ವಿಷಯಕ್ಕೆ ಹೋಗು

ಮಾರಿಷಸ್

Coordinates: 20°12′S 57°30′E / 20.2°S 57.5°E / -20.2; 57.5
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

20°12′S 57°30′E / 20.2°S 57.5°E / -20.2; 57.5

Republic of Mauritius
Repiblik Moris
République de Maurice
Flag of Mauritius
Flag
Coat of arms of Mauritius
Coat of arms
Motto: "Stella Clavisque Maris Indici"  (ಲ್ಯಾಟಿನ್)
"Star and Key of the Indian Ocean"
Anthem: Motherland
Location of Mauritius
CapitalPort Louis
Official languagesEnglish[][]
VernacularMauritian Creole, ಫ್ರೆಂಚ್, English
Demonym(s)Mauritian
GovernmentParliamentary republic
• President
Anerood Jugnauth
Navin Ramgoolam
Independence 
from the United Kingdom
• Date
12 March 1968
• Republic
12 March 1992
Area
• Total
2,040 km2 (790 sq mi) (179th)
• Water (%)
0.05
Population
• 2009 estimate
1,288,000[] (151st)
• 2000 census
1,179,137
• Density
631.4/km2 (1,635.3/sq mi) (18th)
GDP (PPP)2008 estimate
• Total
$15.273 billion[]
• Per capita
$12,011[]
GDP (nominal)2008 estimate
• Total
$8.738 billion[]
• Per capita
$6,871[]
HDI (2004)Increase 0.802
Error: Invalid HDI value · 65th
CurrencyMauritian rupee
Time zoneUTC+4 (MUT)
• Summer (DST)
UTC+5 (2008 only)[][]
Driving sideleft
Calling code230
ISO 3166 codeMU
Internet TLD.mu

ಮಾರಿಷಸ್ (pronounced /məˈrɪʃəs/; French: L’île Maurice pronounced: [lil mɔˈʁis], ಮಾರಿಷಿಯನ್ ಕ್ರೆಯೋಲ್: ಮೋರಿಸ್ , ತಮಿಳು:மொரிசிய குடியரசு[], ಹಿಂದಿ:मॉरिशस), ಅಧಿಕೃತವಾಗಿ ಮಾರಿಷಸ್ ಗಣರಾಜ್ಯ ಎಂದು ಕರೆಯಲ್ಪಡುವ ಇದು, French: République de Maurice ಆಫ್ರಿಕಾ ಖಂಡದ ಕಡಲ ಕಿನಾರೆಗೆ ಹೊಂದಿಕೊಂಡಂತೆ ಇರುವ ದ್ವೀಪರಾಷ್ಟ್ರವಾಗಿದ್ದು, ಹಿಂದೂ ಮಹಾಸಾಗರದ ನೈಋತ್ಯಕ್ಕೆ ಹಾಗೂ ಮಡಗಾಸ್ಕರ್‌ನ 900 kilometres (560 mi) ಪೂರ್ವದಲ್ಲಿ ಕಂಡುಬರುತ್ತದೆ. ಈ ಗಣರಾಜ್ಯವು ಮಾರಿಷಸ್‌ ಸೇರಿದಂತೆ, ಕಾರ್ಗಡೊಸ್ ಕಾರಜೊಸ್, ರೋಡ್ರಿಗಾಸ್‌ ಮತ್ತು ಅಗಾಲೆಗ ದ್ವೀಪಗಳನ್ನೂ ಒಳಗೊಂಡಿದೆ. ಈಶಾನ್ಯಕ್ಕೆ ರೋಡ್ರಿಗಾಸ್‌ 570 km (350 mi) ದ್ವೀಪ ಹಾಗೂ ನೈಋತ್ಯಕ್ಕೆ ಫ್ರೆಂಚರ ರೀಯೂನಿಯನ್‌/ರ್ಯೆನಿಯನ್ ‌ದ್ವೀಪದೊಂದಿಗೆ ಹೊಂದಿಕೊಂಡಂತೆ 200 km (120 mi) ಇರುವ ಮಾರಿಷಸ್ ದ್ವೀಪವು ಮಸ್ಕರೀನ್ ದ್ವೀಪಸ್ತೋಮದ ಒಂದು ಭಾಗವಾಗಿದೆ.

ಮಾರಿಷಸ್ ದ್ವೀಪವು ಡೋಡೊಗಳ ಏಕೈಕ ತಿಳಿದಿರುವ ವಾಸಸ್ಥಾನವೆಂದೇ ಪ್ರಖ್ಯಾತಿ ಹೊಂದಿದೆ. ಮಾರಿಷಸ್‌ನಲ್ಲಿ ಯುರೋಪಿಯನ್ನರು 1600ರಲ್ಲಿ ಡೋಡೊವನ್ನು ಪ್ರಥಮ ಬಾರಿಗೆ ನೋಡಿದ್ದು, ಅದಾಗಿ ಕೆಲವೇ ವರ್ಷಗಳಲ್ಲಿ ಅಂದರೆ ಕೇವಲ ಎಂಬತ್ತಕ್ಕಿಂತ ಕಡಿಮೆ ವರ್ಷಗಳಲ್ಲಿಯೇ ಅವು ಸಂಪೂರ್ಣವಾಗಿ ಅವನತಿ ಹೊಂದಿದವು.

ಇತಿಹಾಸ

[ಬದಲಾಯಿಸಿ]
ಪೋರ್ಟ್ ಲ್ಯೂಯಿಸ್‌ ರಂಗಮಂದಿರವನ್ನು ಹೊಂದಿರುವ c.1900-1910ರ ಅಂಚೆಚೀಟಿ.

ಈ ದ್ವೀಪದ ಬಗ್ಗೆ ಅರಬ್‌ ಹಾಗೂ ಆಸ್ಟ್ರೊನೇಸಿಯನ್ ನಾವಿಕರು 10ನೇ ಶತಮಾನದಷ್ಟು ಪೂರ್ವದಲ್ಲಿಯೇ ತಿಳಿದಿದ್ದರು.[] 1507ರಲ್ಲಿ ಪ್ರಥಮ ಬಾರಿಗೆ ಭೇಟಿ ನೀಡಿದ ಪೋರ್ಚುಗೀಸ್ ನಾವಿಕರು ಅಲ್ಲೊಂದು ನೆಲೆ ಸ್ಥಾಪಿಸಿದರೂ ಖಾಲಿ ಬಿಟ್ಟು ಹಿಂತಿರುಗಿದರು. ಸ್ಪೈಸ್‌ ದ್ವೀಪಸ್ತೋಮಕ್ಕೆ ಮೂರು ಹಡಗುಗಳಲ್ಲಿ ತೆರಳಿದ ಎಂಟು ಹಡಗುಗಳ ಡಚ್‌ ದ್ವಿತೀಯ ನೌಕಾಪಡೆ 1598ರಲ್ಲಿ ಚಂಡಮಾರುತದಿಂದ ತತ್ತರಿಸಿ ಆಸರೆಗಾಗಿ ಈ ದ್ವೀಪಕ್ಕೆ ಬಂದರು, ಹಾಗೂ ಅದೇ ಸಮಯದಲ್ಲಿ ನೆದರ್ಲೆಂಡ್‌ನ ಪ್ರಾಂತಾಧಿಪತಿ ರಾಜಕುಮಾರ 'ನಸ್ಸಉ'ನ ಮಾರಿಸ್‌ರ ಗೌರವಾರ್ಥವಾಗಿ ಆ ದ್ವೀಪವನ್ನು ಹೆಸರಿಸಲಾಯಿತು.[][೧೦] ಡಚ್ಚರು, ತಮ್ಮ ಮೊದಲ ಸ್ಥಿರವಾದ ವಸಾಹತನ್ನು 1638ರಲ್ಲಿ ಸ್ಥಾಪಿಸಿದರು. ಚಂಡಮಾರುತದಂತಹ ಅಪಾಯಕಾರಿ ಹವಾಮಾನ ವೈಪರೀತ್ಯಗಳು ಹಾಗೂ ಹಾಳಾದ ವಸಾಹತುಗಳಿಂದಾಗಿ ಡಚ್ಚರು ಆ ದ್ವೀಪವನ್ನು ಕೆಲವು ದಶಕಗಳ ನಂತರ ತೊರೆದರು. ಫ್ರಾನ್ಸ್‌, ಪಕ್ಕದ ಐಲ್ ಬೋರ್ಬನ್‌ (ಈಗಿನ ರೀಯೂನಿಯನ್‌) ಮೇಲೆ ಮೊದಲೇ ಸ್ವಾಮ್ಯ ಸಾಧಿಸಿದ್ದ ಫ್ರಾನ್ಸ್‌ ಮಾರಿಷಸ್‌ಅನ್ನು 1715ರಲ್ಲಿ ವಶಪಡಿಸಿಕೊಂಡಿತು, ಹಾಗೂ ನಂತರ ದ್ವೀಪಕ್ಕೆ ಐಲ್ ಡೆ ಫ್ರಾನ್ಸ್‌ (ಐಸ್‌ಲ್‌ ಆಫ್‌ ಫ್ರಾನ್ಸ್‌) ಎಂದು ಮರುನಾಮಕರಣ ಮಾಡಿತು. ಫ್ರೆಂಚರ ಆಳ್ವಿಕೆಯಲ್ಲಿ, ಸಕ್ಕರೆ ಉತ್ಪಾದನೆಯನ್ನು ಅವಲಂಬಿಸಿದ ಆರ್ಥಿಕ ಮಟ್ಟವು ಉತ್ತಮ ಸ್ಥಿತಿಯಲ್ಲಿತ್ತು. ನೆಪೋಲಿಯನಿಕ್ ಯುದ್ಧಗಳ (1803-1815) ಸಂದರ್ಭದಲ್ಲಿ ಬ್ರಿಟಿಷರು ದ್ವೀಪದ ಮೇಲೆ ಹಿಡಿತ ಸಾಧಿಸಿದರು. ಗ್ರಾಂಡ್ ಪೋರ್ಟ್‌ ಯುದ್ಧದಲ್ಲಿ ನೆಪೋಲಿಯನ್‌ನ ಬ್ರಿಟಿಷರ ವಿರುದ್ಧದ ಏಕೈಕ ನೌಕಾಯುದ್ಧ ವಿಜಯವಾದ ಜಯಿಸಿದರೂ, ಮೂರು ತಿಂಗಳ ನಂತರ ಕ್ಯಾಪ್ ಮಲ್‌ಹ್ಯೂರ್ಯೂಕ್ಸ್‌ನಲ್ಲಿ ಬ್ರಿಟಿಷರು ನಡೆಸಿದ ಆಕ್ರಮಣದಲ್ಲಿ ಫ್ರೆಂಚರು ಶರಣಾದರು. ಫ್ರೆಂಚರ ಆಸ್ತಿ ಪಾಸ್ತಿಗಳನ್ನು ಅವರಿಗೇ ಬಿಡಬೇಕು ಹಾಗೂ ದಂಡನ್ಯಾಯ ಹಾಗೂ ನಾಗರಿಕ ವ್ಯವಹಾರಗಳಲ್ಲಿ ಫ್ರೆಂಚ್‌ ಭಾಷೆ ಮತ್ತು ಫ್ರಾನ್ಸ್‌ನ ಕಾನೂನುಗಳನ್ನು ಬಳಸಲು ಬಿಡಬೇಕೆಂಬ ಷರತ್ತುಗಳಿಗೆ ಒಳಪಟ್ಟು 1810ರ ಡಿಸೆಂಬರ್‌ 3ರಂದು ಅಧಿಕೃತವಾಗಿ ಶರಣಾಗತರಾದರು. ಆಂಗ್ಲರ ಆಳ್ವಿಕೆಯಲ್ಲಿ, ದ್ವೀಪಕ್ಕೆ ಮೂಲ ಹೆಸರನ್ನೇ ಇಡಲಾಯಿತು.

ರಾಜಕೀಯ

[ಬದಲಾಯಿಸಿ]
ಚಿತ್ರ:Le reduit (5).gif
ರಾಷ್ಟ್ರಪತಿಗಳ ಅಧಿಕೃತ ನಿವಾಸ, ಲಿ ಚಟೂ ಡಿ ರೆಡುಯಿಟ್,

ಸರ್ಕಾರವು ಐದು ವರ್ಷಗಳಿಗೊಮ್ಮೆ ಚುನಾಯಿತವಾಗುತ್ತದೆ. ರೋಡ್ರಿಗಾಸ್‌ ದ್ವೀಪದ ಕೆಲವು ಚುನಾವಣಾ ಕ್ಷೇತ್ರಗಳೂ ಸೇರಿದಂತೆ ಎಲ್ಲ 20 ಪ್ರಮುಖ ಚುನಾವಣಾ ಕ್ಷೇತ್ರಗಳಲ್ಲಿ ಇತ್ತೀಚೆಗೆ ಅಂದರೆ 2005ರ ಜುಲೈ 3ರಂದು ಸಾರ್ವತ್ರಿಕ ಚುನಾವಣೆಗಳು ನಡೆದವು. ಐತಿಹಾಸಿಕವಾಗಿ, ಇಲ್ಲಿಯ ಚುನಾವಣೆಗಳು ಎರಡು ಪ್ರಮುಖ ರಾಜಕೀಯ ಪಕ್ಷಗಳ ಮೈತ್ರಿಕೂಟಕ್ಕೆ ಇರುವ ಕಣವಾಗಿ ಮಾರ್ಪಾಡಾಗಿದೆ.

ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ, ಮಾರಿಷಸ್ ಹಿಂದೂ ಮಹಾಸಾಗರ ಪ್ರಾಧಿಕಾರ, ಆಫ್ರಿಕಾದ ದಕ್ಷಿಣಭಾಗದ ಅಭಿವೃದ್ಧಿ ಸಮುದಾಯ ಹಾಗೂ ಕಾಮನ್‌ವೆಲ್ತ್‌ ರಾಷ್ಟ್ರಗಳ ಒಕ್ಕೂಟ ಮತ್ತು ಲಾ ಫ್ರಾಂಕೊಪೋನಿ/ಯೆ (ಫ್ರೆಂಚ್‌ ಮಾತನಾಡುವ ರಾಷ್ಟ್ರಗಳು), ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಭಾಗಿಯಾಗಿದೆ. ಮಾರಿಷಸ್‌ನ ರಾಜಕೀಯದ ಪ್ರಮುಖ ಲೇಖನದಲ್ಲಿ ಮತ್ತಷ್ಟು ಸಂಪೂರ್ಣ ಪಟ್ಟಿಯು ಸಿಗುತ್ತದೆ.

2006ರಲ್ಲಿ, ಮಾರಿಷಸ್‌ ಪೋರ್ಚುಗೀಸ್‌ ಮಾತನಾಡುವ ರಾಷ್ಟ್ರಗಳಿಗೆ ಮತ್ತಷ್ಟು ಹತ್ತಿರವಾಗಲು ಸಹಾಯಕವಾಗುವುದರಿಂದ ಪೋರ್ಚುಗೀಸ್‌ ಭಾಷಿಕ ದೇಶಗಳ ಸಮುದಾಯಕ್ಕೆ (CPLP) ನಿರೀಕ್ಷಣಾ ಸದಸ್ಯನಾಗಲು ಕೋರಿತು.[೧೧]

ಆಫ್ರಿಕಾ ಆಡಳಿತದ ಇಬ್ರಾಹಿಂ ಸೂಚಿಯಂತೆ ಇಡೀ ಆಫ್ರಿಕಾದಲ್ಲಿ ಮಾರಿಷಸ್ ಉತ್ತಮ ಆಳ್ವಿಕೆಯುಳ್ಳ ರಾಷ್ಟ್ರವಾಗಿದೆ, ಹಾಗೂ ಆಡಳಿತದ ಈ ಮಾಪನವು ಹಲವಾರು ವಿಭಿನ್ನ ಚರಗಳನ್ನು ಅವಲಂಬಿಸಿದೆ. ಈ ಸೂಚಿಯು ಎಲ್ಲಾ 5 ಪ್ರಮುಖ ವರ್ಗಗಳಲ್ಲಿ ಮಾರಿಷಸ್ ಪಡೆದಿರುವ ಅತ್ಯುನ್ನತ ಶ್ರೇಣಿಯನ್ನು ತೋರಿಸುತ್ತದೆ: ಸುರಕ್ಷತೆ ಮತ್ತು ರಕ್ಷಣೆ; ಕಾನೂನು ಪರಿಪಾಲನೆ, ಪಾರದರ್ಶಕತೆ ಹಾಗೂ ಭ್ರಷ್ಟಾಚಾರ; ಸಹಭಾಗಿತ್ವ ಹಾಗೂ ಮಾನವ ಹಕ್ಕುಗಳು; ಉತ್ತಮ ನಿರ್ವಹಿತ ಆರ್ಥಿಕ ಅಭಿವೃದ್ಧಿ; ಹಾಗೂ ಮಾನವ ಅಭಿವೃದ್ಧಿ.[೧]

ಕಾರ್ಯ ಸ್ಥಳ ಕಾರ್ಯ ಅಧ್ಯಕ್ಷರು ಅಧಿಕಾರ ಸ್ವೀಕೃತ ಸಮಯ ಧರ್ಮ
ಅಧ್ಯಕ್ಷ/ರಾಷ್ಟ್ರಪತಿ
ದೇಶದ ಮುಖ್ಯಸ್ಥ
ಸೇನಾಪಡೆ ಮುಖ್ಯಸ್ಥ
Rt.Hon ಸರ್ ಅನಿರೂದ್ ಜುಗ್ನಾತ್‌, Qc, KCMG, PC, GCSK (7 ಅಕ್ಟೋಬರ‍್ 2003). ಹಿಂದು
ಉಪ ರಾಷ್ಟ್ರಪತಿ/ಉಪಾಧ್ಯಕ್ಷರು ಅಂಗಿಡಿ ಚೆಟ್ಟಿಯಾರ್ 2 ನವೆಂಬರ್‌ 2007 ಹಿಂದು
ಪ್ರಧಾನ ಮಂತ್ರಿ Hon. Dr ನವಿನ್‌‌‌‌ಚಂದ್ರ ರಾಮ್‌ಗೂಲಂ GCSK ,MP 5 ಜುಲೈ 2005 ಹಿಂದು
ಉಪ ಪ್ರಧಾನ ಮಂತ್ರಿ Dr.ರಷೀದ್ ಬೀಬಿಜಾನ್, GCSK,MP 7 ಜುಲೈ 2005 ಮುಸ್ಲಿಂ
ಉಪ ಪ್ರಧಾನ ಮಂತ್ರಿ
ಪ್ರವಾಸೋದ್ಯಮ ಸಚಿವ
Hon. ಕ್ಸೇವಿಯರ್ ಲುಕ್ ದುವಲ್ GCSK ACCA, MP 7 ಜುಲೈ 2005 ಕ್ರೈಸ್ತ
ಉಪ ಪ್ರಧಾನ ಮಂತ್ರಿ
ಮಾರಿಷಸ್‌ನ ವಿತ್ತ ಮಂತ್ರಿ
Hon. Dr ರಾಮ ಸಿಥನೇನ್ GCSK, MP 7 ಜುಲೈ 2005 ಹಿಂದು
ಹಿರಿಯ ಮಂತ್ರಿ
ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಮಂತ್ರಿ
Hon. Mrs ಶೀಲಾಬಾಯಿ ಬಪ್ಪೂ GOSK, MP 7 ಜುಲೈ 2005 ಹಿಂದು

ಸೇನೆ ಮತ್ತು ಆರಕ್ಷಕ ಪಡೆ

[ಬದಲಾಯಿಸಿ]

ಮಾರಿಷಸ್‌ನ ಲ್ಲಿ ಪ್ರತ್ಯೇಕ ಸೇನೆ ಎಂಬ ವ್ಯವಸ್ಥೆಯಿಲ್ಲ. ಎಲ್ಲ ರೀತಿಯ ಸೇನೆ, ಆರಕ್ಷಕ, ಹಾಗೂ ಸುರಕ್ಷಣಾ ಕಾರ್ಯಗಳನ್ನೂ ಪೋಲಿಸ್ ಕಮೀಷನರ್‌ರ ನೇತೃತ್ವದಲ್ಲಿ ನಿರಂತರ-ಕಾರ್ಯನಿರತವಾಗಿರುವ 10,000 ಸಿಬ್ಬಂದಿಗಳು ನಿರ್ವಹಿಸುತ್ತಾರೆ. ಇದರಲ್ಲಿ 8,000 ರಾಷ್ಟ್ರೀಯ ಆರಕ್ಷಕ ಸದಸ್ಯರು ರಾಷ್ಟ್ರೀಯ ಕಾನೂನು ಸುವ್ಯವಸ್ಥೆ ಕಾಪಾಡಲು, 1,500 ಸದಸ್ಯರು ವಿಶೇಷ ಸಂಚಾರಿ ದಳದಲ್ಲಿ (SMF), ಹಾಗೂ 500-ಸದಸ್ಯರು ರಾಷ್ಟ್ರೀಯ ಕರಾವಳಿ ಸುರಕ್ಷಾ ದಳಕ್ಕೆ ಸೇರಿದ್ದಾರೆ.

ಭೂಗೋಳ

[ಬದಲಾಯಿಸಿ]
ಮಾರಿಷಸ್‌ನ ಭೂಪಟ
ಮಾರಿಷಸ್‌ನ ಉಪಗ್ರಹ ಚಿತ್ರ, ಫೆಬ್ರವರಿ 2003, ದ್ವೀಪವನ್ನು ಗುರುತಿಸುವ ರೇಖಾಚಿತ್ರ
ಮಾರಿಷಸ್ ಗಣರಾಜ್ಯದ ಭಾಗವಾದ ರೋಡ್ರಿಗಾಸ್‌ ದ್ವೀಪದ ಕಡಲತಡಿಯ ದೃಶ್ಯಗಳು

ರೀಯೂನಿಯನ್‌ ಹಾಗೂ ರೋಡ್ರಿಗಾಸ್‌ನಂತೆಯೇ, ಮಾರಿಷಸ್ ಕೂಡ ಮಸ್ಕರೀನ್ ದ್ವೀಪಸ್ತೋಮದ ಭಾಗವಾಗಿದೆ. ಈ ದ್ವೀಪಸಮೂಹವು 8-10 ದಶಲಕ್ಷ ವರ್ಷಗಳ ಹಿಂದೆ ಸಮುದ್ರದೊಳಗೆ ಏರ್ಪಟ್ಟ ಸರಣಿ ಜ್ವಾಲಾಮುಖಿಗಳಿಂದ ಉಂಟಾಗಿದ್ದು, ಇದರಿಂದಾಗಿ ಆಫ್ರಿಕಾ ಭೂಭಾಗವು ರೀಯೂನಿಯನ್‌ ತಾಪತಾಣದತ್ತ ಸರಿದಿದೆ. ಅವುಗಳಲ್ಲಿ ಯಾವುವೂ ಕ್ರಿಯಾತ್ಮಕವಾಗಿಲ್ಲ ಹಾಗೂ ತಾಪತಾಣವು ರೀಯೂನಿಯನ್‌ ತಳದಲ್ಲಿ ನಿದ್ರಾವಸ್ಥೆಯಲ್ಲಿದೆ. ಮಾರಿಷಸ್ ದ್ವೀಪವು ಕೇಂದ್ರ ಪ್ರಸ್ಥಭೂಮಿಯ ಸುತ್ತ ಉಂಟಾಗಿದ್ದು ನೈಋತ್ಯಕ್ಕೆ ಅದರ ಎತ್ತರದ ಶಿಖರವಾದ ಪೈಟನ್‌ ಡಿ ಲಾ ಪೆಟೈಟ್ ರಿವ್‌ಎರ್‌ ನೊಯಿರ್‌ವು 828 metres (2,717 ft)ನಲ್ಲಿದೆ. ಪ್ರಸ್ಥಭೂಮಿಯ ಸುತ್ತ ಪರ್ವತಗಳಿದ್ದರೂ, ಅಗ್ನಿಪರ್ವತದ ಮೂಲ ಶಿಖರವನ್ನು ನಿಖರವಾಗಿ ಗುರುತಿಸಬಹುದಾಗಿದೆ.

ಇಲ್ಲಿಯ ಸ್ಥಳೀಯ ಹವಾಗುಣ ಉಷ್ಣವಲಯವಾಗಿದ್ದು, ಆಗ್ನೇಯ ಮಾರುತಗಳಿಂದ ಬದಲಾವಣೆ ತರುತ್ತವೆ; ಇದರಿಂದಾಗಿ ಮೇನಿಂದ ನವೆಂಬರ್‌ವರೆಗೆ ಅಲ್ಲಿ ಬೆಚ್ಚಗಿನ, ಒಣ ಚಳಿಗಾಲ ಹಾಗೂ ನವೆಂಬರ್‌ನಿಂದ ಮೇವರೆಗೆ ಉಷ್ಣ, ತೇವ ಹಾಗೂ ಶೀತಯುಕ್ತ ಬೇಸಿಗೆ ಇರುತ್ತದೆ. ರಾಷ್ಟ್ರದಲ್ಲಿ ಮೇನಿಂದ ಸೆಪ್ಟೆಂಬರ್‌ವರೆಗೆ ವಿರುದ್ಧ-ಚಂಡಮಾರುತಗಳು ಪ್ರಭಾವ ಬೀರುತ್ತವೆ. ನವೆಂಬರ್‌-ಏಪ್ರಿಲ್‌ವರೆಗೆ ಚಂಡಮಾರುತಗಳು ಪ್ರಭಾವ ಬೀರುತ್ತವೆ. ಈ ಹಿಂದೆ ಬಂದಂತಹಾ ಚಂಡಮಾರುತಗಳಲ್ಲಿ ಹೊಲ್ಲಾಂಡ (1994) ಹಾಗೂ ಡಿನ (2002) ಚಂಡಮಾರುತಗಳು ದ್ವೀಪದ ಮೇಲೆ ಅತ್ಯಂತ ಅಪಾಯಕಾರಿ ಪ್ರಭಾವ ಬೀರಿವೆ.

ದ್ವೀಪದ ರಾಜಧಾನಿ ಹಾಗೂ ದೊಡ್ಡ ನಗರವಾದ ಪೋರ್ಟ್ ಲ್ಯೂಯಿಸ್‌, ವಾಯುವ್ಯಕ್ಕಿದ್ದು, ಇನ್ನಿತರ ಪ್ರಮುಖ ಪಟ್ಟಣಗಳೆಂದರೆ ರೋಸ್‌-ಹಿಲ್ ಹಾಗೂ ಬ್ಯೂ-ಬಸ್ಸಿನ್, ಕ್ಯೂರ್‌ಪೈಪ್‌, ವಕೋವಸ್‌, ಫೀನಿಕ್ಸ್‌, ಕ್ವಾಟ್ರ್ ಬೋರ್ನ್ಸ್‌ಗಳಾಗಿವೆ.

ದ್ವೀಪವು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಉದಾಹರಣೆಗೆ ಲೇಖಕ ಮಾರ್ಕ್‌ ಟ್ವೈನ್‌, ಫಾಲೋಯಿಂಗ್ ದಿ ಈಕ್ವೆಟರ್‌ ಎಂಬ ತನ್ನ ಪ್ರವಾಸಕಥನದಲ್ಲಿ, "ನೀನು ಮೊದಲು ಮಾರಿಷಸ್ ರಚಿಸಿ ಅನಂತರ ಸ್ವರ್ಗ ರಚಿಸಲು ತೀರ್ಮಾನಿಸಿರಬೇಕು ಹಾಗೂ ಮಾರಿಷಸ್ ಪೂರ್ಣವಾದ ನಂತರವಷ್ಟೇ ಅದನ್ನು ನಕಲು ಮಾಡಿ ಸ್ವರ್ಗವನ್ನು ರಚಿಸಿರಬೇಕು" ಎಂದಿದ್ದಾನೆ. (ಈ ವಾಕ್ಯವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಟ್ವೈನ್‌ ನಿಜವಾಗಿ ಈ ರೀತಿ ಬರೆದಿದ್ದಾನೆ: " ನೀನು ಮೊದಲು ಮಾರಿಷಸ್ ರಚಿಸಿ ಅನಂತರ ಸ್ವರ್ಗ ರಚಿಸಲು ಯಾರೋ ಒಬ್ಬ ಪ್ರಜೆಯಿಂದಾಗಿ ತೀರ್ಮಾನಿಸಿರಬೇಕು; ಹಾಗೂ ಮಾರಿಷಸ್ ಪೂರ್ಣವಾದ ನಂತರವಷ್ಟೇ ಅದನ್ನು ನಕಲು ಮಾಡಿ ಸ್ವರ್ಗವನ್ನು ರಚಿಸಿರಬೇಕು. ಅದನ್ನು ಅವರು ನಿನಗೆ ಉತ್ಪ್ರೇಕ್ಷೆಯಿಂದಲೇ ಹೇಳಿರಬೇಕು …")

ಪರಿಸರ

[ಬದಲಾಯಿಸಿ]

ಜಿಲ್ಲೆಗಳು ಮತ್ತು ಅಧೀನ ಪ್ರಾಂತ್ಯಗಳು

[ಬದಲಾಯಿಸಿ]
ಮಾರಿಷಸ್‌ನ ಜಿಲ್ಲೆಗಳು
ಚಿತ್ರ:Gymkana.jpg
ಫೀನಿಕ್ಸ್‌‌‌, ದೇಶದ ಪ್ರಮುಖ ಪಟ್ಟಣಗಳಲ್ಲೊಂದಾಗಿದೆ

ಮಾರಿಷಸ್ ದ್ವೀಪವನ್ನು ಒಂಬತ್ತು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ:

  1. ಬ್ಲಾಕ್ ರಿವರ್‌ (ರಾಜಧಾನಿ: ಬಾಂಬೋಸ್)
  2. ಫ್ಲಾಕ್‌ (ರಾಜಧಾನಿ: ಸೆಂಟರ್‌ ಡಿ ಫ್ಲಾಕ್‌)
  3. ಗ್ರಾಂಡ್ ಪೋರ್ಟ್ (ರಾಜಧಾನಿ: ಮಹೆಬೊರ್ಗ್)
  4. ಮೊಕ (ರಾಜಧಾನಿ: ಕ್ವಾರ್ಟಿಯರ್ ಮಿಲಿಟೈರ್)
  5. ಪಾಂಪ್ಲಿಮೌಸ್ಸೆಸ್ (ರಾಜಧಾನಿ: ಟ್ರಿಯೊಲೆಟ್)
  6. ಪ್ಲೇನಿಸ್ ವಿಲ್ಹೆಮ್ಸ್‌ (ರಾಜಧಾನಿ: ಬ್ಯೂ-ಬಸ್ಸಿನ್ ಹಾಗೂ ರೋಸ್ ಹಿಲ್, ಫೀನಿಕ್ಸ್)
  7. ಪೋರ್ಟ್ ಲ್ಯೂಯಿಸ್‌ (ಮಾರಿಷಸ್‌ನ ರಾಜಧಾನಿ)
  8. ರಿವಿಎರೆ ಡು ರೆಂಪಾರ್ಟ್ (ರಾಜಧಾನಿ: ಮಪೌ)
  9. ಸವನ್ನೆ (ರಾಜಧಾನಿ: ಸೊಯಿಲ್ಲಕ್‌)

ಅಧೀನ ಪ್ರಾಂತ್ಯಗಳು

[ಬದಲಾಯಿಸಿ]
  • ರೋಡ್ರಿಗಾಸ್‌, ಈ ದ್ವೀಪವು 560 kilometres (350 mi) ಮಾರಿಷಸ್‌ನ ಈಶಾನ್ಯಕ್ಕಿದ್ದು, 2002ರ ಅಕ್ಟೋಬರ್‌ನಲ್ಲಿ ಸೀಮಿತ ಸ್ವಾಯುತ್ತತೆ ಪಡೆಯಿತು.[೧೨][೧೩] ಇದು ಸ್ವಾಯುತ್ತತೆ ಹೊಂದುವುದಕ್ಕಿಂತ ಮುಂಚೆಯೇ ಮಾರಿಷಸ್‌ನ 10ನೇ ಆಡಳಿತ ಜಿಲ್ಲೆ ಎಂಬ ಸ್ಥಾನ ಪಡೆದಿತ್ತು.[೧೪]
  • ಅಗಾಲೆಗ, 933 ಕಿಲೋಮೀಟರ್‌ಗಳ (580 mi) ಎರಡು ಸಣ್ಣ ದ್ವೀಪಗಳಾಗಿದ್ದು ಮಾರಿಷಸ್‌ ಉತ್ತರ ಭಾಗದಲ್ಲಿದ್ದು, ಕೋಳಿ ಪೂರೈಕೆಗೆ ಹೆಸರುವಾಸಿಯಾಗಿವೆ.
  • ಕಾರ್ಗಡೊಸ್ ಕಾರಜೊಸ್, ಸೇಂಟ್‌ ಬ್ರಂಡನ್ ದ್ವೀಪಗಳು ಎಂದೂ ಕರೆಯಲಾಗುವ ಇದು ಮಾರಿಷಸ್‌ನ ಉತ್ತರ ಭಾಗದಲ್ಲಿ 402 ಕಿಲೋಮೀಟರ್‌ಗಳಷ್ಟು (250 mi) ವ್ಯಾಪಿಸಿದೆ.

EEZಗೆ ಸೇರಿರುವ ಮೀನುಗಾರಿಕಾ ಪ್ರದೇಶಗಳು

[ಬದಲಾಯಿಸಿ]

EEZ ವ್ಯಾಪ್ತಿಯಲ್ಲಿ ನಾಲ್ಕು ನಡುಗಡ್ಡೆ ಮೀನುಗಾರಿಕಾ ಪ್ರದೇಶಗಳು ಸೇರಿಕೊಂಡಿರುವುದರಿಂದ ಅವುಗಳನ್ನು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದೆ:

ಘೋಷಿಸಲ್ಪಟ್ಟ ಅಧೀನ ಪ್ರಾಂತ್ಯಗಳು

[ಬದಲಾಯಿಸಿ]

ಮಾರಿಷಸ್ ಕೆಲವು ಪ್ರಾಂತ್ಯಗಳನ್ನು ತನ್ನವೆಂದು ಹೇಳಿಕೊಂಡಿದೆ:[೧೫]

ಆರ್ಥಿಕತೆ

[ಬದಲಾಯಿಸಿ]
ಮಾರಿಷಸ್‌ನ ರಾಜಧಾನಿ ಪೋರ್ಟ್ ಲ್ಯೂಯಿಸ್‌ನ ಉನ್ನತ ಸೌಧಗಳ ಸಾಲು,

1968ರಲ್ಲಿ ಸ್ವಾತಂತ್ರ್ಯ ಪಡೆದಾಗ, ಕೃಷಿ ಆಧಾರಿತ ಕೆಳ ಆದಾಯ ಮಟ್ಟ ಹೊಂದಿದ್ದ ಮಾರಿಷಸ್, ಬೆಳೆದು ವೈವಿಧ್ಯಮಯ ಆರ್ಥಿಕ ಕ್ಷೇತ್ರಗಳು ಅಂದರೆ ಪ್ರಗತಿಪರ ಕೈಗಾರಿಕಾ, ಆರ್ಥಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಮಧ್ಯಮ ಮಟ್ಟದ ಆದಾಯ ಹಂತವನ್ನು ತಲುಪಿದೆ. ಬಹಳಷ್ಟು ಸಮಯಗಳಲ್ಲಿ, ವಾರ್ಷಿಕ ಬೆಳವಣಿಗೆಯನ್ನು 5%ರಿಂದ 6%ರಷ್ಟಕ್ಕೆ ಕಾಯ್ದುಕೊಳ್ಳಲಾಗಿದೆ. ಇದು ಸುಧಾರಿತ ಜೀವನ ಮಟ್ಟ, ಕ್ಷೀಣಿಸಿದ ನವಜಾತ ಶಿಶುಗಳ ಮರಣ ಹಾಗೂ ಉತ್ತಮ ಮೂಲಭೂತ ವ್ಯವಸ್ಥೆಗಳನ್ನು ತೋರಿಸುತ್ತದೆ.

2005ರಲ್ಲಿ ಅಂದಾಜು US$10,155 ಕೊಳ್ಳುವ ಸಾಮರ್ಥ್ಯ (PPP),[೧೬] ಹೊಂದಿದ್ದ ಮಾರಿಷಸ್, ಆಫ್ರಿಕಾದಲ್ಲಿ ಏಳನೇ-ಅತಿಹೆಚ್ಚು GDP ತಲಾವಾರು ಆದಾಯ ಹೊಂದಿದ್ದು, ಅದರ ಮೊದಲಿನ ಸ್ಥಾನಗಳಲ್ಲಿ ರೀಯೂನಿಯನ್‌ (ವಾಸ್ತವಿಕ ವಿನಿಮಯ ದರಗಳಲ್ಲಿ US$19,233),[೧೭] ಸೀಷೆಲ್ಸ್‌ (PPP US$13,887ನಷ್ಟು), ಗಬೊನ್ (PPP US$12,742ನಷ್ಟು), ಬೊಟ್ಸ್‌ವಾನ (PPP US$12,057ನಷ್ಟು), ಈಕ್ವಟೋರಿಯಲ್ ಗ್ಯುನಿಯ (PPP US$11,999ನಷ್ಟು), ಹಾಗೂ ಲಿಬಿಯ (PPP US$10,727ನಷ್ಟು).ಗಳಿವೆ[೧೬] ಆರ್ಥಿಕತೆಯು ಪ್ರಮುಖವಾಗಿ ಕಬ್ಬಿನ ಗದ್ದೆಗಳು, ಪ್ರವಾಸೋದ್ಯಮ, ಜವಳಿ, ಹಾಗೂ ಸೇವೆಗಳನ್ನು ಅವಲಂಬಿಸಿದ್ದರೂ ಬೇರೆ ಕ್ಷೇತ್ರಗಳೂ ಸಹ ಅಭಿವೃದ್ಧಿ ಹೊಂದುತ್ತಿವೆ. ಮಾರಿಷಸ್, ಲಿಬಿಯ, ಹಾಗೂ ಸೀಷೆಲ್ಸ್‌‌ಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚಿಯಲ್ಲಿ ಆಫ್ರಿಕಾ ರಾಷ್ಟ್ರಗಳಲ್ಲಿಯೇ ಅತಿ ಹೆಚ್ಚು ಕ್ರಮಾಂಕ ಪಡೆದಿವೆ (ರೀಯೂನಿಯನ್‌, ಫ್ರಾನ್ಸ್‌‌ನ ಭಾಗವಾಗಿರುವುದರಿಂದ, UN ತಮ್ಮ ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚಿ ಕ್ರಮಾಂಕದಲ್ಲಿ ಅದನ್ನು ಪಟ್ಟಿ ಮಾಡಿಲ್ಲ).

ವ್ಯವಸಾಯ ಪ್ರದೇಶದ 90%ರಷ್ಟು ಭಾಗದಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದ್ದು, ಇದು ರಫ್ತು ಆದಾಯದ 25%ನಷ್ಟಿದೆ. ಹಾಗಿದ್ದರೂ, 1999ರಲ್ಲಿ ಉಂಟಾದ ಬರದ ಸ್ಥಿತಿಯು ಕಬ್ಬಿನ ಬೆಳೆಯನ್ನು ಸಂಪೂರ್ಣ ಹಾಳುಮಾಡಿತು. ಸರ್ಕಾರದ ಅಭಿವೃದ್ಧಿ ಕಾರ್ಯತಂತ್ರಗಳು ವಿದೇಶಿ ಹೂಡಿಕೆಯಲ್ಲಿ ಕೇಂದ್ರಿತವಾಗಿವೆ. ಮಾರಿಷಸ್ 9,000ಕ್ಕೂ ಅಧಿಕ ವಿದೇಶಿ ಸಂಸ್ಥೆಗಳನ್ನು ಆಕರ್ಷಿಸಿದೆ; ಹಲವಾರು ಕಂಪನಿಗಳು ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ವಾಣಿಜ್ಯೋದ್ಯಮದ ಆಸಕ್ತಿ ಹೊಂದಿದ್ದು, ಬರೀ ಬ್ಯಾಂಕಿಂಗ್ ಕ್ಷೇತ್ರವೊಂದರಲ್ಲೇ ಅವುಗಳ ಹೂಡಿಕೆಯು $1 ಶತಕೋಟಿಯನ್ನೂ ಮೀರಿದೆ. ಒಟ್ಟಾರೆಯಾಗಿ 2000ದಿಂದ 2004ರವರೆಗಿನ ಆರ್ಥಿಕ ಸ್ಥಿತಿಗಳನ್ನು ನೋಡಿದರೆ ಡಿಸೆಂಬರ್‌ 2004ರ ಹೊತ್ತಿಗೆ ಆರ್ಥಿಕವಾಗಿ ಪ್ರಗತಿ ಹೊಂದಿ ನಿರುದ್ಯೋಗವು 7.6%ರಷ್ಟು ಕುಸಿದಿತ್ತು. ರಾಷ್ಟ್ರದೊಂದಿಗೆ ಅತ್ಯಂತ ಸಮೀಪವರ್ತಿ ರಾಷ್ಟ್ರವಾದ ಫ್ರಾನ್ಸ್‌, ದೇಶದ ವ್ಯಾಪಾರ ಕ್ಷೇತ್ರದಲ್ಲಿ ಬಹು ದೊಡ್ಡ ಪಾಲುದಾರನಾಗಿದ್ದು, ಹಲವಾರು ರೀತಿಯ ತಾಂತ್ರಿಕ ಸಹಾಯಗಳನ್ನೂ ನೀಡುತ್ತಿದೆ.

ಸ್ಥಳೀಯರಿಗೆ ಆಮದು ಸರಕುಗಳನ್ನು ಉಪಯೋಗಿಸಲು ಅನುಕೂಲವಾಗುವಂತೆ ದರವನ್ನು ಕಡಿತಗೊಳಿಸುವುದು, ಸಿಂಗಪೂರ್ ಹಾಗೂ ದುಬೈಗೆ ತೆರಳುವ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವುದಕ್ಕಾಗಿ, ಮಾರಿಷಸ್ ಇನ್ನು ಕೇವಲ ನಾಲ್ಕೇ ವರ್ಷಗಳಲ್ಲಿ ತೆರಿಗೆ-ಮುಕ್ತ ದ್ವೀಪವಾಗುವತ್ತ ಹೆಜ್ಜೆ ಹಾಕಿದೆ. ಹಲವಾರು ಉತ್ಪನ್ನಗಳಿಗೆ ಸುಂಕವನ್ನು ತೆಗೆಯಲಾಗಿದೆ ಹಾಗೂ ಜವಳಿ, ಆಹಾರ, ಆಭರಣ, ಛಾಯಾಚಿತ್ರ ಸಾಧನಗಳು, ದೃಶ್ಯ ಶ್ರವ್ಯ ಸಾಧನಗಳು ಮತ್ತು ಬೆಳಕಿನ ಸಾಧನಗಳೂ ಸೇರಿದಂತೆ 1850ಕ್ಕೂ ಹೆಚ್ಚಿನ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ.[೧೮] ಇದರ ಜೊತೆಗೆ, ಹೊಸ ಉದ್ಯಮಗಳ ಅವಕಾಶಗಳನ್ನು ತನ್ನತ್ತ ಆಕರ್ಷಿಸುವ ಯೋಜನೆಗಳನ್ನು ಅಳವಡಿಸಿಕೊಂಡಿದೆ. ಆದರೆ, ಮಾರಿಷಸ್‌ನ ಬೆಳವಣಿಗೆಯಲ್ಲಿನ ಅತಿ ದೊಡ್ಡ ಅಡಚಣೆಯೆಂದರೆ ಅದು ಮಂದ ಗತಿಯಲ್ಲಿ ಸಾಗಲು ಕಾರಣವಾಗುತ್ತಿರುವ ನಗರಗಳಲ್ಲಿನ ಸಂಚಾರ ದಟ್ಟಣೆ. ವ್ಯಾಪಾರ ಅಥವಾ ಹೂಡಿಕೆ ವ್ಯವಪಾರದಲ್ಲಿ ವಿದೇಶೀ ಕಂಪನಿಗಳನ್ನು ಶಾಶ್ವತವಾಗಿ ನೆಲೆಸಲು ಅಥವಾ ಅವುಗಳನ್ನು ಆಕರ್ಷಿಸುವ ಸಲುವಾಗಿ ಸಾಂಸ್ಥಿಕ ತೆರಿಗೆಯಲ್ಲಿ 15%ನಷ್ಟು ಕಡಿತಗೊಳಿಸಲಾಗಿದೆ. [ಸೂಕ್ತ ಉಲ್ಲೇಖನ ಬೇಕು]

ಮಾರಿಷಸ್ ತೀರದಿಂದ ತೀರಕ್ಕೆ ನಿಸ್ತಂತು ಅಂತರಜಾಲ ವ್ಯವಸ್ಥೆ ಹೊಂದಿರುವ ಪ್ರಥಮ ದೇಶವಾಗುವಂತೆ ADB ನೆಟ್‌ವರ್ಕ್ಸ್ ಯೋಜನೆಯೊಂದನ್ನು ರೂಪಿಸಿತು. ನಿಸ್ತಂತು ವ್ಯವಸ್ಥೆಯು 60% ದ್ವೀಪವನ್ನು ಸುತ್ತುವರೆದಿದ್ದು 70%ನಷ್ಟು ಜನರಿಗೆ ಅದು ಉಪಯುಕ್ತವಾಗಿದೆ.

ಭಾರತದ FDI ಒಳಹರಿವಿಗೆ ಉಳಿದೆಲ್ಲ ದೇಶಗಳನ್ನೂ ಮೀರಿ ಮಾರಿಷಸ್ ಪ್ರಥಮ ಸ್ಥಾನ ಹೊಂದಿದ್ದು, ಸಂಚಿತ ಒಳಹರಿವು ಸರಿಸುಮಾರು US$10.98 ಶತಕೋಟಿಯಷ್ಟಿದೆ. ಜನವರಿ 2000ರಿಂದ ಡಿಸೆಂಬರ್‌ 2005ರ ನಡುವಿನ ಅವಧಿಯಲ್ಲಿ ಮಾರಿಷಸ್‌ನಿಂದ ಅತಿ ಹೆಚ್ಚು FDI ಒಳಹರಿವನ್ನು ಆಕರ್ಷಿಸಿದ ಕೆಲವು ಉನ್ನತ ಕ್ಷೇತ್ರಗಳೆಂದರೆ ವಿದ್ಯುತ್ ಉಪಕರಣಗಳು, ದೂರಸಂಪರ್ಕ ವ್ಯವಸ್ಥೆಗಳು, ಇಂಧನಗಳು, ಸಿಮೆಂಟ್‌ ಮತ್ತು ಜಿಪ್ಸಮ್‌ ಉತ್ಪನ್ನಗಳು ಹಾಗೂ ಸೇವಾ ಕ್ಷೇತ್ರ (ವಿತ್ತೀಯ ಹಾಗೂ ವಿತ್ತೀಯವಲ್ಲದ ಕ್ಷೇತ್ರ).[೧೯]

ಸಾರಿಗೆ ವ್ಯವಸ್ಥೆ

[ಬದಲಾಯಿಸಿ]

ಜುಲೈ 2005ರಿಂದ ಮಾರಿಷಸ್‌ನಲ್ಲಿ ವಿದ್ಯಾರ್ಥಿಗಳಿಗೆ, ವಿಕಲಚೇತನರಿಗೆ, ವೈದ್ಯರಿಗೆ ಹಾಗೂ ವೃದ್ಧರಿಗೆ ಸಾರಿಗೆ ಸೌಕರ್ಯ ಉಚಿತವಾಗಿದೆ.

ಇದರ ಖ್ಯಾತಿಯು ಚುನಾವಣೆಯ ಸಮಯದಲ್ಲಿ ಭರವಸೆ ನೀಡಿ ಅದನ್ನು ಪೂರೈಸಿದ, ಮಾರಿಷಸ್‌ನ ಈಗಿನ ಪ್ರಧಾನ ಮಂತ್ರಿಗಳಾದ Hon. Dr. ನವಿನ್‌‌‌‌ಚಂದ್ರ ರಾಮ್‌ಗೂಲಮ್‌ರಿಗೆ ಸಲ್ಲುತ್ತದೆ.

ಶಿಕ್ಷಣ

[ಬದಲಾಯಿಸಿ]

ಇಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ಪ್ರಾಥಮಿಕಪೂರ್ವ ಹಂತದಿಂದ ಪ್ರಾಥಮಿಕದ ನಂತರದ ಶಿಕ್ಷಣ ಸಂಪೂರ್ಣ ಉಚಿತವಾಗಿದೆ.

2001ಕ್ಕಿಂತ ಮುಂಚೆ, ಪ್ರಖ್ಯಾತ ಶಾಲೆಗಳು "ಸ್ಟಾರ್ ಶಾಲೆಗಳು" ಎಂದು ಕರೆಸಿಕೊಳ್ಳುತ್ತಿದ್ದವು ಹಾಗೂ ಪ್ರತಿವರ್ಷ ಈ ಶಾಲೆಗಳಲ್ಲಿ ಶ್ರೇಣಿ ಆಧಾರದಲ್ಲಿ ಸೀಟು ಗಿಟ್ಟಿಸಿಕೊಳ್ಳಲು, CPE ವಿದ್ಯಾರ್ಥಿಗಳು ತಮ್ಮ ನಡುವೆ ಪೈಪೋಟಿ ನಡೆಸುತ್ತಿದ್ದರು. ಮಾರಿಷಸ್‌ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು 2001ರಲ್ಲಿ, ಸ್ಟೀವೆನ್ ಓಬೀಗಡೂ ಶಿಕ್ಷಣ ಸಚಿವರಾಗಿದ್ದ ಸರ್ಕಾರವು ತೀರ್ಮಾನಿಸಿತು. ಇದರಿಂದಾಗಿ ಶ್ರೇಣಿ ವ್ಯವಸ್ಥೆಯ ನಿಷೇಧಿಸಿ ಅದರ ಬದಲಿಗೆ ಸ್ಥಳೀಕರು ತಮ್ಮ ಮಕ್ಕಳನ್ನು ಸಮೀಪದ ಶಾಲೆಯಲ್ಲಿ ಸೇರಿಸಲು ಅನುಕೂಲವಾಗುವ ‘ಸ್ಥಳೀಯರಿಗೆ ಪ್ರಥಮ ಆದ್ಯತೆ’ ಹಾಗೂ ‘ಗ್ರೇಡ್ ವ್ಯವಸ್ಥೆ’ಗಳನ್ನು ಜೊತೆಯಾಗಿ ತಂದರು. ಫೆಬ್ರವರಿ 2006ರಲ್ಲಿ, ಧರಂಬೀರ್ ಗೊಖೂಲ್ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ, 2001ಕ್ಕೂ ಮುಂಚೆ ಇದ್ದ ವ್ಯವಸ್ಥೆಯ ರೀತಿಯಲ್ಲಿಯೇ "A+" ವ್ಯವಸ್ಥೆಯನ್ನು ಜಾರಿ ಮಾಡಿದರು. ಈಗ CPE ವಿದ್ಯಾರ್ಥಿಗಳು "ನ್ಯಾಷನಲ್ ಕಾಲೇಜು"ಗಳಲ್ಲಿ ಸೇರಲು ಎಲ್ಲ ವಿಷಯಗಳಲ್ಲಿ "A+" ಗ್ರೇಡನ್ನು ಪಡೆಯಬೇಕಾಗಿರುವುದರಿಂದ ಅವು "ಸ್ಟಾರ್‌ ಶಾಲೆಗಳ"ಷ್ಟೇ ದುರಾಶೆಯನ್ನು ಹೊಂದಿ ಇದರಿಂದಾಗಿ ರಾಷ್ಟ್ರದ ಶಿಕ್ಷಣ ವ್ಯವಸ್ಥೆಯು ಬದಲಾವಣೆಗಿಂತ ಮುಂಚೆ ಇದ್ದ ಸ್ಥಿತಿಗೆ ಮರಳಿತು.[೨೦].

ಕೆಳಗೆ "ನ್ಯಾಷನಲ್‌ ಕಾಲೇಜು"ಗಳನ್ನು ಪಟ್ಟಿ ಮಾಡಲಾಗಿದ್ದು ಅವುಗಳು ಸರಿಯಾದ ಕ್ರಮದಲ್ಲಿಲ್ಲ [೨೧][೨೨]

ಸರ್ಕಾರಿ ಶಾಲೆಗಳು

[ಬದಲಾಯಿಸಿ]
  • ಜಾನ್‌ ಕೆನಡಿ ಕಾಲೇಜು
  • ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್‌
  • ಪೈಟನ್ ಸ್ಟೇಟ್ ಕಾಲೇಜು
  • ರಾಯಲ್‌ ಕಾಲೇಜು ಕ್ಯೂರ್‌ಪೈಪ್‌
  • ರಾಯಲ್‌ ಕಾಲೇಜು ಪೋರ್ಟ್ ಲ್ಯೂಯಿಸ್‌
  • ಸರ್ ಅಬ್ದೂಲ್‌ ರಮಾನ್ ಓಸ್ಮಾನ್‌ ಸ್ಟೇಟ್‌ ಕಾಲೇಜು
  • ಸರ್ ಲೆಕ್ರಾಜ್‌ ಟೀಲೊಕ್‌ SSS
  • ಸೂಕ್‌ದಿಯೋ ಬಿಸ್ಸಾನ್‌ದೊಯಲ್‌ ಸ್ಟೇಟ್‌ ಕಾಲೇಜು
  • Dr ಮೋರಿಸ್‌ ಕ್ಯೂರ್‌ ಸ್ಟೇಟ್‌ ಕಾಲೇಜು
  • D ರಾಮ್‌ಪುಲ್ ಸ್ಟೇಟ್‌ ಕಾಲೇಜು
  • ಫಾರೆಸ್ಟ್ ಸೈಡ್ SSS
  • ಫ್ರಾನ್ಸ್‌ ಬೊಯರ್ ಡೆ ಲಾ ಗಿರೊಡೇ SSS
  • ಗೇತನ್ ರೇನಲ್‌ ಸ್ಟೇಟ್‌ ಕಾಲೇಜು
  • ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್‌
  • G.M.D ಅಟ್‌ಷಿ/ಚಿಯ ಸ್ಟೇಟ್‌ ಕಾಲೇಜು
  • ಕ್ವೀನ್ ಎಲಿಜಬೆತ್‌ ಕಾಲೇಜು

ಕ್ಯಾಥೋಲಿಕ್‌ ಶಾಲೆಗಳು

[ಬದಲಾಯಿಸಿ]

ಖಾಸಗೀ ಶಾಲೆಗಳು

[ಬದಲಾಯಿಸಿ]

ಜನಸಂಖ್ಯಾ ವಿವರ

[ಬದಲಾಯಿಸಿ]

ಸಮೀಕ್ಷೆಯ ಪ್ರಕಾರ ಇಡೀ ಗಣರಾಜ್ಯದಲ್ಲಿನ ಜನಸಂಖ್ಯೆ 1,264,867. 2007ರ ಡಿಸೆಂಬರ್‌ 31ರ ಸಮೀಕ್ಷೆಯಂತೆ ಕೇವಲ ಮಾರಿಷಸ್ ದ್ವೀಪವೊಂದರ ಜನಸಂಖ್ಯೆ 1,227,078[೨೩]. ಮಾರಿಷಿಯನ್ ಸಮಾಜದಲ್ಲಿ ಹಲವು ಜನಾಂಗದವರು ಸೇರಿದ್ದಾರೆ. ಗಣರಾಜ್ಯದ ನಿವಾಸಿಗಳು ಆಫ್ರಿಕಾ ಖಂಡ (ಮಾರಿಷಿಯನ್ ಕ್ರಿಯೋಲ್‌ಗಳನ್ನು 'ಕ್ರಿಯೋಲ್ಸ್‌' ಎಂದೇ ಕರೆಯಲಾಗುತ್ತದೆ), ಭಾರತ (ಇಂಡೊ-ಮಾರಿಷಿಯನ್), ಫ್ರಾನ್ಸ್‌ (ಫ್ರಾಂಕೊ-ಮಾರಿಷಿಯನ್) ಹಾಗೂ ಚೀನೀಯರು (ಸಿನೊ-ಮಾರಿಷಿಯನ್), ಮತ್ತು ಇನ್ನಿತರೆಡೆಗಳಿಂದ ಬಂದವರಾಗಿರುತ್ತಾರೆ.

ಈ ರಾಷ್ಟ್ರದಲ್ಲಿ ಹಿಂದೂಗಳು 52%, ರೋಮನ್ ಕ್ಯಾಥೋಲಿಕ್‌ 28.4%, ಹಾಗೂ ಮುಸಲ್ಮಾನರು 16.6%ರಷ್ಟಿದ್ದರೆ, ಇತರೆ ಧರ್ಮದವರು 3%ನಷ್ಟಿದ್ದಾರೆ. ವಲಸೆ ಬಂದ ಕೆಲವು ಪ್ರಮುಖ ಭೂಮಿಹಾರ್ ಬ್ರಾಹ್ಮಣರು ಮಾರಿಷಸ್‌ನ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.[೨೪] ಚರ್ಚುಗಳು ಮತ್ತು ದ್ರಾವಿಡರ ತಮಿಳು ಪಗೋಡಗಳು ಹಾಗೂ ದೇವಸ್ಥಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.[೨೫]

ಬಹಳಷ್ಟು ಕ್ರಿಯೋಲ್‌ಗಳು ಕ್ರೈಸ್ತರು. ಬಹುಪಾಲು ಮುಸಲ್ಮಾನರು ಪಾಕಿಸ್ತಾನದಿಂದ ಹಾಗೂ ಸಂಪೂರ್ಣವಾಗಿ ಹಿಂದೂ ನಿವಾಸಿಗಳು ಭಾರತದಿಂದ ಬಂದವರು. ಮತ್ತೆ ಕೆಲವು ಮುಸ್ಲಿಮರು ಮಧ್ಯ ಪ್ರಾಚ್ಯದಿಂದ ಬಂದವರಿದ್ದಾರೆ. ಭೋಜ್‌ಪುರಿ, ತಮಿಳು, ಮರಾಠಿ ಹಾಗೂ ತೆಲುಗು ಭಾಷಿಕರು ಹಿಂದೂಗಳು. ಅಲ್ಪಸಂಖ್ಯಾತರಲ್ಲಿ ಒಬ್ಬರಾದ ಚೀನೀಯರಲ್ಲಿ ಬಹುಪಾಲು, ಕ್ರೈಸ್ತ ಮತ ಪರಿಪಾಲಕರಾಗಿದ್ದು, ಅದರಲ್ಲಿಯೂ ರೋಮನ್ ಕ್ಯಾಥೋಲಿಕ್‌ ಪಂಥ ಪಾಲಿಸುವವರು. ಮತ್ತೆ ಕೆಲವರು ಬೌದ್ಧ ಧರ್ಮ ಹಾಗೂ ಕಾನ್‌ಫ್ಯೂಸಿಯನ್ ಸಂಪ್ರದಾಯವಾದಿಗಳಾಗಿದ್ದಾರೆ. ದೇಶದ ಸಂವಿಧಾನವು ಉಳಿದ ಎಲ್ಲರನ್ನೂ ಒಂದೇ ಸಾಮಾನ್ಯ ಜನರೆಂದೇ ಪರಿಗಣಿಸಿದೆ. ಇತ್ತೀಚೆಗೆ, ಗುಲಾಮ ಸಂತತಿಯಿಂದ ಬಂದವರು 'ಕ್ರಿಯೋಲಿಟಿ'ಯನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರವು 'ಫೆಸ್ಟಿವಲ್ ಕ್ರಿಯೊಲ್‌'ಗೆ ಧನಸಹಾಯ ನೀಡಿ ನಡೆಸಿಕೊಂಡು ಬರುತ್ತಿರುವುದರಿಂದ ಅಧಿಕಾರಿ ವರ್ಗ ಈ ಬೇಡಿಕೆಯನ್ನು ಗುರುತಿಸಿ ಅನುಮೋದಿಸಬಹುದಾಗಿದೆ.

ಮಾರಿಷಿಯನ್ ಸಂವಿಧಾನವು ಯಾವುದನ್ನೂ ಅಧಿಕೃತ ಭಾಷೆ ಎಂದು ಎಲ್ಲಿಯೂ ತಿಳಿಸಿಲ್ಲ, ಹಾಗೂ ಅಲ್ಲಿನ ಹತ್ತು ಲಕ್ಷ ಜನರು ಆಂಗ್ಲ, ಫ್ರೆಂಚ್‌ ಅಥವಾ ಮಾರಿಷಿಯನ್ ಕ್ರಿಯೋಲ್‌, ಫ್ರೆಂಚ್‌-ಆಧಾರಿತ ಕ್ರಿಯೋಲ್‌ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಸಂಭಾಷಿಸಬಲ್ಲರು.[೨೬] ಸಂಸತ್ತಿನಲ್ಲಿ ಮಾತ್ರ ಆಂಗ್ಲವು ಅಧಿಕೃತ ಭಾಷೆಯಾಗಿದ್ದು, ಆದಾಗ್ಯೂ ರಾಷ್ಟ್ರೀಯ ಶಾಸನ ಸಭೆಯ ಯಾವುದೇ ಸದಸ್ಯನೂ ಫ್ರೆಂಚ್‌ನಲ್ಲಿ ವಿಷಯ ಮಂಡಿಸಬಹುದು.[][೨೭] ಹೀಗಿದ್ದರೂ, ಮಾರಿಷಸ್‌ನ ಸರ್ಕಾರಿ ಆಡಳಿತಾಗಾರ ಮತ್ತು ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸಲಾಗಿದೆ. ಸರ್ವಸಾಮಾನ್ಯ/ಸರ್ವ ಸಂಪರ್ಕ ಭಾಷೆ ಎಂದರೆ ಕ್ರಿಯೋಲ್‌.[೨೮]

ಮಾರಿಷಸ್‌ನಲ್ಲಿ, ಜನರ ತಮ್ಮ ಭಾಷೆಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸುತ್ತಾರೆ.[೨೯] ಮನೆಗಳಲ್ಲಿ ಕ್ರಿಯೋಲ್‌ ಹಾಗೂ ಭೋಜ್‌ಪುರಿ ಭಾಷೆಗಳನ್ನು ಬಳಸಿದರೆ, ಫ್ರೆಂಚ್‌ ಹಾಗೂ ಕ್ರಿಯೋಲ್‌ಗಳನ್ನು ವ್ಯವಹಾರಿಕ ಸಂದರ್ಭಗಳಲ್ಲಿ ಮತ್ತು ಆಂಗ್ಲವನ್ನು ಶಾಲೆಗಳು ಹಾಗೂ ಸರ್ಕಾರದ ಕಚೇರಿಗಳಲ್ಲಿ ಬಳಸಲಾಗುತ್ತದೆ.[೨೯] ಮೊದಲಿನಿಂದಲೂ ಸಮಾಜದ ಉನ್ನತ ವರ್ಗದಲ್ಲಿರುವ ಫ್ರೆಂಚ್‌ ಹಾಗೂ ಆಂಗ್ಲ ಭಾಷೆಗಳು ಶೈಕ್ಷಣಿಕ ಮತ್ತು ವೃತ್ತಿರಂಗದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.[೨೯] ವಾರ್ತಾ ಪತ್ರಿಕೆಗಳು ಹಾಗೂ ಸಂವಹನ ಮಾಧ್ಯಮಗಳು ಫ್ರೆಂಚ್‌ ಬಳಕೆ ಮಾಡುತ್ತವೆ.[೩೦]

ಶೇಕಡಾ 90 ಜನರು ಮಾತನಾಡುವ ಮಾರಿಷಿಯನ್ ಕ್ರಿಯೋಲ್‌ಅನ್ನು ದೇಶೀಯ ಭಾಷೆ ಎಂದು ಪರಿಗಣಿಸಲಾಗಿದ್ದು, ಇದನ್ನು ಎಲ್ಲ ಮಾಮೂಲಿ ಸಂದರ್ಭಗಳಲ್ಲಿ ಬಳಸಲಾಗುತ್ತದೆ.[೨೯] ಇದು 18ನೇ ಶತಮಾನದಲ್ಲಿ ಬೆಳೆದು ಬಂದಿದ್ದು, ಆಫ್ರಿಕಾದ ಇನ್ನಿತರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳದ ಫ್ರೆಂಚ್‌ ಪ್ರಭುಗಳ ಹಾಗೂ ತಮ್ಮ ತಮ್ಮ ನಡುವೆ ಸಂವಾದ ನಡೆಸಲು ಗುಲಾಮ ಸಂತತಿಯವರು ಬಳಸುತ್ತಿದ್ದ ಒಂದು ಸಂಕರ ಭಾಷೆ. ಅನಂತರದ ದಿನಗಳಲ್ಲಿ ಈ ಸಂಕರ ಭಾಷೆಯು ವಿಕಾಸ ಹೊಂದಿ ಸಾಮಾನ್ಯ ಭಾಷೆಯಾಯಿತು.[೩೦] ಫ್ರೆಂಚರ ಉಚ್ಛಾರಣಾ ಶೈಲಿ ಹಾಗೂ ಶಬ್ದಗಳಲ್ಲಿ ಸಾಮೀಪ್ಯ ಇರುವುದರಿಂದ ಮಾರಿಷಿಯನ್ ಕ್ರಿಯೋಲ್‌ಅನ್ನು ಫ್ರೆಂಚ್‌-ಅವಲಂಬಿತ ಕ್ರಿಯೋಲ್‌ ಎನ್ನಬಹುದು.[೩೧]

ಮಾರಿಷಸ್‌ನಲ್ಲಿ ಮಾತನಾಡುವ ಇನ್ನಿತರೆ ಭಾಷೆಗಳೆಂದರೆ ತಮಿಳು, ಹಿಂದಿ, ಮರಾಠಿ, ಉರ್ದು, ಹಕ್ಕ (ಚೀನೀಯರ ಪ್ರಾಂತ ಭಾಷೆ), ಗುಜರಾತಿ, ಹಾಗೂ ಹಲವು ಭಾಷೆಗಳ ಸಮ್ಮಿಶ್ರಣವಾದ ಪುರಾತನ ಭಾರತೀಯ ಪೂರ್ವಿಕರು ಪ್ರಾಂತ ಭಾಷೆಯಾಗಿ ಮಾತನಾಡಲು ಬಳಸುತ್ತಿದ್ದ ಭೋಜ್‌ಪುರಿಯೂ ಸೇರಿವೆ.[೨೮] ಹಲವು ಮಾರೀಷಿಯನ್ನರು ತ್ರಿಭಾಷೀಯರಲ್ಲದಿದ್ದರೂ ದ್ವಿಭಾಷೆಗಳನ್ನಂತೂ ಬಲ್ಲವರಾಗಿರುತ್ತಾರೆ.[೩೨][೩೩][೨೮][೩೦]

ಸಂಸ್ಕೃತಿ

[ಬದಲಾಯಿಸಿ]
ಮಾರಿಷಸ್‌ನ ಪಾಯಿಂಟ್-ಆಕ್ಸ್-ಪಿಮೆಂಟ್ಸ್‌ನಲ್ಲಿ ಸೇಗ ನೃತ್ಯ ಪ್ರದರ್ಶಿಸುತ್ತಿರುವ ಮಹಿಳೆ.

ಭಾರತೀಯ, ಕ್ರಿಯೋಲ್‌, ಚೀನೀಯ ಹಾಗೂ ಯುರೋಪಿಯನ್ನರಿಂದ ಪ್ರಭಾವಿತವಾದ ಮಾರಿಷಸ್‌ನ ಪಾಕ ಪದ್ಧತಿಯಲ್ಲಿ ಇವೆಲ್ಲವನ್ನೂ ಕಾಣಬಹುದು. ಸಾಮಾನ್ಯವಾಗಿ ಒಂದೇ ಊಟ/ಭೋಜನದಲ್ಲಿ ಎರಡು ವಿಭಿನ್ನ ಪಾಕ ಪದ್ಧತಿಗಳನ್ನು ಕಾಣಬಹುದಾಗಿದೆ.

ಕಬ್ಬಿನಿಂದ ಉತ್ಪಾದಿಸಲಾಗುವ ರಮ್‌ಅನ್ನು ದ್ವೀಪದ ಎಲ್ಲೆಡೆ ತಯಾರಿಸಲಾಗುತ್ತದೆ. ಮಾರಿಷಸ್‌ಗೆ ಕಬ್ಬನ್ನು ಪ್ರಥಮ ಬಾರಿಗೆ ಡಚ್ಚರು 1638ರಲ್ಲಿ ಪರಿಚಯಿಸಿದರು. ಡಚ್ಚರು ಕಬ್ಬನ್ನು ಮುಖ್ಯವಾಗಿ ರಮ್‌ನ ಪೂರ್ವವರ್ತಿಯಾದ "ಅರಾಕ್/ಮದ್ಯಸಾರ" ಉತ್ಪಾದಿಸಲು ಬೆಳೆಯುತ್ತಿದ್ದರು. ಆದರೆ, ಸಕ್ಕರೆ ಉತ್ಪಾದನೆಯ ಪ್ರಯೋಜನ ಪಡೆದದ್ದು ಫ್ರೆಂಚ್ ಹಾಗೂ ಬ್ರಿಟೀಷರ ಕಾಲದಲ್ಲಿ, ಇದು ದ್ವೀಪದ ಆರ್ಥಿಕ ಬೆಳವಣಿಗೆಗೂ ಸಹಾಯಕವಾಯಿತು.[ಸೂಕ್ತ ಉಲ್ಲೇಖನ ಬೇಕು] ಪಿಯೆರೆ ಚಾರ್ಲ್ಸ್‌ ಫ್ರಾಂಕೋಸ್ ಹರೆಲ್‌ರವರು 1850ರಲ್ಲಿ ಪ್ರಥಮ ಬಾರಿಗೆ ರಮ್‌ಅನ್ನು ಸ್ಥಳೀಯವಾಗಿ ಸಂಸ್ಕರಿಸುವ ವಿಧಾನವನ್ನು ಆವಿಷ್ಕರಿಸಿದ್ದು. ಇದೇ ದ್ವೀಪದಲ್ಲಿ ಫೀನಿಕ್ಸ್‌‌‌ ಬ್ರೀವರಿಯವರು ಬೀರ್‌ಅನ್ನು ಉತ್ಪಾದಿಸುತ್ತಿದ್ದಾರೆ.

ಸೇಗ ಎನ್ನುವುದು ಸ್ಥಳೀಯ ಜಾನಪದ ಸಂಗೀತವಾಗಿದೆ. ಇದರ ಮೂಲ ಆಫ್ರಿಕಾ. ಸೇಗದಲ್ಲಿ ಸಂಗೀತ ಹೊಮ್ಮಿಸಲು ರೆವೇನ್‌ ಎಂಬ ಆಡಿನ-ಚರ್ಮದಿಂದ ಮಾಡಿದ ಬಾರಿಸುವ ಸಾಧನಗಳನ್ನು ಹಾಗೂ ಲೋಹದ ತ್ರಿಕೋನಗಳ ಕಂಬಿವಾದ್ಯದಂತಹ ಪಾರಂಪರಿಕ ಸಾಧನಗಳನ್ನು ಬಳಸಲಾಗುತ್ತದೆ. ಜೀತ ಪದ್ಧತಿಯ ವ್ಯಥೆಯನ್ನು ಹೇಳುವ ಇದರ ಹಾಡುಗಳನ್ನು, ಈಚಿನ ದಿನಗಳಲ್ಲಿ ಕರಿಯರು ಸಮಾಜದಲ್ಲಿ ತಾವು ಅನುಭವಿಸುತ್ತಿರುವ ಅಸಮಾನತೆಯ ವಿರುದ್ಧ ಹೋರಾಡಲು ಇವನ್ನು ಬಳಸುತ್ತಿದ್ದಾರೆ. ಪುರುಷರು ಸಾಧನಗಳನ್ನು ನುಡಿಸಿದರೆ ಮಹಿಳೆಯರು ಕಾಮಪ್ರಚೋದಕ ನೃತ್ಯ ಮಾಡುತ್ತಾರೆ.[೩೪]

ನಶಿಸಿಹೋದ ಡೋಡೊ ಹಕ್ಕಿಯ ಏಕೈಕ ವಾಸಸ್ಥಾನವಾಗಿದ್ದ ಸ್ಥಳವೆಂದರೆ ಮಾರಿಷಸ್

ಮಾರಿಷಸ್ 1847ರಲ್ಲಿ, ವಿಶ್ವದಲ್ಲಿಯೇ ಪೋಸ್ಟೇಜ್ ಸ್ಟ್ಯಾಂಪ್‌ಗಳನ್ನು ವಿತರಿಸಿದ ಐದನೇ ತಾಣವಾಯಿತು. ಆ ಸಮಯದಲ್ಲಿ ಮಾರಿಷಸ್ "ಅಂಚೆ ಕಛೇರಿ" ಸ್ಟ್ಯಾಂಪ್‌ಗಳು ಎಂದೇ ಹೆಸರಾದ "ರೆಡ್ ಪೆನ್ನಿ" ಹಾಗೂ "ಬ್ಲೂ ಟೂ ಪೆನ್ಸ್‌" ಮುಖಬೆಲೆಯುಳ್ಳ ಎರಡು ರೀತಿಯ ಸ್ಟ್ಯಾಂಪ್‌ಗಳನ್ನು ವಿತರಿಸಿತು. ಆ ಸ್ಟ್ಯಾಂಪ್‌ಗಳು ವಿಶ್ವದೆಲ್ಲೆಡೆ ಸುಪ್ರಸಿದ್ಧ ಹಾಗೂ ಅಮೂಲ್ಯವಾದವು.

ಪೋರ್ಚುಗೀಸರು ಮಾರಿಷಸ್ ದ್ವೀಪವನ್ನು ಕಂಡುಹಿಡಿದಾಗ ಅಲ್ಲಿನ ಅಜ್ಞಾತ ಪಕ್ಷಿ ತಳಿ ನೋಡಿ, ಆಷ್ಟೇನೂ ಚುರುಕಲ್ಲದ ಆ ಪಕ್ಷಿಗಳಿಗೆ ಡೋಡೊ (ಸಿಂಪ್ಲೆಟನ್) ಎಂದು ಹೆಸರಿಸಿದರು. ಅಲ್ಲಿ ನೆಲೆನಿಂತ ನಿವಾಸಿಗಳು ಅಥವಾ ಅವರ ಸಾಕು ಪ್ರಾಣಿಗಳು 1681ರ ಹೊತ್ತಿಗೆ ಎಲ್ಲ ಡೋಡೊಗಳನ್ನು ಕೊಂದುಹಾಕಿದ್ದರು. ಇನ್ನೊಂದು ಸಿದ್ಧಾಂತವು, ನಿಧಾನ ಗತಿಯಲ್ಲಿ ವಂಶಾಭಿವೃದ್ಧಿ ಮಾಡುತ್ತಿದ್ದ ಡೋಡೊ ಸಂತತಿಯನ್ನು ಮುಕ್ತವಾಗಿ ಸಂಚರಿಸಲು ಬಿಟ್ಟ ಆಮದಾದ ಕಾಡು ಹಂದಿಗಳು ನಿರ್ನಾಮ ಮಾಡಿದವು ಎಂದು ತಿಳಿಸುತ್ತದೆ. ಡೋಡೊ ರಾಷ್ಟ್ರೀಯ ಲಾಂಛನದ ಪ್ರಧಾನ ಭಾಗವಾಗಿದೆ (ಮೇಲೆ ನೋಡಿ).

ಈ ದ್ವೀಪದಲ್ಲಿ ಸುಪ್ರಸಿದ್ಧ ಫ್ರೆಂಚ್‌, ಆಂಗ್ಲ ಮತ್ತು ಕ್ರಿಯೋಲ್‌ ಭಾಷೆಗಳ ವಿಭಿನ್ನ ಸಾಹಿತ್ಯ ಪ್ರಕಾರಗಳೂ ಮೂಡಿಬಂದವು. 2008ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಜೀನ್-ಮಾರಿಯ ಗುಸ್ತವ್ ಲೆ ಕ್ಲೇಜಿಯೊ, ಫ್ರಾಂಕೊ-ಮಾರಿಷಿಯನ್ ಮೂಲದವರಾಗಿದ್ದು, ದ್ವೀಪದಲ್ಲಿ ಪ್ರತಿವರ್ಷ ಕೆಲ ಸಮಯವನ್ನು ಕಳೆಯುತ್ತಾರೆ.

ಮಾರಿಷಸ್‌ನಲ್ಲಿ ಕ್ರಿಸ್‌ಮಸ್, ಕವಡೀ, ಚೀನೀಯರ ಹೊಸ ವರ್ಷ, ಪೇರೆ ಲವಲ್, ದೀಪಾವಳಿ, ಮಹಾಶಿವರಾತ್ರಿ ಹಾಗೂ ಈದ್ ಅಲ್-ಫಿತ್ರ್‌ ಹಬ್ಬಗಳನ್ನು ಆಚರಿಸಲಾಗುತ್ತದೆ.[೩೪]

ಮಾರಿಷಸ್‌ನಲ್ಲಿ ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕೆ ಅನುಕೂಲವಾಗುವಂತೆ ಮನರಂಜನಾ ಕಾರ್ಯಕ್ರಮಗಳೂ ವೈವಿಧ್ಯಮಯಗೊಳಿಸಲಾಗಿದೆ. ದ್ವೀಪವು ಹವಳದ ದಿಣ್ಣೆಗಳಿಂದ ಆವೃತವಾಗಿದ್ದು, ಇದರಿಂದಾಗಿ ಮೇಲ್ಮಟ್ಟದಲ್ಲಿಯೇ ಸಾಕಷ್ಟು ಪ್ರಶಾಂತ ನೀರನ್ನು ಹೊಂದಿದ್ದು ಜಲಕ್ರೀಡೆಗಳಿಗೆ ಅನುಕೂಲಕರವಾಗಿದೆ. ಆಳ ಸಮುದ್ರದ ಮೀನುಗಾರಿಕೆ, ವಿಂಡ್ ಸರ್ಫಿಂಗ್ ಕ್ರೀಡೆ, ವಾಟರ್ ಸ್ಕೀಯಿಂಗ್‌ಕ್ರೀಡೆ, ಐಷಾರಾಮಿ ನೌಕೆಗಳಲ್ಲಿ ಹಾಗೂ ಕೆಲವು ಬಾರಿ ಸಬ್‌ಮರೀನುಗಳಲ್ಲಿ ವಿಹರಿಸುವುದು ನೀರಿನಲ್ಲಿ ನಡೆಯುವ ಮನರಂಜನಾ ಕ್ರೀಡೆಗಳಾಗಿವೆ.

ನೆಲದ ಮೇಲೆ ನಡೆಸುವ ಮನರಂಜನಾ ಕ್ರೀಡೆಗಳೆಂದರೆ ಗಾಲ್ಫ್, ಟೆನಿಸ್, ಸ್ಕೀಯಿಂಗ್, ಸಮುದ್ರ ನೆಗೆತ, ಜಿಂಕೆ ಬೇಟೆ, ಒಳಾಂಗಣ & ಬೆಟ್ಟಪ್ರದೇಶದ ದ್ವಿಚಕ್ರಸವಾರಿ, ಕಟ್ಟಡಗಳನ್ನು ಹಗ್ಗದ ಸಹಾಯದಿಂದ ಇಳಿಯುವ ಕ್ರೀಡೆ, ಜಿಪ್ ಲೈನಿಂಗ್, ಕುದುರೆ ಸವಾರಿ ಮತ್ತು ಚಾರಣಗಳು. ಆದರೆ, ಈ ಚಟುವಟಿಕೆಗಳನ್ನು ಕೇವಲ ಶ್ರೀಮಂತ ಮನೆತನದವರು ಮಾತ್ರ ರೂಢಿಸಿಕೊಂಡಿದ್ದಾರೆ.

ವಿದ್ಯುತ್‌ ಶಕ್ತಿ

[ಬದಲಾಯಿಸಿ]

ಮಾರಿಷಸ್‌ನಲ್ಲಿ, 220 ವೋಲ್ಟ್ 50 Hz ACಯ ಪ್ರಧಾನ ವಿದ್ಯುತ್‌ ಸರಬರಾಜನ್ನು ಬಳಸುತ್ತದೆ. ಬಳಸಲಾಗುವ ಪ್ಲಗ್‌ ವಿಧಗಳೆಂದರೆ C ಮತ್ತು G :

"ಯೂರೋಪ್ಲಗ್"(CEE 7/16)

ಮತ್ತಷ್ಟು ಮಾಹಿತಿಗಾಗಿ ಮೇನ್ಸ್ ಪವರ್‌ ಅರೌಂಡ್‌ ದ ವರ್ಲ್ಡ್‌ ಲೇಖನವನ್ನು ನೋಡಿ.

ಅಂತರರಾಷ್ಟ್ರೀಯ ಶ್ರೇಯಾಂಕಗಳು

[ಬದಲಾಯಿಸಿ]
ಸಮೀಕ್ಷೆ ಸಂಸ್ಥೆ ಶ್ರೇಯಾಂಕ
ಆರ್ಥಿಕ ಸ್ವಾತಂತ್ರ್ಯದ ಸೂಚಿ/ಇಂಡೆಕ್ಸ್ ಆಫ್ ಎಕನಾಮಿಕ್ ಫ್ರೀಡಂ 2008 Archived 2013-06-29 ವೇಬ್ಯಾಕ್ ಮೆಷಿನ್ ನಲ್ಲಿ. ಹೆರಿಟೇಜ್ ಫೌಂಡೇಷನ್/ದ ವಾಲ್ ಸ್ಟ್ರೀಟ್ ಜರ್ನಲ್ 157ರಲ್ಲಿ 18
ಭ್ರಷ್ಟಾಚಾರದ ಗ್ರಹಿಕೆಯ ಸೂಚಿ/ಕರಪ್ಷನ್ ಪರ್ಸೆಪ್ಷನ್ಸ್ ಇಂಡೆಕ್ಸ್ 2008 Archived 2009-03-11 ವೇಬ್ಯಾಕ್ ಮೆಷಿನ್ ನಲ್ಲಿ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ 180ರಲ್ಲಿ 41
ವ್ಯವಹಾರ ನಡೆಸುವ ಸರಾಗತೆಯ ಸೂಚಿ/ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್ (2010 ವರದಿ) ವಿಶ್ವ ಬ್ಯಾಂಕ್ ಸಮೂಹ 183ರಲ್ಲಿ 17
ಸಾಂಖ್ಯಿಕ ಅವಕಾಶಗಳ ಸೂಚಿ/ಡಿಜಿಟಲ್ ಆಪರ್ಚುನಿಟಿ ಇಂಡೆಕ್ಸ್ (2007) ಇಂಟರ್‌ನ್ಯಾಷನಲ್ ಟೆಲಿಕಮ್ಯುನಿಕೇಷನ್ ಯೂನಿಯನ್ 181ರಲ್ಲಿ 50
ಪತ್ರಿಕಾ ಸ್ವಾತಂತ್ರ್ಯ ಸೂಚಿ/ಪ್ರೆಸ್ ಫ್ರೀಡಂ ಇಂಡೆಕ್ಸ್(2007) ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ 169ರಲ್ಲಿ 25
ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚಿ/ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್ (2008) ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ 177ರಲ್ಲಿ 74

ಇದನ್ನೂ ನೋಡಿರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Article 49 of The Constitution". National Assembly of Mauritius. Archived from the original on 2013-10-17. Retrieved 2009-02-08.
  2. "Republic of Mauritius, Government Portal (Mauritius)". Archived from the original on 2011-05-10. Retrieved 2007-09-21.
  3. Department of Economic and Social Affairs Population Division (2009). "World Population Prospects, Table A.1" (.PDF). 2008 revision. United Nations. Retrieved 2009-03-12. {{cite journal}}: Cite journal requires |journal= (help); line feed character in |author= at position 42 (help)
  4. ೪.೦ ೪.೧ ೪.೨ ೪.೩ "Mauritius". International Monetary Fund. Retrieved 2009-10-01.
  5. Mauritius turns the clock forward in October 2008
  6. Mauritius will not repeat daylight saving time
  7. http://www.tamilnation.org/diaspora/mauritius.htm
  8. "CIA - The World Factbook -- Mauritius". CIA. Archived from the original on 2018-12-11. Retrieved 2007-05-04.
  9. Mutch, T. D. (1942). The First Discovery of Australia. Sydney: Project Gutenberg of Australia. p. 55., p.13.
  10. ಉತ್ತರ ಅಮೆರಿಕಾದ ಹಡ್ಸನ್ ನದಿಗೆ ಮೊದಲು "ಮಾರಿಷಸ್ ನದಿ" ಎಂದು ಅಲ್ಲಿನ ಚಕ್ರಾಧಿಪತಿಯ ಹೆಸರನ್ನೇ ಇಡಲಾಗಿತ್ತು.
  11. "Mauritius and Equatorial Guinea granted associated observer status in CPLP". macauhub.com. 2006-07-17. Archived from the original on 2007-10-11. Retrieved 2007-03-05.
  12. "First Day Cover: Rodrigues Regional Assembly". The Mauritius Post Ltd. 2004-10-12. Archived from the original on 2007-06-25. Retrieved 2007-06-27.
  13. "Rodrigues: achievements after three years of autonomy". Government of Mauritius. 2005-10-25. Archived from the original on 2007-09-30. Retrieved 2007-06-27.
  14. "Facts about the land, people, history, government, political conditions, foreign relations of Mauritius. - Government and political conditions". Bureau of African Affairs. U.S Department of State. 2007. Retrieved 2007-06-22. {{cite web}}: Unknown parameter |month= ignored (help)
  15. "CIA - The World Factbook -- Mauritius". CIA. Archived from the original on 2018-12-11. Retrieved 2007-11-194. {{cite web}}: Check date values in: |accessdate= (help)
  16. ೧೬.೦ ೧೬.೧ World Bank. "2005 International Comparison Program" (PDF). Retrieved 2008-04-07.
  17. (French) INSEE Réunion. "11.1 - RÉSULTATS ÉCONOMIQUES" (PDF). Retrieved 2008-04-07.
  18. ಮಾರಿಷಸ್‌ನ ತೆರಿಗೆ-ಮುಕ್ತ ಯೋಜನೆ Archived 2011-05-04 ವೇಬ್ಯಾಕ್ ಮೆಷಿನ್ ನಲ್ಲಿ., TREND-News.com, 04-06-2005
  19. "India and Mauritius To Work For Greater FDI Inflow into India's Infrastructure". Government of India, Department of Commerce. 2006-04-18. Retrieved 2008-10-11. {{cite news}}: Cite has empty unknown parameter: |coauthors= (help)
  20. http://www.gov.mu/portal/goc/assemblysite/file/pnqans281106.pdf Archived 2010-11-14 ವೇಬ್ಯಾಕ್ ಮೆಷಿನ್ ನಲ್ಲಿ..
  21. "CABINET DECISIONS - 24 AUGUST 2007". August 2007. Archived from the original on 2012-01-11. Retrieved 2009-09-07.
  22. "ಆರ್ಕೈವ್ ನಕಲು". Archived from the original on 2010-01-06. Retrieved 2009-12-29.
  23. "Population and Vital Statistics, Republic of Mauritius, Year 2007 - Highlights". Central Statistics Office (Mauritius). 2008. Archived from the original on 2008-05-10. Retrieved 2008-05-26. {{cite web}}: Unknown parameter |month= ignored (help)
  24. Thapan (ed.), Meenakshi (2005). Transnational Migration and the Politics of Identity. SAGE. p. 320. ISBN 978-0761934257. {{cite book}}: |last= has generic name (help)
  25. Mountain, Alan; et al. "Mauritius". This is Mauritius. p. 53–54. {{cite book}}: Explicit use of et al. in: |first= (help)
  26. https://news.yahoo.com/s/afp/20081018/wl_africa_afp/mauritiusculturelanguagefrancophonie_081018200526[permanent dead link]
  27. https://web.archive.org/web/20081024093020/http://afp.google.com/article/ALeqM5gn6YyJpIZpbt91LA3lwzKzWG6UXA
  28. ೨೮.೦ ೨೮.೧ ೨೮.೨ http://www.brandeis.edu/coexistence/linked%20documents/Nigel%20-%20Mauritius%20FINAL.pdf.
  29. ೨೯.೦ ೨೯.೧ ೨೯.೨ ೨೯.೩ "ಆರ್ಕೈವ್ ನಕಲು". Archived from the original on 2010-06-17. Retrieved 2009-12-29.
  30. ೩೦.೦ ೩೦.೧ ೩೦.೨ "ಆರ್ಕೈವ್ ನಕಲು". Archived from the original on 2011-05-11. Retrieved 2009-12-29.
  31. Holm, J. (1989). Pidgins and Creoles. New York: Cambridge University Press. p. 476., p.353.
  32. "ಆರ್ಕೈವ್ ನಕಲು". Archived from the original on 2010-11-14. Retrieved 2009-12-29.
  33. "ಆರ್ಕೈವ್ ನಕಲು". <&cd=10&hl=fr&ct=clnk&gl=ca Archived from the original on 2012-09-27. Retrieved 2012-09-27.
  34. ೩೪.೦ ೩೪.೧ Macdonald, Fiona; et al. "Mauritius". Peoples of Africa. p. 340–341. {{cite book}}: Explicit use of et al. in: |first= (help)

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Macdonald, Fiona (2001). "Mauritius". Peoples of Africa. US: Marshall Cavendish. ISBN 9780761471585. {{cite book}}: Unknown parameter |coauthors= ignored (|author= suggested) (help)
  • Mountain, Alan (2000). This is Mauritius. Struik. ISBN 9781843303015. {{cite book}}: Unknown parameter |coauthors= ignored (|author= suggested) (help)
  • Eisenlohr, Patrick (2006). Little India: Diaspora, Time, and Ethnolinguistic Belonging in Hindu Mauritius. Berkeley: University of California Press. ISBN 9780520248809.
  • ಡಾಡ್, ಜಾನ್ ಹಾಗೂ ಮೆಡೆಲೈನ್ ಫಿಲಿಪ್. ಲೋನ್ಲಿ ಪ್ಲಾನೆಟ್ ಮಾರಿಷಸ್ ರಿಯೂನಿಯನ್ & ಸೀಷೆಲ್ಸ್‌‌ . ಲೋನ್ಲಿ ಪ್ಲಾನೆಟ್ ಪಬ್ಲಿಕೇಷನ್ಸ್‌, 2004. ISBN 1-74059-301-4
  • ಲೀ, ಜಾಕ್ವೆಸ್: ಮಾರಿಷಸ್: ಇಟ್ಸ್ ಕ್ರಿಯೋಲ್‌ ಲಾಂಗ್ವೇಜ್ - ದಿ ಅಲ್ಟಿಮೇಟ್ ಕ್ರಿಯೋಲ್‌ ಫ್ರೇಸ್ ಬುಕ್ ಅಂಡ್ ಡಿಕ್ಷನರಿ , ಕಾಗದ ಕವಚದ 160 ಪುಟಗಳು (ಆಗಸ್ಟ್‌ 15 2005), ಪ್ರಕಾಶಕರು: ನಾಟಿಲಸ್, ISBN 0-9511296-4-3.
  • ಲೀ, ಜಾಕ್ವೆಸ್: ಸೇಗ: ದಿ ಮಾರಿಷಿಯನ್ ಫೋಕ್ ಡ್ಯಾನ್ಸ್ , ಕಾಗದ ಕವಚದ 104 ಪುಟಗಳು (ಡಿಸೆಂಬರ್‌ 1990), ಪ್ರಕಾಶಕರು: ನಾಟಿಲಸ್, ISBN 0-9511296-1-9
  • ಖಾಲ್ ತೋರಬುಲ್ಲಿ, ಕೂಲಿಟ್ಯೂಡ್: ಆನ್ ಆಂಥಾಲಜಿ ಆಫ್ ದಿ ಇಂಡಿಯನ್ ಲೇಬರ್ ಡಯಾಸ್ಪೋರ (ಮರೀನಾ ಕಾರ್ಟರ್, ಆಂಥೆಮ್ ಪ್ರೆಸ್ಸ್, ಲಂಡನ್ ಸಹಭಾಗಿತ್ವದಲ್ಲಿ, 2002) ISBN 1-84331-003-1

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • ಮಾರಿಷಸ್‌ನ ಸರಕಾರ Archived 2008-02-03 ವೇಬ್ಯಾಕ್ ಮೆಷಿನ್ ನಲ್ಲಿ.
  • Mauritius entry at The World Factbook
  • UCB ಲೈಬ್ರರೀಸ್‌ GovPubs ರಿಂದ ಮಾರಿಷಸ್‌ Archived 2008-06-07 ವೇಬ್ಯಾಕ್ ಮೆಷಿನ್ ನಲ್ಲಿ.
  • ಮಾರಿಷಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • Wikimedia Atlas of Mauritius
"https://kn.wikipedia.org/w/index.php?title=ಮಾರಿಷಸ್&oldid=1233905" ಇಂದ ಪಡೆಯಲ್ಪಟ್ಟಿದೆ