ರಿಕ ಅಡ್ಡಿಯಾಗದ ರೂಪದಲ್ಲಿ ಕೃತಿಗಳನ್ನು ಕೊಡಬೇಕು. ಮುಕ್ತ ದತ್ತಾಂಶ ವಿನ್ಯಾಸದಲ್ಲಿ  open data format ಕೃತಿಗಳನ್ನು ಹಂಚುವುದರ ಮೂಲಕ ಇದನ್ನು ಸಾಧಿಸಬಹುದು: ಮುಕ್ತ ದತ್ತಾಂಶ ವಿನ್ಯಾಸದ ನಿರ್ದಿಷ್ಟ ವಿವರಣೆಗಳು ಬಹಿರಂಗ ಹಾಗೂ ಉಚಿತವಾಗಿ ದೊರೆಯುತ್ತವೆ  ಮತ್ತು ಹಣಕಾಸಿನ ಅಥವಾ ಇನ್ನಾವುದೇ ನಿರ್ಬಂಧಗಳಿಲ್ಲದೆ ಇವುಗಳನ್ನು ಬಳಸಬಹುದು.

೫. ಆರೋಪಣೆ:

ಪರವಾನಗಿಯು ಕೊಡುಗೆದಾರರು ಮತ್ತು ಕೃತಿಗಳ ನಿರ್ಮಾತೃಗಳಿಗೆ ಅವುಗಳ  ಮರುಬಳಕೆ ಮತ್ತು ಪುನರ್ವಿತರಣೆಯಲ್ಲಿ ಆರೋಪಣೆ attribution ಎಂಬ ಷರತ್ತನ್ನು ವಿಧಿಸಬಹುದು. ಒಂದು ವೇಳೆ ಈ ಷರತ್ತು ವಿಧಿಸಿದರೆ ಅದು ಹೊರೆಯಾಗಬಾರದು. ಒಂದು ವೇಳೆ ಆರೋಪಣೆ ಮಾಡಲೇಬೇಕಾಗಿ ಬಂದಲ್ಲಿ ಕೃತಿಯು ಆರೋಪಣೆಗಳ ಸಂಪೂರ್ಣ ಪಟ್ಟಿಯನ್ನು ಒಳಗೊಂಡಿರಬೇಕು.

೬. ಸಮಗ್ರತೆ:

ಮೂಲಕೃತಿಗಳಿಂದ ಮಾರ್ಪಾಡಾಗಿ ವಿತರಣೆಯಾಗುವ ಕೃತಿಗಳು ಮೂಲಗಳಿಗಿಂತ ಭಿನ್ನ ಹೆಸರು ಮತ್ತು ಆವೃತ್ತಿ  ಸಂಖ್ಯೆ ಹೊಂದಿರಬೇಕೆಂಬ ಷರತ್ತನ್ನು ಪರವಾನಗಿಯು ಬಯಸಬಹುದು.

೭.ವ್ಯಕ್ತಿ ಮತ್ತು ಗುಂಪುಗಳ ಆಧಾರದ ಮೇಲೆ ತಾರತಮ್ಯ ಮಾಡದಿರುವುದು:

ಪರವಾನಗಿಯು ಯಾವುದೇ ವ್ಯಕ್ತಿ ಅಥವಾ ಗುಂಪುಗಳ ಆಧಾರದ ಮೇಲೆ ತಾರತಮ್ಯ ಮಾಡಬಾರದು.

ವಕ್ಕಣೆ: ಈ ಪ್ರಕ್ರಿಯೆಯಿಂದ ಗರಿಷ್ಠ ಪ್ರಯೋಜನ ಪಡೆಯಲು ವಿವಿಧ  ವ್ಯಕ್ತಿ ಮತ್ತು ಗುಂಪುಗಳು ಮುಕ್ತಜ್ಞಾನಕ್ಕೆ ಕೃತಿಗಳನ್ನು ಕೊಡುಗೆ ನೀಡಲು ಸಮಾನ ಅವಕಾಶ ಕೊಡಬೇಕು. ಮುಕ್ತಜ್ಞಾನ ಪರವಾನಗಿಯು ಯಾವುದೇ ವ್ಯಕ್ತಿ ಅಥವಾ ಗುಂಪುಗಳನ್ನು ಈ ಪ್ರಕ್ರಿಯೆಯಿಂದ ಪ್ರತಿಬಂಧಿಸುವುದನ್ನು ನಿಷೇಧಿಸುತ್ತದೆ. ವಕ್ಕಣೆ: ಇದನ್ನು ನೇರವಾಗಿ ಮುಕ್ತ ಮೂಲ ವ್ಯಾಖ್ಯೆಯ Open Source Definition ೫ನೆಯ ಅಂಶದಿಂದ ತೆಗೆದುಕೊಳ್ಳಲಾಗಿದೆ.

೮. ಯಾವುದೇ ಕಾರ್ಯಕ್ಷೇತ್ರದ ಆಧಾರದ ಮೇಲೆ ತಾರತಮ್ಯ ಮಾಡದಿರುವುದು:

ಯಾವುದೇ ಒಂದು ನಿರ್ಧಿಷ್ಟ ಕಾರ್ಯಕ್ಷೇತ್ರದಲ್ಲಿ ಕೃತಿಯ ಬಳಕೆಯಾಗುವುದನ್ನು ಪರವಾನಗಿಯು ನಿಷೇಧಿಸಬಾರದು. ಉದಾ: ವ್ಯವಹಾರದಲ್ಲಿ ಅಥವಾ ಅನುವಂಶಿಕತೆಯ ಸಂಶೋಧನೆಯಲ್ಲಿ ಇದರ ಬಳಕೆಯನ್ನು ಪರವಾನಗಿಯು ನಿಷೇಧಿಸಬಾರದು.

ವಕ್ಕಣೆ: ಈ ಷರತ್ತಿನ ಮೂಲ ಉದ್ದೇಶವು ಮುಕ್ತ ಮೂಲಗಳ ವಾಣಿಜ್ಯ ಬಳಕೆಯನ್ನು ಪರವಾನಗಿ  ಬಲೆಗಳ ಮೂಲಕ ಪ್ರತಿಬಂಧಿಸುವುದನ್ನು  ನಿರ್ಬಂಧಿಸುವುದಾಗಿದೆ. ವಾಣಿಜ್ಯ ಬಳಕೆದಾರರು ತಮ್ಮನ್ನು ಬಹಿಷ್ಕರಿಸಲಾಗಿದೆ ಎಂದು ತಿಳಿಯದೆ ಮುಕ್ತವಾಗಿ ನಮ್ಮ ಸಮುದಾಯವನ್ನು ಸೇರಬೇಕೆಂಬುದು ನಮ್ಮ ಆಶಯ.

೯. ಪರವಾನಗಿ ವಿತರಣೆ:

ಕೃತಿಗೆ ಸಂಬಂಧಿಸಿದ ಎಲ್ಲ ಹಕ್ಕುಗಳನ್ನು ಯಾವುದೇ ಹೆಚ್ಚುವರಿ ಪರವಾನಗಿಯನ್ನು ಪಡೆಯದೇ, ಕೃತಿಯನ್ನು ಪುನರ್ವಿತರಣೆ ಮೂಲಕ ಹೊಂದಿದ ವ್ಯಕ್ತಿ ಅಥವಾ ಪಕ್ಷಗಳು ಹೊಂದಬಹುದು. ವಕ್ಕಣೆ: ಈ ಷರತ್ತಿನ ಮೂಲ ಉದ್ದೇಶವು ಮುಕ್ತಜ್ಞಾನನಕ್ಕೆ ಪ್ರವೇಶವನ್ನು ಪರೋಕ್ಷವಾಗಿ  ’ಬಹಿರಂಗಪದಿಸದಿರುವಿಕೆ’ ಕರಾರಿನ ಮೂಲಕ ಪ್ರತಿಬಂಧಿಸುವುದನ್ನು ನಿರ್ಬಂಧಿಸುವುದಾಗಿದೆ.

ವಕ್ಕಣೆ: ಇದನ್ನು ನೇರವಾಗಿ ಮುಕ್ತ ಮೂಲ ವ್ಯಾಖ್ಯೆಯ  ೭ ನೆಯ ಅಂಶದಿಂದ ತೆಗೆದುಕೊಳ್ಳಲಾಗಿದೆ.

೧೦. ಪರವಾನಗಿಯು ನಿರ್ದಿಷ್ಠ ಸಮಗ್ರ ಪ್ರಸ್ತಾವಕ್ಕೆ ಸೀಮಿತವಾಗಿರಬಾರದು.

ಕೃತಿಗೆ ಹೊಂದಿಕೊಂಡಿರುವ ಹಕ್ಕುಗಳು ನಿರ್ದಿಷ್ಠ ಸಮಗ್ರ ಸಂಕಲನ package ಭಾಗವಾಗಿರುವ ಕೃತಿಗಳ ಮೇಲೆ ಅವಲಂಬನೆಯಾಗಿರಬಾರದು. ಯಾವುದೇ ಒಂದು ಕೃತಿಯನ್ನು ಸಮಗ್ರ ಸಂಕಲನದಿಂದ ಆಯ್ದು ತೆಗೆದು ವಿತರಿಸಿದರೆ, ಅದನ್ನು ಪಡೆದ ಎಲ್ಲಾ ಪಕ್ಷಗಳಿಗೂ ಮೂಲ ಸಮಗ್ರ ಪ್ರಸ್ತಾವದೊಡನೆ ಮಂಜೂರಾದ ಹಕ್ಕುಗಳು ಅನ್ವಯಿಸುತ್ತವೆ.

ವಕ್ಕಣೆ: ಇದನ್ನು ನೇರವಾಗಿ ಮುಕ್ತ ಮೂಲ ವ್ಯಾಖ್ಯೆಯ ೮ ನೆಯ ಅಂಶದಿಂದ ತೆಗೆದುಕೊಳ್ಳಲಾಗಿದೆ.

೧೧. ಇತರ ಕೃತಿಗಳ ಹಂಚಿಕೆಯನ್ನು ಪರವಾನಗಿಯು ನಿರ್ಬಂಧಿಸಬಾರದು.

ಪರವಾನಗಿ ಪಡೆದ ಕೃತಿಗಳ ಜೊತೆ ಇತರ ಕೃತಿಗಳು ಹಂಚಿಕೆಯಾಗುವುದನ್ನು  ನಿರ್ಬಂಧಿಸಬಾರದು. ಒಂದೇ ಮಾಧ್ಯಮದಲ್ಲಿ ಪ್ರಕಟವಾಗುವ ಎಲ್ಲಾ ಕೃತಿಗಳು ಮುಕ್ತ ಎಂಬ ಒತ್ತಾಯವನ್ನು ಪರವಾನಗಿಯು ವಿಧಿಸಬಾರದು.

ವಕ್ಕಣೆ: ಮುಕ್ತ ಜ್ಞಾನದ ವಿತರಕರು ತಮ್ಮದೇ ಆದ ಆಯ್ಕೆಗಳನ್ನು ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆ. ತದ್ರೂಪ ಹಂಚಿಕೆ share alike ಪರವಾನಗಿಗಳು ಇದಕ್ಕೆ ಅನುಗುಣವಾಗಿವೆ ಎಂಬುದನ್ನು ಇಲ್ಲಿ ಗಮನಿಸಬಹುದು. ಏಕೆಂದರೆ ಆ ನಿಬಂಧನೆಗಳು ಕೃತಿಯು ಇಡೀಯ ಒಂದು ಭಾಗವಗಿದ್ದರೆ ಮಾತ್ರ ಅನ್ವಯಿಸುತ್ತವೆ.

ವಕ್ಕಣೆ: ಇದನ್ನು ನೇರವಾಗಿ ಮುಕ್ತ ಮೂಲ ವ್ಯಾಖ್ಯೆಯ ೯ ನೆಯ ಅಂಶದಿಂದ ತೆಗೆದುಕೊಳ್ಳಲಾಗಿದೆ.

ಅನುವಾದ: ಉಮೇಶ ಹುಡೇದಮನಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ([email protected]) ಮತ್ತು ಡಾ. ವಿಶಾಲಾ. ಬಿ.ಕೆ. ಸೆಂಟ್ ಆಗ್ನೆಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ  ಕೇಂದ್ರ, ಮಂಗಳೂರು ([email protected]).