ಬ್ಲೂಸ್
Blues | |
---|---|
Stylistic origins | African American folk music Work songs Spirituals |
Cultural origins | Late 19th century, southern United States |
Typical instruments | Guitar · Piano · Harmonica · Double Bass · Drums · Saxophone · Vocals · Trumpet · Trombone |
Derivative forms | Bluegrass · Jazz · R&B · Rock and roll · Rock music |
Subgenres | |
Boogie-woogie · Classic female blues · Country blues · Delta blues · Electric blues · Fife and drum blues · Jump blues · Piano blues | |
Fusion genres | |
Blues rock · Jazz blues · Punk blues · Soul blues | |
Regional scenes | |
African blues · Atlanta blues · British blues · Canadian blues · Chicago blues · Detroit blues · East Coast blues · Kansas City blues · Louisiana blues · Memphis blues · New Orleans blues · Piedmont blues · St. Louis blues · Swamp blues · Texas blues · West Coast blues | |
Other topics | |
Blues genres · Blues musicians · Blues scale · Jug band · Origins |
ಬ್ಲೂಸ್ ಎಂಬುದು ಒಂದು ಸಂಗೀತದ ಪ್ರಭೇದ ಮತ್ತು ಒಂದು ಸಂಗೀತ ಪ್ರಕಾರ ಈ ಎರಡಕ್ಕೂ ನೀಡಲ್ಪಟ್ಟ ಹೆಸರಾಗಿದೆ. 19ನೇ ಶತಮಾನದ ಅಂತ್ಯದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಅಮೆರಿಕಾದಲ್ಲಿನ ಅಮೆರಿಕಾದ ನೀಗ್ರೋ ಸಮುದಾಯಗಳೊಳಗೆ ಇದು ಪ್ರಮುಖವಾಗಿ ಸೃಷ್ಟಿಸಲ್ಪಟ್ಟಿದ್ದು, ನೀಗ್ರೋ ಸ್ತೋತ್ರಗೀತೆಗಳು, ಕಾರ್ಯಗೀತೆಗಳು, ಹೊಲದಲ್ಲಿನ ಗಟ್ಟಿಯಾದ ಕೂಗುಗಳು, ಅಬ್ಬರದ ಕೇಕೆಗಳು ಮತ್ತು ಸ್ತೋತ್ರಗೀತೆಗಳು, ಹಾಗೂ ಪ್ರಾಸಬದ್ಧ ಸರಳ ನಿರೂಪಣಾತ್ಮಕ ಹಾಡುಕಥೆಗಳು (ಲಾವಣಿಗಳು) ಇದರ ತೆಕ್ಕೆಯಲ್ಲಿವೆ.[೧] ಜಾಝ್, ರಿದಮ್ ಅಂಡ್ ಬ್ಲೂಸ್, ಮತ್ತು ರಾಕ್ ಅಂಡ್ ರೋಲ್‌ಗಳಲ್ಲಿ ಸರ್ವತ್ರವಾಗಿರುವ ಬ್ಲೂಸ್ ಪ್ರಭೇದವು, ನಿರ್ದಿಷ್ಟ ಸ್ವರಮೇಳದ ಸಂಚಾರಗಳು (ಹನ್ನೆರಡು-ಲಯರೇಖೆಯ ಬ್ಲೂಸ್ ಸ್ವರಮೇಳ ಸಂಚಾರಗಳು ಇದರಲ್ಲಿ ಅತ್ಯಂತ ಸಾಮಾನ್ಯವಾಗಿರುತ್ತವೆ) ಹಾಗೂ ಬ್ಲೂ ಸಂಗೀತ ಸ್ವರಗಳ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದೆ; ಅಭಿವ್ಯಕ್ತಿಯ ಉದ್ದೇಶಗಳಿಗಾಗಿರುವ ಬ್ಲೂ ಸಂಗೀತ ಸ್ವರಗಳನ್ನು, ಪ್ರಧಾನ ಸ್ವರಶ್ರೇಣಿಯ ಸ್ಥಾಯಿಗೆ ಸಂಬಂಧಿಸಿದಂತೆ ಅರ್ಧಸ್ವರ ಇಳಿಸಲ್ಪಟ್ಟ ಅಥವಾ ಹಂತಹಂತವಾಗಿ ಬಾಗಿದ (3ನೇ ಮಂದ್ರಸ್ಥಾಯಿಯಿಂದ 3ನೇ ಪ್ರಧಾನಸ್ಥಾಯಿಯವರೆಗೆ) ಸ್ಥಾಯಿಯಲ್ಲಿ ಬ್ಲೂ ಸಂಗೀತ ಸ್ವರಗಳನ್ನು ಹಾಡಲಾಗುತ್ತದೆ ಅಥವಾ ನುಡಿಸಲಾಗುತ್ತದೆ.
ಬ್ಲೂಸ್ ಪ್ರಕಾರವು ಬ್ಲೂಸ್ ಪ್ರಭೇದವನ್ನು ಆಧರಿಸಿದೆಯಾದರೂ, ನಿರ್ದಿಷ್ಟ ಸಾಹಿತ್ಯ, ಮಂದ್ರಸ್ಥಾಯಿಯ ಸ್ವರಪ್ರಸ್ತಾರಗಳು ಮತ್ತು ಸಂಗೀತ ವಾದ್ಯಗಳಂಥ ಇತರ ವಿಶಿಷ್ಟ ಲಕ್ಷಣಗಳನ್ನು ಅದು ಒಳಗೊಂಡಿದೆ. ಹಳ್ಳಿಗಾಡಿನ ಬ್ಲೂಸ್‌ನಿಂದ ಮೊದಲ್ಗೊಂಡು ನಗರಪ್ರದೇಶದ ಬ್ಲೂಸ್‌ವರೆಗಿನ ವ್ಯಾಪ್ತಿಯನ್ನು ಹೊಂದಿರುವ ಹಲವಾರು ಉಪಪ್ರಕಾರಗಳಾಗಿ ಬ್ಲೂಸ್‌ನ್ನು ಮರುವಿಭಾಗಿಸಬಹುದಾಗಿದೆ. ಈ ಉಪಪ್ರಕಾರಗಳು 20ನೇ ಶತಮಾನದ ವಿಭಿನ್ನ ಅವಧಿಗಳ ಸಂದರ್ಭದಲ್ಲಿ ಹೆಚ್ಚೂಕಮ್ಮಿ ಜನಪ್ರಿಯವಾಗಿದ್ದವು. ಡೆಲ್ಟಾ, ಪೈಡ್‌ಮಾಂಟ್, ಜಂಪ್ ಮತ್ತು ಚಿಕಾಗೊ ಬ್ಲೂಸ್ ಶೈಲಿಗಳು ಅತ್ಯಂತ ಚಿರಪರಿಚಿತವಾಗಿರುವ ಉಪಪ್ರಕಾರಗಳಾಗಿವೆ. ವಿದ್ಯುತ್ತಿಲ್ಲದೆ ಚಾಲನೆಯಾಗುವ ಬ್ಲೂಸ್‌ನಿಂದ ವಿದ್ಯುಚ್ಚಾಲಿತ ಬ್ಲೂಸ್‌ವರೆಗಿನ ಪರಿವರ್ತನೆಗೆ ಹಾಗೂ ಒಂದು ವ್ಯಾಪಕವಾದ ಪ್ರೇಕ್ಷಕ ವೃಂದಕ್ಕೆ ಬ್ಲೂಸ್ ಸಂಗೀತವು ಪ್ರಗತಿಶೀಲವಾಗಿ ತೆರೆದುಕೊಳ್ಳುವುದಕ್ಕೆ IIನೇ ಜಾಗತಿಕ ಸಮರವು ಅಂಕಿತವನ್ನು ಹಾಕಿತು. 1960ರ ದಶಕ ಮತ್ತು 1970ರ ದಶಕಗಳಲ್ಲಿ, ಬ್ಲೂಸ್ ರಾಕ್ ಎಂದು ಕರೆಯಲ್ಪಡುವ ಒಂದು ಮಿಶ್ರಜಾತಿಯ ಪ್ರಭೇದವು ಹೊರಹೊಮ್ಮಿತು.
"ದಿ ಬ್ಲೂಸ್" ಎಂಬ ಶಬ್ದವು ವಿಷಣ್ಣತೆ ಮತ್ತು ದುಃಖಸ್ಥಿತಿಯ ಅರ್ಥವನ್ನು ನೀಡುವ "ಬ್ಲೂ ಡೆವಿಲ್ಸ್"ಗೆ ಉಲ್ಲೇಖಿಸಲ್ಪಡುತ್ತದೆ; ಈ ಅರ್ಥದಲ್ಲಿ ಸದರಿ ಶಬ್ದದ ಆರಂಭಿಕ ಬಳಕೆಯಾಗಿರುವುದನ್ನು ಜಾರ್ಜ್ ಕೋಲ್‌ಮನ್ ಎಂಬಾತನ ಬ್ಲೂ ಡೆವಿಲ್ಸ್ (1798) ಎಂಬ ಏಕಾಂಕ ಪ್ರಹಸನದಲ್ಲಿ ಕಾಣಬಹುದು.[೨] ಅಮೆರಿಕಾದ ನೀಗ್ರೋ ಸಂಗೀತದಲ್ಲಿ ಗೀತಾಂಗ ಭಾಗದ ಬಳಕೆಯು ಹಳೆಯದಾಗಿದ್ದರೂ ಸಹ, 1912ರಿಂದಲೂ ಇದು ಪ್ರಮಾಣಿತಗೊಂಡಿದೆ; ಈ ಅವಧಿಯಲ್ಲಿ ಹಾರ್ಟ್ ವ್ಯಾಂಡ್‌ನ "ಡಲ್ಲಾಸ್ ಬ್ಲೂಸ್" ಸಂಯೋಜನೆಯು ಕೃತಿಸ್ವಾಮ್ಯ ಪಡೆದ ಮೊದಲ ಬ್ಲೂಸ್ ಸಂಗೀತ ಸಂಯೋಜನೆ ಎಂದು ಕರೆಸಿಕೊಂಡಿತು.[೩][೪] ಒಂದು ನಿರುತ್ಸಾಹದ ಚಿತ್ತಸ್ಥಿತಿಯನ್ನು ವಿವರಿಸಲು ಸಾಹಿತ್ಯದಲ್ಲಿ ಗೀತಾಂಗ ಭಾಗವು ಅನೇಕವೇಳೆ ಬಳಸಲ್ಪಡುತ್ತದೆ.[೫]
ಪ್ರಭೇದ
[ಬದಲಾಯಿಸಿ]20ನೇ ಶತಮಾನದ ಮೊದಲ ದಶಕಗಳ ಅವಧಿಯಲ್ಲಿ, ಬ್ಲೂಸ್ ಸಂಗೀತವು ಒಂದು ಸ್ವರಮೇಳ ಸಂಚಾರದ ಪರಿಭಾಷೆಯಲ್ಲಿ ಸ್ಪಷ್ಟವಾಗಿ ವಿಶದೀಕರಿಸಲ್ಪಟ್ಟಿರಲಿಲ್ಲ.[೬] 1900ರ ದಶಕದ ಆರಂಭದ ವೇಳೆಗೆ, ಅಮೆರಿಕಾದ ನೀಗ್ರೋ ಸಮುದಾಯದಲ್ಲಿ ಮೊದಲ ಬ್ಲೂಸ್ ತಾರೆಯಾದ ಬೆಸ್ಸೀ ಸ್ಮಿತ್‌ನಂಥ ಗಾಯಕರು ಕಂಡ ವ್ಯಾಪಾರಿ ಯಶಸ್ಸಿನ ಕಾರಣದಿಂದಾಗಿ, ಹನ್ನೆರಡು-ಲಯರೇಖೆಯ ಬ್ಲೂಸ್ ಮಾನದಂಡವಾಗಿ ಪರಿಣಮಿಸಿತು.[೭] 8-ಲಯರೇಖೆಯ ಪ್ರಭೇದಗಳಂಥ ಇತರ ಸ್ವರಮೇಳ ಸಂಚಾರಗಳನ್ನು ಈಗಲೂ ಬ್ಲೂಸ್ ಎಂಬುದಾಗಿ ಪರಿಗಣಿಸಲಾಗುತ್ತದೆ; "ಹೌ ಲಾಂಗ್ ಬ್ಲೂಸ್", "ಟ್ರಬಲ್ ಇನ್ ಮೈಂಡ್", ಮತ್ತು ಬಿಗ್ ಬಿಲ್ ಬ್ರೂಂಜಿಯ "ಕೀ ಟು ದಿ ಹೈವೇ" ಮೊದಲಾದವು ಇದರ ಉದಾಹರಣೆಗಳಲ್ಲಿ ಸೇರಿವೆ. ರೇ ಚಾರ್ಲ್ಸ್‌ನ ವಾದ್ಯಸಂಗೀತವಾದ "ಸ್ವೀಟ್ 16 ಬಾರ್ಸ್"ನಲ್ಲಿ ಹಾಗೂ ಹರ್ಬೀ ಹ್ಯಾನ್‌ಕಾಕ್‌ನ "ವಾಟರ್‌ಮೆಲನ್ ಮ್ಯಾನ್"ನಲ್ಲಿ ಇರುವಂತೆ 16-ಲಯರೇಖೆ ಬ್ಲೂಸ್ ಕೂಡಾ ಅಸ್ತಿತ್ವದಲ್ಲಿವೆ. ವಿಲಕ್ಷಣ ರೀತಿಯ ಲಯರೇಖೆಗಳ ಹಾಡುಗಳೂ ಸಹ ಸಾಂದರ್ಭಿಕವಾಗಿ ಎದುರಾಗುತ್ತವೆ; ಹೌಲಿನ್ ವೋಲ್ಫ್‌ನಿಂದ ಸೃಷ್ಟಿಯಾದ "ಸಿಟಿಂಗ್ ಆನ್ ದಿ ಟಾಪ್ ಆಫ್ ದಿ ವರ್ಲ್ಡ್"ನಲ್ಲಿನ 9-ಲಯರೇಖೆಯ ಸಂಚಾರವು ಇದಕ್ಕೊಂದು ಉದಾಹರಣೆಯಾಗಿದೆ.
ಒಂದು ಹನ್ನೆರಡು-ಲಯರೇಖೆಯ ಕ್ರಮದಲ್ಲಿ ನುಡಿಸಲಾಗುವ ಸ್ವರಮೇಳಗಳು: | Cಯಲ್ಲಿನ ಒಂದು ಬ್ಲೂಸ್‌ಗಾಗಿರುವ ಸ್ವರಮೇಳಗಳು: | ||||||||||||||||||||||||||
align=center |
|
align=center |
|
ಒಂದು ಬ್ಲೂಸ್ ಸಂಗೀತ ಸಂಯೋಜನೆಯ ಹನ್ನೆರಡು-ಲಯರೇಖೆಯ ಮೂಲಭೂತ ಸಾಹಿತ್ಯದ ಚೌಕಟ್ಟು, ಒಂದು 4/4 ಲಯಸೂಚಿಯಲ್ಲಿನ ಹನ್ನೆರಡು ಲಯರೇಖೆಗಳ ಒಂದು ಪ್ರಮಾಣಕ ಸ್ವರಮೇಳನದ ಸಂಚಾರದಿಂದ ಪ್ರತಿಬಿಂಬಿಸಲ್ಪಡುತ್ತದೆ. ಒಂದು ಹನ್ನೆರಡು-ಲಯರೇಖೆಯ ಬ್ಲೂಸ್‌ಗೆ ಜತೆಗೂಡಿರುವ ಬ್ಲೂಸ್ ಸ್ವರಮೇಳಗಳು, ವಿಶಿಷ್ಟವೆನಿಸುವಂತೆ ಹನ್ನೆರಡು-ಲಯರೇಖೆಯ ಕ್ರಮವೊಂದರ ಮೇಲೆ ನುಡಿಸಲ್ಪಡುವ ಮೂರು ವಿಭಿನ್ನ ಸ್ವರಮೇಳಗಳ ಒಂದು ಜೋಡಿಯಾಗಿರುತ್ತವೆ. ಸಂಚಾರದ ಸ್ವರಾಷ್ಟಕದ ಹಂತಗಳಿಗೆ ಉಲ್ಲೇಖಿಸಲ್ಪಡುವ ರೋಮನ್ ಅಂಕಿಗಳಿಂದ ಅವು ವರ್ಗೀಕರಿಸಲ್ಪಡುತ್ತವೆ. ಉದಾಹರಣೆಗೆ, ಪ್ರಧಾನ ಸ್ವರಪ್ರಸ್ತಾರ Cಯಲ್ಲಿರುವ ಒಂದು ಬ್ಲೂಸ್‌ಗೆ ಸಂಬಂಧಿಸಿದಂತೆ, C ಎಂಬುದು ನಾದದ ಸ್ವರಮೇಳ (I) ಆಗಿರುತ್ತದೆ ಮತ್ತು F ಎಂಬುದು ಉಪಪ್ರಧಾನ ಸ್ವರ (IV) ಆಗಿರುತ್ತದೆ. ಸ್ವರಶ್ರೇಣಿಯ ಪಂಚಮಸ್ವರದ (V) ಪೂರ್ತಿತಿರುವು ಕೊನೆಯ ಸ್ವರಮೇಳವಾಗಿದ್ದು, ಮುಂದಿನ ಸಂಚಾರದ ಪ್ರಾರಂಭಕ್ಕಿರುವ ಪರಿವರ್ತನೆಯನ್ನು ಅದು ಗುರುತುಮಾಡುತ್ತದೆ. ಹತ್ತನೇ ಲಯರೇಖೆಯ ಕೊನೆಯ ಲಯದ ಮೇಲೆ ಅಥವಾ ಹನ್ನೊಂದನೇ ಲಯರೇಖೆಯ ಮೊದಲ ಲಯದ ಮೇಲೆ ಸಾಹಿತ್ಯವು ಸಾಮಾನ್ಯವಾಗಿ ಕೊನೆಗೊಳ್ಳುತ್ತದೆ, ಮತ್ತು ಕೊನೆಯ ಎರಡು ಲಯರೇಖೆಗಳು ವಾದ್ಯಸಂಗೀತಗಾರನಿಗೆ ಒಂದು ಸ್ಥಾಯಿಭೇದವಾಗಿ ನೀಡಲ್ಪಡುತ್ತವೆ; ಎರಡು-ಲಯರೇಖೆಯ ಸ್ಥಾಯಿಭೇದವಾದ ಈ ಪೂರ್ತಿತಿರುವಿನ ಸ್ವರಮೇಳವು ಅತ್ಯಂತ ಸಂಕೀರ್ಣವಾಗಿರಲು ಸಾಧ್ಯವಿದ್ದು, ಸ್ವರಮೇಳಗಳ ಪರಿಭಾಷೆಯಲ್ಲಿ ವಿಶ್ಲೇಷಣೆಯನ್ನು ಉಪೇಕ್ಷಿಸುವ ಏಕ ಸ್ವರಗಳನ್ನು ಕೆಲವೊಮ್ಮೆ ಒಳಗೊಂಡಿರುತ್ತದೆ.
ಬಹುಪಾಲು ಸಂದರ್ಭಗಳಲ್ಲಿ, ಇವುಗಳ ಪೈಕಿಯ ಕೆಲವು ಅಥವಾ ಎಲ್ಲಾ ಸ್ವರಮೇಳಗಳನ್ನು ಸ್ವರಮೇಳನದ ಏಳನೇ (7ನೇ) ಪ್ರಭೇದದಲ್ಲಿ ನುಡಿಸಲಾಗುತ್ತದೆ. ಸ್ವರಮೇಳನದ ಏಳನೇ ಸ್ಥಾಯಿಭೇದದ ಬಳಕೆಯು ಬ್ಲೂಸ್‌ನ ವಿಶಿಷ್ಟ ಲಕ್ಷಣವಾಗಿದ್ದು, ಇದನ್ನು ಜನಪ್ರಿಯವಾಗಿರುವ ರೀತಿಯಲ್ಲಿ "ಬ್ಲೂಸ್ ಸೆವೆನ್" ಎಂದು ಕರೆಯಲಾಗುತ್ತದೆ.[೮] ಮೂಲಭೂತ ಸ್ವರಕ್ಕೆ ಒಂದು 7:4ರ ಅನುಪಾತದಲ್ಲಿರುವ ಒಂದು ಆವರ್ತನದೊಂದಿಗಿನ ಸ್ವರವೊಂದನ್ನು ಸ್ವರಮೇಳನದ ಸ್ವರಗಳ ಗುಂಪಿಗೆ ಬ್ಲೂಸ್ ಸೆವೆನ್ ಸ್ವರಮೇಳಗಳು ಸೇರ್ಪಡೆ ಮಾಡುತ್ತವೆ. ಒಂದು 7:4ರ ಅನುಪಾತದಲ್ಲಿ, ಇದು ಸಾಂಪ್ರದಾಯಿಕ ಪಾಶ್ಚಾತ್ಯ ಅಷ್ಟಸ್ವರ ಶ್ರೇಣಿಯ ಸ್ವರಶ್ರೇಣಿಯ ಮೇಲಿನ ಯಾವುದೇ ಸ್ಥಾಯಿಭೇದಕ್ಕೆ ನಿಕಟವಾಗಿಲ್ಲ.[೯] ಅನುಕೂಲಕ್ಕಾಗಿ ಅಥವಾ ಅನಿವಾರ್ಯವಾಗಿ ಇದು ಒಂದು ಮಂದ್ರಸ್ಥಾಯಿಯ ಏಳನೇ ಸ್ಥಾಯಿಭೇದ ಅಥವಾ ಒಂದು ಸ್ವರಶ್ರೇಣಿಯ ಪಂಚಮಸ್ವರ ಏಳನೇ ಸ್ವರಮೇಳದಿಂದ ಅನೇಕವೇಳೆ ಹತ್ತಿರಕ್ಕೆ ತರಲ್ಪಡುತ್ತದೆ.
ಸಂಬಂಧಿತ ಪ್ರಧಾನ ಸ್ವರಶ್ರೇಣಿಯ ಅರ್ಧಸ್ವರ ಇಳಿಸಲ್ಪಟ್ಟ ಮೂರನೇ, ಐದನೇ ಮತ್ತು ಏಳನೇ ಸ್ವರದ ಬಳಕೆಯಿಂದಾಗಿ ಮಾಧುರ್ಯದಲ್ಲಿ ಬ್ಲೂಸ್ ವೈಶಿಷ್ಟ್ಯಪೂರ್ಣವಾಗಿದೆ.[೧೦] ವಿಶಿಷ್ಟವಾಗಿಸಲ್ಪಟ್ಟ ಈ ಸ್ವರಗಳನ್ನು ಬ್ಲೂ ಅಥವಾ ಬಾಗಿದ ಸ್ವರಗಳು ಎಂದು ಕರೆಯಲಾಗುತ್ತದೆ. ಸ್ವರಶ್ರೇಣಿಯ ಈ ಪ್ರಧಾನಸ್ವರಗಳು ಸ್ವಾಭಾವಿಕ ಸ್ವರಶ್ರೇಣಿಯ ಪ್ರಧಾನಸ್ವರಗಳನ್ನು ಪಲ್ಲಟಗೊಳಿಸಬಹುದು, ಅಥವಾ ಮಂದ್ರಸ್ಥಾಯಿಯ ಬ್ಲೂಸ್ ಸ್ವರಶ್ರೇಣಿಯ ನಿದರ್ಶನದಲ್ಲಿರುವಂತೆ ಸ್ವರಶ್ರೇಣಿಗೆ ಅವನ್ನು ಸೇರ್ಪಡೆ ಮಾಡಬಹುದು; ಮಂದ್ರಸ್ಥಾಯಿಯ ಬ್ಲೂಸ್ ಸ್ವರಶ್ರೇಣಿಯಲ್ಲಿ ಅರ್ಧಸ್ವರ ಇಳಿಸಲ್ಪಟ್ಟ ಮೂರನೇ ಸ್ವರವು ಸ್ವಾಭಾವಿಕವಾದ ಮೂರನೇ ಸ್ವರವನ್ನು ಪಲ್ಲಟಗೊಳಿಸುತ್ತದೆ, ಅರ್ಧಸ್ವರ ಇಳಿಸಲ್ಪಟ್ಟ ಏಳನೇ ಸ್ವರವು ಸ್ವಾಭಾವಿಕವಾದ ಏಳನೇ ಸ್ವರವನ್ನು ಪಲ್ಲಟಗೊಳಿಸುತ್ತದೆ ಮತ್ತು ಅರ್ಧಸ್ವರ ಇಳಿಸಲ್ಪಟ್ಟ ಐದನೇ ಸ್ವರವು ಸ್ವಾಭಾವಿಕವಾದ ನಾಲ್ಕನೇ ಮತ್ತು ಸ್ವಾಭಾವಿಕವಾದ ಐದನೇ ಸ್ವರದ ನಡುವೆ ಸೇರಿಸಲ್ಪಡುತ್ತದೆ. ಹನ್ನೆರಡು-ಲಯರೇಖೆಯ ಸ್ವರಮೇಳನದ ಸಂಚಾರವು ಶತಮಾನಗಳಿಂದಲೂ ಬಿಟ್ಟುಬಿಟ್ಟು ಬರುವಂತೆ ಬಳಸಲ್ಪಟ್ಟಿದ್ದರೆ, ಅಲಂಕಾರಿಕ ಸ್ವರಗಳನ್ನು ಬಳಸುವುದಕ್ಕೆ ಹೋಲುವಂತೆಯೇ ಕ್ರಷಿಂಗ್ [ಒಂದೇ ಸಮಯಕ್ಕೆ ಪಕ್ಕದ ಸ್ವರಗಳನ್ನು ನೇರವಾಗಿ ನುಡಿಸುವುದು, (ಅಂದರೆ, ಒಂದು ಶ್ರುತ್ಯಂತರ ಕಡಿಮೆಯಾದ ನಾಲ್ಕನೇ ಸ್ಥಾಯಿ)] ಮತ್ತು ಸ್ಲೈಡಿಂಗ್ ಶೈಲಿಗಳ ಜೊತೆಗೆ ಅರ್ಧಸ್ವರ ಇಳಿಸಲ್ಪಟ್ಟ ಮೂರನೇ ಸ್ವರ, ಅರ್ಧಸ್ವರ ಇಳಿಸಲ್ಪಟ್ಟ ಏಳನೇ ಸ್ವರ, ಮತ್ತು ಅರ್ಧಸ್ವರ ಇಳಿಸಲ್ಪಟ್ಟ ಐದನೇ ಸ್ವರವನ್ನೂ ಸಹ ವಾಡಿಕೆಯಾಗಿ ಮಾಧುರ್ಯದಲ್ಲಿ ಬಳಸುತ್ತಿದ್ದುದು ಬ್ಲೂಸ್‌ನ ಕ್ರಾಂತಿಕಾರಕ ಮಗ್ಗುಲಾಗಿತ್ತು.[೧೧] ಬ್ಲೂಸ್‌ನ ಸ್ವರಾವರೋಹಣಗಳು, ಮಾಧುರ್ಯಗಳು, ಮತ್ತು ಅಲಂಕಾರಗಳ ಸಮಯದಲ್ಲಿ ಅಭಿವ್ಯಕ್ತಿಯ ಪ್ರಮುಖ ಕ್ಷಣಗಳಿಗಾಗಿ ಬ್ಲೂ ಸ್ವರಗಳು ಅವಕಾಶ ಕಲ್ಪಿಸುತ್ತವೆ.
ಬ್ಲೂಸ್ ಪಲ್ಲಟಗಳು ಅಥವಾ ಸಂಚಾರದ ಮಂದ್ರಸ್ಥಾಯಿಯು ಸಮ್ಮೋಹನ ಸ್ಥಿತಿಯಂಥ ಲಯ ಹಾಗೂ ಕರೆ-ಮತ್ತು-ಪ್ರತಿವರ್ತನೆಯನ್ನು ವರ್ಧಿಸುತ್ತವೆ, ಮತ್ತು ಒಂದು ಹಿತವಾದ ಸ್ಥಿತಿ ಎಂದು ಕರೆಯಲ್ಪಡುವ ಪುನರಾವರ್ತನಾಶೀಲ ಪರಿಣಾಮವೊಂದನ್ನು ಅವು ರೂಪಿಸುತ್ತವೆ. ಅಮೆರಿಕಾದ-ನೀಗ್ರೋ ಮೂಲಗಳಿಂದ ಬ್ಲೂಸ್ ಹುಟ್ಟಿದಾಗಿನಿಂದಲೂ ಅದರ ವಿಶಿಷ್ಟ ಲಕ್ಷಣವಾಗಿರುವ ಪಲ್ಲಟಗಳು, ತೀವ್ರಗತಿಯ ಸಂಗೀತದಲ್ಲಿ ಒಂದು ಪ್ರಧಾನ ಪಾತ್ರವನ್ನು ವಹಿಸಿವೆ.[೧೨] 1940ರ ದಶಕದ[೧೩] ಮಧ್ಯಭಾಗದಲ್ಲಿ ಪ್ರಾರಂಭವಾದ R&B ಅಲೆಯ ಅತ್ಯಂತ ಸ್ಪಷ್ಟವಾದ ಶ್ರುತಿಚಿಹ್ನೆಗಳಾಗಿದ್ದ ಅತ್ಯಂತ ಸರಳವಾದ ಪಲ್ಲಟಗಳು, ಗಿಟಾರ್‌ನ ಮಂದ್ರಸ್ಥಾಯಿಯ ತಂತಿಗಳ ಮೇಲಿನ ಮೂರು-ಸ್ವರದ ಒಂದು ಪುನರಾವರ್ತಿತ ಗೀತಭಾಗವಾಗಿದ್ದವು. ಮಂದ್ರದ ತಂತಿಯ ಮೇಲೆ ಹಾಗೂ ಡ್ರಮ್ಮುಗಳ ಮೇಲೆ ಈ ಪುನರಾವರ್ತಿತ ಗೀತಭಾಗವನ್ನು ನುಡಿಸಿದಾಗ, ಹಿತವಾದ ಸ್ಥಿತಿಯ "ಅನುಭೂತಿ"ಯು ಸೃಷ್ಟಿಸಲ್ಪಟ್ಟಿತು. "ಡೌ , ಡಾ ಡೌ , ಡಾ ಡೌ , ಡಾ" ಅಥವಾ "ಡಂಪ್ , ಡಾ ಡಂಪ್ , ಡಾ ಡಂಪ್ , ಡಾ"[೧೪] ಎಂಬ ರೀತಿಯಲ್ಲಿ ಪಲ್ಲಟ ಲಯವನ್ನು ಅನೇಕವೇಳೆ ಉಚ್ಚರಿಸಲಾಗುತ್ತದೆ: ಇದು ಏರುಪೇರಿನ, ಅಥವಾ "ತೀವ್ರಧಾಟಿಯಲ್ಲಿರುವ" ಎಂಟನೇ ಸ್ವರವನ್ನು ಒಳಗೊಂಡಿರುತ್ತದೆ. ಒಂದು ಸರಳ ಏಕಪ್ರಕಾರದ ಮಂದ್ರಸ್ಥಾಯಿಯ ರೀತಿಯಲ್ಲಿ ಒಂದು ಗಿಟಾರ್‌ನ ಮೇಲೆ ಇದನ್ನು ನುಡಿಸಬಹುದಾಗಿರುತ್ತದೆ ಅಥವಾ ಸ್ವರಮೇಳದ ಐದನೇ ಸ್ವರದಿಂದ ಆರನೇ ಸ್ವರಕ್ಕಿರುವ ಹಂತಹಂತವಾಗಿರುವ ಕಪ್ಪುತಲೆಯ ಸ್ವರದ ಚಲನೆಗೆ ಮತ್ತು ಅವರೋಹಣದ ಹಂತಕ್ಕೆ ಇದನ್ನು ಸೇರಿಸಬಹುದಾಗಿದೆ. Eಯಲ್ಲಿರುವ ಒಂದು ಬ್ಲೂಸ್ ಸಂಚಾರದ ಮೊದಲ ನಾಲ್ಕು ಲಯರೇಖೆಗಳಿಗೆ ಸಂಬಂಧಿಸಿದ ಈ ಕೆಳಗಿನ ಗಿಟಾರ್ ಸ್ವರಪ್ರಸ್ತಾರ ಪದ್ಧತಿಯು ಒಂದು ಉದಾಹರಣೆಯನ್ನು ನೀಡುತ್ತದೆ:[೧೫][೧೬]
E7 A7 E7 E7 E |----------------|----------------|----------------|----------------| B |----------------|----------------|----------------|----------------| G |----------------|----------------|----------------|----------------| D |----------------|2—2-4—2-5—2-4—2-|----------------|----------------| A |2—2-4-2-5-2-4—2-|0—0-0—0-0—0-0—2-|2—2-4—2-5—2-4—2-|2—2-4—2-5—2-4—2-| E |0—0-0—0-0—0-0—2-|----------------|0—0-0—0-0—0-0—2-|0—0-0—0-0—0-0—2-|
ಸಾಹಿತ್ಯ
[ಬದಲಾಯಿಸಿ]ಆರಂಭಿಕ ಸಾಂಪ್ರದಾಯಿಕ ಬ್ಲೂಸ್ ಪದ್ಯದ ಸಾಲುಗಳು ನಾಲ್ಕು ಬಾರಿ ಪುನರಾವರ್ತಿಸಲ್ಪಡುವ ಒಂದು ಏಕಸಾಲನ್ನು ಪ್ರಾಯಶಃ ಒಳಗೊಂಡಿದ್ದವು; 20ನೇ ಶತಮಾನದ ಮೊದಲ ದಶಕಗಳಲ್ಲಿ ಮಾತ್ರವೇ ಅತ್ಯಂತ ಸಾಮಾನ್ಯವಾದ ಸದ್ಯದ ರಚನಾ-ಸ್ವರೂಪವು ಮಾನದಂಡವಾಗಿ ಮಾರ್ಪಟ್ಟಿತು: ಇದಕ್ಕೆ AAB ಮಾದರಿ ಎಂದು ಕರೆಯಲಾಗುತ್ತದೆ. ನಾಲ್ಕು ಮೊದಲ ಲಯರೇಖೆಗಳಲ್ಲಿ ಹಾಡಲಾಗುವ ಸಾಲೊಂದನ್ನು ಇದು ಹೊಂದಿದ್ದು, ಮುಂದಿನ ನಾಲ್ಕು ಸಾಲುಗಳಲ್ಲಿ ಇದರ ಪುನರಾವರ್ತನೆಯಾಗುತ್ತದೆ, ಮತ್ತು ಆಮೇಲೆ ಕೊನೆಯ ಲಯರೇಖೆಗಳ ಮೇಲೆ ಒಂದು ಸುದೀರ್ಘವಾದ ಮುಕ್ತಾಯದ ಸಾಲು ಇರುತ್ತದೆ.[೧೭] ಮೊದಲು ಪ್ರಕಟಿಸಲ್ಪಟ್ಟ ಬ್ಲೂಸ್ ಗೀತೆಗಳ ಪೈಕಿಯ ಎರಡು ಗೀತೆಗಳಾದ "ಡಲ್ಲಾಸ್ ಬ್ಲೂಸ್" (1912) ಮತ್ತು "ಸೇಂಟ್ ಲೂಯಿಸ್ ಬ್ಲೂಸ್" (1914) ಇವು 12-ಲಯರೇಖೆಯ ಬ್ಲೂಸ್ ಆಗಿದ್ದು, AAB ರಚನೆಯನ್ನು ಒಳಗೊಂಡಿದ್ದವು. ಸಾಲುಗಳು ಮೂರು ಬಾರಿ ಪುನರಾವರ್ತಿಸಲ್ಪಡುವ ಏಕತಾನತೆಯನ್ನು ತಪ್ಪಿಸಲು ತಾನು ಈ ಸಂಪ್ರದಾಯವನ್ನು ಅಳವಡಿಸಿಕೊಂಡುದಾಗಿ W. C. ಹ್ಯಾಂಡಿ ಬರೆದುಕೊಂಡ.[೧೮] ಒಂದು ಮಾಧುರ್ಯ ಎಂಬುದಕ್ಕಿಂತ ಹೆಚ್ಚಾಗಿ ಒಂದು ಲಯಬದ್ಧವಾದ ಮಾತಿಗೆ ನಿಕಟವಾಗಿರುವ ಮಾದರಿಯೊಂದನ್ನು ಅನುಸರಿಸುವ ಮೂಲಕ ಸಾಲುಗಳನ್ನು ಅನೇಕಬಾರಿ ಹಾಡಲಾಗುತ್ತದೆ. ಒಂದು ವಿರಳವಾದ ನಿರೂಪಣಾತ್ಮಕ ಪ್ರಭೇದವನ್ನು ಆರಂಭಿಕ ಬ್ಲೂಸ್ ಆಗಿಂದಾಗ್ಗೆ ತೆಗೆದುಕೊಂಡಿತು. "ಕಟುವಾದ ವಾಸ್ತವತೆಯ ಪ್ರಪಂಚವೊಂದರಲ್ಲಿನ ಅವನ ಅಥವಾ ಅವಳ ವೈಯಕ್ತಿಕ ಅಳಲುಗಳಿಗೆ ಗಾಯಕ/ಗಾಯಕಿ ಧ್ವನಿಯಾಗುತ್ತಿದ್ದರು: ಒಂದು ಕಳೆದುಕೊಂಡ ಪ್ರೀತಿ, ಆರಕ್ಷಕ ಅಧಿಕಾರಿಗಳ ಕ್ರೌರ್ಯ, ಶ್ವೇತವರ್ಣೀಯರ ಕೈಗಳಲ್ಲಿ ಸಿಲುಕಿ ಅನುಭವಿಸುತ್ತಿರುವ ದಬ್ಬಾಳಿಕೆ ಮತ್ತು ಕಷ್ಟಕಾಲಗಳು ಇವೆಲ್ಲವೂ ಅಂಥ ಅಳಲುಗಳಲ್ಲಿ ಸೇರಿರುತ್ತಿದ್ದವು."[೧೯]
ಅಮೆರಿಕಾದ ನೀಗ್ರೋ ಸಮಾಜವು ತನ್ನ ವ್ಯಾಪ್ತಿಯೊಳಗೆ ಅನುಭವಿಸುತ್ತಿರುವ ತೊಂದರೆಗಳು ಸಾಹಿತ್ಯದಲ್ಲಿ ಅನೇಕ ವೇಳೆ ಬಿಂಬಿತವಾಗುತ್ತದೆ. 1927ರ ಮಹಾನ್ ಮಿಸ್ಸಿಸ್ಸಿಪ್ಪಿ ಪ್ರವಾಹದ ಕುರಿತಾಗಿ ಹೇಳುವ ಬ್ಲೈಂಡ್ ಲೆಮನ್ ಜೆಫರ್‌ಸನ್‌ನ "ರೈಸಿಂಗ್ ಹೈ ವಾಟರ್ ಬ್ಲೂಸ್" (1927) ಗೀತೆಯನ್ನು ಇದಕ್ಕೆ ನಿದರ್ಶನವಾಗಿ ಕೊಡಬಹುದು:
- "ಬ್ಯಾಕ್‌ವಾಟರ್ ರೈಸಿಂಗ್, ಸದರ್ನ್ ಪೀಪಲ್ ಕೆನಾಟ್ ಮೇಕ್ ನೋ ಟೈಂ
- ಐ ಸೆಡ್, ಬ್ಯಾಕ್‌ವಾಟರ್ ರೈಸಿಂಗ್, ಸದರ್ನ್ ಪೀಪಲ್ ಕೆನಾಟ್ ಮೇಕ್ ನೋ ಟೈಂ
- ಅಂಡ್ ಐ ಕೆನಾಟ್ ಗೆಟ್ ನೋ ಹಿಯರಿಂಗ್ ಫ್ರಂ ದಟ್ ಮೆಂಫಿಸ್ ಗರ್ಲ್ ಆಫ್ ಮೈನ್."
- ಐ ಸೆಡ್, ಬ್ಯಾಕ್‌ವಾಟರ್ ರೈಸಿಂಗ್, ಸದರ್ನ್ ಪೀಪಲ್ ಕೆನಾಟ್ ಮೇಕ್ ನೋ ಟೈಂ
ಅದೇನೇ ಇರಲಿ, ದುರ್ಗತಿ ಮತ್ತು ದಬ್ಬಾಳಿಕೆಯೊಂದಿಗೆ ಬ್ಲೂಸ್ ಪ್ರಕಾರವು ತನ್ನನ್ನು ಗುರುತಿಸಿಕೊಂಡರೂ ಸಹ, ಇದರ ಸಾಹಿತ್ಯದಲ್ಲಿ ಹಾಸ್ಯಭರಿತ ಮತ್ತು ಅಸಂಸ್ಕೃತ ಅಂಶಗಳೂ ಸಹ ಅಲ್ಲಲ್ಲಿ ಇಣುಕುತ್ತವೆ:[೨೦]
- "ರೆಬೆಕ್ಕಾ, ರೆಬೆಕ್ಕಾ, ಗೆಟ್ ಯುವರ್ ಬಿಗ್ ಲೆಗ್ಸ್ ಆಫ್ ಆಫ್ ಮಿ,
- ರೆಬೆಕ್ಕಾ, ರೆಬೆಕ್ಕಾ, ಗೆಟ್ ಯುವರ್ ಬಿಗ್ ಲೆಗ್ಸ್ ಆಫ್ ಆಫ್ ಮಿ,
- ಇಟ್ ಮೆ ಬಿ ಸೆಂಡಿಂಗ್ ಯು ಬೇಬಿ, ಬಟ್ ಇಟ್ ಈಸ್ ವರಿಯಿಂಗ್ ದಿ ಹೆಲ್ ಔಟ್ ಆಫ್ ಮಿ."
- ರೆಬೆಕ್ಕಾ, ರೆಬೆಕ್ಕಾ, ಗೆಟ್ ಯುವರ್ ಬಿಗ್ ಲೆಗ್ಸ್ ಆಫ್ ಆಫ್ ಮಿ,
-
- ಬಿಗ್ ಜೋ ಟರ್ನರ್‌ನ "ರೆಬೆಕ್ಕಾ" ಎಂಬ ಸಾಂಪ್ರದಾಯಿಕ ಬ್ಲೂಸ್ ಸಾಹಿತ್ಯದ ಒಂದು ಸಂಕಲನದಿಂದ ಆಯ್ದುಕೊಂಡದ್ದು.
ಲಘು ಪ್ರಹಸನದ ಭಾವಗೀತಾತ್ಮಕವಾದ ಹೂರಣ ಮತ್ತು ಅಬ್ಬರದ, ಪ್ರಹಸನದಂಥ ಸಂಗೀತ ಪ್ರಸ್ತುತಿಯ ಶೈಲಿಗಳೆರಡನ್ನೂ ಹೋಕಮ್ ಬ್ಲೂಸ್ ಪ್ರಸಿದ್ಧಿಗೊಳಿಸಿತು. ಟ್ಯಾಂಪಾ ರೆಡ್‌ನ "ಟೈಟ್ ಲೈಕ್ ದಟ್" (1928) ಎಂಬ ಪ್ರಸಿದ್ಧ ಗೀತೆಯು ಒಂದು ಕುಚೋದ್ಯದ ಶಬ್ದ ಚಮತ್ಕಾರವಾಗಿದ್ದು, ಒಂದು ಗಾಢವಾದ ಕಾಮಪ್ರಚೋದಕ ದೈಹಿಕ ಪ್ರಣಯ ಸಂಬಂಧವನ್ನು ಹೊಂದಿರುವವರು "ಗಟ್ಟಿಯಾಗಿ" ಜೋಡಿಯಾಗಿರುವುದರ ದ್ವಂದ್ವಾರ್ಥವನ್ನು ಒಳಗೊಂಡಿದೆ. ಯುದ್ಧಾನಂತರದ-ಬ್ಲೂಸ್‌ನಲ್ಲಿ ಸಂಗೀತದ ಭಾವಗೀತಾತ್ಮಕವಾದ ಹೂರಣವು ಕೊಂಚಮಟ್ಟಿಗೆ ಸರಳಗೊಂಡು, ಸಂಬಂಧದ ಅಳಲುಗಳು ಅಥವಾ ಲೈಂಗಿಕ ತಲ್ಲಣಗಳ ಕುರಿತಾಗಿ ಹೆಚ್ಚೂಕಮ್ಮಿ ಏಕಮಾತ್ರವಾಗಿ ಅಥವಾ ಪ್ರತ್ಯೇಕವಾಗಿ ಅವು ಗಮನಹರಿಸಿದವು. ಯುದ್ಧದ-ಮುಂಚಿನ ಬ್ಲೂಸ್‌ನಲ್ಲಿ ಕಂಡುಬರುತ್ತಿದ್ದ ಆರ್ಥಿಕ ಕುಸಿತ, ತೋಟಗಾರಿಕೆ, ದೆವ್ವಗಳು, ಜೂಜುಗಾರಿಕೆ, ಇಂದ್ರಜಾಲ, ಪ್ರವಾಹಗಳು ಮತ್ತು ಶುಷ್ಕ ಅವಧಿ ಇವೇ ಮೊದಲಾದ ಅನೇಕ ಭಾವಗೀತಾತ್ಮಕವಾದ ವಿಷಯಗಳು ಯುದ್ಧಾನಂತರದ ಬ್ಲೂಸ್‌ನಲ್ಲಿ ಕಡಿಮೆ ಸಾಮಾನ್ಯವಾಗಿದ್ದವು.[೨೧]
ಆರಂಭಿಕ ಬ್ಲೂಸ್‌ನಲ್ಲಿ ಯಾರುಬಾ ಜನಾಂಗದ ಪುರಾಣವು ತನ್ನದೇ ಆದ ಪಾತ್ರವನ್ನು ವಹಿಸಿದೆ ಎಂದು ಎಡ್ ಮೊರೇಲ್ಸ್ ಎಂಬ ಲೇಖಕ ಪ್ರತಿಪಾದಿಸಿದ್ದಾನೆ; "ಕೂಡುದಾರಿಗಳ ಮೇಲ್ವಿಚಾರಕ ಒರಿಶಾ ಆಗಿರುವ ಎಲಿಗುವಾಗೆ ಕಡೆಗಿನ ವಿರಳವಾಗಿ ಪರೋಕ್ಷವಾಗಿ ಸೂಚಿಸಿದ ಒಂದು ಉಲ್ಲೇಖವಾಗಿ" ರಾಬರ್ಟ್ ಜಾನ್ಸನ್‌ನ "ಕ್ರಾಸ್ ರೋಡ್ ಬ್ಲೂಸ್" ಇರುವುದನ್ನು ಇದಕ್ಕೆ ಉದಾಹರಣೆಯನ್ನಾಗಿ ಅವನು ನೀಡಿದ್ದಾನೆ.[೨೨] ಆದಾಗ್ಯೂ, ಕ್ರಿಶ್ಚಿಯನ್ ಪ್ರಭಾವವು ಹೆಚ್ಚು ಸ್ಪಷ್ಟವಾಗಿತ್ತು.[೨೩] ಚಾರ್ಲಿ ಪ್ಯಾಟನ್ ಅಥವಾ ಸ್ಕಿಪ್ ಜೇಮ್ಸ್‌ರಂಥ ಅನೇಕ ಮೂಲ ಬ್ಲೂಸ್ ಕಲಾವಿದರು ತಮ್ಮ ಸಿದ್ಧ ಕೃತಿಸಂಚಯಗಳಲ್ಲಿ ಹಲವಾರು ಧಾರ್ಮಿಕ ಗೀತೆಗಳು ಅಥವಾ ನೀಗ್ರೋ ಸ್ತೋತ್ರಗೀತೆಗಳನ್ನು ಹೊಂದಿದ್ದರು.[೨೪] ಕೆಲವೊಂದು ಕಲಾವಿದರ ಸಾಹಿತ್ಯವು ನೀಗ್ರೋ ಸ್ತೋತ್ರಗೀತೆಗಳಿಗೆ ಸ್ಪಷ್ಟವಾಗಿ ಸೇರಿತ್ತವೆಯಾದರೂ, ಅವರ ಸಂಗೀತದಿಂದಾಗಿ ಅವರನ್ನು ಬ್ಲೂಸ್ ಸಂಗೀತಗಾರರೆಂದು ಅನೇಕವೇಳೆ ವರ್ಗೀಕರಿಸಲಾಗಿದ್ದು, ರೆವರೆಂಡ್ ಗ್ಯಾರಿ ಡೇವಿಸ್[೨೫] ಮತ್ತು ಬ್ಲೈಂಡ್ ವಿಲ್ಲೀ ಜಾನ್ಸನ್‌ರಂಥ[೨೬] ಕಲಾವಿದರು ಇದಕ್ಕೆ ಉದಾಹರಣೆಗಳಾಗಿದ್ದಾರೆ.
ಇತಿಹಾಸ
[ಬದಲಾಯಿಸಿ]ಮೂಲಗಳು
[ಬದಲಾಯಿಸಿ]1912ರಲ್ಲಿ ಬಂದ ಹಾರ್ಟ್ ವ್ಯಾಂಡ್‌ನ "ಡಲ್ಲಾಸ್ ಬ್ಲೂಸ್" ಎಂಬುದು ಬ್ಲೂಸ್ ಕೃತಿಹಾಳೆಯ ಮೊದಲ ಪ್ರಕಟಣೆಯಾಗಿತ್ತು; ಇದನ್ನನುಸರಿಸಿಕೊಂಡು ಅದೇ ವರ್ಷದಲ್ಲಿ W. C. ಹ್ಯಾಂಡಿಯ "ಮೆಂಫಿಸ್ ಬ್ಲೂಸ್" ಹೊರಬಂದಿತು. ಮ್ಯಾಮೀ ಸ್ಮಿತ್ ಎಂಬ ಗಾಯಕ ಪೆರ್ರಿ ಬ್ರಾಡ್‌ಫೋರ್ಡ್‌ನ "ಕ್ರೇಜಿ ಬ್ಲೂಸ್"ನ್ನು 1920ರಲ್ಲಿ ಹಾಡುವ ಮೂಲಕ, ಓರ್ವ ಅಮೆರಿಕಾದ ನೀಗ್ರೋ ಗಾಯಕನಿಂದ ಹೊರಹೊಮ್ಮಿದ ಮೊದಲ ಧ್ವನಿಮುದ್ರಣಕ್ಕೆ ಅಂಕಿತವನ್ನು ಹಾಕಿದ. ಆದರೆ ಬ್ಲೂಸ್‌ನ ಮೂಲಗಳು ಅದಕ್ಕೂ ಹಿಂದಿರುವ ಕೆಲವೊಂದು ದಶಕಗಳಷ್ಟು ಹಿಂದಕ್ಕೆ, ಪ್ರಾಯಶಃ ಸುಮಾರು 1890ರ ವೇಳೆಗೆ ಕರೆದೊಯ್ಯುತ್ತವೆ.[೨೭] ಶೈಕ್ಷಣಿಕ ವಲಯಗಳನ್ನು[೨೮] ಒಳಗೊಂಡಂತೆ, ಅಮೆರಿಕಾದ ಸಮಾಜದೊಳಗಿದ್ದ ಜನಾಂಗೀಯ ಭೇದಭಾವದ ಭಾಗಶಃ ಕಾರಣದಿಂದಾಗಿ ಮತ್ತು ಆ ಸಮಯದಲ್ಲಿ ಗ್ರಾಮೀಣ ಅಮೆರಿಕಾದ ನೀಗ್ರೋ ಸಮುದಾಯದ ಸಾಕ್ಷರತಾ ಪ್ರಮಾಣವು ಕಡಿಮೆ ಮಟ್ಟದಲ್ಲಿ ಇದ್ದ ಕಾರಣದಿಂದಾಗಿ, ಅವು ಅತ್ಯಂತ ಕಳಪೆಯಾಗಿ ದಾಖಲಿಸಲ್ಪಟ್ಟಿವೆ.[೨೯] 20ನೇ ಶತಮಾನದ ಉದಯದ ವೇಳೆಗೆ ದಕ್ಷಿಣದ ಟೆಕ್ಸಾಸ್ ಮತ್ತು ಆಗ್ನೇಯ ಅಮೆರಿಕಾಗಳಲ್ಲಿ ಬ್ಲೂಸ್ ಸಂಗೀತವು ಚಾಲ್ತಿಯಲ್ಲಿದ್ದುದರ ಕುರಿತು ದಾಖಲಿಸಲು ಚರಿತ್ರೆಯ ಲೇಖಕರು ಪ್ರಾರಂಭಿಸಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ಮಿಸ್ಸಿಸ್ಸಿಪ್ಪಿಯ ಕ್ಲಾರ್ಕ್ಸ್‌ಡೇಲ್‌ನಲ್ಲಿ ಬ್ಲೂಸ್ ಸಂಗೀತವು ಗೋಚರಿಸಿರುವುದನ್ನು ಚಾರ್ಲ್ಸ್ ಪೀಬಡಿ ಉಲ್ಲೇಖಿಸಿದರೆ, 1901–1902ರ ಸುಮಾರಿಗೆ ದಕ್ಷಿಣದ ಟೆಕ್ಸಾಸ್‌ನಲ್ಲಿ ಇದಕ್ಕೆ ಅತ್ಯಂತ ಹೋಲಿಕೆಯಿರುವ ಗೀತೆಗಳು ಇರುವುದರ ಕುರಿತು ಗೇಟ್ ಥಾಮಸ್ ದಾಖಲಿಸಿದ. ಹೆಚ್ಚೂಕಮ್ಮಿ ಜೆಲ್ಲಿ ರೋಲ್ ಮಾರ್ಟನ್‌ನ ನೆನಪಿನೊಂದಿಗೆ ಈ ವೀಕ್ಷಣೆಗಳು ತಾಳೆಯಾಗುತ್ತವೆ; 1902ರಲ್ಲಿ ನ್ಯೂ ಓರ್ಲಿಯಾನ್ಸ್‌ನಲ್ಲಿ ಮೊತ್ತಮೊದಲ ಬಾರಿಗೆ ತಾನು ಬ್ಲೂಸ್ ಸಂಗೀತವನ್ನು ಕೇಳಿದ್ದಾಗಿ ಈತ ಘೋಷಿಸಿದ; ಅದೇ ವರ್ಷದಲ್ಲಿ ತಾನು ಮೊದಲ ಬಾರಿಗೆ ಬ್ಲೂಸ್ ಸಂಗೀತವನ್ನು ಅನುಭವಕ್ಕೆ ತಂದುಕೊಂಡಿದ್ದಾಗಿ ಮಾ ರೈನಿ ಎಂಬಾಕೆ ನೆನಪಿಸಿಕೊಂಡಳು; ಮತ್ತು 1903ರಲ್ಲಿ ಮಿಸ್ಸಿಸ್ಸಿಪ್ಪಿಯ ಟ್ಯುಟ್‌ವೈಲರ್‌ನಲ್ಲಿ ಮೊದಲ ಬಾರಿಗೆ ಬ್ಲೂಸ್ ಸಂಗೀತವನ್ನು ಕೇಳಿದ್ದಾಗಿ W.C. ಹ್ಯಾಂಡಿ ಹೇಳಿಕೊಂಡ. ಈ ಕ್ಷೇತ್ರದಲ್ಲಿನ ಮೊದಲ ವ್ಯಾಪಕ ಸಂಶೋಧನೆಯನ್ನು ಹೋವರ್ಡ್ W. ಓಡಮ್ ಎಂಬಾತ ಪ್ರಸ್ತುತಪಡಿಸಿದ; ಮಿಸ್ಸಿಸ್ಸಿಪ್ಪಿಯ ಲಫಾಯೆಟ್ಟಿ ಮತ್ತು ಜಾರ್ಜಿಯಾದ ನ್ಯೂಟನ್ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಜಾನಪದ ಗೀತೆಗಳ ಒಂದು ಬೃಹತ್ ಸಂಕಲನವನ್ನು ಈತ 1905 ಮತ್ತು 1908ರ ನಡುವೆ ಪ್ರಕಟಿಸಿದ.[೩೦] ಪಾಲ್ ಅಲಿವರ್‌ನಿಂದ "ಪ್ರೋಟೋ-ಬ್ಲೂಸ್" ಎಂಬುದಾಗಿ ಕರೆಸಿಕೊಂಡ ಬ್ಲೂಸ್ ಸಂಗೀತದ ಮೊದಲ ವ್ಯಾಪಾರೋದ್ದೇಶರಹಿತ ಧ್ವನಿಮುದ್ರಣಗಳು, ಸಂಶೋಧನಾ ಉದ್ದೇಶಗಳಿಗಾಗಿ 20ನೇ ಶತಮಾನದ ಅತ್ಯಂತ ಆರಂಭದಲ್ಲೇ ಓಡಮ್‌ನಿಂದ ಮಾಡಲ್ಪಟ್ಟವು. ಅವು ಈಗ ಸಂಪೂರ್ಣವಾಗಿ ಕಳೆದುಹೋಗಿವೆ.[೩೧] ಈಗಲೂ ಲಭ್ಯವಿರುವ ಇತರ ಧ್ವನಿಮುದ್ರಣಗಳು 1924ರಲ್ಲಿ ಲಾರೆನ್ಸ್ ಗೆಲ್ಲರ್ಟ್‌ನಿಂದ ಮಾಡಲ್ಪಟ್ಟವು. ನಂತರದಲ್ಲಿ, ರಾಬರ್ಟ್ W. ಗೋರ್ಡಾನ್ ಹಲವಾರು ಧ್ವನಿಮುದ್ರಣಗಳನ್ನು ಮಾಡಿದ ಮತ್ತು ಈತ ಲೈಬ್ರರಿ ಆಫ್ ಕಾಂಗ್ರೆಸ್ನ ಆರ್ಕೀವ್ ಆಫ್ ದಿ ಅಮೆರಿಕನ್ ಫೋಕ್ ಸಾಂಗ್ಸ್‌ನ ಮುಖ್ಯಸ್ಥನ ಸ್ಥಾನವನ್ನು ಅಲಂಕರಿಸಿದ. ಜಾನ್ ಲೊಮ್ಯಾಕ್ಸ್ ಎಂಬಾತ ಈ ಗ್ರಂಥಾಲಯದಲ್ಲಿ ಗೋರ್ಡಾನ್‌ನ ಉತ್ತರಾಧಿಕಾರಿಯಾದ. 1930ರ ದಶಕದಲ್ಲಿ, ತನ್ನ ಮಗ ಅಲನ್ ಜೊತೆಯಲ್ಲಿ ಸೇರಿಕೊಂಡು ಒಂದು ಬೃಹತ್ ಸಂಖ್ಯೆಯ ವ್ಯಾಪಾರೋದ್ದೇಶರಹಿತ ಬ್ಲೂಸ್ ಧ್ವನಿಮುದ್ರಣಗಳನ್ನು ಲೊಮ್ಯಾಕ್ಸ್ ಮಾಡಿದ; ಹೊಲದಲ್ಲಿನ ಗಟ್ಟಿಯಾದ ಕೂಗುಗಳು ಮತ್ತು ಅನುರಣನದ ಅಬ್ಬರದ ಕೇಕೆಗಳಂಥ ಪ್ರೋಟೋ-ಬ್ಲೂಸ್ ಶೈಲಿಗಳ ಬೃಹತ್ ವೈವಿಧ್ಯತೆಯನ್ನು ಈ ಧ್ವನಿಮುದ್ರಣಗಳು ರುಜುವಾತುಪಡಿಸಿದವು.[೩೨] 1920ರ ದಶಕಕ್ಕೂ ಮುಂಚೆ ಅಸ್ತಿತ್ವದಲ್ಲಿದ್ದ ಬ್ಲೂಸ್ ಸಂಗೀತದ ಸ್ವರೂಪದ ಒಂದು ಧ್ವನಿಮುದ್ರಿಕೆಯನ್ನೂ ಸಹ ಲೀಡ್ ಬೆಲ್ಲಿ[೩೩] ಅಥವಾ ಹೆನ್ರಿ ಥಾಮಸ್‌ರಂಥ[೩೪] ಕಲಾವಿದರು ನೀಡಿದ್ದಾರೆ; ಈ ಇಬ್ಬರೂ ಸಹ ರೂಢಿಯಲ್ಲಿಲ್ಲದ ಬ್ಲೂಸ್ ಸಂಗೀತವನ್ನು ಪ್ರಸ್ತುತಪಡಿಸಿದ ಕಲಾವಿದರು ಎಂಬುದು ಗಮನಾರ್ಹ. ಹನ್ನೆರಡು-, ಎಂಟು-, ಅಥವಾ ಹದಿನಾರು-ಲಯರೇಖೆಗಳಿಗಿಂತ ವಿಶಿಷ್ಟವಾಗಿರುವ ಅನೇಕ ವಿಭಿನ್ನ ರಚನೆಗಳ ಅಸ್ತಿತ್ವವನ್ನು ಈ ಎಲ್ಲಾ ಮೂಲಗಳೂ ತೋರಿಸುತ್ತವೆ.[೩೫][೩೬]
ಬ್ಲೂಸ್‌ನ ಗೋಚರಿಸುವಿಕೆಗೆ ಸಂಬಂಧಿಸಿದಂತಿರುವ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಯಾವುವು ಎಂಬುದು ಸಂಪೂರ್ಣವಾಗಿ ತಿಳಿದಿಲ್ಲ.[೩೭] 1863ರ[೨೮] ವಿಮೋಚನಾ ಕಾಯಿದೆಯ ನಂತರ 1870 ಮತ್ತು 1900ರ ನಡುವೆ ಬ್ಲೂಸ್‌ನ ಮೊದಲ ಗೋಚರಿಸುವಿಕೆ ಆಗಿದೆಯೆಂಬುದಾಗಿ ಇದರ ಕಾಲನಿರ್ಣಯವನ್ನು ಅನೇಕಬಾರಿ ಉಲ್ಲೇಖಿಸಲಾಗುತ್ತದೆ; ವಿಮೋಚನೆಯ ಅವಧಿಯೊಂದಿಗೆ ಮತ್ತು, ನಂತರದಲ್ಲಿ, ನೀಗ್ರೋಗಳು ತಮ್ಮ ಶ್ರಮದ ದಿನದ ದುಡಿತದ ನಂತರ ಸಂಗೀತ-ನೃತ್ಯವನ್ನು ಕೇಳಲು-ನೋಡಲು ಅಥವಾ ಜೂಜಾಡಲು ಹೋಗುತ್ತಿದ್ದ ಜಾಗಗಳಾದ ಜ್ಯೂಕ್ ಜಾಯಿಂಟ್‌ಗಳ ಬೆಳವಣಿಗೆಯ ಅವಧಿಯೊಂದಿಗೆ ಮೇಲೆ ಉಲ್ಲೇಖಿಸಿದ ಕಾಲನಿರ್ಣಯವು ತಾಳೆಯಾಗುತ್ತದೆ.[೩೮] ಅಮೆರಿಕಾ ಸಂಯುಕ್ತ ಸಂಸ್ಥಾನಗಳ ದಕ್ಷಿಣಭಾಗದಲ್ಲಿ ಕಂಡುಬಂದ ಗುಲಾಮಗಿರಿಯಿಂದ ಪಾಲುಗುತ್ತಿಗೆ ಕೊಡುವಿಕೆಯೆಡೆಗಿನ ಪರಿವರ್ತನೆ, ಸಣ್ಣ-ಪ್ರಮಾಣದ ಕೃಷಿಯ ಉತ್ಪಾದನೆ, ಮತ್ತು ರೈಲುಮಾರ್ಗಗಳ ವಿಸ್ತರಣೆಯ ಅವಧಿಯೊಂದಿಗೆ ಈ ಅವಧಿಯು ಸಂಬಂಧವನ್ನು ಹೊಂದಿದೆ. ಸಮೂಹ ಸಂಗೀತ ಕಚೇರಿಗಳಿಂದ ಒಂದು ಹೆಚ್ಚು ವ್ಯಕ್ತೀಕರಿಸಲ್ಪಟ್ಟ ಶೈಲಿಯೆಡೆಗೆ ಆದ ಒಂದು ಬದಲಾವಣೆಯಾಗಿ 1900ರ ದಶಕದಲ್ಲಿ ಕಂಡುಬಂದ ಬ್ಲೂಸ್ ಸಂಗೀತದ ಬೆಳವಣಿಗೆಯನ್ನು ಹಲವಾರು ವಿದ್ವಾಂಸರು ವಿವರಿಸುತ್ತಾರೆ. ಗುಲಾಮರಿಯಲ್ಲಿ ನರಳಿದ ಜನರು ಹೊಸದಾಗಿ ಪಡೆದುಕೊಂಡ ಸ್ವಾತಂತ್ರ್ಯದೊಂದಿಗೆ ಬ್ಲೂಸ್‌ನ ಬೆಳವಣಿಗೆಯು ನಂಟನ್ನು ಹೊಂದಿದೆ ಎಂದು ಅವರು ವಾದಿಸುತ್ತಾರೆ. ಲಾರೆನ್ಸ್ ಲೆವೀನ್ ಎಂಬಾತ, "ವ್ಯಕ್ತಿಯ ಮೇಲಿನ ರಾಷ್ಟ್ರೀಯ ಸೈದ್ಧಾಂತಿಕ ಪ್ರಾಮುಖ್ಯತೆ, ಬುಕರ್ T. ವಾಷಿಂಗ್ಟನ್‌ನ ಬೋಧನೆಗಳ ಜನಪ್ರಿಯತೆ, ಮತ್ತು ಬ್ಲೂಸ್‌ನ ಉಗಮದ ನಡುವೆ ಒಂದು ನೇರವಾದ ಸಂಬಂಧವಿತ್ತು" ಎಂದು ಅಭಿಪ್ರಾಯಪಡುತ್ತಾನೆ. ಲೆವೀನ್ ಹೇಳುವ ಪ್ರಕಾರ, "ಗುಲಾಮಗಿರಿಯು ಅಸ್ತಿತ್ವದಲ್ಲಿದ್ದ ಅವಧಿಯಲ್ಲಿ ಅಸಾಧ್ಯವಾಗಿ ತೋರಬಹುದಾಗಿದ್ದ ಒಂದು ರೀತಿಯಲ್ಲಿ ಅಮೆರಿಕಾದ ನೀಗ್ರೋಗಳು ಮಾನಸಿಕವಾಗಿ, ಸಾಮಾಜಿಕವಾಗಿ, ಮತ್ತು ಆರ್ಥಿಕವಾಗಿ ಒಟ್ಟುಗೂಡಿಸಲ್ಪಡುತ್ತಿದ್ದರು, ಮತ್ತು ಅವರ ಧಾರ್ಮಿಕ ಸಂಗೀತವು ಮಾಡಿದಷ್ಟೇ ಪ್ರಮಾಣದಲ್ಲಿ ಅವರ ಜಾತ್ಯತೀತ ಸಂಗೀತವು ಇದನ್ನು ಪ್ರತಿಬಿಂಬಿಸಿತು ಎಂಬುದು ಅಷ್ಟೇನೂ ಆಶ್ಚರ್ಯಕರವಲ್ಲ."[೩೯]
ಬ್ಲೂಸ್ ಸಂಗೀತ ಪ್ರಕಾರವು ವೈಯಕ್ತಿಕ ಅಥವಾ ಪ್ರತ್ಯೇಕ ಸಂಗೀತ ಪ್ರಸ್ತುತಿಗಳ ವಿಲಕ್ಷಣ ಶೈಲಿಗಳಿಂದ ತನ್ನ ಆಕಾರವನ್ನು ಪಡೆದುಕೊಂಡಿತಾದ್ದರಿಂದ, ಎಲ್ಲಾ ಬ್ಲೂಸ್ ಸಂಗೀತಕ್ಕೂ ಸಾಮಾನ್ಯವಾಗಿರುವ ಕೆಲವೇ ವಿಶಿಷ್ಟ ಲಕ್ಷಣಗಳು ಇಲ್ಲಿವೆ.[೪೦] ಆದಾಗ್ಯೂ, ಆಧುನಿಕ ಬ್ಲೂಸ್ ಸೃಷ್ಟಿಯಾಗುವುದಕ್ಕೂ ಮುಂಚಿತವಾಗಿ ಸುದೀರ್ಘ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಕೆಲವೊಂದು ವಿಶಿಷ್ಟ ಲಕ್ಷಣಗಳೂ ಇಲ್ಲಿವೆ. ಕರೆ-ಮತ್ತು-ಪ್ರತಿವರ್ತನೆ ಅಬ್ಬರದ ಕೇಕೆಗಳು ಬ್ಲೂಸ್-ರೀತಿಯ ಸಂಗೀತದ ಒಂದು ಆರಂಭಿಕ ಪ್ರಭೇದವಾಗಿದ್ದವು; ಅವು ಒಂದು "ಕ್ರಿಯಾತ್ಮಕ ಅಭಿವ್ಯಕ್ತಿಯಾಗಿದ್ದವು.... ಪಕ್ಕವಾದ್ಯ ಅಥವಾ ಸ್ವರಮೇಳವಿಲ್ಲದ ಶೈಲಿ ಅದಾಗಿತ್ತು ಮತ್ತು ಯಾವುದೇ ನಿರ್ದಿಷ್ಟ ಸಂಗೀತಮಯವಾದ ರಚನೆಯ ಔಪಚಾರಿಕ ವರ್ತನೆಯಿಂದ ಅದು ಕಟ್ಟುಪಾಡಿಗೆ ಒಳಗಾಗಿರಲಿಲ್ಲ ಅಥವಾ ಅದಕ್ಕೆ ಅಂಥ ಎಲ್ಲೆಯು ವಿಧಿಸಲ್ಪಟ್ಟಿರಲಿಲ್ಲ."[೪೧] ಗುಲಾಮರ ಅನುರಣನದ ಅಬ್ಬರದ ಕೇಕೆಗಳು ಮತ್ತು ಹೊಲದಲ್ಲಿನ ಗಟ್ಟಿಯಾದ ಕೂಗಿನಿಂದ ಮೊದಲ್ಗೊಂಡು "ಭಾವಾತ್ಮಕ ಹೂರಣದ ಹೊರೆಹೊತ್ತ ಸರಳ ಒಂಟಿಗಾಯನ ಗೀತೆಗಳಲ್ಲಿ" ಬ್ಲೂಸ್‌ಗೆ-ಮುಂಚಿನ ಈ ಒಂದು ಪ್ರಭೇದವು ಕೇಳಲ್ಪಟ್ಟಿತ್ತು.[೪೨]
ಪಶ್ಚಿಮ ಆಫ್ರಿಕಾ (ಪ್ರಧಾನವಾಗಿ ಇಂದಿನ ಮಾಲಿ, ಸೆನೆಗಲ್, ಜಾಂಬಿಯಾ ಮತ್ತು ಘಾನಾ)[೪೩][೪೪] ಮತ್ತು ಗ್ರಾಮೀಣ ನೀಗ್ರೋಗಳ ಸಮುದಾಯಕ್ಕೆ ಸಂಬಂಧಿಸಿದ ಗುಲಾಮರ ಪಕ್ಕವಾದ್ಯವಿಲ್ಲದ ಗಾಯನ ಸಂಗೀತ ಮತ್ತು ಮೌಖಿಕ ಸಂಪ್ರದಾಯಗಳಿಂದ ಮೊದಲ್ಗೊಂಡು, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಉದ್ದಗಲಕ್ಕೂ ಇರುವ ಪ್ರಾದೇಶಿಕ ಬದಲಾವಣೆಗಳೊಂದಿಗಿನ ಶೈಲಿಗಳು ಮತ್ತು ಉಪಪ್ರಕಾರಗಳ ಒಂದು ವ್ಯಾಪಕ ವೈವಿಧ್ಯತೆಯಾಗಿ ಬ್ಲೂಸ್ ಸಂಗೀತವು ವಿಕಸನಗೊಂಡಿದೆ. ಈಗ ಚಿರಪರಿಚಿತವಾಗಿರುವಂತೆ, ಐರೋಪ್ಯ ಸ್ವರಮೇಳನದ ರಚನೆ ಹಾಗೂ ಆಫ್ರಿಕಾದ ಕರೆ-ಮತ್ತು-ಪ್ರತಿವರ್ತನೆ ಸಂಪ್ರದಾಯ ಈ ಎರಡನ್ನೂ ಆಧರಿಸಿರುವ ಒಂದು ಸಂಗೀತಮಯವಾದ ಶೈಲಿಯಾಗಿ, ಹಾಗೂ ಧ್ವನಿ ಮತ್ತು ಗಿಟಾರ್‌ನ[೪೫][೪೬] ಒಂದು ಪರಸ್ಪರ ಪ್ರಭಾವವಾಗಿ ಮಾರ್ಪಡಿಸಲ್ಪಟ್ಟಿರುವ ಸ್ವರೂಪವಾಗಿ ಬ್ಲೂಸ್ ಸಂಗೀತವನ್ನು ನೋಡಬಹುದಾದರೂ, ಪಶ್ಚಿಮ ಆಫ್ರಿಕಾದ ಗ್ರಿಯೋಟ್‌ಗಳ ಸುಸ್ವರದ ಶೈಲಿಗಳಿಗೆ ಸ್ವತಃ ಬ್ಲೂಸ್ ಪ್ರಭೇದವು ಯಾವುದೇ ಹೋಲಿಕೆಯನ್ನು ಹೊಂದಿಲ್ಲ, ಮತ್ತು ಪ್ರಭಾವಗಳು ಮಂಕಾದ ಮತ್ತು ಸತ್ತ್ವಹೀನ ಸ್ವರೂಪದಲ್ಲಿವೆ.[೪೭][೪೮] ನಿರ್ದಿಷ್ಟವಾಗಿ ಹೇಳುವುದಾದರೆ, ಆಫ್ರಿಕಾದ ಸಂಗೀತದ ಯಾವುದೇ ವಿಶಿಷ್ಟ ಪ್ರಭೇದವನ್ನು ಬ್ಲೂಸ್ ಸಂಗೀತದ ಒಂದು ನೇರವಾದ ಏಕೈಕ ಪೂರ್ವಜ ಅಥವಾ ಪೂರ್ವವರ್ತಿ ಎಂಬುದಾಗಿ ಗುರುತಿಸಲು ಆಗುವುದಿಲ್ಲ.[೪೯] ಆದಾಗ್ಯೂ, ಕರೆ-ಮತ್ತು-ಪ್ರತಿವರ್ತನೆ ಸ್ವರೂಪ ಹಾಗೂ ಬ್ಲೂ ಸ್ವರಗಳಂಥ ಬ್ಲೂಸ್‌ನ ಅನೇಕ ಅಂಶಗಳ ಮೂಲದ ಜಾಡುಹಿಡಿದು ಹೊರಟಾಗ, ಆಫ್ರಿಕಾದ ಸಂಗೀತದಲ್ಲಿ ಅದು ಇರುವುದು ಕಂಡುಬರುತ್ತದೆ. ಸಾಕಷ್ಟು ಹಿಂದೆಯೇ ಬ್ಲೂಸ್‌ನಲ್ಲಿ ಆ ಬ್ಲೂ ಸ್ವರಗಳ ಬಳಕೆಯಾಗಿದೆ ಮತ್ತು ಒಂದು ಆಫ್ರಿಕಾದ ಮೂಲವನ್ನು ಈ ಸ್ವರಗಳು ಹೊಂದಿವೆ ಎಂಬುದು ಸ್ಯಾಮುಯೆಲ್ ಕೊಲೆರಿಡ್ಜ್-ಟೇಲರ್ ಎಂಬ ಇಂಗ್ಲಿಷ್ ಸಂಯೋಜಕನ "ಎ ನೀಗ್ರೋ ಲವ್ ಸಾಂಗ್"ನಿಂದ ಪ್ರಮಾಣಿತವಾಗಿದೆ; 1898ರಲ್ಲಿ ಸಂಯೋಜಿಸಲ್ಪಟ್ಟ ದಿ ಆಫ್ರಿಕನ್ ಸ್ಯೂಟ್ ಫಾರ್ ಪಿಯಾನೊ ಗೆ ಇದು ಸೇರಿದ್ದು, ಬ್ಲೂ ಮೂರನೇ ಮತ್ತು ಏಳನೇ ಸ್ವರಗಳನ್ನು ಇದು ಒಳಗೊಂಡಿದೆ.[೫೦] ಡಿಡ್ಲೆ-ಬಿಲ್ಲು (ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅಮೆರಿಕಾದ ದಕ್ಷಿಣದ ಭಾಗಗಳಲ್ಲಿ ಕಂಡುಬಂದ, ಒಂದು-ತಂತಿಯನ್ನುಳ್ಳ ಒಂದು ಗೃಹನಿರ್ಮಿತ ಸಂಗೀತ ವಾದ್ಯ) ಮತ್ತು ಬಾಂಜೋ ವಾದ್ಯಗಳು ಆಫ್ರಿಕಾ-ಜನ್ಯ ಸಂಗೀತ ವಾದ್ಯಗಳಾಗಿದ್ದು, ಆರಂಭಿಕ ಬ್ಲೂಸ್ ವಾದ್ಯಸಂಗೀತದ ಶೈಲಿ-ಸಂಪತ್ತಿನೊಳಗೆ ಆಫ್ರಿಕಾದ ಸಂಗೀತ ಪ್ರಸ್ತುತಿಯ ಕೌಶಲಗಳನ್ನು ವರ್ಗಾವಣೆ ಮಾಡುವಲ್ಲಿ ಅವು ನೆರವಾಗಿರುವ ಸಾಧ್ಯತೆಗಳಿವೆ.[೫೧] ಬಾಂಜೋ ವಾದ್ಯವು ಪಶ್ಚಿಮ ಆಫ್ರಿಕಾದ ಸಂಗೀತ ಪ್ರಕಾರದಿಂದ ನೇರವಾಗಿ ಆಮದಿಗೊಳಗಾದಂತೆ ಕಂಡುಬರುತ್ತದೆ. ಗ್ರಿಯೋಟ್‌ಗಳು ನುಡಿಸಿದ ಸಂಗೀತ ವಾದ್ಯವನ್ನು ಇದು ಹೋಲುವಂತಿದೆ (ವೊಲೊಫ್, ಫ್ಯೂಲಾ ಮತ್ತು ಮಡಿಂಕಾದಂಥ ಆಫ್ರಿಕಾದ ಜನರು ಇದನ್ನು ಹಾಲಾಮ್ ಅಥವಾ ಅಕೊಂಟಿಂಗ್ ಎಂದು ಕರೆಯುತ್ತಿದ್ದರು).[೫೨] ಆದಾಗ್ಯೂ, 1920ರ ದಶಕದಲ್ಲಿ, ಹಳ್ಳಿಗಾಡಿನ ಬ್ಲೂಸ್ ಸಂಗೀತವು ಧ್ವನಿಮುದ್ರಣಗೊಳ್ಳಲು ಶುರುವಾದಾಗ, ಬ್ಲೂಸ್ ಸಂಗೀತದಲ್ಲಿನ ಬಾಂಜೋ ವಾದ್ಯದ ಬಳಕೆಯು ಸಾಕಷ್ಟು ಕನಿಷ್ಟ ಮಿತಿಯಲ್ಲಿತ್ತು ಹಾಗೂ ಪಾಪಾ ಚಾರ್ಲೀ ಜ್ಯಾಕ್ಸನ್ ಮತ್ತು ನಂತರದಲ್ಲಿ ಗಸ್ ಕೆನನ್‌ರಂಥ ವ್ಯಕ್ತಿಗಳಿಗೆ ಅದು ಸೀಮಿತಗೊಂಡಿತ್ತು.[೫೩]
ವಾದ್ಯಸಂಗೀತ ಮತ್ತು ಸ್ವರಮೇಳನದ ಜೊತೆಗೂಡುವಿಕೆಯನ್ನು ಒಳಗೊಂಡಂತೆ, "ಎಥಿಯೋಪಿಯನ್ ಏರ್ಸ್", ಮಿನ್‌ಸ್ಟ್ರೆಲ್ ಪ್ರದರ್ಶನಗಳು ಮತ್ತು ನೀಗ್ರೋ ಸ್ಪಿರಿಚುಯಲ್ಸ್ ಇವೇ ಮೊದಲಾದವುಗಳಿಂದಲೂ ಕೆಲವೊಂದು ಅಂಶಗಳನ್ನು ಬ್ಲೂಸ್ ಸಂಗೀತವು ಅಳವಡಿಸಿಕೊಂಡಿದೆ.[೫೪] ಸರಿಸುಮಾರು ಅದೇ ಸಮಯದಲ್ಲಿ ಬೆಳವಣಿಗೆ ಕಂಡ ವಿಷಮತಾಳದ ಸಂಗೀತದೊಂದಿಗೂ ಈ ಶೈಲಿಯು ನಿಕಟವಾದ ಸಂಬಂಧವನ್ನು ಹೊಂದಿತ್ತು; ಆದರೂ "ಆಫ್ರಿಕಾದ ಸಂಗೀತದ ಮೂಲ ಸುಸ್ವರದ ಮಾದರಿಗಳಾಗಿ" ಬ್ಲೂಸ್ ಸಂಗೀತವು ಹೆಚ್ಚು ಸಂರಕ್ಷಿಸಲ್ಪಟ್ಟಿತು.[೫೫]
"ಬ್ಲೂಸ್" ಮತ್ತು ಆಧುನಿಕ "ಹಳ್ಳಿಗಾಡಿನ ಸಂಗೀತ" ಎಂಬುದಾಗಿ ಈಗ ಪರಿಗಣಿಸಲ್ಪಡುತ್ತಿರುವ ಸಂಗೀತದ ಪ್ರಭೇದಗಳು ಮತ್ತು ಶೈಲಿಗಳು, ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಭಾಗದ ಅದೇ ಪ್ರದೇಶಗಳಲ್ಲಿ ಹುಟ್ಟಿಕೊಂಡವು. ಧ್ವನಿಮುದ್ರಿತಗೊಂಡ ಬ್ಲೂಸ್ ಮತ್ತು ಹಳ್ಳಿಗಾಡಿನ ಸಂಗೀತವನ್ನು 1920ರ ದಶಕದಷ್ಟು ಹಿಂದಿನಿಂದಲೇ ಕಾಣಬಹುದು; ಈ ಅವಧಿಯಲ್ಲಿ, ಜನಪ್ರಿಯ ಧ್ವನಿಮುದ್ರಣಾ ಉದ್ಯಮವು ಅಭಿವೃದ್ಧಿಗೊಂಡಿತು ಮತ್ತು ನೀಗ್ರೋಗಳಿಗಾಗಿ ನೀಗ್ರೋಗಳು ನೀಡಿರುವ ಸಂಗೀತ ಮತ್ತು ಶ್ವೇತವರ್ಣೀಯರಿಗಾಗಿ ಶ್ವೇತವರ್ಣೀಯರು ನೀಡಿರುವ ಸಂಗೀತ ಎಂಬ ಪ್ರಕಾರದಲ್ಲಿ ಧ್ವನಿಮುದ್ರಿಕೆಗಳನ್ನು ಮಾರಾಟಮಾಡಲು ಕ್ರಮವಾಗಿ "ಜನಾಂಗದ ಸಂಗೀತ" ಮತ್ತು "ಹಿಲ್‌ಬಿಲ್ಲಿ ಸಂಗೀತ" ಎಂಬ ಮಾರಾಟಗಾರಿಕೆಯ ವರ್ಗಗಳನ್ನು ಸದರಿ ಧ್ವನಿಮುದ್ರಣಾ ಉದ್ಯಮವು ಸೃಷ್ಟಿಸಿತು.
ಆ ಸಮಯದಲ್ಲಿ, ಸಂಗೀತಗಾರನ ಜನಾಂಗೀಯತೆಯನ್ನು ಹೊರತುಪಡಿಸಿ, "ಬ್ಲೂಸ್" ಮತ್ತು "ಹಳ್ಳಿಗಾಡಿನ" ಸಂಗೀತದ ನಡುವೆ ಯಾವುದೇ ಸ್ಪಷ್ಟವಾದ ಸಂಗೀತದ ಪ್ರತ್ಯೇಕತೆ ಇರಲಿಲ್ಲ. ಒಂದೊಂದು ಸಲವಂತೂ ಸಂಗೀತಗಾರನ ಜನಾಂಗೀಯತೆಯನ್ನು ಧ್ವನಿಮುದ್ರಣ ಕಂಪನಿಗಳು ತಪ್ಪಾಗಿ ದಾಖಲಿಸುತ್ತಿದ್ದವು.[೫೬][೫೭] ಪಶ್ಚಿಮ ಆಫ್ರಿಕಾದಲ್ಲಿ ಜನ್ಯವಾಗಿರಬಹುದು ಎಂಬ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಿರ್ದಿಷ್ಟ ಸ್ವರಮೇಳ ರಚನೆಗಳು ಮತ್ತು ಸಾಹಿತ್ಯ ಕಾರ್ಯತಂತ್ರಗಳ ಪರಿಭಾಷೆಯಲ್ಲಿ “ದಿ ಬ್ಲೂಸ್”ನ್ನು ಸೂಕ್ಷ್ಮವಾಗಿ ವ್ಯಾಖ್ಯಾನಿಸಲು ಸಂಗೀತಶಾಸ್ತ್ರಜ್ಞರು ಈಗ ಪ್ರಯತ್ನ ಪಡಬಹುದಾದರೂ, ಒಂದು ತೀರಾ ಸಾರ್ವತ್ರಿಕ ಅಥವಾ ಸಾಧಾರಣ ಮಾರ್ಗದಲ್ಲಿ ಪ್ರೇಕ್ಷಕರು ಸಂಗೀತವನ್ನು ಮೂಲತಃ ಕೇಳಿಸಿಕೊಂಡಿದ್ದರು: ಅಂದರೆ, ಅದು ಸರಳವಾಗಿ ದಕ್ಷಿಣದ ಗ್ರಾಮೀಣ ಭಾಗದ, ಅದರಲ್ಲೂ ಗಮನಾರ್ಹವಾಗಿ ಮಿಸ್ಸಿಸ್ಸಿಪ್ಪಿ ಡೆಲ್ಟಾದ ಸಂಗೀತವಾಗಿತ್ತು. ಕರಿಯ ಮತ್ತು ಶ್ವೇತವರ್ಣೀಯ ಸಂಗೀತಗಾರರು ಒಂದೇ ಸಿದ್ಧ ಕೃತಿಸಂಚಯವನ್ನು ಹಂಚಿಕೊಂಡರು ಹಾಗೂ ತಮ್ಮನ್ನು “ಬ್ಲೂಸ್ ಸಂಗೀತಗಾರರು” ಎಂದು ಕರೆದುಕೊಳ್ಳುವುದಕ್ಕಿಂತ ಹೆಚ್ಚಾಗಿ “ಹಾಡುಹಕ್ಕಿಗಳು” ಎಂಬುದಾಗಿ ಭಾವಿಸಿಕೊಂಡರು. ಒಂದು ಪ್ರತ್ಯೇಕ ಪ್ರಕಾರವಾಗಿರುವ ರೀತಿಯಲ್ಲಿನ ಬ್ಲೂಸ್‌ನ ಎಣಿಕೆಯು, 1920ರ ದಶಕದಲ್ಲಿ ಹಳ್ಳಿಗಾಡು ಪ್ರದೇಶದಿಂದ ನಗರ ಪ್ರದೇಶಗಳೆಡೆಗೆ ಕಂಡುಬಂದ ಕರಿಯರ ವಲಸೆಯ ಸಮಯದಲ್ಲಿ ಮತ್ತು ಧ್ವನಿಮುದ್ರಣ ಉದ್ಯಮದ ಏಕಕಾಲಿಕ ಬೆಳವಣಿಗೆಯ ಅವಧಿಯಲ್ಲಿ ಹುಟ್ಟಿಕೊಂಡಿತು. ಕರಿಯ ಕೇಳುಗರಿಗೆ ಮಾರಾಟ ಮಾಡಲು ವಿನ್ಯಾಸಗೊಳಿಸಲ್ಪಟ್ಟ ಒಂದು ಧ್ವನಿಮುದ್ರಿಕೆಗೆ ಸಂಬಂಧಿಸಿದಂತೆ “ಬ್ಲೂಸ್” ಎಂಬುದು ಒಂದು ಸಂಕೇತ ಪದವಾಗಿ ಮಾರ್ಪಟ್ಟಿತು.[೫೮]
ಬ್ಲೂಸ್ ಸಂಗೀತದ ಮೂಲಗಳು ಅಮೆರಿಕಾದ-ನೀಗ್ರೋ ಸಮುದಾಯದ ಧಾರ್ಮಿಕ ಸಂಗೀತವಾದ ನೀಗ್ರೋ ಸ್ತೋತ್ರಗೀತೆಗಳೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿವೆ. ನೀಗ್ರೋ ಸ್ತೋತ್ರಗೀತೆಗಳ ಮೂಲಗಳು ಬ್ಲೂಸ್‌ಗಿಂತ ಮತ್ತಷ್ಟು ದೂರ ಹಿಂದಕ್ಕೆ, ಅಂದರೆ, 18ನೇ ಶತಮಾನದ ಮಧ್ಯಭಾಗದವರೆಗೆ ಸಾಮಾನ್ಯವಾಗಿ ಹೋಗುತ್ತವೆ. ಈ ಅವಧಿಯಲ್ಲಿ ಗುಲಾಮರು ಕ್ರೈಸ್ತಮತಕ್ಕೆ ಮತಾಂತರಗೊಂಡಿದ್ದರು ಮತ್ತು ಕ್ರಿಶ್ಚಿಯನ್ ಸ್ತುತಿಗೀತೆಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಆಗ ಅತ್ಯಂತ ಜನಪ್ರಿಯವಾಗಿದ್ದ ಐಸಾಕ್ ವ್ಯಾಟ್ಸ್‌ನ ಗೀತೆಗಳನ್ನು ಅವರು ಹಾಡಲು ಮತ್ತು ನುಡಿಸಲು ಪ್ರಾರಂಭಿಸಿದ್ದರು.[೫೯] ಬ್ಲೂಸ್ ಸಂಗೀತವು ಸ್ವರಮೇಳ ಸಂಚಾರಗಳ ಪರಿಭಾಷೆಯಲ್ಲಿ ತನ್ನ ಔಪಚಾರಿಕ ವ್ಯಾಖ್ಯಾನವನ್ನು ಗಳಿಸುವುದಕ್ಕೆ ಮುಂಚಿತವಾಗಿ, ನೀಗ್ರೋ ಸ್ತೋತ್ರಗೀತೆಗಳ ಜಾತ್ಯತೀತ ಪ್ರತಿರೂಪವಾಗಿ ಅದು ವ್ಯಾಖ್ಯಾನಿಸಲ್ಪಡುತ್ತಿತ್ತು. ಇದು ಗ್ರಾಮೀಣ ನೀಗ್ರೋಗಳಿಂದ ನುಡಿಸಲ್ಪಡುತ್ತಿದ್ದ ಕೀಳಾದ ಸಂಗೀತವಾಗಿತ್ತು. ಯಾವ ಧಾರ್ಮಿಕ ಸಮುದಾಯಕ್ಕೆ ಓರ್ವ ಸಂಗೀತಗಾರ ಸೇರಿದ್ದಾನೆ ಎಂಬುದನ್ನು ಅವಲಂಬಿಸಿ, ಈ ಕೀಳಾದ ಸಂಗೀತವನ್ನು ನುಡಿಸುವುದು ಹೆಚ್ಚೂಕಮ್ಮಿ ಒಂದು ಪಾಪವೆಂದು ಪರಿಗಣಿಸಲಾಗಿತ್ತು: ಅಂದರೆ ಬ್ಲೂಸ್ ಎಂಬುದು ದೆವ್ವಗಳ ಸಂಗೀತವೆನಿಸಿಕೊಂಡಿತ್ತು. ಆದ್ದರಿಂದ ಸಂಗೀತಗಾರರು ಎರಡು ವರ್ಗಗಳಾಗಿ ವಿಂಗಡಿಸಲ್ಪಟ್ಟಿದ್ದರು. ಅವುಗಳೆಂದರೆ: ಸುವಾರ್ತೆ ಮತ್ತು ಬ್ಲೂಸ್ ಗಾಯಕರು, ಗಿಟಾರ್ ಬೋಧಕರು ಮತ್ತು ಹಾಡುಹಕ್ಕಿಗಳು. ಆದಾಗ್ಯೂ, ಆ ಸಮಯದಲ್ಲಿದ್ದ ಗ್ರಾಮೀಣ ನೀಗ್ರೋ ಸಂಗೀತವು 1920ರ ದಶಕದಲ್ಲಿ ಧ್ವನಿಮುದ್ರಣಕ್ಕೆ ಒಳಗಾಗಲು ಪ್ರಾರಂಭಿಸಿತು, ಎರಡೂ ವರ್ಗಗಳ ಸಂಗೀತಗಾರರು ಅತೀವವಾಗಿ ಹೋಲುವ ಕೌಶಲಗಳನ್ನು ಬಳಸಿದರು: ಅಂದರೆ, ಕರೆ-ಮತ್ತು-ಪ್ರತಿವರ್ತನೆ ಮಾದರಿಗಳು, ಬ್ಲೂ ಸ್ವರಗಳು, ಮತ್ತು ಪಲುಕು ಗಿಟಾರ್‌ಗಳು ಅದರಲ್ಲಿ ಸೇರಿದ್ದವು. ಅದೇನೇ ಆದರೂ, ಕ್ರಿಶ್ಚಿಯನ್ ಸ್ತುತಿಗೀತೆಗಳೊಂದಿಗೆ ಹೊಂದಿಕೊಳ್ಳಬಲ್ಲ ಸಂಗೀತದ ಪ್ರಭೇದಗಳನ್ನು ಸುವಾರ್ತೆ ಸಂಗೀತವು ಬಳಸುತ್ತಿರಲಿಲ್ಲ ಮತ್ತು ಇದರಿಂದಾಗಿ ಅದರ ಜಾತ್ಯತೀತ ಪ್ರತಿರೂಪಕ್ಕೆ ಹೋಲಿಸಿದಾಗ ಬ್ಲೂಸ್ ಪ್ರಭೇದದಿಂದ ಅದು ಕಡಿಮೆ ಪ್ರಮಾಣದಲ್ಲಿ ಗುರುತಿಸಲ್ಪಟ್ಟಿದೆ.[೬೦]
ಯುದ್ಧದ-ಮುಂಚಿನ ಬ್ಲೂಸ್
[ಬದಲಾಯಿಸಿ]ಅಮೆರಿಕಾದ ಕೃತಿಹಾಳೆ ಪ್ರಕಟಿಸುವ ಉದ್ಯಮವು
ವಿಷಮತಾಳದ ಸಂಗೀತದ ಒಂದು ಮಹಾನ್ ವ್ಯವಹಾರವನ್ನೇ ನಿರ್ಮಿಸಿತು. 1912ರ ವೇಳೆಗೆ, ಬ್ಲೂಸ್ ಅಂಶಗಳ ಟಿನ್ ಪ್ಯಾನ್ ಆಲೇ ರೂಪಾಂತರವನ್ನು ತ್ವರೆಗೊಳಿಸುವ ಮೂಲಕ, ಬ್ಲೂಸ್-ರೀತಿಯ ಮೂರು ಜನಪ್ರಿಯ ಸಂಯೋಜನೆಗಳನ್ನು ಕೃತಿಹಾಳೆ ಉದ್ಯಮವು ಪ್ರಕಟಿಸಿತ್ತು. ಅವುಗಳೆಂದರೆ: "ಬೇಬಿ" F. ಸೀಲ್ಸ್‌ನ "ಬೇಬಿ ಸೀಲ್ಸ್' ಬ್ಲೂಸ್" (ಆರ್ಟೀ ಮ್ಯಾಥ್ಯೂಸ್ ಇದಕ್ಕೆ ವಾದ್ಯಸಂಯೋಜನೆಯನ್ನು ವ್ಯವಸ್ಥೆಗೊಳಿಸಿದ್ದ), ಹಾರ್ಟ್ ವ್ಯಾಂಡ್‌ನ "ಡಲ್ಲಾಸ್ ಬ್ಲೂಸ್" ಮತ್ತು W. C. ಹ್ಯಾಂಡಿಯ "ದಿ ಮೆಂಫಿಸ್ ಬ್ಲೂಸ್".[೬೧]
ಹ್ಯಾಂಡಿಯು ಓರ್ವ ಔಪಚಾರಿಕವಾಗಿ ತರಬೇತುಪಡೆದ ಸಂಗೀತಗಾರ, ಸಂಯೋಜಕ ಮತ್ತು ವಾದ್ಯಗೋಷ್ಠಿಯ ಆಯೋಜಕನಾಗಿದ್ದ; ವಾದ್ಯವೃಂದಗಳು ಮತ್ತು ಗಾಯಕರ ನೆರವಿನೊಂದಿಗೆ ಹೆಚ್ಚೂಕಮ್ಮಿ ಒಂದು ಸ್ವರಮೇಳವನ್ನು ಹೋಲುವ ಶೈಲಿಯಲ್ಲಿ ಬ್ಲೂಸ್‌ನ್ನು ಲಿಪ್ಯಂತರಿಸುವ ಮತ್ತು ವಾದ್ಯ ಸಂಯೋಜಿಸುವ ಮೂಲಕ, ಬ್ಲೂಸ್‌ನ್ನು ಜನಪ್ರಿಯಗೊಳಿಸುವಲ್ಲಿ ಈತ ನೆರವಾದ. ಓರ್ವ ಜನಪ್ರಿಯ ಮತ್ತು ಸಮೃದ್ಧ ಸಂಯೋಜಕನಾಗಿ ಹೊರಹೊಮ್ಮಿದ ಆತ ತನ್ನನ್ನು "ಬ್ಲೂಸ್‌ನ ಜನಕ" ಎಂಬುದಾಗಿ ಪ್ರಕಟಪಡಿಸಿಕೊಂಡ; ಆದಾಗ್ಯೂ, ಅವನ ಸಂಗೀತ ಸಂಯೋಜನೆಗಳನ್ನು ವಿಷಮತಾಳದ ಸಂಗೀತ ಮತ್ತು ಜಾಝ್‌ನೊಂದಿಗಿನ ಬ್ಲೂಸ್‌ನ ಒಂದು ಮಿಶ್ರಣ ಎಂದು ವಿವರಿಸಬಹುದಾಗಿದೆ. ಸುದೀರ್ಘ ಕಾಲದಿಂದಲೂ ವಿಷಮತಾಳದ ಸಂಗೀತದ[೨೨][೬೨] ಒಂದು ಭಾಗವಾಗಿದ್ದ ಕ್ಯೂಬಾದ ಹ್ಯಾಬನೇರ ಲಯವನ್ನು ಬಳಸಿಕೊಂಡು ಸರಾಗಗೊಳಿಸಲಾದ ಒಂದು ವಿಲೀನ ಇದಾಗಿತ್ತು. "ಸೇಂಟ್ ಲೂಯಿಸ್ ಬ್ಲೂಸ್" ಎಂಬುದು ಹ್ಯಾಂಡಿಯ ವಿಶಿಷ್ಟ ಕೃತಿಯಾಗಿತ್ತು.
1920ರ ದಶಕದಲ್ಲಿ, ಅಮೆರಿಕಾದ ನೀಗ್ರೋ ಸಂಗೀತ ಮತ್ತು ಅಮೆರಿಕಾದ ಜನಪ್ರಿಯ ಸಂಗೀತಗಳ ಒಂದು ಪ್ರಮುಖ ಘಟಕವಾಗಿ ಬ್ಲೂಸ್ ಹೊರಹೊಮ್ಮಿತು; ಹ್ಯಾಂಡಿಯ ವಾದ್ಯ ಸಂಯೋಜನೆಗಳು ಮತ್ತು ಪ್ರಸಿದ್ಧರಾದ ಹೆಣ್ಣು ಬ್ಲೂಸ್ ಸಂಗೀತಗಾರರ ಕಾರ್ಯಕ್ಷಮತೆಯ ನೆರವಿನಿಂದಾಗಿ ಬ್ಲೂಸ್ ಶ್ವೇತವರ್ಣೀಯ ಪ್ರೇಕ್ಷಕರನ್ನೂ ತಲುಪುವಂತಾಯಿತು. ಪಾನಗೃಹಗಳಲ್ಲಿನ ಅನೌಪಚಾರಿಕ ಸಂಗೀತ ಪ್ರಸ್ತುತಿಗಳ ಹಂತದಿಂದ ರಂಗಮಂದಿರಗಳಲ್ಲಿನ ಮನರಂಜನೆಯ ಹಂತಕ್ಕೆ ಬ್ಲೂಸ್ ವಿಕಸನಗೊಂಡಿತು. ಕಾಟನ್ ಕ್ಲಬ್‌ನಂಥ ರಾತ್ರಿಯ ಕ್ಲಬ್ಬುಗಳಲ್ಲಿ ಮತ್ತು ಮೆಂಫಿಸ್‌ನಲ್ಲಿನ ಬೀಯಲ್ ಸ್ಟ್ರೀಟ್‌ನ ಉದ್ದಕ್ಕೂ ವ್ಯಾಪಿಸಿರುವ ಪಾನಗೃಹಗಳಂಥ ಜ್ಯೂಕ್ ಜಾಯಿಂಟ್‌ಗಳಲ್ಲಿ ಥಿಯೇಟರ್ ಓನರ್ಸ್ ಬುಕರ್ಸ್ ಅಸೋಸಿಯೇಷನ್ ವತಿಯಿಂದ ಬ್ಲೂಸ್ ಸಂಗೀತ ಕಚೇರಿಗಳು ಸಂಘಟಿಸಲ್ಪಟ್ಟವು. ಅಮೆರಿಕನ್ ರೆಕಾರ್ಡ್ ಕಾರ್ಪೊರೇಷನ್, ಓಕೆ ರೆಕಾರ್ಡ್ಸ್, ಮತ್ತು ಪ್ಯಾರಾಮೌಂಟ್ ರೆಕಾರ್ಡ್ಸ್‌ನಂಥ ಹಲವಾರು ಧ್ವನಿಮುದ್ರಣ ಕಂಪನಿಗಳು ಅಮೆರಿಕಾದ ನೀಗ್ರೋ ಸಂಗೀತವನ್ನು ಧ್ವನಿಮುದ್ರಿಸಲು ಶುರುಮಾಡಿದವು.
ಧ್ವನಿಮುದ್ರಣದ ಉದ್ಯಮವು ಬೆಳೆದಂತೆ, ಬೋ ಕಾರ್ಟರ್, ಜಿಮ್ಮಿ ರಾಡ್ಜರ್ಸ್ (ಹಳ್ಳಿಗಾಡಿನ ಗಾಯಕ), ಬ್ಲೈಂಡ್ ಲೆಮನ್ ಜೆಫರ್‌ಸನ್, ಲೊನ್ನೀ ಜಾನ್ಸನ್, ಟ್ಯಾಂಪಾ ರೆಡ್ ಮತ್ತು ಬ್ಲೈಂಡ್ ಬ್ಲೇಕ್‌ರಂಥ ಹಳ್ಳಿಗಾಡಿನ ಬ್ಲೂಸ್ ಸಂಗೀತಗಾರರು ಅಮೆರಿಕಾದ ನೀಗ್ರೋ ಸಮುದಾಯದಲ್ಲಿ ಹೆಚ್ಚು ಜನಪ್ರಿಯರಾದರು. 1923ರಲ್ಲಿ ಪಲುಕು ಗಿಟಾರ್ ಶೈಲಿಯನ್ನು ಧ್ವನಿಮುದ್ರಿಸುವಲ್ಲಿ ಕೆಂಟುಕಿ-ಸಂಜಾತ ಸಿಲ್ವೆಸ್ಟರ್ ವೀವರ್ ಮೊದಲಿಗನೆನಿಸಿಕೊಂಡ; ಒಂದು ಚಾಕುವಿನ ಬ್ಲೇಡು ಅಥವಾ ಬಾಟಲಿಯೊಂದರ ಕತ್ತರಿಸಿದ ಕುತ್ತಿಗೆಭಾಗವನ್ನು ಬಳಸಿಕೊಂಡು ಒಂದು ಗಿಟಾರ್‌ನ ಬೆರಳಾಡಿಸುವ ಭಾಗವನ್ನು ಮೆಟ್ಟಿಲುಮೆಟ್ಟಿಲಾಗಿಸಿದ್ದು ಇದರಲ್ಲಿನ ವಿಶೇಷವಾಗಿತ್ತು.[೬೩] ಪಲುಕು ಗಿಟಾರ್, ಡೆಲ್ಟಾ ಬ್ಲೂಸ್‌ನ ಒಂದು ಮುಖ್ಯ ಭಾಗವಾಗಿ ಮಾರ್ಪಟ್ಟಿತು.[೬೪] 1920ರ ದಶಕಕ್ಕೆ ಸೇರಿದ ಮೊದಲ ಬ್ಲೂಸ್ ಧ್ವನಿಮುದ್ರಣಗಳನ್ನು ಒಂದು ಸಾಂಪ್ರದಾಯಿಕ, ಗ್ರಾಮೀಣ ಹಳ್ಳಿಗಾಡಿನ ಬ್ಲೂಸ್ ಮತ್ತು ಒಂದು ಹೆಚ್ಚು ನವಿರುಗೊಳಿಸಲಾದ 'ನಗರ' ಅಥವಾ ನಗರಪ್ರದೇಶದ ಬ್ಲೂಸ್ ಎಂಬುದಾಗಿ ವರ್ಗೀಕರಿಸಲಾಗಿದೆ.
ಪಕ್ಕವಾದ್ಯದ ನೆರವಿಲ್ಲದೆಯೇ ಅಥವಾ ಕೇವಲ ಒಂದು ಬಾಂಜೋ ಅಥವಾ ಗಿಟಾರ್‌ನ್ನು ಬಳಸಿಕೊಂಡು, ಹಳ್ಳಿಗಾಡಿನ ಬ್ಲೂಸ್ ಸಂಗೀತಗಾರರು ಅನೇಕವೇಳೆ ಸಂಗೀತಕೃತಿಗಳನ್ನು ಸ್ಥಳದಲ್ಲಿಯೇ ಕಟ್ಟಿಹಾಡುತ್ತಿದ್ದರು. 20ನೇ ಶತಮಾನದ ಆರಂಭದಲ್ಲಿ, ಹಳ್ಳಿಗಾಡಿನ ಬ್ಲೂಸ್ ಸಂಗೀತದ ಪ್ರಾದೇಶಿಕ ಶೈಲಿಗಳು ವ್ಯಾಪಕವಾಗಿ ಬದಲಾವಣೆಯನ್ನು ಕಂಡವು. ಮಿಸ್ಸಿಸ್ಸಿಪ್ಪಿ ಡೆಲ್ಟಾ ಬ್ಲೂಸ್ ಎಂಬುದು ಒಂದು ಅಲಂಕಾರವಿಲ್ಲದ ವಿರಳವಾದ ಶೈಲಿಯಾಗಿತ್ತು ಮತ್ತು ಇದರಲ್ಲಿನ ಉತ್ಕಟ ಭಾವನೆಯ ಗಾಯನಗಳಿಗೆ ಪಲುಕು ಗಿಟಾರ್‌ನ ಪಕ್ಕವಾದ್ಯದ ಸಾಥ್ ಸಿಗುತ್ತಿತ್ತು. ಕೆಲವೇ ಧ್ವನಿಮುದ್ರಿಕೆಗಳನ್ನು ಹೊರತಂದ ರಾಬರ್ಟ್ ಜಾನ್ಸನ್[೬೫], ನಗರಪ್ರದೇಶದ ಮತ್ತು ಗ್ರಾಮೀಣ ಪ್ರದೇಶದ ಬ್ಲೂಸ್‌ನ ಅಂಶಗಳನ್ನು ಸಂಯೋಜಿಸಿದ. ರಾಬರ್ಟ್ ಜಾನ್ಸನ್ ಮಾತ್ರವೇ ಅಲ್ಲದೇ, ಈ ಶೈಲಿಯನ್ನು ಅನುಸರಿಸಿದ ಇತರ ಪ್ರಭಾವಿ ಸಂಗೀತಗಾರರಲ್ಲಿ, ಅವನ ಪೂರ್ವವರ್ತಿಗಳಾದ ಚಾರ್ಲಿ ಪ್ಯಾಟನ್ ಮತ್ತು ಸಾನ್ ಹೌಸ್ ಸೇರಿದ್ದರು. ಬ್ಲೈಂಡ್ ವಿಲ್ಲೀ ಮೆಕ್‌ಟೆಲ್ ಮತ್ತು ಬ್ಲೈಂಡ್ ಬಾಯ್ ಫುಲ್ಲರ್‌ರಂಥ ಗಾಯಕರು, ಆಗ್ನೇಯ ಭಾಗದ "ನಾಜೂಕಾದ ಮತ್ತು ಭಾವಗೀತಾತ್ಮಕವಾದ" ಪೈಡ್‌ಮಾಂಟ್ ಬ್ಲೂಸ್ ಸಂಪ್ರದಾಯದಲ್ಲಿ ತಮ್ಮ ಸಂಗೀತವನ್ನು ಪ್ರಸ್ತುತಪಡಿಸಿದರು; ಒಂದು ಸುದೀರ್ಘವಾದ, ವಿಷಮತಾಳವನ್ನು ಆಧರಿಸಿದ, ಬೆರಳಿಂದ ನುಡಿಸುವ ಗಿಟಾರ್ ಕೌಶಲವನ್ನು ಈ ಸಂಪ್ರದಾಯವು ಬಳಸಿಕೊಂಡಿತು. ಜಾರ್ಜಿಯಾ ಕೂಡಾ ಒಂದು ಆರಂಭಿಕ ಪಲುಕು ಸಂಪ್ರದಾಯವನ್ನು[೬೬] ಹೊಂದಿತ್ತು; ಕರ್ಲೀ ವೀವರ್, ಟ್ಯಾಂಪಾ ರೆಡ್, "ಬಾರ್ಬೆಕ್ಯೂ ಬಾಬ್" ಹಿಕ್ಸ್ ಮತ್ತು ಜೇಮ್ಸ್ "ಕೊಕೊಮೊ" ಅರ್ನಾಲ್ಡ್ ಮೊದಲಾದವರು ಈ ಶೈಲಿಯನ್ನು ಪ್ರತಿನಿಧಿಸಿದರು.[೬೭]
ಟೆನ್ನೆಸ್ಸೀಯ ಮೆಂಫಿಸ್ ಸಮೀಪದಲ್ಲಿ, 1920ರ ದಶಕ ಮತ್ತು 1930ರ ದಶಕದಲ್ಲಿ ಬೆಳವಣಿಗೆ ಕಂಡ ಚುರುಕಾದ ಮೆಂಫಿಸ್ ಬ್ಲೂಸ್ ಶೈಲಿಯು, ಮೆಂಫಿಸ್ ಜಗ್ ಬ್ಯಾಂಡ್ ಅಥವಾ ಗಸ್ ಕೆನನ್‌ನ ಜಗ್ ಸ್ಟೋಂಪರ್ಸ್‌ನಂಥ ಜಗ್ ವಾದ್ಯವೃಂದಗಳಿಂದ ಪ್ರಭಾವಿಸಲ್ಪಟ್ಟಿತ್ತು. ಫ್ರಾಂಕ್ ಸ್ಟ್ರೋಕ್ಸ್, ಸ್ಲೀಪಿ ಜಾನ್ ಎಸ್ಟೆಸ್, ರಾಬರ್ಟ್ ವಿಲ್ಕಿನ್ಸ್, ಜೋ ಮೆಕ್‌ಕಾಯ್, ಕೇಸಿ ಬಿಲ್ ವೆಲ್ಡನ್ ಮತ್ತು ಮೆಂಫಿಸ್ ಮಿನ್ನೀ ಇವರೇ ಮೊದಲಾದ ಸಂಗೀತಗಾರರು ವಾಷ್‌ಬೋರ್ಡ್, ಪಿಟೀಲು, ಕಜೂ ಅಥವಾ ಮ್ಯಾಂಡೊಲಿನ್‌ನಂಥ ವೈವಿಧ್ಯಮಯವಾದ, ಅಸಾಮಾನ್ಯ ಸಂಗೀತ ವಾದ್ಯಗಳನ್ನು ಬಳಸಿದರು. ಮೆಂಫಿಸ್ ಮಿನ್ನೀ ಎಂಬಾಕೆ ತನ್ನ ಕಲಾಕುಶಲ ಗಿಟಾರ್ ಶೈಲಿಗೆ ಪ್ರಸಿದ್ಧಳಾಗಿದ್ದಳು. ಪಿಯಾನೋ ವಾದಕನಾದ ಮೆಂಫಿಸ್ ಸ್ಲಿಂ ತನ್ನ ವೃತ್ತಿಜೀವನವನ್ನು ಮೆಂಫಿಸ್‌ನಲ್ಲಿ ಪ್ರಾರಂಭಿಸಿದನಾದರೂ, ಅವನ ವಿಭಿನ್ನ ಶೈಲಿಯು ಸರಾಗವಾದುದಾಗಿತ್ತು ಮತ್ತು ಒಂದಷ್ಟು ತೀವ್ರಗತಿಯ ಅಂಶಗಳನ್ನು ಹೊಂದಿತ್ತು. ಮೆಂಫಿಸ್ ಮೂಲದ ಅನೇಕ ಬ್ಲೂಸ್ ಸಂಗೀತಗಾರರು 1930ರ ದಶಕದ ಅಂತ್ಯ ಅಥವಾ 1940ರ ದಶಕದ ಆರಂಭದಲ್ಲಿ ಚಿಕಾಗೊಗೆ ತೆರಳಿದರು ಮತ್ತು ನಗರಪ್ರದೇಶದ ಬ್ಲೂಸ್ ಆಂದೋಲನದ ಭಾಗವಾಗಿ ಅವರು ಮಾರ್ಪಟ್ಟರು; ಹಳ್ಳಿಗಾಡಿನ ಸಂಗೀತ ಮತ್ತು ವಿದ್ಯುಚ್ಚಾಲಿತ ಬ್ಲೂಸ್ ಸಂಗೀತವನ್ನು ಹದವಾಗಿ ಬೆರೆಸಿದ್ದು ಸದರಿ ನಗರಪ್ರದೇಶದ ಬ್ಲೂಸ್ ಆಂದೋಲನದ ವೈಶಿಷ್ಟ್ಯವಾಗಿತ್ತು.[೬೮][೬೯][೭೦]
ನಗರ ಅಥವಾ ನಗರ ಪ್ರದೇಶದ ಬ್ಲೂಸ್ ಶೈಲಿಗಳು ಹೆಚ್ಚು ಸಂಕೇತಿಸಲ್ಪಟ್ಟ ಮತ್ತು ಸುದೀರ್ಘವಾದ ಶೈಲಿಗಳಾಗಿದ್ದವು; ಏಕೆಂದರೆ, ಓರ್ವ ಸಂಗೀತಗಾರನು ಅವುಗಳ ಸ್ಥಳೀಯ, ಅತಿ ಸಮೀಪದ ಸಮುದಾಯದಲ್ಲಿ ಇರತ್ತಿರಲಿಲ್ಲ ಮತ್ತು, ಒಂದು ಬೃಹತ್ತಾದ, ಹೆಚ್ಚು ವೈವಿಧ್ಯತೆಯುಳ್ಳ ಪ್ರೇಕ್ಷಕರ ಕಲಾಮೀಮಾಂಸೆಗೆ ಆತ ತನ್ನನ್ನು ಹೊಂದಿಸಿಕೊಳ್ಳುವುದು ಇದರಲ್ಲಿ ಅಗತ್ಯವಾಗಿತ್ತು.[೭೧] ನಗರಪ್ರದೇಶದ ಪ್ರಸಿದ್ಧ ಮಹಿಳಾ ಮತ್ತು ವಿಡಂಬನಾತ್ಮಕವಾದ ಬ್ಲೂಸ್ ಗಾಯಕಿಯರು, 1920ರ ದಶಕದಲ್ಲಿ ಜನಪ್ರಿಯರಾಗಿದ್ದು, ಮ್ಯಾಮೀ ಸ್ಮಿತ್, ಜೆರ್ಟ್ರೂಡ್ "ಮಾ" ರೈನೀ, ಬೆಸ್ಸೀ ಸ್ಮಿತ್, ಮತ್ತು ವಿಕ್ಟೋರಿಯಾ ಸ್ಪೈವೆ ಮೊದಲಾದವರು ಈ ಗುಂಪಿನಲ್ಲಿ ಸೇರಿದ್ದರು. ಓರ್ವ ಬ್ಲೂಸ್ ಕಲಾವಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಓರ್ವ ವಿಡಂಬನಾತ್ಮಕ ಸಂಗೀತಗಾರ್ತಿ ಎನಿಸಿಕೊಂಡಿದ್ದ ಮ್ಯಾಮೀ ಸ್ಮಿತ್, 1920ರಲ್ಲಿ ಒಂದು ಬ್ಲೂಸ್ ಸಂಗೀತವನ್ನು ಧ್ವನಿಮುದ್ರಿಸುವಲ್ಲಿನ ಮೊದಲ ಅಮೆರಿಕಾದ ನೀಗ್ರೋ ಎನಿಸಿಕೊಂಡಿದ್ದಳು; ಅವಳ ಎರಡನೇ ಧ್ವನಿಮುದ್ರಿಕೆಯಾದ "ಕ್ರೇಜಿ ಬ್ಲೂಸ್", ಬಿಡುಗಡೆಯಾದ ಮೊದಲ ತಿಂಗಳಲ್ಲೇ 75,000 ಪ್ರತಿಗಳಷ್ಟು ಮಾರಾಟವಾಯಿತು.[೭೨] "ಬ್ಲೂಸ್‌ನ ಜನನಿ" ಎಂದೇ ಹೆಸರಾಗಿದ್ದ ಮಾ ರೈನಿ, ಮತ್ತು ಬೆಸ್ಸೀ ಸ್ಮಿತ್ ಈ ಇಬ್ಬರೂ ಸಹ "ಕೇಂದ್ರ ಪ್ರಧಾನಸ್ವರಗಳ ಆಸುಪಾಸಿನಲ್ಲೇ ಹಾಡಿದರು; ತಮ್ಮ ಧ್ವನಿಗಳು ಕೋಣೆಯೊಂದರ ಹಿಂದಿರುವವರಿಗೆ ಸುಲಭವಾಗಿ ತಲುಪಬೇಕು ಎಂಬುದು ಪ್ರಾಯಶಃ ಇದರ ಹಿಂದಿದ್ದ ಉದ್ದೇಶವೆನಿಸುತ್ತದೆ." "ಸ್ಮಿತ್ ಗೀತೆಯೊಂದನ್ನು ಒಂದು ಅಸಾಮಾನ್ಯವಾದ ಪ್ರಧಾನ ಸ್ವರಪ್ರಸ್ತಾರದಲ್ಲಿ ಹಾಡುತ್ತಿದ್ದಳು, ಮತ್ತು ಸಂಗೀತ ಸ್ವರಗಳನ್ನು ಬಾಗಿಸುವ ಮತ್ತು ಅತಿಶಯಿಸುವಲ್ಲಿನ ಅವಳ ಕಲಾವಂತಿಕೆ ಹಾಗೂ ಇದರ ಜೊತೆಗೆ ತನ್ನದೇ ಆದ ಅರ್ಥವಿವರಣೆಯನ್ನು ಒಳಗೊಳ್ಳಲು ಸುಂದರ, ಶಕ್ತಿಯುತ ಮಂದ್ರತಮ ಸ್ವರವನ್ನು ಬಳಸುತ್ತಿದ್ದ ಅವಳ ಶೈಲಿಯನ್ನು ಯಾರೂ ಮೀರಿಸುವಂತಿರಲಿಲ್ಲ."[೭೩] ಟ್ಯಾಂಪಾ ರೆಡ್, ಬಿಗ್ ಬಿಲ್ ಬ್ರೂಂಜಿ ಮತ್ತು ಲೆರಾಯ್ ಕಾರ್ ಇವರೇ ಮೊದಲಾದ, ಆ ಕಾಲದ ಜನಪ್ರಿಯ ನೀಗ್ರೋ ಸಂಗೀತಗಾರರು ನಗರ ಪ್ರದೇಶದ ಪುರುಷ ಸಂಗೀತಗಾರರಲ್ಲಿ ಸೇರಿದ್ದರು. WWIIಗೆ ಮುಂಚಿತವಾಗಿ, ಟ್ಯಾಂಪಾ ರೆಡ್‌ನನ್ನು ಕೆಲವೊಮ್ಮೆ "ಗಿಟಾರ್ ಗಾರುಡಿಗ" ಎಂದು ಉಲ್ಲೇಖಿಸಲಾಗುತ್ತಿತ್ತು. ಸ್ಕ್ರ್ಯಾಪರ್ ಬ್ಲ್ಯಾಕ್‌ವೆಲ್ ಗಿಟಾರ್ ನುಡಿಸಿದರೆ, ಕಾರ್ ಸ್ವತಃ ಪಿಯಾನೊದಲ್ಲಿ ಪಕ್ಕವಾದ್ಯ ನುಡಿಸಿದ; ಈ ಸ್ವರೂಪವು ಚಾರ್ಲ್ಸ್ ಬ್ರೌನ್, ಮತ್ತು ನ್ಯಾಟ್ "ಕಿಂಗ್" ಕೋಲ್‌ರಂಥ ಕಲಾವಿದರಿಂದಾಗಿ 50ರ ದಶಕಕ್ಕೂ ಮುಂದುವರಿಯಿತು.[೬೪]
ಬೂಗೀ-ವೂಗೀ ಎಂಬುದು 1930ರ ದಶಕ ಹಾಗೂ 1940ರ ದಶಕದ ಆರಂಭದ ನಗರ ಪ್ರದೇಶದ ಬ್ಲೂಸ್‌ನ ಮತ್ತೊಂದು ಮುಖ್ಯ ಶೈಲಿಯಾಗಿತ್ತು.[೭೪] ಬೂಗೀ-ವೂಗೀ ಶೈಲಿಯು ಅನೇಕವೇಳೆ ಒಂಟಿಗಾಯನದ ಪಿಯಾನೊದೊಂದಿಗೆ ಸಂಬಂಧವನ್ನು ಹೊಂದಿದ್ದರೆ, ಗಾಯಕರ ಜೊತೆಗೂಡುವುದಕ್ಕೆ ಮತ್ತು, ವಾದ್ಯವೃಂದಗಳು ಮತ್ತು ಸಣ್ಣ ತಂಡಗಳಲ್ಲಿನ ಒಂದು ಒಂಟಿಗಾಯನ ಭಾಗವಾಗಿಯೂ ಬೂಗೀ-ವೂಗೀಯು ಬಳಸಲ್ಪಟ್ಟಿತು. ಒಂದು ನಿಯತ ಮಂದ್ರಸ್ಥಾಯಿಯ ಅಲಂಕಾರ, ಒಂದು ಪುನರಾವರ್ತಕ ಲಯ ಅಥವಾ ಪುನರಾವರ್ತಿತ ಗೀತಭಾಗ ಹಾಗೂ ಎಡಗೈನಲ್ಲಿ ಮಾಡಲಾಗುವ ಮಟ್ಟದ ಬದಲಾವಣೆಗಳು, ಪ್ರತಿ ಸ್ವರಮೇಳದ ಅತಿಶಯಿಸುವಿಕೆ ಮತ್ತು ಬಲಗೈನಲ್ಲಿ ಮಾಡಲಾಗುವ ನಡುಗು ಧ್ವನಿಗಳು ಹಾಗೂ ಅಲಂಕರಣಗಳು ಬೂಗೀ-ವೂಗೀ ಶೈಲಿಯ ಮುಖ್ಯ ಲಕ್ಷಣವಾಗಿದ್ದವು. ಚಿಕಾಗೊ-ಮೂಲದ ಜಿಮ್ಮಿ ಯಾನ್ಸೆ ಮತ್ತು ಬೂಗೀ-ವೂಗೀ ತ್ರಯರಿಂದ (ಆಲ್ಬರ್ಟ್ ಅಮೋನ್ಸ್, ಪೆಟಿ ಜಾನ್ಸನ್ ಮತ್ತು ಮೀಡೇ ಲಕ್ಸ್ ಲೆವಿಸ್) ಬೂಗೀ-ವೂಗೀಯು ಪ್ರವರ್ತನಗೊಳಿಸಲ್ಪಟ್ಟಿತು.[೭೫] ಕ್ಲಾರೆನ್ಸ್ "ಪೈನ್ ಟಾಪ್" ಸ್ಮಿತ್ ಮತ್ತು ಅರ್ಲ್ ಹೈನ್ಸ್ ಎಂಬಿಬ್ಬರು ಚಿಕಾಗೊದ ಬೂಗೀ-ವೂಗೀ ಸಂಗೀತಗಾರರಲ್ಲಿ ಸೇರಿದ್ದರು; ಇವರು ಪಿಯಾನೋ ವಾದಕರ ವಿಷಮತಾಳದ ಪ್ರೇರಕವಾದ ಎಡಗೈ ಲಯಗಳನ್ನು, ಬಲಗೈನಲ್ಲಿ ಮಾಡಲಾಗುವ ಆರ್ಮ್‌ಸ್ಟ್ರಾಂಗ್‌ನ ತುತ್ತೂರಿಯ ಲಯಗಳಿಗೆ ಹೋಲುವಂತಿರುವ ಸುಸ್ವರದ ಅಲಂಕಾರಗಳೊಂದಿಗೆ ಸಂಬಂಧ ಕಲ್ಪಿಸಿದರು."[೭೧] ಪ್ರೊಫೆಸರ್ ಲಾಂಗ್‌ಹೇರ್ ಹಾಗೂ, ತೀರಾ ಇತ್ತೀಚೆಗಿನ ಡಾ. ಜಾನ್ ಇವರುಗಳ ಸರಾಗವಾದ ಲೂಸಿಯಾನಾ ಶೈಲಿಯು, ಬ್ಲೂಸ್ ಶೈಲಿಗಳೊಂದಿಗೆ ಪ್ರಸಿದ್ಧ ರಿದಂ ಅಂಡ್ ಬ್ಲೂಸ್ ಶೈಲಿಯನ್ನು ಹದವಾಗಿ ಬೆರೆಸುತ್ತದೆ.
ದೊಡ್ಡ ವಾದ್ಯವೃಂದದ ಬ್ಲೂಸ್ ಈ ಅವಧಿಯಲ್ಲಿನ ಮತ್ತೊಂದು ಬೆಳವಣಿಗೆಯಾಗಿತ್ತು.[೭೬] ಕಾನ್ಸಾಸ್ ನಗರದ ಆಚೆಗೆ ಕಾರ್ಯನಿರ್ವಹಿಸುತ್ತಿದ್ದ "ಸೀಮೆಯ ವಾದ್ಯವೃಂದಗಳು", ಬೆನ್ನಿ ಮೊಟೆನ್ ಆರ್ಕೇಸ್ಟ್ರಾ, ಜೇ ಮೆಕ್‌ಷಾನ್, ಮತ್ತು ಕೌಂಟ್ ಬೇಸೀ ಆರ್ಕೇಸ್ಟ್ರಾ ಇವೇ ಮೊದಲಾದವು ಕೂಡಾ ಬ್ಲೂಸ್ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದವು; ಇದೇ ವೇಳೆಗೆ, ಬೇಸೀಯ "ಒನ್ ಒ'ಕ್ಲಾಕ್ ಜಂಪ್" ಮತ್ತು "ಜಂಪ್‌ಇನ್' ಅಟ್ ದಿ ವುಡ್‌ಸೈಡ್", ಮತ್ತು ಜಿಮ್ಮಿ ರಷಿಂಗ್‌ನ ಅಬ್ಬರದ "ಬ್ಲೂಸ್ ಶೌಟಿಂಗ್"ನಂಥ 12-ಲಯರೇಖೆಯ ಬ್ಲೂಸ್ ವಾದ್ಯಸಂಗೀತಗಳು "ಗೋಯಿಂಗ್ ಟು ಚಿಕಾಗೊ" ಮತ್ತು "ಸೆಂಟ್ ಫಾರ್ ಯೂ ಯೆಸ್ಟರ್‌ಡೇ"ಯಂಥ ಗೀತೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದವು. ಗ್ಲೆನ್ ಮಿಲ್ಲರ್‌ನ "ಇನ್ ದಿ ಮೂಡ್" ಎಂಬುದು ದೊಡ್ಡ ವಾದ್ಯವೃಂದವೊಂದರ ಒಂದು ಅತ್ಯಂತ ಚಿರಪರಿಚಿತ ಬ್ಲೂಸ್ ರಾಗವಾಗಿದೆ. 1940ರ ದಶಕದಲ್ಲಿ, ಜಂಪ್ ಬ್ಲೂಸ್ ಶೈಲಿಯು ಬೆಳವಣಿಗೆಯನ್ನು ಕಂಡಿತು. ಜಂಪ್ ಬ್ಲೂಸ್ ಶೈಲಿಯು ಬೂಗೀ ವೂಗೀ ಅಲೆಯಿಂದ ಬೆಳೆಯಿತು ಮತ್ತು ದೊಡ್ಡ ವಾದ್ಯವೃಂದದ ಸಂಗೀತದ ಬಲವಾದ ಪ್ರಭಾವ ಅದರ ಮೇಲಿತ್ತು. ಅಲಂಕಾರಿಕ ರೂಪದ ಗಾಯನಗಳೊಂದಿಗಿನ ಒಂದು ಜಾಜ್ ಶೈಲಿಯ ಏರುಗತಿಯ ಧ್ವನಿಯನ್ನು ಸೃಷ್ಟಿಸುವುದಕ್ಕಾಗಿ, ಲಯ ವಿಭಾಗದಲ್ಲಿ ಸ್ಯಾಕ್ಸೋಫೋನ್ ಅಥವಾ ಇತರ ಹಿತ್ತಾಳೆ ಸಂಗೀತ ವಾದ್ಯಗಳನ್ನು ಮತ್ತು ಗಿಟಾರ್‌ನ್ನು ಇದು ಬಳಸುತ್ತದೆ. ಮಿಸ್ಸೌರಿಯ ಕಾನ್ಸಾಸ್ ನಗರ ಮೂಲದ ಲೂಯಿಸ್ ಜೋರ್ಡಾನ್ ಮತ್ತು ಬಿಗ್ ಜೋ ಟರ್ನರ್ ಎಂಬಿಬ್ಬರು ನೀಡಿದ ಜಂಪ್ ಬ್ಲೂಸ್ ರಾಗಗಳು, ರಾಕ್ ಅಂಡ್ ರೋಲ್ ಮತ್ತು ರಿದಮ್ ಅಂಡ್ ಬ್ಲೂಸ್‌ನಂಥ ನಂತರದ ಶೈಲಿಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದವು.[೭೭] ಕ್ಯಾಲಿಫೋರ್ನಿಯಾ ಬ್ಲೂಸ್ ಶೈಲಿಯೊಂದಿಗೆ[೭೮] ಅನೇಕವೇಳೆ ಗುರುತಿಸಲ್ಪಡುವ ಡಲ್ಲಾಸ್-ಸಂಜಾತ T-ಬೋನ್ ವಾಕರ್ ಎಂಬಾತ, ಲೊನ್ನೀ ಜಾನ್ಸನ್ ಮತ್ತು ಲೆರಾಯ್ ಕಾರ್ ರೀತಿಯಲ್ಲಿ, ಆರಂಭಿಕ ನಗರ ಪ್ರದೇಶದ ಬ್ಲೂಸ್‌ನಿಂದ ಜಂಪ್ ಬ್ಲೂಸ್ ಶೈಲಿಗೆ ಮಾಡಿದ ಒಂದು ಯಶಸ್ವಿ ಪರಿವರ್ತನೆಯನ್ನು ಪ್ರಸ್ತುತಪಡಿಸಿದ ಮತ್ತು 1940ರ ದಶಕದ ಅವಧಿಯಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಬ್ಲೂಸ್-ಜಾಝ್ ರಂಗಸ್ಥಲದಲ್ಲಿ ಮೇಲುಗೈ ಸಾಧಿಸಿದ.[೭೯]
1950ರ ದಶಕ
[ಬದಲಾಯಿಸಿ]1920ರ ದಶಕದಲ್ಲಿ ಪ್ರಾರಂಭವಾದ ಹಳ್ಳಿಗಾಡಿನ ಬ್ಲೂಸ್‌ನಿಂದ ನಗರ ಪ್ರದೇಶದ ಬ್ಲೂಸ್‌ಗೆ ಆದ ಪರಿವರ್ತನೆಗೆ, ಆರ್ಥಿಕ ಬಿಕ್ಕಟ್ಟು ಮತ್ತು ಉತ್ಕರ್ಷಗಳ ಅನುಕ್ರಮದ ಅಲೆಗಳು ಎಲ್ಲ ಸಮಯಗಳಲ್ಲೂ ಪ್ರಚೋದನೆ ನೀಡಿದ್ದವು. ಅಷ್ಟೇ ಅಲ್ಲ, ಮಹಾನ್ ವಲಸೆ ಎಂದು ಕರೆಯಲ್ಪಟ್ಟ, ಗ್ರಾಮೀಣ ಪ್ರದೇಶದ ನೀಗ್ರೋಗಳ ನಗರ ಪ್ರದೇಶಗಳೆಡೆಗಿನ ಚಲನೆಯು ಇದರ ಜತೆಗೂಡಿ ಸದರಿ ಪರಿವರ್ತನೆಗೆ ಪ್ರೇರೇಪಣೆ ನೀಡಿತು. IIನೇ ಜಾಗತಿಕ ಸಮರದ ಪರಿಣಾಮವಾಗಿ ಕಂಡುಬಂದ ಸುದೀರ್ಘ ಉತ್ಕರ್ಷವು ಎರಡನೇ ಮಹಾನ್ ವಲಸೆ ಎಂದು ಕರೆಯಲ್ಪಟ್ಟ ಅಮೆರಿಕಾದ ನೀಗ್ರೋ ಸಮುದಾಯದ ಒಂದು ಅಗಾಧ ವಲಸೆಗೆ ಪ್ರಚೋದನೆಯನ್ನು ನೀಡಿತು; ನಗರ ಪ್ರದೇಶದ ನೀಗ್ರೋಗಳ ವಾಸ್ತವ ವರಮಾನದಲ್ಲಾದ ಒಂದು ಗಣನೀಯ ಹೆಚ್ಚಳವೂ ಇದರ ಜೊತೆಗೆ ಸೇರಿಕೊಂಡಿತು. ಈ ಹೊಸ ವಲಸೆಗಾರರು ಸಂಗೀತ ಉದ್ಯಮಕ್ಕೆ ಸಂಬಂಧಿಸಿದಂತೆ ಒಂದು ಹೊಸ ಮಾರುಕಟ್ಟೆಯನ್ನು ರೂಪಿಸಿದರು. ಜನಾಂಗದ ಧ್ವನಿಮುದ್ರಿಕೆ ಎಂಬ ಹೆಸರು ಕಣ್ಮರೆಯಾಯಿತು ಮತ್ತು ಇದರ ಉತ್ತರಾಧಿಕಾರಿ ಸ್ಥಾನವನ್ನು ರಿದಮ್ ಅಂಡ್ ಬ್ಲೂಸ್ ಆಕ್ರಮಿಸಿಕೊಂಡಿತು. ಕ್ಷಿಪ್ರವಾಗಿ ವಿಕಸನ ಹೊಂದುವ ಈ ಮಾರುಕಟ್ಟೆಯು ಬಿಲ್ಬೋರ್ಡ್ನ ರಿದಮ್ ಅಂಡ್ ಬ್ಲೂಸ್ ಕೋಷ್ಟಕದಿಂದ ಪ್ರತಿಬಿಂಬಿಸಲ್ಪಟ್ಟಿತು. ಈ ಮಾರಾಟಗಾರಿಕೆಯ ಕಾರ್ಯತಂತ್ರವು ನಗರ ಪ್ರದೇಶದ ಬ್ಲೂಸ್ ಸಂಗೀತದೊಳಗಿನ ಪ್ರವೃತ್ತಿಗಳನ್ನು ವರ್ಧಿಸಿ ಬಲತುಂಬಿತು; ಸಂಗೀತ ವಾದ್ಯಗಳ ಪ್ರಗತಿಶೀಲ ವಿದ್ಯುದೀಕರಣ, ಅವುಗಳ ವರ್ಧನೆ ಮತ್ತು R&Bಯಲ್ಲಿ ಸರ್ವತ್ರವಾಗಿ ವ್ಯಾಪಿಸಿದ ಬ್ಲೂಸ್ ಲಯವಾದ ಬ್ಲೂಸ್ ಪಲ್ಲಟದ ಸಾಮಾನ್ಯೀಕರಣ ಇವೆಲ್ಲವೂ ಸದರಿ ಪ್ರವೃತ್ತಿಗಳಲ್ಲಿ ಸೇರಿದ್ದವು. ಬ್ಲೂಸ್ ಸಂಗೀತಕ್ಕೆ ಸಂಬಂಧಿಸಿದ ಪ್ರಮುಖ ಪರಿಣಾಮಗಳನ್ನು ಈ ವ್ಯಾಪಾರಿ ಹರಿವು ಹೊಂದಿತ್ತು; ಇದು ಜಾಝ್ ಮತ್ತು ಸುವಾರ್ತೆ ಸಂಗೀತದೊಂದಿಗೆ ಸೇರಿಕೊಂಡು R&B ಅಲೆಯ ಒಂದು ಅಂಗಭಾಗವಾಗಿ ಹೊರಹೊಮ್ಮಿತು.[೮೦]
IIನೇ ಜಾಗತಿಕ ಸಮರದ ನಂತರ ಮತ್ತು 1950ರ ದಶಕದಲ್ಲಿ, ಚಿಕಾಗೊ,[೮೨] ಮೆಂಫಿಸ್,[೮೩] ಡೆಟ್ರಾಯಿಟ್[೮೪][೮೫] ಮತ್ತು ಸೇಂಟ್ ಲೂಯಿಸ್‌ನಂಥ ನಗರಗಳಲ್ಲಿ ವಿದ್ಯುಚ್ಚಾಲಿತ ಬ್ಲೂಸ್ ಸಂಗೀತದ ಹೊಸ ಶೈಲಿಗಳು ಜನಪ್ರಿಯವಾದವು.[೮೬] ವಿದ್ಯುಚ್ಚಾಲಿತ ಗಿಟಾರ್‌ಗಳು, ಪಿಟೀಲಿನಂಥ ವಾದ್ಯ (ಕ್ರಮೇಣ ಇದು ಮಂದ್ರಸ್ಥಾಯಿಯ ಗಿಟಾರ್‌ನಿಂದ ಪಲ್ಲಟಗೊಳಿಸಲ್ಪಟ್ಟಿತು), ಡ್ರಮ್ಮುಗಳು, ಮತ್ತು ಒಂದು ಧ್ವನಿವರ್ಧಕದ ಮೂಲಕ ನುಡಿಸಲಾಗುವ ರಾಗಮಾಲಿಕೆ ಹಾಗೂ ಒಂದು PA ವ್ಯವಸ್ಥೆ ಅಥವಾ ಒಂದು ಗಿಟಾರ್ ವರ್ಧಕ ಇವೇ ಮೊದಲಾದ ಸಂಗೀತ ಸಾಧನಗಳನ್ನು ವಿದ್ಯುಚ್ಚಾಲಿತ ಬ್ಲೂಸ್ ಸಂಗೀತವು ಬಳಸಿಕೊಂಡಿತು. ಮಡ್ಡಿ ವಾಟರ್ಸ್ ತನ್ನ ಮೊದಲ ಯಶಸ್ವೀ ಗೀತೆಯಾದ "ಐ ಕಾಂಟ್ ಬಿ ಸ್ಯಾಟಿಸ್‌ಫೈಡ್"ನ್ನು ಚಿಕಾಗೊದಲ್ಲಿ ಧ್ವನಿಮುದ್ರಿಸಿದಾಗ, 1948ರಿಂದ ಮುಂದಕ್ಕೆ ವಿದ್ಯುಚ್ಚಾಲಿತ ಬ್ಲೂಸ್‌ಗೆ ಸಂಬಂಧಿಸಿದಂತೆ ಚಿಕಾಗೊ ಒಂದು ಕೇಂದ್ರವಾಗಿ ಮಾರ್ಪಟ್ಟಿತು.[೮೭] ಚಿಕಾಗೊ ಬ್ಲೂಸ್ ಮೇಲೆ ಮಿಸ್ಸಿಸ್ಸಿಪ್ಪಿ ಬ್ಲೂಸ್ ಶೈಲಿಯ ಒಂದು ಗಾಢವಾದ ಪ್ರಭಾವವಿದೆ; ಮಿಸ್ಸಿಸ್ಸಿಪ್ಪಿ ಪ್ರದೇಶದಿಂದ ಅನೇಕ ಸಂಗೀತಗಾರರು ವಲಸೆ ಬಂದಿದ್ದೇ ಇದಕ್ಕೆ ಕಾರಣವೆನ್ನಬಹುದು. ಹೋವ್ಲಿನ್ ವೋಲ್ಫ್,[೮೮] ಮಡ್ಡಿ ವಾಟರ್ಸ್,[೮೯] ವಿಲ್ಲೀ ಡಿಕ್ಸನ್,[೯೦] ಮತ್ತು ಜಿಮ್ಮಿ ರೀಡ್[೯೧] ಇವರೇ ಮೊದಲಾದ ಸಂಗೀತಗಾರರು ಮಿಸ್ಸಿಸ್ಸಿಪ್ಪಿ-ಸಂಜಾತರಾಗಿದ್ದು, ಮಹಾನ್ ವಲಸೆಯ ಅವಧಿಯಲ್ಲಿ ಚಿಕಾಗೊಗೆ ಬಂದು ನೆಲೆಸಿದ್ದರು. ವಿದ್ಯುಚ್ಚಾಲಿತ ಗಿಟಾರ್, ಕೆಲವೊಮ್ಮೆ ಪಲುಕು ಗಿಟಾರ್, ರಾಗಮಾಲಿಕೆ, ಮಂದ್ರವಾದ್ಯ ಮತ್ತು ಡ್ರಮ್ಮುಗಳ ಒಂದು ಲಯ ವಿಭಾಗ ಇವೆಲ್ಲವೂ ಅವರ ಶೈಲಿಯು ವೈಶಿಷ್ಟ್ಯಪೂರ್ಣ ಲಕ್ಷಣಗಳಾಗಿವೆ. ಎಲ್ಮೋರ್ ಜೇಮ್ಸ್‌ನ ವಾದ್ಯವೃಂದಗಳಲ್ಲಿ[೯೨] ಅಥವಾ J. B. ಲೆನೋಯಿರ್ನ [೯೩] ವಾದ್ಯವೃಂದಗಳಲ್ಲಿ ವಾದ್ಯನುಡಿಸಿದ್ದ J. T. ಬ್ರೌನ್ ಸ್ಯಾಕ್ಸೋಫೋನ್‌ಗಳನ್ನೂ ಬಳಸಿದ, ಆದರೆ ಇವು ಒಂಟಿವಾದನ ಸಂಗೀತ ವಾದ್ಯಗಳಾಗಿದ್ದುದಕ್ಕಿಂತ "ಪೂರಕವಾಗಿ" ಅಥವಾ ಲಯಬದ್ಧವಾದ ಬೆಂಬಲವಾಗಿ ಬಳಸಲ್ಪಟ್ಟಿದ್ದೇ ಹೆಚ್ಚು.
ಲಿಟ್ಲ್ ವಾಲ್ಟರ್ ಮತ್ತು ಸನ್ನಿ ಬಾಯ್ ವಿಲಿಯಂಸನ್ (ರೈಸ್ ಮಿಲ್ಲರ್) ಈ ಇಬ್ಬರು, ಚಿಕಾಗೊವಿನ ಆರಂಭಿಕ ಬ್ಲೂಸ್ ರಂಗಸ್ಥಲದ ಸುಪರಿಚಿತ ರಾಗಮಾಲಿಕಾ (ಬ್ಲೂಸ್ ಸಂಗೀತಗಾರರು ಇದನ್ನು "ಹಾರ್ಪ್" ಎಂದು ಕರೆದಿದ್ದಾರೆ) ವಾದಕರು ಎನಿಸಿಕೊಂಡಿದ್ದಾರೆ. ಬಿಗ್ ವಾಲ್ಟರ್ ಹೋರ್ಟನ್‌ರಂಥ ಇತರ ಹಾರ್ಪ್ ವಾದಕರೂ ಸಹ ಪ್ರಭಾವಶಾಲಿಗಳಾಗಿದ್ದರು. ಮಡ್ಡಿ ವಾಟರ್ಸ್ ಮತ್ತು ಎಲ್ಮೋರ್ ಜೇಮ್ಸ್ ಈ ಇಬ್ಬರು ಪಲುಕು ವಿದ್ಯುಚ್ಚಾಲಿತ ಗಿಟಾರ್‌ನ್ನು ಪರಿವರ್ತನಾಶೀಲವಾದ ರೀತಿಯಲ್ಲಿ ಬಳಸಿದ್ದಕ್ಕೆ ಹೆಸರುವಾಸಿಯಾಗಿದ್ದರು. ತಮ್ಮ ಆಳವಾದ, "ಕರ್ಕಶ" ಧ್ವನಿಗಳಿಗೆ ಸಂಬಂಧಿಸಿದಂತೆ ಹೋವ್ಲಿನ್ ವೋಲ್ಫ್ ಮತ್ತು ಮಡ್ಡಿ ವಾಟರ್ಸ್ ಖ್ಯಾತರಾಗಿದ್ದರು.
ಬೇಸ್ ವಾದ್ಯಗಾರ ಮತ್ತು ಸಂಯೋಜಕನಾದ ವಿಲ್ಲೀ ಡಿಕ್ಸನ್, ಚಿಕಾಗೊ ಬ್ಲೂಸ್ ರಂಗಸ್ಥಲದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ. ಆ ಕಾಲದ ಅನೇಕ ಶಿಷ್ಟ ಬ್ಲೂಸ್ ಗೀತೆಗಳನ್ನು ಅವನು ಸಂಯೋಜಿಸಿದ ಮತ್ತು ಬರೆದ; "ಹೂಚೀ ಕೂಚೀ ಮ್ಯಾನ್", "ಐ ಜಸ್ಟ್ ವಾಂಟ್ ಟು ಮೇಕ್ ಲವ್ ಟು ಯೂ" (ಎರಡನ್ನೂ ಮಡ್ಡಿ ವಾಟರ್ಸ್‌ಗಾಗಿ ಬರೆದದ್ದು) ಮತ್ತು ಹೋವ್ಲಿನ್ ವೋಲ್ಫ್‌ಗಾಗಿ ಬರೆದ "ವಾಂಗ್ ಡ್ಯಾಂಗ್ ಡೂಡ್ಲ್" ಮತ್ತು "ಬ್ಯಾಕ್ ಡೋರ್ ಮ್ಯಾನ್" ಗೀತೆಗಳು ಇದರಲ್ಲಿ ಸೇರಿವೆ. ಚಿಕಾಗೊ ಬ್ಲೂಸ್ ಶೈಲಿಗೆ ಸೇರಿದ ಬಹುಪಾಲು ಕಲಾವಿದರು ಚಿಕಾಗೊ-ಮೂಲದ ಚೆಸ್ ರೆಕಾರ್ಡ್ಸ್ ಮತ್ತು ಚೆಕರ್ ರೆಕಾರ್ಡ್ಸ್ ಧ್ವನಿಮುದ್ರಣ ಕಂಪನಿಗಳಿಗಾಗಿ ಧ್ವನಿಮುದ್ರಣ ಮಾಡಿಕೊಟ್ಟರು. ಈ ಕಾಲದ ಪುಟ್ಟಗಾತ್ರದ ಬ್ಲೂಸ್ ಧ್ವನಿಮುದ್ರಣ ಕಂಪನಿಗಳಲ್ಲಿ ವೀ-ಜೇ ರೆಕಾರ್ಡ್ಸ್ ಮತ್ತು J.O.B. ರೆಕಾರ್ಡ್ಸ್ ಸೇರಿದ್ದವು. 1950ರ ದಶಕದ ಆರಂಭಿಕ ಅವಧಿಯಲ್ಲಿ, ಪ್ರಾಬಲ್ಯವನ್ನು ಹೊಂದಿದ್ದ ಚಿಕಾಗೊ ಧ್ವನಿಮುದ್ರಣ ಕಂಪನಿಗಳಿಗೆ ಮೆಂಫಿಸ್‌ನಲ್ಲಿನ ಸ್ಯಾಮ್ ಫಿಲಿಪ್ಸ್ ಎಂಬಾತನ ಸನ್ ರೆಕಾರ್ಡ್ಸ್ ಕಂಪನಿಯು ಸವಾಲುಹಾಕಿತ್ತು. ಈ ಕಂಪನಿಯು B. B. ಕಿಂಗ್‌ನ ಧ್ವನಿಮುದ್ರಿಕೆಯನ್ನು ನಿರ್ಮಿಸಿತ್ತು, ಹಾಗೂ ಹೋವ್ಲಿನ್ ವೋಲ್ಫ್ 1960ರಲ್ಲಿ ಚಿಕಾಗೊಗೆ ವಲಸೆ ಹೋಗುವುದಕ್ಕೆ ಮುಂಚಿತವಾಗಿ ಅವನ ಧ್ವನಿಮುದ್ರಿಕೆಯನ್ನೂ ಹೊರತಂದಿತ್ತು.[೯೪] 1954ರಲ್ಲಿ ಎಲ್ವಿಸ್ ಪ್ರೆಸ್ಲಿಯನ್ನು ಸ್ಯಾಮ್ ಫಿಲಿಪ್ಸ್ ಪತ್ತೆಹಚ್ಚಿದ ನಂತರ, ಕ್ಷಿಪ್ರವಾಗಿ ವಿಸ್ತರಿಸಲ್ಪಡುತ್ತಿದ್ದ ಶ್ವೇತವರ್ಣೀಯ ಪ್ರೇಕ್ಷಕರೆಡೆಗೆ ಸನ್ ಕಂಪನಿಯು ತಿರುಗಿತು ಮತ್ತು ಬಹುಪಾಲು ರಾಕ್ 'ಎನ್' ರೋಲ್ ಸಂಗೀತದ ಧ್ವನಿಮುದ್ರಣವನ್ನು ಕೈಗೆತ್ತಿಕೊಂಡಿತು.[೯೫]
1950ರ ದಶಕದಲ್ಲಿ, ಅಮೆರಿಕಾದ ಮುಖ್ಯವಾಹಿನಿಯ ಜನಪ್ರಿಯ ಸಂಗೀತದ ಮೇಲೆ ಬ್ಲೂಸ್ ಒಂದು ಅಗಾಧವಾದ ಪ್ರಭಾವವನ್ನು ಹೊಂದಿತ್ತು. ಚೆಸ್ ಕಂಪನಿಗಾಗಿ ಧ್ವನಿಮುದ್ರಣ ಮಾಡುತ್ತಿದ್ದ ಬೋ ಡಿಡ್ಲೆ[೮೪] ಮತ್ತು ಚಕ್ ಬೆರ್ರಿಯಂಥ[೯೬] ಜನಪ್ರಿಯ ಸಂಗೀತಗಾರರಿಬ್ಬರೂ ಚಿಕಾಗೊ ಬ್ಲೂಸ್‌ನಿಂದ ಪ್ರಭಾವಕ್ಕೊಳಗಾಗಿದ್ದರೆ, ಅವರ ವಾದ್ಯ ನುಡಿಸುವ ಉತ್ಸಾಹಭರಿತ ಶೈಲಿಗಳು ಬ್ಲೂಸ್‌ನ ವಿಷಣ್ಣತೆಯ ಮಗ್ಗುಲುಗಳಿಂದ ಬೇರೆಯಾದವು. ಕ್ಲಿಫ್ಟನ್ ಚೆನಿಯೆರ್[೯೭] ಎಂಬಾತ ಬ್ಲೂಸ್ ಒತ್ತುಗಳನ್ನು ಬಳಸುವುದರೊಂದಿಗೆ, ಲೂಸಿಯಾನಾದ ಝೈಡೆಕೊ ಸಂಗೀತದ[೯೮] ಮೇಲೂ ಚಿಕಾಗೊ ಬ್ಲೂಸ್ ಪ್ರಭಾವ ಬೀರಿದಂತಾಯಿತು. ಬ್ಲೂಸ್ ಮಾನದಂಡಗಳ ವಿದ್ಯುಚ್ಚಾಲಿತ ಒಂಟಿವಾದನದ ಗಿಟಾರ್ ಮತ್ತು ಕಾಜುನ್ ವಾದ್ಯ ಸಂಯೋಜನೆಗಳನ್ನು ಝೈಡೆಕೊ ಸಂಗೀತಗಾರರು ಬಳಸಿದರು.
1950ರ ದಶಕದ ಅಂತ್ಯಭಾಗದಲ್ಲಿ, ಮ್ಯಾಜಿಕ್ ಸ್ಯಾಮ್, ಬಡಿ ಗೈ ಮತ್ತು ಓಟಿಸ್ ರಷ್ ಮೊದಲಾದವರಿಂದ ಪ್ರವರ್ತನಗೊಳಿಸಲ್ಪಟ್ಟ ಒಂದು ಹೊಸ ಬ್ಲೂಸ್ ಶೈಲಿಯು ಕೋಬ್ರಾ ರೆಕಾರ್ಡ್ಸ್ ಮೂಲಕ ಚಿಕಾಗೊದ ವೆಸ್ಟ್ ಸೈಡ್‌ನಲ್ಲಿ ಹೊರಹೊಮ್ಮಿತು.[೯೯] 'ವೆಸ್ಟ್ ಸೈಡ್ ಸೌಂಡ್' ಬಲವಾದ ಲಯಬದ್ಧ ಬೆಂಬಲವನ್ನು ಹೊಂದಿದ್ದು, ಒಂದು ಲಯದ ಗಿಟಾರ್, ಮಂದ್ರಸ್ಥಾಯಿಯ ಗಿಟಾರ್ ಮತ್ತು ಡ್ರಮ್ಮುಗಳು ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದವು ಮತ್ತು ಗೈ, ಫ್ರೆಡಿ ಕಿಂಗ್, ಮ್ಯಾಜಿಕ್ ಸ್ಲಿಮ್ ಮತ್ತು ಲೂಥರ್ ಆಲಿಸಾನ್ ಮೊದಲಾದವರಿಂದ ಅದು ಉತ್ತಮಗೊಳಿಸಲ್ಪಟ್ಟಿತ್ತು ಹಾಗೂ ವರ್ಧಿತ ವಿದ್ಯುಚ್ಚಾಲಿತ ಲೀಡ್ ಗಿಟಾರ್‌ನ ಮೇಲುಗೈ ಅಲ್ಲಿ ಎದ್ದುಕಾಣುತ್ತಿತ್ತು.[೧೦೦][೧೦೧]
ಜಾನ್ ಲೀ ಹುಕರ್‌ನಂಥ ಇತರ ಬ್ಲೂಸ್ ಕಲಾವಿದರು, ಚಿಕಾಗೊ ಶೈಲಿಯೊಂದಿಗೆ ನೇರವಾಗಿ ಸಂಬಂಧವಿರದಿದ್ದ ಪ್ರಭಾವಗಳನ್ನು ಹೊಂದಿದ್ದರು. ಒಂದು ಏಕ ವಿದ್ಯುಚ್ಚಾಲಿತ ಗಿಟಾರ್‌ನ್ನು ಪಕ್ಕವಾದ್ಯವನ್ನಾಗಿ ಹೊಂದಿರುವ ಹುಕರ್‌ನ ಆಳವಾದ ಗಡಸು ಧ್ವನಿಯ ಮೇಲೆ ಆಧರಿಸಿರುವ ಜಾನ್ ಲೀ ಹುಕರ್‌ನ ಬ್ಲೂಸ್ ಹೆಚ್ಚು "ವೈಯಕ್ತಿಕ"ವಾದ ಸ್ವರೂಪವನ್ನು ಹೊಂದಿದೆ. ಬೂಗೀ ವೂಗೀಯಿಂದ ನೇರವಾಗಿ ಪ್ರಭಾವಕ್ಕೊಳಗಾಗಿರದಿದ್ದರೂ, ಅವನ "ಭರ್ಜರಿಯಾದ" ಶೈಲಿಯು ಕೆಲವೊಮ್ಮೆ "ಗಿಟಾರ್ ಬೂಗೀ" ಎಂದು ಕರೆಯಲ್ಪಡುತ್ತದೆ. ಅವನ ಮೊದಲ ಸಂಗೀತ ತುಣುಕಾದ, "ಬೂಗೀ ಚಿಲ್ಲೆನ್" ಎಂಬುದು 1949ರಲ್ಲಿ R&B ಕೋಷ್ಟಕಗಳ ಮೇಲೆ #1 ಸ್ಥಾನವನ್ನು ತಲುಪಿತು.[೧೦೨]
1950ರ ದಶಕದ ಅಂತ್ಯದ ವೇಳೆಗೆ, ಸ್ವ್ಯಾಂಪ್ ಬ್ಲೂಸ್ ಪ್ರಕಾರವು ಬೇಟನ್ ರೂಜ್ ಸಮೀಪ ಬೆಳವಣಿಗೆಯನ್ನು ಕಂಡಿತು; ಲೈಟಿಂಗ್ ಸ್ಲಿಮ್,[೧೦೩] ಸ್ಲಿಮ್ ಹಾರ್ಪೊ,[೧೦೪] ಸ್ಯಾಮ್ ಮೈರ್ಸ್ ಮತ್ತು ಜೆರ್ರಿ ಮೆಕ್‌ಕೇನ್‌ನಂಥ ಸಂಗೀತಗಾರರು, J. D. "ಜೇ" ಮಿಲ್ಲರ್‌ನಂಥ ನಿರ್ಮಾಪಕ ಮತ್ತು ಎಕ್ಸೆಲ್ಲೊದಂಥ ಕಂಪನಿ ಇದರ ಹಿಂದೆ ಕೈಜೋಡಿಸಿದ್ದುದು ಇದಕ್ಕೆ ಕಾರಣವಾಗಿತ್ತು. ಜಿಮ್ಮಿ ರೀಡ್‌ನಿಂದ ಅತೀವವಾದ ಪ್ರಭಾವಕ್ಕೊಳಗಾಗಿರುವ ಸ್ವ್ಯಾಂಪ್ ಬ್ಲೂಸ್, ಲಿಟ್ಲ್ ವಾಲ್ಟರ್ ಅಥವಾ ಮಡ್ಡಿ ವಾಟರ್ಸ್‌ರಂಥ ಚಿಕಾಗೊ ಬ್ಲೂಸ್ ಶೈಲಿಯ ಸಂಗೀತಗಾರರಿಗೆ ಹೋಲಿಸಿದಾಗ, ರಾಗಮಾಲಿಕೆಯ ಒಂದು ನಿಧಾನವಾದ ಗತಿ ಮತ್ತು ಸರಳವಾದ ಬಳಕೆಯನ್ನು ಹೊಂದಿದೆ. ಈ ಪ್ರಕಾರಕ್ಕೆ ಸೇರಿದ ಗೀತೆಗಳಲ್ಲಿ "ಸ್ಕ್ರ್ಯಾಚ್ ಮೈ ಬ್ಯಾಕ್", "ಷೀ ಈಸ್ ಟಫ್" ಮತ್ತು "ಐಯಾಮ್ ಎ ಕಿಂಗ್ ಬೀ" ಮೊದಲಾದವು ಸೇರಿವೆ.
1960ರ ದಶಕ ಮತ್ತು 1970ರ ದಶಕ
[ಬದಲಾಯಿಸಿ]1960ರ ದಶಕವು ಪ್ರಾರಂಭವಾಗುವ ಹೊತ್ತಿಗೆ, ರಾಕ್ ಅಂಡ್ ರೋಲ್ ಮತ್ತು ಸೌಲ್‌ನಂಥ ಅಮೆರಿಕಾದ ನೀಗ್ರೋ ಸಂಗೀತದಿಂದ ಪ್ರಭಾವಕ್ಕೊಳಗಾದ ಪ್ರಕಾರಗಳು ಮುಖ್ಯವಾಹಿನಿಯ ಜನಪ್ರಿಯ ಸಂಗೀತದ ಭಾಗವಾಗಿದ್ದವು. USನೊಳಗಿನ ಮತ್ತು ಹೊರದೇಶದ ಈ ಎರಡೂ ವರ್ಗದ ಹೊಸ ಪ್ರೇಕ್ಷಕರಿಗೂ ಶ್ವೇತವರ್ಣೀಯ ಸಂಗೀತಗಾರರು ಅಮೆರಿಕಾದ ನೀಗ್ರೋ ಸಂಗೀತವನ್ನು ತಂದಿದ್ದರು. ಆದಾಗ್ಯೂ, ಮಡ್ಡಿ ವಾಟರ್ಸ್‌ನಂಥ ಕಲಾವಿದರನ್ನು ಪ್ರಮುಖ ಸ್ಥಾನಕ್ಕೆ ತಂದುನಿಲ್ಲಿಸಿದ್ದ ಬ್ಲೂಸ್ ಅಲೆಯು ನಿಂತುಹೋಗಿತ್ತು. ಬಿಗ್ ಬಿಲ್ ಬ್ರೂಂಜಿ ಮತ್ತು ವಿಲ್ಲೀ ಡಿಕ್ಸನ್‌ರಂಥ ಬ್ಲೂಸ್ ಕಲಾವಿದರು ಯುರೋಪ್‌ನಲ್ಲಿನ ಹೊಸ ಮಾರುಕಟ್ಟೆಗಳಿಗಾಗಿ ಎದುರುನೋಡಲು ಪ್ರಾರಂಭಿಸಿದರು. ಡಿಕ್ ವಾಟರ್‌ಮನ್‌ನ ಕಾರ್ಯಕ್ಷಮತೆ ಮತ್ತು ಯುರೋಪ್‌ನಲ್ಲಿ ಅವನು ಸಂಘಟಿಸಿದ ಬ್ಲೂಸ್ ಉತ್ಸವಗಳು ಹೊರದೇಶದಲ್ಲಿ ಬ್ಲೂಸ್ ಸಂಗೀತವನ್ನು ಹಬ್ಬಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದವು. UKಯಲ್ಲಿನ ವಾದ್ಯವೃಂದಗಳು US ಬ್ಲೂಸ್ ದಂತಕಥೆಗಳ ಮೇಲ್ಪಂಕ್ತಿಯನ್ನು ಅನುಸರಿಸಿದವು, ಮತ್ತು UKಯ ಬ್ಲೂಸ್-ರಾಕ್-ಆಧರಿತ ವಾದ್ಯವೃಂದಗಳು 1960ರ ದಶಕದಾದ್ಯಂತ ಒಂದು ಪ್ರಭಾವಿ ಪಾತ್ರವನ್ನು ಹೊಂದಿದ್ದವು.[೧೦೫]
ಜಾನ್ ಲೀ ಹುಕರ್ ಮತ್ತು ಮಡ್ಡಿ ವಾಟರ್ಸ್‌ರಂಥ ಬ್ಲೂಸ್ ಸಂಗೀತಗಾರರು ಉತ್ಸಾಹಪೂರ್ಣ ಪ್ರೇಕ್ಷಕರಿಗಾಗಿ ಸಂಗೀತದ ಪ್ರಸ್ತುತಿಯನ್ನು ಮುಂದುವರಿಸಿದರು ಮತ್ತು ಸಾಂಪ್ರದಾಯಿಕ ಬ್ಲೂಸ್‌ನಲ್ಲಿ ತೊಡಗಿಸಿಕೊಂಡಿದ್ದ ನ್ಯೂಯಾರ್ಕ್–ಸಂಜಾತ ತಾಜ್ ಮಹಲ್‌ನಂಥ ಹೊಸ ಕಲಾವಿದರಿಗೆ ಸ್ಫೂರ್ತಿಯನ್ನು ತುಂಬಿದರು. ಜಾನ್ ಲೀ ಹುಕರ್ ತನ್ನ ಬ್ಲೂಸ್ ಶೈಲಿಯನ್ನು ರಾಕ್ ಅಂಶಗಳೊಂದಿಗೆ ಹದವಾಗಿ ಬೆರೆಸಿದ ಮತ್ತು ಕಿರಿಯ ಶ್ವೇತವರ್ಣೀಯ ಸಂಗೀತಗಾರರೊಂದಿಗೆ ವಾದ್ಯ ನುಡಿಸುತ್ತಾ ಒಂದು ವಿಶಿಷ್ಟ ಸಂಗೀತಮಯ ಶೈಲಿಯನ್ನು ಸೃಷ್ಟಿಸಿದ; ಇದನ್ನು 1971ರಲ್ಲಿ ಬಂದ ಗೀತಸಂಪುಟವಾದ ಎಂಡ್‌ಲೆಸ್ ಬೂಗೀ ಯಲ್ಲಿ ಕೇಳಬಹುದು. B. B. ಕಿಂಗ್ ಹೊಂದಿದ್ದ ಕಲಾಕುಶಲ ಗಿಟಾರ್ ಕೌಶಲವು ಅವನಿಗೆ "ಕಿಂಗ್ ಆಫ್ ದಿ ಬ್ಲೂಸ್" ಎಂಬ ನಾಮಸೂಚಕ ಬಿರುದುನ್ನು ಗಳಿಸಿಕೊಟ್ಟಿತು. ಚಿಕಾಗೊ ಶೈಲಿಗೆ ತದ್ವಿರುದ್ಧವಾಗಿ, ಪಲುಕು ಗಿಟಾರ್ ಅಥವಾ ಹಾರ್ಪ್ ವಾದ್ಯವನ್ನು ಬಳಸುವುದಕ್ಕೆ ಬದಲಾಗಿ, ಒಂದು ಸ್ಯಾಕ್ಸೋಫೋನ್, ತುತ್ತೂರಿ, ಮತ್ತು ಟ್ರಾಂಬೋನ್‌ನಿಂದ ಪಡೆದ ಹಿತ್ತಾಳೆ ವಾದ್ಯಗಳ ಬಲವಾದ ಬೆಂಬಲವನ್ನು ಕಿಂಗ್‌ನ ವಾದ್ಯವೃಂದವು ಬಳಸಿಕೊಂಡಿತು. B. B. ಕಿಂಗ್ ರೀತಿಯಲ್ಲಿಯೇ ಟೆನ್ನೆಸ್ಸೀ-ಸಂಜಾತ ಬಾಬಿ "ಬ್ಲೂ" ಬ್ಲಾಂಡ್ ಕೂಡಾ ದಿ ಬ್ಲೂಸ್ ಮತ್ತು R&B ಪ್ರಕಾರಗಳ ಎರಡೂ ಕಡೆಯಲ್ಲಿ ಸವಾರಿ ಮಾಡಿದ. ಈ ಅವಧಿಯ ಸಮಯದಲ್ಲಿ, ರಾಕ್ ಮತ್ತು ಸೌಲ್ ಸಂಗೀತಗಾರರೊಂದಿಗೆ (ಎರಿಕ್ ಕ್ಲಾಪ್ಟನ್, ಬುಕರ್ T ಮತ್ತು MGಗಳು) ಫ್ರೆಡಿ ಕಿಂಗ್ ಮತ್ತು ಆಲ್ಬರ್ಟ್ ಕಿಂಗ್ ಇಬ್ಬರೂ ಅನೇಕಬಾರಿ ವಾದ್ಯಸಂಗೀತವನ್ನು ನುಡಿಸಿದರು ಮತ್ತು ಸಂಗೀತದ ಆ ಶೈಲಿಗಳ ಮೇಲೆ ಒಂದು ಪ್ರಮುಖ ಪ್ರಭಾವವನ್ನು ಬೀರಿದ್ದರು.
USನಲ್ಲಿನ ನಾಗರಿಕ ಹಕ್ಕುಗಳು[೧೦೬] ಮತ್ತು ವಾಕ್ ಸ್ವಾತಂತ್ರ್ಯದ ಆಂದೋಲನದ ಸಂಗೀತವು, ಅಮೆರಿಕಾದ ಮೂಲಸ್ವರಗಳ ಸಂಗೀತ ಮತ್ತು ಅಮೆರಿಕಾದ ಆರಂಭಿಕ ನೀಗ್ರೋ ಸಂಗೀತದಲ್ಲಿನ ಆಸಕ್ತಿಯ ಒಂದು ಪುನರ್ಜಾಗೃತಿಯನ್ನು ಪ್ರೇರೇಪಿಸಿತು. ನ್ಯೂಪೋರ್ಟ್ ಜಾನಪದ ಉತ್ಸವದಂಥ[೧೦೭] ಜಿಮ್ಮಿ ಬಾಸ್ ಸಂಗೀತ ಉತ್ಸವಗಳೂ ಸಹ ಒಂದು ಹೊಸ ಪ್ರೇಕ್ಷಕ ವೃಂದಕ್ಕೆ ಸಾಂಪ್ರದಾಯಿಕ ಬ್ಲೂಸ್‌ನ್ನು ತಂದವು. ಯುದ್ಧಪೂರ್ವದಲ್ಲಿದ್ದ ಧ್ವನಿತರಂಗಗಳಿಂದಲೇ ನಡೆಯುವ ಬ್ಲೂಸ್‌ನಲ್ಲಿ ಹಾಗೂ ಸಾನ್ ಹೌಸ್, ಮಿಸ್ಸಿಸ್ಸಿಪ್ಪಿ ಜಾನ್ ಹರ್ಟ್, ಸ್ಕಿಪ್ ಜೇಮ್ಸ್, ಮತ್ತು ರೆವರೆಂಡ್ ಗ್ಯಾರಿ ಡೇವಿಸ್‌ರಂಥ ಸಂಗೀತಗಾರರಲ್ಲಿ ಆಸಕ್ತಿಯನ್ನು ಪುನರ್ ಜಾಗೃತಗೊಳಿಸಲು ಇದು ನೆರವಾಯಿತು.[೧೦೬] ಪ್ರಸಿದ್ಧ ಯುದ್ಧಪೂರ್ವ ಬ್ಲೂಸ್ ಸಂಗೀತದ ಅನೇಕ ಸಂಕಲನಗಳು ಯಾಝೂ ರೆಕಾರ್ಡ್ಸ್ ವತಿಯಿಂದ ಮರುಪ್ರಕಟಿಸಲ್ಪಟ್ಟವು. 1950ರ ದಶಕದಲ್ಲಿ ಕಂಡುಬಂದ ಚಿಕಾಗೊ ಬ್ಲೂಸ್ ಆಂದೋಲನಕ್ಕೆ ಸೇರಿದ J. B. ಲೆನೋಯಿರ್ ಎಂಬಾತ, ವಿದ್ಯುತ್ತಿಲ್ಲದೆ ನುಡಿಸಲ್ಪಡುವ ಗಿಟಾರ್‌ನ್ನು ಬಳಸಿಕೊಂಡು ಹಲವಾರು LPಗಳನ್ನು ಧ್ವನಿಮುದ್ರಿಸಿಕೊಂಡ; ವಿದ್ಯುತ್ತಿಲ್ಲದೆ ನುಡಿಸಲ್ಪಡುವ ಮಂದ್ರವಾದ್ಯಗಳು ಅಥವಾ ಡ್ರಮ್ಮುಗಳ ಮೇಲೆ ವಿಲ್ಲೀ ಡಿಕ್ಸನ್ ನುಡಿಸಿದ ಪಕ್ಕವಾದ್ಯವು ಕೆಲವೊಮ್ಮೆ ಇದರ ಜೊತೆಗಿರುತ್ತಿತ್ತು. ಮೂಲತಃ ಯುರೋಪ್‌ನಲ್ಲಿ ಮಾತ್ರವೇ[೧೦೮] ವಿತರಿಸಲ್ಪಟ್ಟ ಅವನ ಗೀತೆಗಳು, ಈ ಅವಧಿಗೆ ಸಂಬಂಧಿಸಿದಂತೆ ಅಸಾಮಾನ್ಯವಾಗಿದ್ದ ವರ್ಣಭೇದ ನೀತಿ ಅಥವಾ ವಿಯೆಟ್ನಾಂ ಯುದ್ಧ ವಿವಾದಾಂಶಗಳಂಥ ರಾಜಕೀಯ ವಿವಾದಾಂಶಗಳ ಕುರಿತು ವ್ಯಾಖ್ಯಾನಿಸಿದವು. ಅವನ ಅಲಾಬಾಮಾ ಬ್ಲೂಸ್ ಧ್ವನಿಮುದ್ರಣವು ಹೊಂದಿದ್ದ ಒಂದು ಗೀತೆಯ ಸಾಹಿತ್ಯವು ಈ ಕೆಳಗಿನಂತಿತ್ತು:
ಐ ನೆವರ್ ವಿಲ್ ಗೋ ಬ್ಯಾಕ್ ಟು ಅಲಾಬಾಮಾ, ದಟ್ ಈಸ್ ನಾಟ್ ದಿ ಪ್ಲೇಸ್ ಫಾರ್ ಮಿ (2x)
ಯು ನೋ ದೆ ಕಿಲ್ಡ್ ಮೈ ಸಿಸ್ಟರ್ ಅಂಡ್ ಮೈ ಬ್ರದರ್,
ಅಂಡ್ ದಿ ಹೋಲ್ ವರ್ಲ್ಡ್ ಲೆಟ್ ದೆಮ್ ಪೀಪಲ್ ಗೋ ಡೌನ್ ದೇರ್ ಫ್ರೀ
ಚಿಕಾಗೊ-ಮೂಲದ ಪಾಲ್ ಬಟರ್‌ಫೀಲ್ಡ್ ಬ್ಲೂಸ್ ಬ್ಯಾಂಡ್ ಮತ್ತು ಬ್ರಿಟಿಷ್ ಬ್ಲೂಸ್ ಆಂದೋಲನದ ಕಾರಣದಿಂದಾಗಿ, 1960ರ ದಶಕದ ಅವಧಿಯಲ್ಲಿ ಬ್ಲೂಸ್‌ನಲ್ಲಿನ ಶ್ವೇತವರ್ಣೀಯ ಪ್ರೇಕ್ಷಕರ ಆಸಕ್ತಿ ಹೆಚ್ಚಾಯಿತು. ದಿ ಅನಿಮಲ್ಸ್, ಫ್ಲೀಟ್‌ವುಡ್ ಮ್ಯಾಕ್, ಜಾನ್ ಮಯಾಲ್ & ದಿ ಬ್ಲೂಸ್‌ಬ್ರೇಕರ್ಸ್, ದಿ ರೋಲಿಂಗ್ ಸ್ಟೋನ್ಸ್, ದಿ ಯಾರ್ಡ್‌ಬರ್ಡ್ಸ್, ಮತ್ತು ಕ್ರೀಮ್ ಇವೇ ಮೊದಲಾದ ವಾದ್ಯವೃಂದಗಳು ಹಾಗೂ ಐರಿಷ್ ಸಂಗೀತಗಾರ ರೋರಿ ಗಲ್ಲಾಘರ್, ಡೆಲ್ಟಾ ಅಥವಾ ಚಿಕಾಗೊ ಬ್ಲೂಸ್ ಸಂಪ್ರದಾಯಗಳಿಗೆ ಸೇರಿದ ಪ್ರಸಿದ್ಧ ಬ್ಲೂಸ್ ಗೀತೆಗಳನ್ನು ಪ್ರಸ್ತುತಪಡಿಸಿದಾಗ, UKಯಲ್ಲಿ ಬ್ರಿಟಿಷ್ ಬ್ಲೂಸ್‌ನ ಶೈಲಿಯು ಅಭಿವೃದ್ಧಿಯಾಯಿತು.[೧೦೯] ಲೆಡ್ ಝೆಪ್ಪೆಲಿನ್‌ನ ಮುಂಚಿನ ಅನೇಕ ಪ್ರಚಂಡ ಯಶಸ್ಸಿನ ಗೀತೆಗಳು, ಸಾಂಪ್ರದಾಯಿಕ ಬ್ಲೂಸ್ ಗೀತೆಗಳ ಪ್ರಸ್ತುತಿಗಳಾಗಿದ್ದವು.
1960ರ ದಶಕದ ಆರಂಭದ ಬ್ರಿಟಿಷ್ ಮತ್ತು ಬ್ಲೂಸ್ ಸಂಗೀತಗಾರರು, ಅಮೆರಿಕಾದ ಅನೇಕ ಬ್ಲೂಸ್ ರಾಕ್ ಮಿಶ್ರಣ ಸಂಗೀತಗಾರರಿಗೆ ಮತ್ತು ವಾದ್ಯವೃಂದಗಳಿಗೆ ಪ್ರೇರಣೆಯನ್ನು ನೀಡಿದರು. ಅಂಥ ಸಂಗೀತಗಾರರು ಮತ್ತು ವಾದ್ಯವೃಂದಗಳೆಂದರೆ: ಕ್ಯಾನ್ಡ್ ಹೀಟ್, ಆರಂಭಿಕ ಜೆಫರ್‌ಸನ್ ಏರ್‌ಪ್ಲೇನ್, ಜಾನಿಸ್ ಜಾಪ್ಲಿನ್, ಜಾನ್ನಿ ವಿಂಟರ್, ದಿ J. ಗೆಲಿಸ್ ಬ್ಯಾಂಡ್, ರೈ ಕೂಡರ್, ಮತ್ತು ದಿ ಆಲ್‌ಮನ್ ಬ್ರದರ್ಸ್ ಬ್ಯಾಂಡ್. ಜಿಮಿ ಹೆಂಡ್ರಿಕ್ಸ್ ಎಂಬ ಹೆಸರಿನ ಓರ್ವ ಬ್ಲೂಸ್ ರಾಕ್ ಸಂಗೀತಗಾರನು ಆ ಸಮಯದಲ್ಲಿ ತನ್ನ ಕ್ಷೇತ್ರದಲ್ಲಿ ಓರ್ವ ಅಪರೂಪದ ಕಲಾವಿದನಾಗಿದ್ದ: ಈತ ಪ್ರಜ್ಞಾವಿಸ್ತಾರಕ ರಾಕ್‌ನ್ನು ನುಡಿಸಿದ ಓರ್ವ ನೀಗ್ರೋ ಮನುಷ್ಯ ಆಗಿದ್ದ. ಹೆಂಡ್ರಿಕ್ಸ್ ಓರ್ವ ಪರಿಣಿತ ಗಿಟಾರ್ ವಾದಕನಾಗಿದ್ದ, ಮತ್ತು ತನ್ನ ಸಂಗೀತದಲ್ಲಿ ವಿರೂಪಣೆ ಮತ್ತು ಪ್ರತ್ಯಾದಾನಗಳ ಪರಿವರ್ತನಾಶೀಲ ಬಳಕೆಗೆ ಸಂಬಂಧಿಸಿದಂತೆ ಓರ್ವ ಪಥನಿರ್ಮಾಪಕನಾಗಿದ್ದ.[೧೧೦] ಈ ಕಲಾವಿದರು ಮತ್ತು ಇತರರ ಮೂಲಕ, ಬ್ಲೂಸ್ ಸಂಗೀತವು ರಾಕ್ ಸಂಗೀತದ ಬೆಳವಣಿಗೆಯ ಮೇಲೆ ಪ್ರಭಾವ ಬೀರಿತು.[೧೧೧]
1970ರ ದಶಕದ ಆರಂಭದಲ್ಲಿ ಹೊರಹೊಮ್ಮಿದ ಟೆಕ್ಸಾಸ್ ರಾಕ್-ಬ್ಲೂಸ್ ಶೈಲಿಯು, ಒಂಟಿಗಾಯನ ಮತ್ತು ಲಯದ ಪಾತ್ರಗಳೆರಡರಲ್ಲಿಯೂ ಗಿಟಾರ್‌ಗಳನ್ನು ಬಳಸಿತು. ವೆಸ್ಟ್ ಸೈಡ್ ಬ್ಲೂಸ್‌ಗೆ ತದ್ವಿರುದ್ಧವಾಗಿ, ಟೆಕ್ಸಾಸ್ ಶೈಲಿಯು ಬ್ರಿಟಿಷ್ ರಾಕ್-ಬ್ಲೂಸ್ ಆಂದೋಲನದಿಂದ ಗಾಢವಾಗಿ ಪ್ರಭಾವಕ್ಕೊಳಗಾಗಿದೆ. ಜಾನ್ನಿ ವಿಂಟರ್, ಸ್ಟೀವ್ ರೇ ವಾಘನ್, ದಿ ಫ್ಯಾಬ್ಯುಲಸ್ ಥಂಡರ್‌ಬರ್ಡ್ಸ್, ಮತ್ತು ZZ ಟಾಪ್ ಮೊದಲಾದವರು ಟೆಕ್ಸಾಸ್ ಶೈಲಿಯ ಪ್ರಮುಖ ಕಲಾವಿದರಾಗಿದ್ದಾರೆ. ಈ ಕಲಾವಿದರೆಲ್ಲರೂ ತಮ್ಮ ಸಂಗೀತಮಯ ಪ್ರಯಾಣವನ್ನು 1970ರ ದಶಕದಲ್ಲಿ ಪ್ರಾರಂಭಿಸಿದರಾದರೂ, ಮುಂದಿನ ದಶಕವು ಬರುವ ತನಕ ಪ್ರಮುಖ ಅಂತರರಾಷ್ಟ್ರೀಯ ಯಶಸ್ಸನ್ನು ಸಾಧಿಸಲು ಅವರಿಗಾಗಲಿಲ್ಲ.[೧೧೨]
1980ರ ದಶಕದಿಂದ 2000ರ ದಶಕದವರೆಗೆ
[ಬದಲಾಯಿಸಿ]1980ರ ದಶಕದಿಂದೀಚೆಗೆ, ಅಮೆರಿಕಾದ ನೀಗ್ರೋ ಸಮುದಾಯದ ಒಂದು ನಿಶ್ಚಿತ ಭಾಗದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಮಿಸ್ಸಿಸ್ಸಿಪ್ಪಿಯ ಜಾಕ್‌ಸನ್ ಹಾಗೂ ಆಗ್ನೇಯ ಅಮೆರಿಕಾದ ಇತರ ಪ್ರದೇಶಗಳ ಸುತ್ತಮುತ್ತ, ಬ್ಲೂಸ್‌ನಲ್ಲಿನ ಆಸಕ್ತಿಯ ಒಂದು ಪುನರ್ಜಾಗೃತಿ ಕಂಡುಬಂದಿದೆ. "ಸೌಲ್ ಬ್ಲೂಸ್" ಅಥವಾ "ಸದರ್ನ್ ಸೌಲ್" ಎಂದು ಅನೇಕವೇಳೆ ಕರೆಯಲ್ಪಡುವ ಈ ಆಂದೋಲನದ ಕೇಂದ್ರಭಾಗದಲ್ಲಿರುವ ಸಂಗೀತಕ್ಕೆ, ಜಾಕ್‌ಸನ್-ಆಧರಿತ ಮಲಾಕೊ ಕಂಪನಿಯ[೧೧೩] ಎರಡು ನಿರ್ದಿಷ್ಟ ಧ್ವನಿಮುದ್ರಣಗಳ ಅನಿರೀಕ್ಷಿತ ಯಶಸ್ಸು ಹೊಸ ಜೀವವನ್ನು ನೀಡಿತು. ಅವುಗಳೆಂದರೆ: Z. Z. ಹಿಲ್ನ ಡೌನ್ ಹೋಮ್ ಬ್ಲೂಸ್ (1982) ಮತ್ತು ಲಿಟ್ಲ್ ಮಿಲ್ಟನ್ನ ದಿ ಬ್ಲೂಸ್ ಈಸ್ ಆಲ್‌ರೈಟ್ (1984). ಬ್ಲೂಸ್‌ನ ಈ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಅಮೆರಿಕಾದ ಸಮಕಾಲೀನ ನೀಗ್ರೋ ಸಂಗೀತಗಾರರಲ್ಲಿ ಬಾಬಿ ರಷ್, ಡೆನೈಸ್ ಲಾಸ್ಯಾಲ್ಲೆ, ಸರ್ ಚಾರ್ಲ್ಸ್ ಜೋನ್ಸ್, ಬೆಟ್ಟೈ ಲಾವೆಟ್ಟೆ, ಮಾರ್ವಿನ್ ಸೀಸ್ ಮತ್ತು ಪೆಗ್ಗಿ ಸ್ಕಾಟ್-ಆಡಮ್ಸ್ ಮೊದಲಾದವರು ಸೇರಿದ್ದಾರೆ.
1980ರ ದಶಕದಲ್ಲಿ ಸಾಂಪ್ರದಾಯಿಕ ಮತ್ತು ಹೊಸ ಪ್ರಭೇದಗಳೆರಡರಲ್ಲಿಯೂ ಬ್ಲೂಸ್ ಮುಂದುವರಿಯಿತು. 1986ರಲ್ಲಿ, ಸ್ಟ್ರಾಂಗ್ ಪರ್ಸುಯೇಡರ್ ಎಂಬ ಗೀತಸಂಪುಟವು ರಾಬರ್ಟ್ ಕ್ರೇಯನ್ನು ಓರ್ವ ಪ್ರಮುಖ ಬ್ಲೂಸ್ ಕಲಾವಿದನನ್ನಾಗಿ ಬೆಳಕಿಗೆ ತಂದಿತು.[೧೧೪] ಸ್ಟೀವ್ ರೇ ವಾಘನ್‌ನ ಮೊದಲ ಧ್ವನಿಮುದ್ರಣವಾದ ಟೆಕ್ಸಾಸ್ ಫ್ಲಡ್ 1983ರಲ್ಲಿ ಬಿಡುಗಡೆಗೊಂಡಿತು, ಮತ್ತು ಟೆಕ್ಸಾಸ್-ಮೂಲದ ಈ ಗಿಟಾರ್ ವಾದಕನು ಅಂತರರಾಷ್ಟ್ರೀಯ ವೇದಿಕೆಯ ಮೇಲೆ ದಾಂಗುಡಿಯಿಡಲು ಇದು ಕಾರಣವಾಯಿತು. 1989ರಲ್ಲಿ ಬಿಡುಗಡೆಯಾದ ದಿ ಹೀಲರ್ ಎಂಬ ಗೀತಸಂಪುಟದೊಂದಿಗೆ ಜಾನ್ ಲೀ ಹುಕರ್‌ನ ಜನಪ್ರಿಯತೆಯು ಒಂದು ಪುನರುಜ್ಜೀವನವನ್ನು ಕಂಡಿತು. ದಿ ಬ್ಲೂಸ್ ಬ್ರೇಕರ್ಸ್ ಮತ್ತು ಕ್ರೀಮ್ ಜೊತೆಗಿನ ತನ್ನ ಸಂಗೀತ ಪ್ರಸ್ತುತಿಗಳಿಂದ ಹೆಸರಾಗಿದ್ದ ಎರಿಕ್ ಕ್ಲಾಪ್ಟನ್, ಅನ್‌ಪ್ಲಗ್ಡ್ ಎಂಬ ತನ್ನ ಗೀತಸಂಪುಟದೊಂದಿಗೆ 1990ರಲ್ಲಿ ತನ್ನ ಪುನರಾಗಮನವನ್ನು ದಾಖಲಿಸಿದ; ಇದರಲ್ಲಿ ಆತ ವಿದ್ಯುತ್ತಿಲ್ಲದೆ ಚಾಲಿಸುವ ಗಿಟಾರ್‌ನಲ್ಲಿ ಕೆಲವೊಂದು ಶಿಷ್ಟ ಬ್ಲೂಸ್ ಗೀತೆಗಳನ್ನು ನುಡಿಸಿದ್ದ. ಆದಾಗ್ಯೂ, 1990ರ ದಶಕದಲ್ಲಿ ಆರಂಭಗೊಂಡ ಡಿಜಿಟಲ್ ಬಹುಪಥದ ಧ್ವನಿಮುದ್ರಣ ಹಾಗೂ ವಿಡಿಯೋ ತುಣುಕಿನ ಉತ್ಪಾದನೆಯನ್ನು ಒಳಗೊಂಡಿರುವ ತಂತ್ರಜ್ಞಾನದ ಇತರ ಪ್ರಗತಿಗಳು ಮತ್ತು ಹೊಸ ಮಾರಾಟಗಾರಿಕೆ ಕಾರ್ಯತಂತ್ರಗಳಿಂದಾಗಿ ವೆಚ್ಚಗಳಲ್ಲಿ ಹೆಚ್ಚಳ ಕಂಡುಬಂದಿದೆ, ಮತ್ತು ಬ್ಲೂಸ್ ಸಂಗೀತದ ಒಂದು ಮುಖ್ಯ ಅಂಗಭಾಗವಾಗಿರುವ ಸಹಜತೆ ಮತ್ತು ಆಶುಗಾಯನಕ್ಕೆ ಹೆಚ್ಚಿನ ಸವಾಲು ಹಾಕಿವೆ.[೧೧೫]
1980ರ ದಶಕ ಮತ್ತು 1990ರ ದಶಕಗಳಲ್ಲಿ, ಲಿವಿಂಗ್ ಬ್ಲೂಸ್ ಮತ್ತು ಬ್ಲೂಸ್ ರೆವ್ಯೂ ದಂಥ ಬ್ಲೂಸ್ ಪ್ರಕಟಣೆಗಳು ವಿತರಿಸಲ್ಪಡಲು ಶುರುವಾದವು, ಪ್ರಮುಖ ನಗರಗಳು ಬ್ಲೂಸ್ ಸಮಾಜಗಳ ರೂಪಿಸುವಿಕೆಯಲ್ಲಿ ತೊಡಗಿಕೊಂಡವು, ಹೊರಾಂಗಣದ ಬ್ಲೂಸ್ ಉತ್ಸವಗಳು ಹೆಚ್ಚು ಸಾಮಾನ್ಯವಾದವು ಮತ್ತು[೧೧೬] ಬ್ಲೂಸ್‌ಗೆ ಸಂಬಂಧಿಸಿದ ಹೆಚ್ಚುಹೆಚ್ಚು ರಾತ್ರಿಯ ಕ್ಲಬ್ಬುಗಳು ಮತ್ತು ತಾಣಗಳು ಅಸ್ತಿತ್ವಕ್ಕೆ ಬಂದವು.[೧೧೭]
1990ರ ದಶಕದಲ್ಲಿ, ಸಂಗೀತಮಯವಾದ ಪ್ರಕಾರಗಳ ಒಂದು ಶ್ರೇಣಿಯನ್ನು ಬ್ಲೂಸ್ ಸಂಗೀತಗಾರರು ಪರಿಶೋಧಿಸಿದರು; ಹಿಂದೆ W. C. ಹ್ಯಾಂಡಿ ಪ್ರಶಸ್ತಿಗಳು[೧೧೮] ಎಂಬುದಾಗಿ ಹಿಂದೆ ಹೆಸರಿಸಲಾಗಿದ್ದ ವಾರ್ಷಿಕ ಬ್ಲೂಸ್ ಸಂಗೀತ ಪ್ರಶಸ್ತಿಗಳಿಗೆ ಅಥವಾ ಸಾಂಪ್ರದಾಯಿಕ ಬ್ಲೂಸ್ ಗೀತಸಂಪುಟ ಹಾಗೂ ಅತ್ಯುತ್ತಮ ಸಮಕಾಲೀನ ಗೀತಸಂಪುಟಕ್ಕಾಗಿರುವ ಗ್ರ್ಯಾಮಿ ಪ್ರಶಸ್ತಿಗಳಿಗಾಗಿ ನಾಮಕರಣಗೊಂಡವರ ವ್ಯಾಪಕ ಶ್ರೇಣಿಯನ್ನು ಇದಕ್ಕೊಂದು ಉದಾಹರಣೆಯಾಗಿ ನೀಡಬಹುದು. ಸಮಕಾಲೀನ ಬ್ಲೂಸ್ ಸಂಗೀತವನ್ನು ಹಲವಾರು ಬ್ಲೂಸ್ ಧ್ವನಿಮುದ್ರಣ ಕಂಪನಿಗಳು ಪೋಷಿಸಿಕೊಂಡು ಬಂದಿವೆ. ಅವುಗಳೆಂದರೆ: ಆಲಿಗೇಟರ್ ರೆಕಾರ್ಡ್ಸ್, ರಫ್ ರೆಕಾರ್ಡ್ಸ್, ಚೆಸ್ ರೆಕಾರ್ಡ್ಸ್ (MCA), ಡೆಲ್‌ಮಾರ್ಕ್ ರೆಕಾರ್ಡ್ಸ್, ನಾರ್ದರ್ನ್‌ಬ್ಲೂಸ್ ಮ್ಯೂಸಿಕ್, ಮತ್ತು ವ್ಯಾನ್‌ಗಾರ್ಡ್ ರೆಕಾರ್ಡ್ಸ್ (ಆರ್ಟೆಮಿಸ್ ರೆಕಾರ್ಡ್ಸ್). ಕೆಲವೊಂದು ಕಂಪನಿಗಳು ಅಪರೂಪದ ಬ್ಲೂಸ್ ಕೃತಿಗಳನ್ನು ಮತ್ತೆ ಪತ್ತೆಹಚ್ಚುವ ಹಾಗೂ ಅವುಗಳ ಮರುಮಾದರಿಯನ್ನು ತಯಾರಿಸುವುದಕ್ಕೆ ಸಂಬಂಧಿಸಿದಂತೆ ಪ್ರಸಿದ್ಧವಾಗಿವೆ. ಇಂಥ ಕೆಲ ಧ್ವನಿಮುದ್ರಣ ಕಂಪನಿಗಳೆಂದರೆ: ಅರ್ಹೂಲೀ ರೆಕಾರ್ಡ್ಸ್, ಸ್ಮಿತ್‌ಸೋನಿಯನ್ ಫೋಕ್‌ವೇಸ್ ರೆಕಾರ್ಡಿಂಗ್ಸ್ (ಫೋಕ್‌ವೇಸ್ ರೆಕಾರ್ಡ್ಸ್‌ನ ಉತ್ತರಾಧಿಕಾರಿ) ಮತ್ತು ಯಾಝೂ ರೆಕಾರ್ಡ್ಸ್ (ಷಾನಾಚೀ ರೆಕಾರ್ಡ್ಸ್).[೧೧೯]
ಪ್ರಸಿದ್ಧ ಡೆಲ್ಟಾ ಪ್ರಕಾರದಿಂದ ಹೆಚ್ಚು ರಾಕ್-ಉದ್ದೇಶಿತ ಬ್ಲೂಸ್‌ವರೆಗಿನ ಬ್ಲೂಸ್‌ನ ಎಲ್ಲಾ ಮಗ್ಗುಲುಗಳನ್ನು ಯುವ ಬ್ಲೂಸ್ ಕಲಾವಿದರು ಇಂದು ಪರಿಶೋಧಿಸುತ್ತಿದ್ದಾರೆ. 1970ರ ನಂತರ ಹುಟ್ಟಿದ ಕಲಾವಿದರಾದ ಜಾನ್ ಮೇಯರ್, ಕೆನ್ನಿ ವೇಯ್ನ್ ಷೆಪರ್ಡ್, ಸೀನ್ ಕೋಸ್ಟೆಲ್ಲೊ, ಷಾನ್ನೊನ್ ಕರ್ಫ್‌ಮನ್, ಆಂಟೊನಿ ಗೋಮ್ಸ್, ಷೆಮೆಕಿಯಾ ಕೋಪ್‌ಲ್ಯಾಂಡ್, ಜಾನಿ ಲ್ಯಾಂಗ್, ಕೋರೆ ಹ್ಯಾರಿಸ್, ಸೂಸನ್ ಟೆಡೆಶ್ಚಿ, JW-ಜೋನ್ಸ್, ಜೋ ಬೋನಮಾಸ್ಸಾ, ಮಿಚೆಲ್ಲಿ ಮ್ಯಾಲೋನ್, ನಾರ್ತ್ ಮಿಸ್ಸಿಸ್ಸಿಪ್ಪಿ ಆಲ್‌ಸ್ಟಾರ್ಸ್, ಎವರ್‌ಲಾಸ್ಟ್, ದಿ ಬ್ಲ್ಯಾಕ್ ಕೀಸ್, ಬಾಬ್ ಲಾಗ್ III, ಜೋಸ್ P ಮತ್ತು ಹಿಲ್‌ಸ್ಟೊಂಪ್ ಮೊದಲಾದವರು ತಮ್ಮದೇ ಆದ ಶೈಲಿಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ.[೧೨೦] ಮೆಂಫಿಸ್, ಟೆಕ್ಸಾಸ್-ಮೂಲದ ವಿಲಿಯಂ ಡೇನಿಯಲ್ ಮೆಕ್‌ಫಾಲ್ಸ್, "ಬ್ಲೂಸ್ ಬಾಯ್ ವಿಲ್ಲೀ" ಎಂದೂ ಸಹ ಹೆಸರಾಗಿದ್ದು, ಈತ ಓರ್ವ ಸಾಂಪ್ರದಾಯಿಕ ಬ್ಲೂಸ್‌ನ ಸಂಗೀತಗಾರನಾಗಿದ್ದಾನೆ.
ಸಂಗೀತಮಯ ಪರಿಣಾಮ
[ಬದಲಾಯಿಸಿ]ಬ್ಲೂಸ್ ಸಂಗೀತಮಯ ಶೈಲಿಗಳು, ಪ್ರಭೇದಗಳು (12-ಲಯರೇಖೆಯ ಬ್ಲೂಸ್), ಮಾಧುರ್ಯಗಳು, ಮತ್ತು ಬ್ಲೂಸ್ ಸ್ವರಶ್ರೇಣಿಗಳು, ರಾಕ್ ಅಂಡ್ ರೋಲ್, ಜಾಝ್, ಮತ್ತು ಜನಪ್ರಿಯ ಸಂಗೀತದಂಥ ಸಂಗೀತದ ಇತರ ಅನೇಕ ಪ್ರಕಾರಗಳ ಮೇಲೆ ಪ್ರಭಾವ ಬೀರಿವೆ.[೧೨೧] ಲೂಯಿಸ್ ಆರ್ಮ್‌ಸ್ಟ್ರಾಂಗ್, ಡ್ಯೂಕ್ ಎಲಿಂಗ್ಟನ್, ಮೈಲ್ಸ್ ಡೇವಿಸ್, ಮತ್ತು ಬಾಬ್ ಡೈಲನ್‌ರಂಥ ಪ್ರಸಿದ್ಧ ಜಾಝ್, ಜಾನಪದ ಅಥವಾ ರಾಕ್ ಸಂಗೀತಗಾರರು ಗಮನಾರ್ಹವಾದ ಬ್ಲೂಸ್ ಧ್ವನಿಮುದ್ರಣಗಳನ್ನು ಪ್ರಸ್ತುತಪಡಿಸಿದ್ದಾರೆ. ಹೆರಾಲ್ಡ್ ಆರ್ಲೆನ್‌ನ "ಬ್ಲೂಸ್ ಇನ್ ದಿ ನೈಟ್"ನಂಥ ಜನಪ್ರಿಯ ಗೀತೆಗಳಲ್ಲಿ, "ಸಿನ್ಸ್ ಐ ಫೆಲ್ ಫಾರ್ ಯೂ" ಮತ್ತು "ಪ್ಲೀಸ್ ಸೆಂಡ್ ಮಿ ಸಮ್‌ಒನ್ ಟು ಲವ್"ನಂಥ ಬ್ಲೂಸ್ ಹಾಡುಕಥೆಗಳಲ್ಲಿ, ಅಷ್ಟೇ ಏಕೆ, ಜಾರ್ಜ್ ಗೆರ್ಶ್ವಿನ್‌ನ "ರಾಪ್ಸೋಡಿ ಇನ್ ಬ್ಲೂ" ಮತ್ತು "ಕನ್ಸರ್ಟೋ ಇನ್ F"ನಂಥ ವಾದ್ಯವೃಂದದ ಕೃತಿಗಳಲ್ಲಿ ಬ್ಲೂಸ್ ಸ್ವರಶ್ರೇಣಿಯು ಅನೇಕವೇಳೆ ಬಳಸಲ್ಪಟ್ಟಿದೆ. ಒಂಟಿವಾದನದ ಪಿಯಾನೊಗೆ ಸಂಬಂಧಿಸಿದಂತಿರುವ ಗೆರ್ಶ್ವಿನ್‌ನ ಎರಡನೇ "ಪ್ರಾಸ್ತಾವಿಕ ರಾಗಾಲಾಪನೆ"ಯು, ಕ್ರಿಯಾತ್ಮಕವಲ್ಲದ ಕಟ್ಟುನಿಟ್ಟಾಗಿರುವಿಕೆಯೊಂದಿಗೆ ಪ್ರಭೇದ-ಸ್ವರೂಪವನ್ನು ಕಾಯ್ದುಕೊಂಡು ಹೋಗುವ ಒಂದು ಶಾಸ್ತ್ರೀಯ ಬ್ಲೂಸ್‌ನ ಒಂದು ಆಸಕ್ತಿಕರ ಉದಾಹರಣೆಯಾಗಿದೆ. ಆಧುನಿಕ ಜನಪ್ರಿಯ ಸಂಗೀತದಲ್ಲಿ ಬ್ಲೂಸ್ ಸ್ವರಶ್ರೇಣಿಯು ಸರ್ವತ್ರವಾಗಿದೆ ಮತ್ತು ಅನೇಕ ರಾಗಶೈಲಿಯ ಚೌಕಟ್ಟುಗಳನ್ನು, ಅದರಲ್ಲೂ ವಿಶೇಷವಾಗಿ ರಾಕ್ ಸಂಗೀತದಲ್ಲಿ (ಉದಾಹರಣೆಗೆ "ಎ ಹಾರ್ಡ್ ಡೇ'ಸ್ ನೈಟ್"ನಲ್ಲಿ) ಬಳಸಲಾಗುವ ಮೂರನೇ ಸ್ಥಾಯಿಗಳ ಏಣಿಯ ಕುರಿತು ತಿಳಿಸಿಕೊಡುತ್ತದೆ. ದೂರದರ್ಶನದ ಮೂಲಕ ಪ್ರಸ್ತುತಪಡಿಸಲಾದ ಬ್ಯಾಟ್‌ಮನ್ ಗೆ ಸಂಬಂಧಿಸಿದ ಆವರ್ತಕ ಗೀತೆಯಲ್ಲಿ, ಹದಿಹರೆಯದವರ ಆರಾಧ್ಯವ್ಯಕ್ತಿಯಾದ ಫೇಬಿಯಾನ್‌ನ ಪ್ರಚಂಡ ಯಶಸ್ಸಿನ ಗೀತೆಯಾದ "ಟರ್ನ್ ಮೀ ಲೂಸ್"ನಲ್ಲಿ, ಹಳ್ಳಿಗಾಡಿನ ಸಂಗೀತದ ತಾರೆಯಾದ ಜಿಮ್ಮಿ ರಾಡ್ಜರ್ಸ್‌ನ ಸಂಗೀತದಲ್ಲಿ, ಮತ್ತು ಗಿಟಾರ್ ವಾದಕ/ಗಾಯಕ ಟ್ರೇಸಿ ಚಾಪ್‌ಮನ್‌ನ ಪ್ರಚಂಡ ಯಶಸ್ಸಿನ ಗೀತೆಯಾದ "ಗಿವ್ ಮಿ ಒನ್ ರೀಸನ್"ನಲ್ಲಿ ಬ್ಲೂಸ್ ಪ್ರಭೇದಗಳು ಬಳಸಲ್ಪಟ್ಟಿವೆ.
R&B ಸಂಗೀತದ ಮೂಲವನ್ನು ನೀಗ್ರೋ ಸ್ತೋತ್ರಗೀತೆಗಳು ಮತ್ತು ಬ್ಲೂಸ್‌ನಲ್ಲಿ ಕಂಡುಕೊಳ್ಳಬಹುದು. ಸಂಗೀತದ ಸೂತ್ರಗಳಿಗನುಸಾರವಾಗಿ ಹೇಳುವುದಾದರೆ, ನೀಗ್ರೋ ಸ್ತೋತ್ರಗೀತೆಗಳು ನ್ಯೂ ಇಂಗ್ಲಂಡ್ ಗಾಯನ ವೃಂದದ ಸಂಪ್ರದಾಯಗಳ ಒಂದು ಪೀಳಿಗೆಗೆ ಸೇರಿದ್ದವು; ಅದರಲ್ಲೂ ನಿರ್ದಿಷ್ಟವಾಗಿ, ಆಫ್ರಿಕಾದ ಲಯಗಳು ಮತ್ತು ಕರೆ-ಮತ್ತು-ಪ್ರತಿವರ್ತನೆ ಪ್ರಭೇದಗಳೊಂದಿಗೆ ಬೆರೆಸಿದ ಐಸಾಕ್ ವ್ಯಾಟ್ಸ್‌ನ ಸ್ತುತಿಗೀತೆಗಳ ಪೀಳಿಗೆಗೆ ಇವು ಸೇರಿದ್ದವು. ಅಮೆರಿಕಾದ ನೀಗ್ರೋ ಸಮುದಾಯದಲ್ಲಿನ ನೀಗ್ರೋ ಸ್ತೋತ್ರಗೀತೆಗಳು ಅಥವಾ ಧಾರ್ಮಿಕ ಸ್ತೋತ್ರಗೀತೆಗಳು "ಕೀಳಾದ" ಬ್ಲೂಸ್‌ಗಿಂತ ಸಾಕಷ್ಟು ಉತ್ತಮ ರೀತಿಯಲ್ಲಿ ದಾಖಲಿಸಲ್ಪಟ್ಟಿವೆ. ಶಿಬಿರ-ಧರ್ಮಸಭೆಗಳು ಎಂದು ಕರೆಯಲಾಗುತ್ತಿದ್ದ ದಿವ್ಯಪೂಜೆ ಅಥವಾ ಪೂಜಾ ಕೂಟಗಳಿಗೆ ಸಂಬಂಧಿಸಿದಂತೆ ಅಮೆರಿಕಾದ ನೀಗ್ರೋ ಸಮುದಾಯಗಳನ್ನು ಒಟ್ಟುಗೂಡಿಸಬಹುದು ಎಂಬ ಕಾರಣದಿಂದ ನೀಗ್ರೋ ಸ್ತೋತ್ರಗೀತೆಯ ಹಾಡುಗಾರಿಕೆಯು ಅಭಿವೃದ್ಧಿಗೊಳಿಸಲ್ಪಟ್ಟಿತು.
ಸ್ಕಿಪ್ ಜೇಮ್ಸ್, ಚಾರ್ಲಿ ಪ್ಯಾಟನ್, ಜಾರ್ಜಿಯಾ ಟಾಮ್ ಡಾರ್ಸೆಯಂಥ ಆರಂಭಿಕ ಹಳ್ಳಿಗಾಡಿನ ಬ್ಲೂಸ್ ಕಲಾವಿದರು, ಹಳ್ಳಿಗಾಡಿನ ಮತ್ತು ನಗರ ಪ್ರದೇಶದ ಬ್ಲೂಸ್ ಸಂಗೀತವನ್ನು ನುಡಿಸಿದರು ಹಾಗೂ ನೀಗ್ರೋ ಸ್ತೋತ್ರಗೀತೆಯ ಹಾಡುಗಾರಿಕೆಯ ಪ್ರಭಾವವನ್ನು ಅವರು ಹೊಂದಿದ್ದರು. ಸುವಾರ್ತೆ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ಡಾರ್ಸೆ ನೆರವಾದ.[೧೨೨] ಗೋಲ್ಡನ್ ಗೇಟ್ ಕ್ವಾರ್ಟೆಟ್‌ನೊಂದಿಗೆ ಸುವಾರ್ತೆ ಸಂಗೀತವು 1930ರ ದಶಕದಲ್ಲಿ ಅಭಿವೃದ್ಧಿಯನ್ನು ಕಂಡಿತು. 1950ರ ದಶಕದಲ್ಲಿ, ಸ್ಯಾಮ್ ಕೂಕ್, ರೇ ಚಾರ್ಲ್ಸ್ ಮತ್ತು ಜೇಮ್ಸ್ ಬ್ರೌನ್ ಮೊದಲಾದವರಿಂದ ನೀಡಲ್ಪಟ್ಟ ಸೌಲ್ ಸಂಗೀತವು ಸುವಾರ್ತೆಯ ಮತ್ತು ಬ್ಲೂಸ್ ಸಂಗೀತದ ಅಂಶಗಳನ್ನು ಬಳಸಿಕೊಂಡಿತು. 1960ರ ದಶಕ ಮತ್ತು 1970ರ ದಶಕಗಳಲ್ಲಿ, ಸೌಲ್ ಬ್ಲೂಸ್ ಸಂಗೀತದಲ್ಲಿ ಸುವಾರ್ತೆ ಮತ್ತು ಬ್ಲೂಸ್ ಸಂಗೀತಗಳು ವಿಲೀನಗೊಂಡವು. 1970ರ ದಶಕದ ಸರಳ ಭಾವುಕ ಸಂಗೀತವು (ಫಂಕ್ ಸಂಗೀತ) ಸೌಲ್ ಸಂಗೀತದಿಂದ ಪ್ರಭಾವಿಸಲ್ಪಟ್ಟಿತ್ತು; ಸರಳ ಭಾವುಕ ಸಂಗೀತವನ್ನು ಹಿಪ್-ಹಾಪ್ ಮತ್ತು ಸಮಕಾಲೀನ R&B ಸಂಗೀತದ ಒಂದು ಪೂರ್ವವರ್ತಿಯಾಗಿ ಕಾಣಬಹುದು.
IIನೇ ಜಾಗತಿಕ ಸಮರಕ್ಕೆ ಮುಂಚಿತವಾಗಿ ಬ್ಲೂಸ್ ಮತ್ತು ಜಾಝ್ ನಡುವಿನ ಎಲ್ಲೆಗೆರೆಗಳು ಕಡಿಮೆ ಸ್ಪಷ್ಟವಾಗಿದ್ದವು. ಹಿತ್ತಾಳೆ ವಾದ್ಯವೃಂದಗಳಿಂದ ಸೃಷ್ಟಿಯಾದ ಸ್ವರಮೇಳನದ ರಚನೆಗಳನ್ನು ಜಾಝ್ ಸಂಗೀತವು ಸಾಮಾನ್ಯವಾಗಿ ಹೊಂದಿದ್ದರೆ, 12-ಲಯರೇಖೆಯ ಬ್ಲೂಸ್‌ನಂಥ ಬ್ಲೂಸ್ ಪ್ರಭೇದಗಳನ್ನು ಬ್ಲೂಸ್ ಸಂಗೀತವು ಹೊಂದಿತ್ತು. ಆದಾಗ್ಯೂ, 1940ರ ದಶಕದ ಜಂಪ್ ಬ್ಲೂಸ್ ಎರಡೂ ಶೈಲಿಗಳನ್ನು ಮಿಶ್ರಣಮಾಡಿತು. WWII ನಂತರದಲ್ಲಿ, ಜಾಝ್‌ನ ಮೇಲೆ ಬ್ಲೂಸ್ ಒಂದು ಗಮನಾರ್ಹ ಪ್ರಭಾವವನ್ನು ಹೊಂದಿತ್ತು. ಚಾರ್ಲೀ ಪಾರ್ಕರ್‌ನ "ನೌ ಈಸ್ ದಿ ಟೈಮ್"ನಂಥ ಬೆಬಾಪ್‌ನ ಶ್ರೇಷ್ಠ ಕೃತಿಗಳು, ಪಂಚಸ್ವರದ ಸ್ವರಶ್ರೇಣಿ ಮತ್ತು ಬ್ಲೂ ಸ್ವರಗಳೊಂದಿಗಿನ ಬ್ಲೂಸ್ ಪ್ರಭೇದವನ್ನು ಬಳಸಿಕೊಂಡವು. ನರ್ತಿಸುವಿಕೆಗೆ ಮೀಸಲಾದ ಸಂಗೀತದ ಒಂದು ಜನಪ್ರಿಯ ಶೈಲಿಯಿಂದ ಒಂದು "ಉನ್ನತ-ಕಲೆಯ," ಕಡಿಮೆ-ಸಂಪರ್ಕಸಾಧ್ಯ, ಬೌದ್ಧಿಕ "ಸಂಗೀತಗಾರನ ಸಂಗೀತ"ವಾಗಿ ಮಾರ್ಪಡುವ ಜಾಝ್‌ನ ಪಾತ್ರದಲ್ಲಿನ ಒಂದು ಪ್ರಮುಖ ಬದಲಾವಣೆಗೆ ಬೆಬಾಪ್‌ನಿಂದ ಅಂಕಿತ ದೊರಕಿತು. ಬ್ಲೂಸ್ ಮತ್ತು ಜಾಝ್ ಎರಡಕ್ಕೂ ಸಂಬಂಧಿಸಿದ ಪ್ರೇಕ್ಷಕರು ಬೇರೆಯಾದರು, ಮತ್ತು ಬ್ಲೂಸ್ ಮತ್ತು ಜಾಝ್ ನಡುವಿನ ಎಲ್ಲೆಯು ಹೆಚ್ಚು ವಿಶದೀಕರಿಸಲ್ಪಟ್ಟಿತು. ಜಾಝ್ ಮತ್ತು ಬ್ಲೂಸ್ ನಡುವಿನ ಎಲ್ಲೆಯ ಮೇಲೆ ಸವಾರಿ ಮಾಡುತ್ತಿರುವ ಕಲಾವಿದರನ್ನು ಜಾಝ್ ಬ್ಲೂಸ್ ಉಪ-ಪ್ರಕಾರದೊಳಗೆ ವರ್ಗೀಕರಿಸಲಾಗಿದೆ.[೧೨೩][೧೨೪]
ಬ್ಲೂಸ್‌ನ ಹನ್ನೆರಡು-ಲಯರೇಖೆಯ ರಚನೆ ಮತ್ತು ಬ್ಲೂಸ್ ಸ್ವರಶ್ರೇಣಿಯು ರಾಕ್ ಅಂಡ್ ರೋಲ್ ಸಂಗೀತದ ಮೇಲೆ ಒಂದು ಪ್ರಮುಖ ಪ್ರಭಾವವನ್ನು ಬೀರಿತ್ತು. ರಾಕ್ ಅಂಡ್ ರೋಲ್ ಸಂಗೀತವನ್ನು "ಒಂದು ಹಿಮ್ಮುಖಲಯದೊಂದಿಗಿನ ಬ್ಲೂಸ್" ಎಂದು ಕರೆಯಲಾಗಿದೆ; ಕಾರ್ಲ್ ಪೆರ್ಕಿನ್ಸ್, ರಾಕಬಿಲಿಯನ್ನು "ಒಂದು ಹಳ್ಳಿಗಾಡಿನ ಲಯದೊಂದಿಗಿನ ಬ್ಲೂಸ್" ಎಂದು ಕರೆದ. ರಾಕಬಿಲಿ ಸಂಗೀತಗಳನ್ನು ಒಂದು ಬ್ಲೂಗ್ರಾಸ್ ಲಯದೊಂದಿಗೆ ನುಡಿಸಲಾಗುವ ಹನ್ನೆರಡು-ಲಯರೇಖೆಯ ಬ್ಲೂಸ್ ಎಂದೂ ಕರೆಯಲಾಗುತ್ತಿತ್ತು. "ಹೌಂಡ್ ಡಾಗ್", ತನ್ನ ಮಾರ್ಪಾಡಾಗದ ಹನ್ನೆರಡು-ಲಯರೇಖೆಯ ರಚನೆಯಿಂದಾಗಿ (ಸ್ವರಮೇಳ ಮತ್ತು ಸಾಹಿತ್ಯ ಎರಡರಲ್ಲೂ) ಮತ್ತು ನಾದದ (ಮತ್ತು ಉಪಪ್ರಧಾನ ಸ್ವರದ ಅರ್ಧಸ್ವರ ಇಳಿಸಿದ ಏಳನೇ ಸ್ಥಾಯಿ) ಅರ್ಧಸ್ವರ ಇಳಿಸಿದ ಮೂರನೇ ಸ್ಥಾಯಿಯ ಮೇಲೆ ಕೇಂದ್ರೀಕೃತವಾದ ಒಂದು ಮಾಧುರ್ಯದಿಂದಾಗಿ, ಒಂದು ರಾಕ್ ಅಂಡ್ ರೋಲ್ ಗೀತೆಯಾಗಿ ಮಾರ್ಪಡಿಸಲ್ಪಟ್ಟ ಒಂದು ಬ್ಲೂಸ್ ಗೀತೆಯಾಗಿದೆ. ಜೆರ್ರಿ ಲೀ ಲೆವಿಸ್‌ನ ರಾಕ್ ಅಂಡ್ ರೋಲ್ ಶೈಲಿಯು, ಬ್ಲೂಸ್ ಮತ್ತು ಅದರಿಂದ ಜನ್ಯವಾದ ಬೂಗೀ ವೂಗೀಯಿಂದ ಅತೀವವಾಗಿ ಪ್ರಭಾವಕ್ಕೊಳಗಾಗಿತ್ತು. ಅವನ ಸಂಗೀತದ ಶೈಲಿಯು ನಿಖರವಾಗಿ ರಾಕಬಿಲಿ ಸ್ವರೂಪದ್ದಾಗಿರಲಿಲ್ಲವಾದರೂ, ಅದು ನಿಜವಾದ ರಾಕ್ ಅಂಡ್ ರೋಲ್ ಎಂಬುದಾಗಿ ಅನೇಕವೇಳೆ ಕರೆಯಲ್ಪಟ್ಟಿದೆ (ಇದು ಅಮೆರಿಕಾದ ಹಲವಾರು ನೀಗ್ರೋ ರಾಕ್ ಅಂಡ್ ರೋಲ್ ಸಂಗೀತಗಾರರೊಂದಿಗೆ ಅವನು ಹಂಚಿಕೊಂಡಿರುವ ಒಂದು ಹಣೆಪಟ್ಟಿಯಾಗಿದೆ).[೧೨೫][೧೨೬]
ಆರಂಭಿಕ ಹಳ್ಳಿಗಾಡಿನ ಸಂಗೀತದಲ್ಲಿ ಬ್ಲೂಸ್ ಸಂಗೀತವು ತುಂಬಿಸಲ್ಪಟ್ಟಿತ್ತು.[೧೨೭] ಜಿಮ್ಮಿ ರಾಡ್ಜರ್ಸ್, ಮೂನ್ ಮುಲ್ಲಿಕನ್, ಬಾಬ್ ವಿಲ್ಸ್, ಬಿಲ್ ಮನ್ರೋ ಮತ್ತು ಹ್ಯಾಂಕ್ ವಿಲಿಯಮ್ಸ್ ಮೊದಲಾದವರು ತಮ್ಮನ್ನು ಬ್ಲೂಸ್ ಗಾಯಕರೆಂದು ಕರೆದುಕೊಂಡಿದ್ದಾರೆ ಮತ್ತು ಎಡ್ಡಿ ಅರ್ನಾಲ್ಡ್‌ನ ಹಳ್ಳಿಗಾಡಿನ ಪಾಪ್‌ಗಿಂತ ವಿಭಿನ್ನವಾಗಿರುವ ಒಂದು ಬ್ಲೂಸ್ ಅನುಭೂತಿಯನ್ನು ಅವರ ಸಂಗೀತವು ಹೊಂದಿದೆ. ವಿಲ್ಲೀ ನೆಲ್ಸನ್ ಮತ್ತು ವೇಲಾನ್ ಜೆನ್ನಿಂಗ್ಸ್‌ರಿಂದ ನೀಡಲ್ಪಟ್ಟ 1970ರ-ಕಾಲದ ಬಹಳಷ್ಟು "ಅನಧಿಕೃತ" ಹಳ್ಳಿಗಾಡಿನ ಸಂಗೀತವು ಕೂಡಾ ಬ್ಲೂಸ್‌ನಿಂದ ಎರವಲು ಪಡೆದುಕೊಂಡಿದ್ದೇ ಆಗಿತ್ತು. 1950ರ ದಶಕದ ಶೈಲಿಯಾದ ರಾಕ್ ಅಂಡ್ ರೋಲ್‌ನ ಕುಸಿತದ ನಂತರ ಜೆರ್ರಿ ಲೀ ಲೆವಿಸ್ ಹಳ್ಳಿಗಾಡಿನ ಸಂಗೀತಕ್ಕೆ ಹಿಂದಿರುಗಿದಾಗ, ಒಂದು ಬ್ಲೂಸ್ ಅನುಭೂತಿಯೊಂದಿಗೆ ಆತ ಹಳ್ಳಿಗಾಡಿನ ಸಂಗೀತವನ್ನು ಹಾಡಿದ ಮತ್ತು ತನ್ನ ಗೀತಸಂಪುಟಗಳಲ್ಲಿ ಬ್ಲೂಸ್ ಮಾನದಂಡಗಳನ್ನು ಅನೇಕವೇಳೆ ಸೇರಿಸಿಕೊಂಡ. ಅನೇಕ ಆರಂಭಿಕ ರಾಕ್ ಅಂಡ್ ರೋಲ್ ಗೀತೆಗಳು ಬ್ಲೂಸ್ ಮೇಲೆ ಆಧರಿತವಾಗಿವೆ. ಅವುಗಳೆಂದರೆ: "ದಟ್ಸ್ ಆಲ್ ರೈಟ್ ಮಾಮಾ", "ಜಾನಿ B. ಗೂಡ್", "ಬ್ಲೂ ಸ್ಯುಯೆಡ್ ಷೂಸ್", "ಹೋಲ್ ಲೊಟ್ಟಾ ಷೇಕಿಂಗ್ ಗೋಯಿಂಗ್ ಆನ್", "ಷೇಕ್, ರ್ಯಾಟ್ಲ್, ಅಂಡ್ ರೋಲ್", ಮತ್ತು "ಲಾಂಗ್ ಟಾಲ್ ಸ್ಯಾಲಿ". ಅಮೆರಿಕಾದ ಆರಂಭಿಕ ನೀಗ್ರೋ ರಾಕ್ ಸಂಗೀತಗಾರರು ಬ್ಲೂಸ್ ಸಂಗೀತದ ಲೈಂಗಿಕ ವಿಷಯಗಳು ಮತ್ತು ದ್ವಂದ್ವಾರ್ಥಗಳನ್ನು ಉಳಿಸಿಕೊಂಡರು. "ಗಾಟ್ ಎ ಗಾಲ್ ನೇಮ್ಡ್ ಸ್ಯೂ, ನೋಸ್ ಜಸ್ಟ್ ವಾಟ್ ಟು ಡೂ" ("ಟೂಟಿ ಫ್ರೂಟಿ", ಲಿಟ್ಲ್ ರಿಚರ್ಡ್) ಅಥವಾ "ಸೀ ದಿ ಗರ್ಲ್ ವಿತ್ ದಿ ರೆಡ್ ಡ್ರೆಸ್ ಆನ್, ಷೀ ಕೆನ್ ಡೂ ದಿ ಬರ್ಡ್‌ಲ್ಯಾಂಡ್ ಆಲ್ ನೈಟ್ ಲಾಂಗ್" ("ವಾಟ್ ವುಡ್ ಐ ಸೇ", ರೇ ಚಾರ್ಲ್ಸ್) ಇವು ಅಂಥ ಕೆಲವು ಉದಾಹರಣೆಗಳಾಗಿವೆ. ಬಾಬ್ ಡೈಲನ್‌ನ "ಆಬ್‌ವಿಯಸ್ಲಿ ಫೈವ್ ಬಿಲೀವರ್ಸ್" ಮತ್ತು ಎಸ್ತರ್ ಮತ್ತು ಅಬಿ ಒಫಾರಿಮ್‌ರ "ಸಿಂಡರೆಲ್ಲಾ ರಾಕೆಫೆಲ್ಲಾ"ದಂಥ ನವೀನ ಪಾಪ್ ಗೀತೆಗಳಲ್ಲಿಯೂ ಹನ್ನೆರಡು-ಲಯರೇಖೆಯ ಬ್ಲೂಸ್ ರಚನೆಯನ್ನು ಕಾಣಬಹುದಾಗಿದೆ.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]ಜಾಝ್, ರಾಕ್ ಅಂಡ್ ರೋಲ್, ಹೆವಿ ಮೆಟಲ್ ಸಂಗೀತ, ಹಿಪ್ ಹಾಪ್ ಸಂಗೀತ, ರೆಗ್ಗೇ, ಹಳ್ಳಿಗಾಡಿನ ಸಂಗೀತ, ಮತ್ತು ಪಾಪ್ ಸಂಗೀತಗಳ ರೀತಿಯಲ್ಲಿಯೇ, ಬ್ಲೂಸ್ ಸಂಗೀತವು "ದೆವ್ವದ ಸಂಗೀತ"ವಾಗಿದೆ ಮತ್ತು ಹಿಂಸೆ ಹಾಗೂ ಇತರ ಕಳಪೆ ವರ್ತನೆಗಳಿಗೆ ಚಿತಾವಣೆ ನೀಡುವಂತಿದೆ ಎಂದು ಆಪಾದಿಸಲ್ಪಟ್ಟಿದೆ.[೧೨೮] 20ನೇ ಶತಮಾನದ ಆರಂಭದಲ್ಲಿ, ಅದರಲ್ಲೂ ವಿಶೇಷವಾಗಿ 1920ರ ದಶಕದ ಅವಧಿಯಲ್ಲಿ ಶ್ವೇತವರ್ಣೀಯ ಪ್ರೇಕ್ಷಕರು ಬ್ಲೂಸ್ ಸಂಗೀತವನ್ನು ಕೇಳುವುದಕ್ಕೆ ಶುರುಮಾಡಿದಾಗ, ಬ್ಲೂಸ್ ಸಂಗೀತವು ಅಪಖ್ಯಾತಿಕರ ಎಂದು ಪರಿಗಣಿಸಲ್ಪಟ್ಟಿತ್ತು.[೬೨] ಇಪ್ಪತ್ತನೇ ಶತಮಾನದ ಆರಂಭದಲ್ಲಿ, ನೀಗ್ರೋಗಳಲ್ಲದ-ಅಮೆರಿಕನ್ನರ ಸಮುದಾಯದಲ್ಲಿ ಬ್ಲೂಸ್-ಪ್ರಭಾವಿತ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ W.C. ಹ್ಯಾಂಡಿ ಮೊದಲಿಗನಾಗಿದ್ದ.
1960ರ ದಶಕ ಮತ್ತು 70ರ ದಶಕದ ಬ್ಲೂಸ್ ಪುನರುಜ್ಜೀವನದ ಅವಧಿಯಲ್ಲಿ, ಅಕೌಸ್ಟಿಕ್ ಬ್ಲೂಸ್ ಕಲಾವಿದನಾದ ತಾಜ್ ಮಹಲ್ ಮತ್ತು ದಂತಕಥೆ ಎನಿಸಿಕೊಂಡಿದ್ದ ಟೆಕ್ಸಾಸ್ ಬ್ಲೂಸ್ ಕಲಾವಿದನಾದ ಲೈಟಿಂಗ್ ಹಾಪ್ಕಿನ್ಸ್ ಸೇರಿಕೊಂಡು, ಜನಪ್ರಿಯವಾಗಿ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸೌಂಡರ್ (1972) ಎಂಬ ಚಲನಚಿತ್ರದಲ್ಲಿ ಎದ್ದುಕಾಣುವಂತೆ ನಿರೂಪಿಸಲ್ಪಟ್ಟ ಸಂಗೀತವನ್ನು ರೂಪಿಸಿದರು ಮತ್ತು ಪ್ರಸ್ತುತಪಡಿಸಿದರು. ಈ ಚಲನಚಿತ್ರವು ಮಹಲ್‌ಗೆ ಚಲನಚಿತ್ರವೊಂದಕ್ಕಾಗಿ ಬರೆದ ಅತ್ಯುತ್ತಮ ಮೂಲ ಸಂಯೋಜನೆಗಾಗಿರುವ ಒಂದು ಗ್ರ್ಯಾಮಿ ನಾಮನಿರ್ದೇಶನವನ್ನು ಮತ್ತು ಒಂದು BAFTA ನಾಮನಿರ್ದೇಶನವನ್ನು ಗಳಿಸಿಕೊಟ್ಟಿತು.[೧೨೯] ಹೆಚ್ಚೂಕಮ್ಮಿ 30 ವರ್ಷಗಳ ನಂತರ, 2001ರಲ್ಲಿ ಬಿಡುಗಡೆಯಾದ "ಸಾಂಗ್‌ಕ್ಯಾಚರ್" ಎಂಬ ಚಲನಚಿತ್ರಕ್ಕಾಗಿ ಮಹಲ್ ಬ್ಲೂಸ್ ಸಂಗೀತವನ್ನು ನೀಡಿದ ಮತ್ತು ಇಕ್ಕುಳ-ಸುತ್ತಿಗೆ ಶೈಲಿ ಎಂದು ಹೆಸರಾದ ಒಂದು ಬಾಂಜೋ ಸಂಗೀತ ಸಂಯೋಜನೆಯನ್ನು ಪ್ರಸ್ತುತಪಡಿಸಿದ; ಈ ಚಿತ್ರವು ಅಪ್ಪಾಲೇಚಿಯಾದ ಮೂಲಸ್ವರಗಳ ಸಂಗೀತದ ಸಂರಕ್ಷಣೆಯ ಕಥೆಯ ಮೇಲೆ ಕೇಂದ್ರೀಕರಿಸಲ್ಪಟ್ಟಿತ್ತು.
ದಿ ಬ್ಲೂಸ್ ಬ್ರದರ್ಸ್ ಎಂಬ ಚಲನಚಿತ್ರವನ್ನು ಡ್ಯಾನ್ ಅಯಿಕ್ರಾಯ್ಡ್ ಮತ್ತು ಜಾನ್ ಲ್ಯಾಂಡಿಸ್ 1980ರಲ್ಲಿ ಬಿಡುಗಡೆ ಮಾಡಿದಾಗ, 20ನೇ ಶತಮಾನದ ಅಂತ್ಯಭಾಗದಲ್ಲಿ ಬ್ಲೂಸ್ ಶೈಲಿಯ ಪ್ರಾಯಶಃ ಅತ್ಯಂತ ಗೋಚರ ಉದಾಹರಣೆಯು ಕಂಡುಬಂದಾಯಿತು. ರೇ ಚಾರ್ಲ್ಸ್, ಜೇಮ್ಸ್ ಬ್ರೌನ್, ಕ್ಯಾಬ್ ಕ್ಯಾಲೊವೇ, ಅರೆಥಾ ಫ್ರಾಂಕ್ಲಿನ್, ಮತ್ತು ಜಾನ್ ಲೀ ಹುಕರ್‌ರಂಥ, ರಿದಮ್ ಅಂಡ್ ಬ್ಲೂಸ್ ಪ್ರಕಾರದ ಅತ್ಯಂತ ದೊಡ್ಡ ಸಮಕಾಲೀನ ಪ್ರಭಾವಶಾಲಿಗಳ ಪೈಕಿ ಅನೇಕರನ್ನು ಈ ಚಲನಚಿತ್ರ ಸೆಳೆದುತಂದಿತು. ರೂಪುಗೊಂಡ ವಾದ್ಯವೃಂದವು ಬ್ಲೂಸ್ ಬ್ರದರ್ಸ್ ಚಾವಣಿಯ ಅಡಿಯಲ್ಲಿ ಒಂದು ಯಶಸ್ವಿ ಪ್ರವಾಸವನ್ನೂ ಪ್ರಾರಂಭಿಸಿತು. 1998ರಲ್ಲಿ ಬಂದ ಬ್ಲೂಸ್ ಬ್ರದರ್ಸ್ 2000 ಎಂಬ ಒಂದು ಉತ್ತರಭಾಗವು, ಒಂದು ಮಹತ್ತರವಾದ ವಿಮರ್ಶಾತ್ಮಕ ಮತ್ತು ಆರ್ಥಿಕ ಯಶಸ್ಸನ್ನು ಗಳಿಸಲಿಲ್ಲವಾದರೂ, ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅದು ಬ್ಲೂಸ್ ಕಲಾವಿದರನ್ನು ಒಳಗೊಂಡಿತ್ತು. ಅವರುಗಳೆಂದರೆ: B.B. ಕಿಂಗ್, ಬೋ ಡಿಡ್ಲೆ, ಎರಿಕಾಹ್ ಬಡು, ಎರಿಕ್ ಕ್ಲಾಪ್ಟನ್, ಸ್ಟೀವ್ ವಿನ್‌ವುಡ್, ಚಾರ್ಲೀ ಮಸ್ಸೆಲ್‌ವೈಟ್, ಬ್ಲೂಸ್ ಟ್ರಾವೆಲರ್, ಜಿಮ್ಮಿ ವಾಘನ್, ಜೆಫ್ ಬಾಕ್ಸ್‌ಟರ್.
2003ರಲ್ಲಿ, ಬ್ಲೂಸ್ ಸಂಗೀತವನ್ನು ಒಂದು ವ್ಯಾಪಕ ಪ್ರೇಕ್ಷಕ ವೃಂದಕ್ಕೆ ಪ್ರಚಾರಮಾಡುವ ಸಲುವಾಗಿ, ಮಾರ್ಟಿನ್ ಸ್ಕೋರ್ಸೆಸೆ ಎಂಬಾತ ಗಣನೀಯ ಪ್ರಯತ್ನಗಳನ್ನು ಮಾಡಿದ. PBSಗಾಗಿ ನಿರ್ಮಿಸಲು ಉದ್ದೇಶಿಸಿದ್ದ ದಿ ಬ್ಲೂಸ್ ಎಂದು ಕರೆಯಲ್ಪಟ್ಟ ಸಾಕ್ಷ್ಯ-ಚಲನಚಿತ್ರಗಳ ಒಂದು ಸರಣಿಯಲ್ಲಿ ಭಾಗವಹಿಸುವಂತೆ, ಕ್ಲಿಂಟ್ ಈಸ್ಟ್‌ವುಡ್ ಮತ್ತು ವಿಮ್ ವೆಂಡರ್ಸ್‌ರಂಥ ಹಲವಾರು ಪ್ರಸಿದ್ಧ ನಿರ್ದೇಶಕರನ್ನು ಅವನು ಕೇಳಿಕೊಂಡ.[೧೩೦] ಉನ್ನತ-ಗುಣಮಟ್ಟದ CDಗಳ ಒಂದು ಸರಣಿಯಲ್ಲಿನ ಪ್ರಮುಖ ಬ್ಲೂಸ್ ಕಲಾವಿದರ ಗಾಯನ ಸಂಕಲನಗಳಲ್ಲಿಯೂ ಅವನು ಪಾಲ್ಗೊಂಡ. ದಿ ವೆಸ್ಟ್ ವಿಂಗ್ ಎಂಬ ದೂರದರ್ಶನದ ಸರಣಿಯ ಕೊನೆಯ ಋತುವನ್ನು ಮುಕ್ತಾಯಗೊಳಿಸಲೆಂದು, 2006ರಲ್ಲಿ ಅವನ "ಅಮೆರಿಕಾ, ದಿ ಬ್ಯೂಟಿಫುಲ್" ಗೀತೆಯ ಬ್ಲೂಸ್ ಗಾಯನವನ್ನು ಬ್ಲೂಸ್ ಗಿಟಾರ್ ವಾದಕ ಮತ್ತು ಗಾಯಕ ಕೆಬ್' ಮೋ' ಪ್ರಸ್ತುತಪಡಿಸಿದ.
ಇದನ್ನೂ ನೋಡಿ
[ಬದಲಾಯಿಸಿ]- ಅಮೆರಿಕಾದ ನೀಗ್ರೋ ಸಂಸ್ಕೃತಿ
- ದಿ ಬ್ಲೂಸ್‌ಗೆ ಸಂಬಂಧಿಸಿದ ಎಲ್ಲಾ ಸಂಗೀತ ಮಾರ್ಗದರ್ಶಿಗಳು
- ಬ್ಲೂಸ್ ಕೀರ್ತಿಭವನ
- ನ್ಯೂಜಿಲೆಂಡ್ನಲ್ಲಿ ಬ್ಲೂಸ್
- ಬ್ಲೂಸ್ ನೃತ್ಯ
- ಬ್ಲೂಸ್ ಗಿಟಾರ್ ನುಡಿಸುತ್ತಿರುವುದು
- ಬ್ಲೂಸ್ ಸಂಗೀತಗಾರರ ಪಟ್ಟಿ
- ಬ್ಲೂಸ್ ಮಾನದಂಡಗಳ ಪಟ್ಟಿ
- ಬ್ರಿಟಿಷ್ ಬ್ಲೂಸ್ ಸಂಗೀತಗಾರರ ಪಟ್ಟಿ
- ಕೆನಡಾದ ಬ್ಲೂಸ್
- ಮಿಸ್ಸಿಸ್ಸಿಪ್ಪಿ ಬ್ಲೂಸ್ ಟ್ರಯಲ್
- ಟ್ರೇನು ಹಾಡುಗಳ ಪಟ್ಟಿ
- 20ನೇ ಶತಮಾನದ ಸಂಗೀತ
- ದಿ ಟಲ್ಸಾ ಸೌಂಡ್
- ಮ್ಯೂಸಿಯಂ ಆಫ್ ಆಫ್ರಿಕನ್ ಅಮೆರಿಕನ್ ಮ್ಯೂಸಿಯಂ
- ಮೊದಲ ಸ್ಥಾನದಲ್ಲಿರುವ ಬ್ಲೂಸ್ ಗೀತಸಂಪುಟಗಳ ಪಟ್ಟಿ
ಸಂಗೀತ ಸ್ವರಚಿಹ್ನೆಗಳು
[ಬದಲಾಯಿಸಿ]- ↑ "The Evolution of Differing Blues Styles". How To Play Blues Guitar. Archived from the original on 2010-01-18. Retrieved 2008-08-11.
- ↑ ದಿ "ಟ್ರೆಸರ್ ಡಿ ಲಾ ಲಾಂಗ್ವೆ ಫ್ರಾಂಚೈಸ್ ಇನ್ಫರ್ಮಾಟೈಸ್" ಪ್ರೊವೈಡ್ಸ್ ದಿಸ್ ಎಟಿಮಾಲಜಿ ಟು ದಿ ವರ್ಡ್ ಬ್ಲೂಸ್ ಅಂಡ್ ಜಾರ್ಜ್ ಕೋಲ್‌ಮನ್'ಸ್ ಫಾರ್ಸ್ ಆಸ್ ದಿ ಫಸ್ಟ್ ಅಪಿಯರೆನ್ಸ್ ಆಫ್ ದಿಸ್ ಟರ್ಮ್ ಇನ್ ದಿ ಇಂಗ್ಲಿಷ್ ಲಾಂಗ್ವೇಜ್, see http://atilf.atilf.fr/dendien/scripts/fast.exe?mot=blues Archived 2013-12-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಡೇವಿಸ್, ಫ್ರಾನ್ಸಿಸ್. ದಿ ಹಿಸ್ಟರಿ ಆಫ್ ದಿ ಬ್ಲೂಸ್ . ನ್ಯೂಯಾರ್ಕ್: ಹೈಪೆರಿಯನ್, 1995.
- ↑ ಎರಿಕ್ ಪ್ಯಾಟ್ರಿಜ್, ಡಿಕ್ಷ್‌ನರಿ ಆಫ್ ಸ್ಲಾಂಗ್ ಅಂಡ್ ಅನ್‌ಕನ್ವೆನ್ಷನಲ್ ಇಂಗ್ಲಿಷ್ , 2002, ರೌಲೆಟ್ಜ್ (UK), ISBN 0-415-29189-5
- ↑ ಟೋನಿ ಬೋಲ್ಡನ್, ಆಫ್ರೋ-ಬ್ಲೂ: ಇಂಪ್ರೊವೈಸೇಷನ್ಸ್ ಇನ್ ಅಮೆರಿಕನ್ ಪೊಯೆಟ್ರಿ ಅಂಡ್ ಕಲ್ಚರ್ , 2004, ಯೂನಿವರ್ಸಿಟಿ ಆಫ್ ಇಲಿನಾಯ್ಸ್ ಪ್ರೆಸ್, ISBN 0-252-02874-0
- ↑ Bob Brozman (2002). "The evolution of the 12-bar blues progression,". Archived from the original on 2010-05-25. Retrieved 2009-05-02.
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಸ್ಯಾಮ್ಯುಯೆಲ್ ಚಾರ್ಟರ್ಸ್, ಪುಟ 20.
- ↑ "Ellen Fullman, "The Long String Instrument", MusicWorks, Issue #37 Fall 1987" (PDF). Archived from the original (PDF) on 2008-06-25. Retrieved 2010-07-29.
- ↑ "A Jazz Improvisation Almanac, Outside Shore Music Online School". Archived from the original on 2012-09-11. Retrieved 2010-07-29.
- ↑ ಎವೆನ್, ಪುಟ 143
- ↑ ಅಲಂಕಾರಿಕ ಸ್ವರಗಳು ಬರೋಕ್ ಮತ್ತು ಶಾಸ್ತ್ರೀಯ ಅವಧಿಗಳಲ್ಲಿ ಸಾಮಾನ್ಯವಾಗಿದ್ದವು, ಆದರೆ ಅವು ಸ್ವರಮೇಳನದ ರಚನೆಯ ಭಾಗವಾಗಿ ಪಾತ್ರ ವಹಿಸಿದ್ದಕ್ಕಿಂತ ಹೆಚ್ಚಾಗಿ ಅಲಂಕರಣವಾಗಿ ಪಾತ್ರವಹಿಸಿದವು. ಉದಾಹರಣೆಗೆ, ವೋಲ್ಫ್‌ಗ್ಯಾಂಗ್ ಅಮೆಡಿಯಸ್ ಮೊಜಾರ್ಟ್ನ ಪಿಯಾನೊ ಕನ್ಸರ್ಟ್ ನಂ. 21 , ಸ್ವರಶ್ರೇಣಿಯ ಪಂಚಮಸ್ವರದಲ್ಲಿನ ಅರ್ಧಸ್ವರ ಇಳಿಸಿದ ಐದನೇ ಸ್ಥಾಯಿಯಾಗಿದೆ. ಈ ಅವಧಿಗಳಲ್ಲಿ, ನಿಖರವಾದ ಐದನೇ ಸ್ಥಾಯಿಯೊಳಗೆ ಸುಶ್ರುತಿಯಾಗಿ ಮಾರ್ಪಡಿಸುವುದಕ್ಕಾಗಿ ತುಡಿತವನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದಂತಿದ್ದ ಒಂದು ಕೌಶಲವಾಗಿತ್ತು; ಇದಕ್ಕೆ ಪ್ರತಿಯಾಗಿ, ಒಂದು ಬ್ಲೂಸ್ ಮಾಧುರ್ಯವು ಅರ್ಧಸ್ವರ ಇಳಿಸಿದ ಐದನೇ ಸ್ಥಾಯಿಯನ್ನು ಸ್ವರಶ್ರೇಣಿಯ ಭಾಗವಾಗಿ ಬಳಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
- ↑ ಕಂಜ್ಲರ್, ಪುಟ 1065
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಬ್ಯಾರಿ ಪಿಯರ್‌ಸನ್, ಪುಟ 316
- ↑ ಡೇವಿಡ್ ಹ್ಯಾಂಬರ್ಗರ್, ಅಕೌಸ್ಟಿಕ್ ಗಿಟಾರ್ ಸ್ಲೈಡ್ ಬೇಸಿಕ್ಸ್ , 2001, ISBN 1-890490-38-5.
- ↑ "Lesson 72: Basic Blues Shuffle by Jim Burger". Archived from the original on ಜುಲೈ 20, 2011. Retrieved November 25, 2005.
- ↑ ವಿಲ್ಬರ್ M. ಸ್ಯಾವಿಡ್ಜ್, ರ್ಯಾಂಡಿ L. ವ್ರಾಡೆನ್‌ಬರ್ಗ್, ಎವೆರಿಥಿಂಗ್ ಎಬೌಟ್ ಪ್ಲೇಯಿಂಗ್ ದಿ ಬ್ಲೂಸ್ , 2002, ಮ್ಯೂಸಿಕ್ ಸೇಲ್ಸ್ ಡಿಸ್ಟ್ರಿಬ್ಯೂಟೆಡ್, ISBN 1-884848-09-5, ಪುಟ 35
- ↑ ಫೆರ್ರಿಸ್, ಪುಟ 230
- ↑ ಫಾದರ್ ಆಫ್ ದಿ ಬ್ಲೂಸ್: ಆನ್ ಆಟೋಬಯಾಗ್ರಫಿ. ಲೇಖಕ: W.C. ಹ್ಯಾಂಡಿ; ಸಂಪಾದನೆ: ಆರ್ನಾ ಬಾನ್‌ಟೆಂಪ್ಸ್; ಮುನ್ನುಡಿ: ಅಬ್ಬೆ ನೈಲ್ಸ್. ಮ್ಯಾಕ್‌ಮಿಲನ್ ಕಂಪನಿ, ನ್ಯೂಯಾರ್ಕ್; (1941) ಪುಟ 143. ಈ ಮೊದಲ ಮುದ್ರಣದಲ್ಲಿ ISBN ಸಂಖ್ಯೆ ಇಲ್ಲ
- ↑ ಎವೆನ್, ಪುಟಗಳು 142–143
- ↑ ಕೊಮರಾ, ಪುಟ 476
- ↑ ಆಲಿವರ್, ಪುಟ 281
- ↑ ೨೨.೦ ೨೨.೧ ಮೊರೇಲ್ಸ್, ಪುಟ 277
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಮಾರ್ಕ್ A. ಹಂಫ್ರೆ, ಪುಟಗಳು 107-149
- ↑ Calt, Stephen. Ten years of black country religion 1926–1936 (vinyl back cover) (Media notes). New York: Yazoo Records.
{{cite AV media notes}}
: Unknown parameter|coauthors=
ignored (|author=
suggested) (help); Unknown parameter|publisherid=
ignored (help) - ↑ "Reverend Gary Davis". Reverend Gary Davis. 2009. Retrieved 2009-02-03.
- ↑ Michael Corcoran. "The Soul of Blind Willie Johnson". Austin American-Statesman. Archived from the original on 2005-10-30. Retrieved 2009-02-03.
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಡೇವಿಡ್ ಎವಾನ್ಸ್, ಪುಟ 33
- ↑ ೨೮.೦ ೨೮.೧ ಕಂಜ್ಲರ್, ಪುಟ 130
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಬ್ರೂಸ್ ಬ್ಯಾಸ್ಟಿನ್, ಪುಟ 206
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಡೇವಿಡ್ ಎವಾನ್ಸ್, ಪುಟಗಳು 33-35
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಜಾನ್ H. ಕೌಲೆ, ಪುಟ 265
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಜಾನ್ H. ಕೌಲೆ, ಪುಟಗಳು 268-269
- ↑ "Lead Belly foundation". Archived from the original on 2010-01-23. Retrieved 2008-09-26.
- ↑ Dave Oliphant. "Henry Thomas". The handbook of texas online. Retrieved 2008-09-26.
- ↑ ಗ್ಯಾರೊಫಾಲೊ, ಪುಟಗಳು 46–47
- ↑ ಆಲಿವರ್, ಪುಟ 3
- ↑ ಫಿಲಿಪ್ V. ಬೊಹ್ಲ್‌ಮನ್, ದಿ ಕೇಂಬ್ರಿಜ್ ಹಿಸ್ಟರಿ ಆಫ್ ಅಮೆರಿಕನ್ ಮ್ಯೂಸಿಕ್ ನಲ್ಲಿರುವ "ಇಮಿಗ್ರೆಂಟ್, ಫೋಕ್, ಅಂಡ್ ರೀಜನಲ್ ಮ್ಯೂಸಿಕ್ ಇನ್ ದಿ ಟ್ವೆಂಟಿಯೆತ್ ಸೆಂಚುರಿ", ಸಂಪಾದಿತ ಡೇವಿಡ್ ನಿಖೋಲ್ಸ್, 1999, ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್, ISBN 0-521-45429-8, ಪುಟ 285
- ↑ Oliver, Paul (1984). Blues Off the Record:Thirty Years of Blues Commentary. New York: Da Capo Press. pp. 45–47. ISBN 0-306-80321-6.
- ↑ ಲಾರೆನ್ಸ್ W. ಲೆವೈನ್, ಬ್ಲ್ಯಾಕ್ ಕಲ್ಚರ್ ಅಂಡ್ ಬ್ಲ್ಯಾಕ್ ಕಾನ್ಷಸ್‌ನೆಸ್: ಆಫ್ರೋ-ಅಮೆರಿಕನ್ ಫೋಕ್ ಥಾಟ್ ಫ್ರಂ ಸ್ಲೇವರಿ ಟು ಫ್ರೀಡಮ್ , ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 1977, ISBN 0-19-502374-9, ಪುಟ 223
- ↑ ಸದರ್ನ್, ಪುಟ 333
- ↑ ಗ್ಯಾರೊಫಾಲೊ, ಪುಟ 44
- ↑ ಫೆರ್ರಿಸ್, ಪುಟ 229
- ↑ ದಿ ರಫ್ ಗೈಡ್ ಟು ಆಫ್ರಿಕನ್ ಬ್ಲೂಸ್ CD ಬುಕ್‌ಲೆಟ್
- ↑ "ಬ್ಲೂಸ್ ಇಂಪೋರ್ಟೆಡ್ ಫ್ರಂ ವೆಸ್ಟ್-ಆಫ್ರಿಕಾ". Archived from the original on 2012-05-05. Retrieved 2010-07-29.
- ↑ ಮೊರೇಲ್ಸ್, ಪುಟ 276 ಮೊರೇಲ್ಸ್ ಆಟ್ರಿಬ್ಯೂಟ್ಸ್ ದಿಸ್ ಕ್ಲೇಮ್ ಟು ಜಾನ್ ಸ್ಟಾರ್ಮ್ ರಾಬರ್ಟ್ಸ್ ಇನ್ ಬ್ಲ್ಯಾಕ್ ಮ್ಯೂಸಿಕ್ ಆಫ್ ಟೂ ವರ್ಲ್ಡ್ಸ್ , ಬಿಗಿನಿಂಗ್ ಹಿಸ್ ಡಿಸ್ಕಷನ್ ವಿತ್ ಎ ಕೋಟ್ ಫ್ರಂ ರಾಬರ್ಟ್ಸ್: "ದೇರ್ ಡಸ್ ನಾಟ್ ಸೀಮ್ ಟು ಬಿ ದಿ ಸೇಮ್ ಆಫ್ರಿಕನ್ ಕ್ವಾಲಿಟಿ ಇನ್ ಬ್ಲೂಸ್ ಫಾರ್ಮ್ಸ್ ಆಸ್ ದೇರ್ ಕ್ಲಿಯರ್ಲಿ ಈಸ್ ಇನ್ ಮಚ್ ಕೆರಿಬಿಯನ್ ಮ್ಯೂಸಿಕ್."
- ↑ "Call and Response in Blues". How To Play Blues Guitar. Archived from the original on 2008-10-10. Retrieved 2008-08-11.
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಸ್ಯಾಮ್ಯುಯೆಲ್ ಚಾರ್ಟರ್ಸ್, ಪುಟ 25
- ↑ ಆಲಿವರ್, ಪುಟ 4
- ↑ Barbara Vierwo, Andy Trudeau. The Curious Listener's Guide to the Blues. Stone Press. p. 15. ISBN 0-399-53072-X.
- ↑ From the Erotic to the Demonic: On Critical Musicology. Oxford University Press. 2003. p. 182.
A blues idiom is hinted at in "A Negro Love-Song", a pentatonic melody with blue third and seventh in Colridge-Taylor's African Suit of 1898, many years before the first blues publications.
{{cite book}}
: Unknown parameter|authormask=
ignored (help) - ↑ Bill Steper (1999). "African-American Music from the Mississippi Hill Country: "They Say Drums was a-Calling"". The APF Reporter. Archived from the original on 2008-09-06. Retrieved 2008-10-27.
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಸ್ಯಾಮ್ಯುಯೆಲ್ ಚಾರ್ಟರ್ಸ್, ಪುಟ 14-15
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಸ್ಯಾಮ್ಯುಯೆಲ್ ಚಾರ್ಟರ್ಸ್, ಪುಟ 16
- ↑ ಗ್ಯಾರೊಫಾಲೊ, ಪುಟ 44 ಗ್ರಾಜುಯಲಿ, ಇನ್ಸ್ಟ್ರುಮೆಂಟಲ್ ಅಂಡ್ ಹಾರ್ಮೋನಿಕ್ ಅಕಂಪನಿಮೆಂಟ್ ವರ್ ಆಡೆಡ್, ರಿಫ್ಲೆಕ್ಟಿಂಗ್ ಇನ್‌ಕ್ರೀಸಿಂಗ್ ಕ್ರಾಸ್-ಕಲ್ಚರಲ್ ಕಾಂಟ್ಯಾಕ್ಟ್. "ಎಥಿಯೋಪಿಯನ್ ಏರ್ಸ್" ಮತ್ತು "ನೀಗ್ರೋ ಸ್ಪಿರಿಚುಯಲ್ಸ್"ಗಳನ್ನೂ ನಮೂದಿಸುವ ಇತರ ಲೇಖಕರನ್ನು ಗ್ಯಾರೊಫಾಲೊ ಉಲ್ಲೇಖಿಸುತ್ತಾನೆ.
- ↑ ಗ್ಯಾರೊಫಾಲೊನಲ್ಲಿ ಉಲ್ಲೇಖಿಸಿರುವ ಷುಲ್ಲರ್, ಪುಟ 27
- ↑ ಗ್ಯಾರೊಫಾಲೊ, ಪುಟಗಳು 44–47 "ಆಸ್ ಮಾರ್ಕೆಟಿಂಗ್ ಕೆಟಗರೀಸ್, ಡೆಸಿಗ್ನೇಷನ್ಸ್ ಲೈಕ್ ರೇಸ್ ಅಂಡ್ ಹಿಲ್‌ಬಿಲ್ಲಿ ಇಂಟೆನ್ಷನಲಿ ಸಪರೇಟೆಡ್ ಆರ್ಟಿಸ್ಟ್ಸ್ ಅಲಾಂಗ್ ರೇಸಿಯಲ್ ಲೈನ್ಸ್ ಅಂಡ್ ಕನ್ವೇಯ್ಡ್ ದಿ ಇಂಪ್ರೆಷನ್ ದಟ್ ದೆರ್ ಮ್ಯೂಸಿಕ್ ಕೇಮ್ ಫ್ರಂ ಮ್ಯೂಚುಯಲಿ ಎಕ್ಸ್‌ಕ್ಲುಸಿವ್ ಸೋರ್ಸಸ್. ನಥಿಂಗ್ ಕುಡ್ ಹ್ಯಾವ್ ಬೀನ್ ಫರ್ದರ್ ಫ್ರಂ ದಿ ಟ್ರುತ್... ಇನ್ ಕಲ್ಚರಲ್ ಟರ್ಮ್ಸ್, ಬ್ಲೂಸ್ ಅಂಡ್ ಕಂಟ್ರಿ ವರ್ ಮೋರ್ ಈಕ್ವಲ್ ದ್ಯಾನ್ ದೆ ವರ್ ಸಪರೇಟ್." ಗ್ಯಾರೊಫಾಲೊ ಸಮರ್ಥಿಸುವ ಪ್ರಕಾರ, " ಧ್ವನಿಮುದ್ರಣ ಕಂಪನಿಯ ಕೈಪಿಡಿಗಳಲ್ಲಿ ತಪ್ಪಾದ ಜನಾಂಗೀಯ ವರ್ಗದಲ್ಲಿ ಕಲಾವಿದರು ಕೆಲವೊಮ್ಮೆ ಪಟ್ಟಿಮಾಡಲ್ಪಡುತ್ತಾರೆ."
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಚಾರ್ಲ್ಸ್ ವೋಲ್ಫೆ, ಪುಟಗಳು 233-263
- ↑ Golding, Barrett. "The Rise of the Country Blues". NPR. Retrieved 2008-12-27.
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಮಾರ್ಕ್ A. ಹಂಫ್ರೆ, ಪುಟ 110
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಮಾರ್ಕ್ A. ಹಂಫ್ರೆ, ಪುಟಗಳು 107-149
- ↑ ಗ್ಯಾರೊಫಾಲೊ, ಪುಟ 27; ಗ್ಯಾರೊಫಾಲೊ ಸೈಟ್ಸ್ ಬರ್ಲೋ ಇನ್ "ಹ್ಯಾಂಡಿ'ಸ್ ಸಡನ್ ಸಕ್ಸಸ್ ಡೆಮಾನ್‌ಸ್ಟ್ರೇಟೆಡ್ ದಿ ಕಮರ್ಷಿಯಲ್ ಪೊಟೆನ್ಷಿಯಲ್ ಆಫ್ ದಿ ಬ್ಲೂಸ್, ವಿಚ್ ಇನ್ ಟರ್ನ್ ಮೇಡ್ ದಿ ಜೆನ್ರೆ ಅಟ್ರಾಕ್ಟಿವ್ ಟು ದಿ ಟಿನ್ ಪ್ಯಾನ್ ಆಲೇ ಹ್ಯಾಕ್ಸ್, ಹೂ ವೇಸ್ಟೆಡ್ ಲಿಟ್ಲ್ ಟೈಮ್ ಇನ್ ಟರ್ನಿಂಗ್ ಔಟ್ ಎ ಡೆಲ್ಯೂಜ್ ಆಫ್ ಇಮಿಟೇಷನ್ಸ್." (ಗ್ಯಾರೊಫಾಲೊದಲ್ಲಿ ಸೇರಿಸಲಾದ ಪ್ರಕ್ಷಿಪ್ತಗಳು)
- ↑ ೬೨.೦ ೬೨.೧ ಗ್ಯಾರೊಫಾಲೊ, ಪುಟ 27
- ↑ "Kentuckiana Blues Society". Retrieved 2008-09-26.
- ↑ ೬೪.೦ ೬೪.೧ ಕ್ಲಾರ್ಕ್, ಪುಟ 138
- ↑ ಕ್ಲಾರ್ಕ್, ಪುಟ 141
- ↑ ಕ್ಲಾರ್ಕ್, ಪುಟ 139
- ↑ Calt, Stephen. The Georgia Blues 1927–1933 (vinyl back cover) (Media notes). New York: Yazoo Records.
{{cite AV media notes}}
: Unknown parameter|coauthors=
ignored (|author=
suggested) (help); Unknown parameter|publisherid=
ignored (help) - ↑ Phoenix Delray (2008-08-17). "The history of Memphis blues music". Retrieved 2008-08-27.
- ↑ Kent, Don (1968). 10 Years In Memphis 1927–1937 (vinyl back cover) (Media notes). New York: Yazoo Records.
{{cite AV media notes}}
: Unknown parameter|publisherid=
ignored (help) - ↑ Calt, Stephen (1970). Memphis Jamboree 1927–1936 (vinyl back cover) (Media notes). New York: Yazoo Records.
{{cite AV media notes}}
: Unknown parameter|coauthors=
ignored (|author=
suggested) (help); Unknown parameter|publisherid=
ignored (help) - ↑ ೭೧.೦ ೭೧.೧ ಗ್ಯಾರೊಫಾಲೊ, ಪುಟ 47
- ↑ ಹಾಕಿಯೆ ಹರ್ಮನ್, ಜನರಲ್ ಬ್ಯಾಕ್‌ಗ್ರೌಂಡ್ ಆನ್ ಆಫ್ರಿಕನ್ ಅಮೆರಿಕನ್ ಮ್ಯೂಸಿಕ್ , ಬ್ಲೂಸ್ ಫೌಂಡೇಷನ್, ಎಸ್ಸೇಸ್: ವಾಟ್ ಈಸ್ ದಿ ಬ್ಲೂಸ್?http://www.blues.org/blues/essays.php4?Id=3[permanent dead link]
- ↑ ಕ್ಲಾರ್ಕ್, ಪುಟ 137
- ↑ Piero Scaruffi (2005). "A brief history of Blues Music". Retrieved 2008-08-14.
- ↑ Oliver, Paul. Boogie Woogie Trio (Media notes). Copenhagen: Storyville.
{{cite AV media notes}}
:|format=
requires|url=
(help); Unknown parameter|publisherid=
ignored (help) - ↑ Piero Scaruffi (2003). "Kansas City: Big Bands". Retrieved 2008-08-27.
- ↑ ಗ್ಯಾರೊಫಾಲೊ, ಪುಟ 76
- ↑ ಕೊಮರಾ, ಪುಟ 120
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಮಾರ್ಕ್ A. ಹಂಫ್ರೆ, ಪುಟಗಳು 175-177
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಬ್ಯಾರಿ ಪಿಯರ್‌ಸನ್, ಪುಟಗಳು 313-314
- ↑ ಡಿಕೇರ್ (1999), ಪುಟ 79
- ↑ ಕೊಮರಾ, ಪುಟ 118
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಮಾರ್ಕ್ A. ಹಂಫ್ರಿ, ಪುಟ 179
- ↑ ೮೪.೦ ೮೪.೧ ಹರ್ಝಾಫ್ಟ್, ಪುಟ 53
- ↑ Pierson, Leroy (1976). Detroit Ghetto Blues 1948 to 1954 (vinyl back cover) (Media notes). St. Louis: Nighthawk Records.
{{cite AV media notes}}
: Unknown parameter|publisherid=
ignored (help) - ↑ Piero Scaruffi (2003). "A brief history of Rhythm'n'Blues". Retrieved 2008-08-14.
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಮಾರ್ಕ್ A. ಹಂಫ್ರೆ, ಪುಟ 180
- ↑ Piero Scaruffi (1999). "Howlin' Wolf". Retrieved 2008-08-14.
- ↑ Piero Scaruffi (1999). "Muddy Waters". Retrieved 2008-08-14.
- ↑ Piero Scaruffi (1999). "Willie Dixon". Retrieved 2008-08-14.
- ↑ Piero Scaruffi (1999). "Jimmy Reed". Retrieved 2008-08-14.
- ↑ Piero Scaruffi (1999). "Elmore James". Retrieved 2008-08-14.
- ↑ Piero Scaruffi (2003). "J. B. Lenoir". Retrieved 2008-08-14.
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಮಾರ್ಕ್ A. ಹಂಫ್ರೆ, ಪುಟ 187
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಬ್ಯಾರಿ ಪಿಯರ್‌ಸನ್, ಪುಟ 342
- ↑ ಹರ್ಝಾಫ್ಟ್, ಪುಟ 11
- ↑ ಹರ್ಝಾಫ್ಟ್, ಪುಟ 35
- ↑ ಹರ್ಝಾಫ್ಟ್, ಪುಟ 236
- ↑ ಕೊರೊಮಾ, ಪುಟ 49
- ↑ "Blues". Encyclopedia of Chicago. Retrieved 2008-08-13.
- ↑ C. Michael Bailey (2003-10-04). "West Side Chicago Blues". All about Jazz. Retrieved 2008-08-13.
- ↑ ಲಾರ್ಸ್ ಜೋರ್ನ್, ಬಿಫೋರ್ ಮೊಟೌನ್ , 2001, ಯೂನಿವರ್ಸಿಟಿ ಆಫ್ ಮಿಚಿಗನ್ ಪ್ರೆಸ್, ISBN 0-472-06765-6, ಪುಟ 175
- ↑ ಹರ್ಝಾಫ್ಟ್, ಪುಟ 116
- ↑ ಹರ್ಝಾಫ್ಟ್, ಪುಟ 188
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಜಿಮ್ ಒ'ನೀಲ್, ಪುಟಗಳು 387
- ↑ ೧೦೬.೦ ೧೦೬.೧ ಕೊರೊಮಾ, ಪುಟ 122
- ↑ ಕೊರೊಮಾ, ಪುಟ 388
- ↑ ನಥಿಂಗ್ ಬಟ್ ದಿ ಬ್ಲೂಸ್‌ನಲ್ಲಿ ಜಿಮ್ ಒ'ನೀಲ್, ಪುಟ 380
- ↑ "A Short Blues History". History of Rock. Retrieved 2008-08-14.
- ↑ ಗ್ಯಾರೊಫಾಲೊ, ಪುಟಗಳು 224–225
- ↑ "History of heavy metal: Origins and early popularity (1960s and early 1970s)". 2006-09-18. Retrieved 2008-08-13.
- ↑ ಕೊರೊಮಾ, ಪುಟ 50
- ↑ Stephen Martin (2008-04-03). "Malaco Records to be honored with blues trail marker" (PDF). Mississippi development authority. Archived from the original (PDF) on 2008-09-10. Retrieved 2008-08-28.
- ↑ Piero Scaruffi (2005). "The History of Rock Music: 1976–1989, Blues, 1980-81". Retrieved 2008-08-14.
- ↑ ನಥಿಂಗ್ ಬಟ್ ದಿ ಬ್ಲೂಸ್ ನಲ್ಲಿ ಮೇರಿ ಕ್ಯಾಥರೀನ್ ಆಲ್ಡಿನ್, ಪುಟ 130
- ↑ http://blues.about.com/od/bluesfestivals/[permanent dead link] ಇಲ್ಲಿ ಅತ್ಯಂತ ಗಮನಾರ್ಹ ಬ್ಲೂಸ್ ಉತ್ಸವಗಳ ಒಂದು ನಿರ್ದೇಶಿಕೆಯನ್ನು ಕಾಣಬಹುದು
- ↑ http://blues.about.com/cs/venues/ Archived 2007-12-21 ವೇಬ್ಯಾಕ್ ಮೆಷಿನ್ ನಲ್ಲಿ. ಇಲ್ಲಿ U.S.ನಲ್ಲಿನ ಪ್ರಮುಖ ಬ್ಲೂಸ್ ತಾಣಗಳ ಒಂದು ಪಟ್ಟಿಯನ್ನು ಕಾಣಬಹುದು
- ↑ "Blues Music Awards information". Archived from the original on ಏಪ್ರಿಲ್ 29, 2006. Retrieved November 25, 2005.
- ↑ http://blues.about.com/cs/recordlabels/ Archived 2009-10-06 ವೇಬ್ಯಾಕ್ ಮೆಷಿನ್ ನಲ್ಲಿ. ಇಲ್ಲಿ ಸಮಕಾಲೀನ ಬ್ಲೂಸ್ ಹಣೆಪಟ್ಟಿಗಳ ಒಂದು ಸಂಪೂರ್ಣ ನಿರ್ದೇಶಿಕೆಯನ್ನು ಕಾಣಬಹುದು
- ↑ "Blues Babies.741.com". Archived from the original on 2019-06-07. Retrieved 2021-08-10.
- ↑ Jennifer Nicole (2005-08-15). "The Blues: The Revolution of Music". Retrieved 2008-08-17.
- ↑ Phil Petrie. "History of gospel music". Retrieved 2008-09-08.
- ↑ ೧೨೩.೦ ೧೨೩.೧ [177]
- ↑ Peter Van der Merwe (2004). Roots of the classical: the popular origins of western music. Oxford University Press. p. 461. ISBN 0198166478.
- ↑ "The Blues Influence On Rock & Roll". Archived from the original on 2007-04-04. Retrieved 2008-08-17.
- ↑ "History of Rock and Roll". Zip-Country Homepage. Archived from the original on 2008-08-28. Retrieved 2008-09-02.
- ↑ "Country music". Columbia College Chicago. 2007–2008. Retrieved 2008-09-02.
- ↑ SFಗೇಟ್
- ↑ "ಸೌಂಡರ್"ಇಂಟರ್‌ನೆಟ್ ಮೂವೀ ಡೇಟಾಬೇಸ್[permanent dead link]. 11-02-2007ರಂದು ಮರುಸಂಪಾದಿಸಲಾಯಿತು.
- ↑ "The Blues" (2003) (mini) at IMDb
ಆಕರಗಳು
[ಬದಲಾಯಿಸಿ]- Barlow, William (1993). "Cashing In". Split File: African Americans in the Mass Media: 31.
- ಬ್ರಾನ್ಸ್ಫೋರ್ಡ್, ಸ್ಟೀವ್. "ಬ್ಲೂಸ್ ಇನ್ ದಿ ಲೋಯರ್ ಚಟ್ಟಾಹೂಚೀ ವ್ಯಾಲಿ" Archived 2009-11-01 ವೇಬ್ಯಾಕ್ ಮೆಷಿನ್ ನಲ್ಲಿ. ಸದರ್ನ್ ಸ್ಪೇಸಸ್ 2004
- Clarke, Donald (1995). The Rise and Fall of Popular Music. St. Martin's Press. ISBN 0-312-11573-3.
- Lawrence Cohn, ed. (1993). Nothing But the Blues: The Music and the Musicians. Abbeville Press. ISBN 1558592717.
{{cite book}}
: Unknown parameter|publisherlink=
ignored (help) - Dicaire, David (1999). Blues Singers: Biographies of 50 Legendary Artists of the Early 20th Century. McFarland. ISBN 0-7864-0606-2.
- Ewen, David (1957). Panorama of American Popular Music. Prentice Hall. ISBN 0-13-648360-7.
- Ferris, Jean (1993). America's Musical Landscape. Brown & Benchmark. ISBN 0-697-12516-5.
- Garofalo, Reebee (1997). Rockin' Out: Popular Music in the USA. Allyn & Bacon. ISBN 0-205-13703-2.
- Herzhaft, Gérard, Paul Harris and, Brigitte Debord (1997). Encyclopedia of the Blues. University of Arkansas Press. ISBN 1-557-28452-0.
{{cite book}}
: CS1 maint: multiple names: authors list (link) - Komara, Edward M. (2006). Encyclopedia of the blues. Routledge. ISBN 0-415-92699-8.
- Kunzler, Martin (1988). Jazz Lexikon (in German). Rohwolt Taschenbuch Verlag. ISBN 3-499-16316-0.
{{cite book}}
: CS1 maint: unrecognized language (link) - Morales, Ed (2003). The Latin Beat. Da Capo Press. ISBN 0-306-81018-2.
- Oliver, Paul and Richard Wright (1990). Blues fell this morning: Meaning in the blues. Cambridge University Press. ISBN 0-521-37793-5.
- Schuller, Gunther (1968). Early Jazz: Its Roots and Musical Development. Oxford University Press. ISBN 0-19-504043-0.
- Southern, Eileen (1997). The Music of Black Americans. W. W. Norton & Company, Inc. ISBN 0-393-03843-2.
- "Muslim Roots of the Blues". SFGate. Archived from the original on ಸೆಪ್ಟೆಂಬರ್ 5, 2005. Retrieved August 24, 2005.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಬ್ರೌನ್, ಲೂಥರ್. "ಇನ್ಸೈಡ್ ಪೂರ್ ಮಂಕಿ'ಸ್ Archived 2009-02-02 ವೇಬ್ಯಾಕ್ ಮೆಷಿನ್ ನಲ್ಲಿ." ಸದರ್ನ್ ಸ್ಪೇಸಸ್ ಜೂನ್ 22, 2006.
- Oakley, Giles (1976). The Devil's Music: a History of the Blues. BBC. pp. 287 pages. ISBN 0-563-16012-8.
- Oliver, Paul (1998). The Story Of The Blues (new ed.). Northeastern University Press. pp. 212 pages. ISBN 1-55553-355-8.
- Palmer, Robert (1981). Deep Blues. Viking. pp. 310 pages. ISBN 0-670-49511-5.
- Rowe, Mike (1973). Chicago Breakdown. Eddison Press. pp. 226 pages. ISBN 0-85649-015-6.
- Titon, Jeff Todd (1994). Early Downhome Blues: a Musical and Cultural Analysis (2nd ed.). University of North Carolina Press. pp. 318 pages. ISBN 0-8078-4482-9.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about Blues music at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ದಿ ಅಮೆರಿಕನ್ ಫೋಕ್ಲೈಫ್ ಸೆಂಟರ್'ಸ್ ಆನ್ಲೈನ್ ಕಲೆಕ್ಷನ್ಸ್ ಅಂಡ್ ಪ್ರೆಸೆಂಟೇಷನ್ಸ್
- ಅಮೆರಿಕನ್ ಮ್ಯೂಸಿಕ್: ಐತಿಹಾಸಿಕ ಬ್ಲೂಸ್ ಧ್ವನಿಮುದ್ರಣಗಳ ಒಂದು ಹೆಚ್ಚೂಕಮ್ಮಿ ಸಮಗ್ರ ಸಂಗ್ರಹ.
- ದಿ ಬ್ಲೂಸ್ ರೇಡಿಯೋ ಸೀರೀಸ್ Archived 2014-02-01 ವೇಬ್ಯಾಕ್ ಮೆಷಿನ್ ನಲ್ಲಿ.
- ಎಕ್ಸ್ಟೆನ್ಸಿವ್ ಬ್ಲೂಸ್ ರಿಲೇಟಿವ್ ಲಿಂಕ್ಸ್
- ದಿ ಬ್ಲೂ ಷೂ ಪ್ರಾಜೆಕ್ಟ್ - ನೇಷನ್ವೈಡ್ (U.S.) ಬ್ಲೂಸ್ ಎಜುಕೇಷನ್ ಪ್ರೋಗ್ರಾಮಿಂಗ್
- "ದಿ ಬ್ಲೂಸ್", PBSನಲ್ಲಿ ಪ್ರಸಾರವಾದ ಮಾರ್ಟಿನ್ ಸ್ಕೋರ್ಸೆಸೆಯಿಂದ ನಿದೇಶಿಸಲ್ಪಟ್ಟಿರುವ ಸಾಕ್ಷ್ಯಚಿತ್ರ ಸರಣಿ
- ದಿ ಬ್ಲೂಸ್ ಫೌಂಡೇಷನ್
- ದಿ ಮೆಂಫಿಸ್ ಬ್ಲೂಸ್ ಸೊಸೈಟಿ
- ದಿ ಡೆಲ್ಟಾ ಬ್ಲೂಸ್ ಮ್ಯೂಸಿಯಂ
- ಮಿಸ್ಸಿಸ್ಸಿಪ್ಪಿ ಡೆಲ್ಟಾ ಬ್ಲೂಸ್ ಸೊಸೈಟಿ ಆಫ್ ಇಂಡಿಯನೊಲಾ Archived 2006-06-25 ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ಮ್ಯೂಸಿಕ್ ಇನ್ ಪೊಯೆಟ್ರಿ — ಶಿಕ್ಷಕರಿಗೆ ಮೀಸಲಾಗಿರುವ ದಿ ಬ್ಲೂಸ್ ಕುರಿತಾದ ಸ್ಮಿತ್‌ಸೋನಿಯನ್ ಇನ್ಸ್ಟಿಟ್ಯೂಷನ್ ಪಾಠ ಯೋಜನೆ
- ಲೇಖನಗಳು, ಸಂದರ್ಶನಗಳು, ವಿದ್ವತ್ಪೂರ್ಣ ಸಂಶೋಧನೆ ಹಾಗೂ ಛಾಯಾಚಿತ್ರಗಳನ್ನು BLUES ಪ್ರಪಂಚ ಪ್ರಕಟಿಸುತ್ತದೆ. Archived 2010-07-15 ವೇಬ್ಯಾಕ್ ಮೆಷಿನ್ ನಲ್ಲಿ.
- ಆಧುನಿಕ ಸಂಗೀತದ ಮೇಲಿನ ಬ್ಲೂಸ್ ಗಿಟಾರ್‌ನ ಪ್ರಭಾವ
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with unsourced statements from February 2009
- Articles with invalid date parameter in template
- CS1 errors: unsupported parameter
- All articles with dead external links
- Articles with dead external links from ಆಗಸ್ಟ್ 2021
- Articles with permanently dead external links
- CS1 errors: format without URL
- IMDb title ID not in Wikidata
- Pages using ISBN magic links
- Pages with unresolved properties
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hAudio microformats
- CS1 maint: multiple names: authors list
- CS1 maint: unrecognized language
- Pages using country topics with unknown parameters
- ಅಮೆರಿಕಾದ ನೀಗ್ರೋ ಸಂಗೀತ
- ಅಮೆರಿಕಾದ ನೀಗ್ರೋ ಸಂಸ್ಕೃತಿ
- ಅಮೆರಿಕಾದ ಸಂಗೀತ ಶೈಲಿಗಳು
- ಬ್ಲೂಸ್
- ಬ್ಲೂಸ್ ಶೈಲಿಗಳು
- ರೇಡಿಯೋ ಸ್ವರೂಪಗಳು